Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾನು ಬರಹಗಾರನಲ್ಲ

ಹೌದು
ನಾನು
ಬರಹಗಾರನಲ್ಲ..!

ನಾನು ಏನನ್ನೂ
ಬರೆಯುವುದಿಲ್ಲ;

ಎದೆಯ ಊರ ಬವಣೆ ಗೂಡ
ಭಾವದ ಮರಿ ಹಕ್ಕಿಯದು;
ಕಂಡ
ಕನಸ ನಾ ಬರೆಯಲಿಲ್ಲ;

ವಾಸ್ತವದಿ ಬಲಿತ ಗರಿ
ನೋವಲ್ಲೆ ಬೆಳೆದ ಮರಿ
ಈ ಮನದ
ಕೊಂಬೆಯಲ್ಲಿಯೇ
ಗೂಡು ಕಟ್ಟಿದ್ದರೂ
ನಾ
ತಿರುಗಿ ನೋಡಲಿಲ್ಲ..!

ಬಲಿತ ರೆಕ್ಕೆ ಸೇರೆ ಬಾನ ತೆಕ್ಕೆ
ನೆಲದ ನೆರಳು ಕೊನೆಗೆ ಬಾಳು
ಬರಿಯ ಮಣ್ಣು ಎಂದ ಮಾತ
ನಾ ಮರೆಯಲಿಲ್ಲ;
ಆದರೂ ಕೂತು ಅದ ನಾ
ಬರೆಯಲಿಲ್ಲ...!

ನಾನು ಬರೆಯಲ್ಲಿಲ್ಲ
ಕೈಗಳು ಪಟ್ಟ ಪಾಡ;
ನೊಂದ ಕಾಲ್ಗಳನೊತ್ತುವಾಗ
ಗುನುಗಿದ ಹಾಡ
ನಾನು ಬರೆಯಲಿಲ್ಲ
ಕಣ್ಣಂಚಲಿ ಕೂತು ಒಮ್ಮೆಲೆ
ಜಿಗಿಯುತ್ತಿದ್ದ ಕಂಬನಿ ಸಾಲ...!

ನಾನು ಬರಹಗಾರನಲ್ಲ;
ಏಕೆಂದರೆ
ಕಾಗದದ ಹಣೆಮೇಲೆ
ಅದರ
ಭವಿಷ್ಯವ ನಾನೆಂದೂ
ಬರೆಯಲಿಲ್ಲ...!

-ರಮೇಶ್ ಪ್ರಜ್ವಲ್

- Ramesh Prajwal

07 Feb 2020, 12:48 am

ತಾಯಿಯ ಮಡಿಲು

ಊರೂರು ಸುತ್ತಾಡಿ
ಸಮಯ ಕಳೆಯಲು
ಸ್ನೇಹಿತರು ಕರೆಯುತ್ತಿದ್ದರು
ಕರೆ ಮಾಡಿ ಪದೇ ಪದೇ,
ಒಂದೆಡೆ ಕುಳಿತು
ಯೋಚಿಸಿದಾಗ ಅರಿತೆನು
ತಾಯಿಯ ಮಡಿಲಿಗಿಂತ
ಮಿಗಿಲಾದ ಸ್ವರ್ಗ ಸುಖ
ಬೇರಾವುದಿದೆಯೆಂದು..!

- ಅಕ್ಷತ

07 Feb 2020, 12:41 am

ಗೆಳತಿ

ಕಾಡ ಕಲ್ಲಿಗೆ ಉಳಿಯಾಗಿ ಬಾ
ಒಣಗಿದ ಭಾವಿಗೆ ಜೀವ ಜಲವಾಗಿ ಬಾ
ಚಲುವಿನ ಚಿತ್ತಾರಕೆ ಬಣ್ಣವಾಗಿ ಬಾ
ಬೆಳದಿಂಗಳ ರಾತ್ರಿಗೆ ಚಂದ್ರಮೆಯಾಗಿ ಬಾ
ಒಲವಿನ ರಾತ್ರಿಗೆ ಗೆಳತಿಯಾಗಿ ಬಾ.

- Siddugouda

06 Feb 2020, 12:28 pm

ಮನಸಿನ ಮಾತು

ಹಾಳಾಯಿತು ಹೃದಯ ಹಳೆ ಹುಡುಗಿಯ ನೆನಪಿನಲ್ಲಿ
ಮತ್ತೆ ಯಾರಾದರು ಸಿಗುವರೇ ನನ್ನ ಬಾಳ ದಾರಿಯಲ್ಲಿ
ಸಿಗುವವರು ಬರುವವರೆ ಕೊನೆವರೆಗೂ ನನ್ನ ಬಾಳ ದಾರಿಯಲ್ಲಿ
ಪ್ರೀತಿಸುತ್ತೇನೆಂದು ಮೋಸ ಮಾಡುವವರೆ ತುಂಬಿರುವ ಈ ಜಗದಲಿ
ನೊಂದ ಹೃದಯದ ಮಾತು ಕೇಳಿ ಅಳುತಿಹೇನು ನಾನಿಲ್ಲಿ
ಸಿಗದಿದ್ದರೂ ಪರವಾಗಿಲ್ಲ ಅವರೆಲ್ಲರಲ್ಲಿ ಸುಖವಾಗಿ
ಕೊನೆವರೆಗೂ ಸಾಗುತಿಹನು ನಾನವಳ ನೆನಪಲ್ಲಿ
ಅವಳು ಇರಬಹುದೇ ನನ್ನ ನೆನಪಲ್ಲಿ ಅದು ಒಂದೇ ನನ್ನಗೆ ನಂಬಿಕೆ ಬದುಕಿನಲ್ಲಿ
ಇಂತಿ
ಭರತ್ ಕುಮಾರ್ ಆರ್ ಬಿ
೯೯೭೨೬೬೪೫೮೯
9972664589

- bharath kumar r

06 Feb 2020, 08:53 am

ಮೋಡದ ಮರೆಯಲ್ಲಿ

ಕಣ್ಣಿಗೆ ಕಾಣದೇ ಕೈಗೆ ಸಿಗದೇ
ಮನದ ಮರೆಯಲ್ಲಿ ನಿಂದಿಹಳು

ಕನಸಲ್ಲಿ ಬಾರದೇ ಎದುರಲ್ಲಿ ಬಾರದೇ
ಮನದ ಮರೆಯಲ್ಲಿ ನಿಂದಿಹಳು

ಕೈಗೆಟುಕದ ಪಾದರಸದಂತೆ ಬಾನಿನ ಚುಕ್ಕಿಯಂತೆ
ಮನದ ಮರೆಯಲ್ಲಿ ನಿಂದಿಹಳು

ಹಗಲೆನ್ನದೇ ಇರುಳೆನ್ನದೇ ಕಾಡುತಿಹಳು
ಮನದ ಮರೆಯಲ್ಲಿ ನಿಂದಿಹಳು

ಅಪ್ಪ ಅಮ್ಮನ ಪ್ರೀತಿಗೆ ಸಮನಾಗದೇ
ಮನದ ಮರೆಯಲ್ಲಿ ನಿಂದಿಹಳು

ಯಾರಿವಳು? ಯಾರಿವಳು?
ಮನದ ಮೋಡದಲ್ಲಿನಿಂದಿಹಳು

ಮಹಾಂತೇಶ ಕಾತರಕಿ
ಗುಳೇದಗುಡ್ಡ

- Mahantesh

06 Feb 2020, 04:35 am

ನೀ ಬರವ ಸಮಯದೋಳ್...

ನೀ ಬರುವ ಸಮಯದೋಳ್:
ಕತ್ತಲೆ; ಉಸಿರು ಗಟ್ಟಿ ಹಿಡಿದು ನಿಂತಿದೆ.
ತಂಗಾಳಿ; ದೀರ್ಘ ಉಸಿರು ಎಳೆದುಕೊಂಡು ಸ್ತಬ್ದವಾಗಿದೆ.
ಚಂದ್ರ; ಹಲ್ಲು ಕಿಸಿದು, ಕಣ್ಣು ಮಿಟುಕಿಸದೆ, ಕಣ್ಣರಳಿಸಿ ನಿಂತಿದ್ದಾನೆ.

- Siddugouda

05 Feb 2020, 04:18 pm

ನಿನ್ನ ನೆನಪು.

ಮೋಹಕ ಅಲೆಗಳು
ಮುತ್ತಿಟ್ಟು ಹೋದ
ಮರಳು ರಾಶಿಯ
ಎದೆಯ ಮೇಲೆ
ಬಿದ್ದ ಹಸಿರಾದ
ಹಸಿ ಎಲೆಯಂತೆ
ನಿನ್ನ ನೆನಪು,
ಹಾಲ್ನೊರೆತದ ಧಾಳಿಗೆ
ಸಿಲುಕಿ ಇನ್ನೇನು
ನೀರ ಪಾಲಾಗುತ್ತಿದ್ದಂತೆ
ಅಲೆಗಳ ಅಬ್ಬರಕ್ಕೆ
ಸೋತು ಬಿಟ್ಟು
ಮತ್ತೆ ಪುನಃ
ದಡ ಸೇರುತ್ತಿದೆ.!

- ಅಕ್ಷತ

05 Feb 2020, 03:52 pm

ನನ್ನೂರ ಬಜಾರ

ನನ್ನೂರಲಿ ಬಜಾರ ಸೇರುವ ಬೀದಿ ಅಂಗಾತ ಬತ್ತಲೆ ಮಲಗಿದೆ.
ಮೈ ಮೇಲೆ ಇದ್ದ ಒಂದಿಷ್ಟು ಹರಕು ಮುರಕು ಬಟ್ಟೆಯನ್ನು ಮೊನ್ನೆ ದಿವಸ ಕಿತ್ತುಕೊಂಡರು.
ಗರತಿಯರ ನೀರಿಗೆಗೆ ಕೈ ಹಾಕಿ, ನೀರಿಗೆ ಸಡಿಲು ಮಾಡುವ ಬೌಗಬೆಕ್ಕುಗಳ ದರಬಾರು.
ನಾಯಿ ಬಾಯಿಯೊಳಗೆ ಕಚ್ಚಿ ಹಿಡಿದ; ಮಾಂಸದ ತುಂಡು ಕಸಿಯಲು; ಎರಡು ಕಾಲಿನ ನಾಯಿಗಳ ಸಾಲೇ ಸಾಲು.
ಬೀದಿ ಗೂಳಿ ದನಗಳ ಹೆಂಡಿ ಕದೆಯಲು, ಹೆಂಡೆಬುಟ್ಟಿ ತಲೆಮೇಲೆ ಹೊತ್ತ, ಹೆಂಡಿ ಕಳ್ಳರ ಕಚ್ಚಾಟ.
ನಿಬ್ಬು ಮುರಿದ ಪೆನ್ನುಗಳಲ್ಲಿ; ಶಾಯಿ ಖಾಲಿ ಮಾಡಿಕೊಂಡು, ಮತ್ತೊಬ್ಬರ ಪೆನ್ನು ತಮ್ಮ ಜೇಬು ಮೇಲೆ ಸಿಕ್ಕಿಸಿಕೊಂಡು, ಪೋಜು ಕೊಡುವ ಶಂಡರ ದಂಡು.
ತಮ್ಮ ಮನೆಯ ಪಲ್ಲಂಗಗಳ ಕಾಲಮುರಿದು, ಪಕ್ಕದ ಮನೆಯ ಬೆಡರೂಮ ಕಿಡಕಿಗೆ, ದುರಬೀನ ಇಟ್ಟು, ಜೊಲ್ಲು ಸುರಿಸುವ, ನಾಮಾರ್ಧಗಳ ಸಾಲು.
ತಮ್ಮ ಹೊಲವನು ಊಳಲು; ಮತ್ತೊಬ್ಬರಿಗೆ ಕೊಟ್ಟು, ಮತ್ತೋಬ್ಬರ ಹೊಲದಲಿ; ಕಸ ಬೆಳೆಯಲು, ತಿನಕುವ ಹೇಕಡ್ಯಾಗಳು.
ತಮ್ಮ ಜೋಳವ ಮತ್ತೊಬ್ಬರಿಗೆ ಕೊಟ್ಟು ಮತ್ತೊಬ್ಬರ ಜೋಳವ ತಂದು ಹಾರಾಡಿ ಹಾರಾಡಿ ಬೀಸುವ ಗಂಡು ಸೂಳೆಯರು.
ಹೊತ್ತು ಮುಳಗಿದ ಮೇಲೆ ನನ್ನೂರ ಬಜಾರ ಬೀದಿಯಲಿ, ಇವರ ಶೂರತನದ; ಬಂಡ ಬಯಲಾಟಗಳ ಅನಾವರಣ.

- Siddugouda

05 Feb 2020, 12:17 pm

ನನ್ನ ಮನ ಸೋತಿತ್ತು

ತಂಗಾಳಿ ಬೀಸುವ
ನಗುವ ಹೂವಿನ ಮುಂದೆ
ನಾ ಮನ ಸೋತು
ಮೈಮರೆತು ನಾ ನಿಂತೆ...

ಚೀರುವ ಹೂವುಗಳಿಗ
ಸದಾ ಗಿಡಗಳರುವಂತೆ ಹೇಳಿ ಬಂದಿದ್ದೆ
ಮಾತು ಬರದ ಆ ಹೂವುಗಳಿಗೆ
ನಿಮಗೆ ಸಮ್ಮತಿವಿದೆಂದು ಕೇಳಿದ್ದೆ......

ಆ ದೃಶ್ಯವನ್ನು ನೋಡಲು
ನನ್ನ ಎರಡೂ ಕಣ್ಣು ಸಾಲದು
ಹೂವಿನ ತೋಟವನ್ನು
ನೋಡಿ ಮೈಮರೆತ್ತೆನು

ಈ ಪ್ರಕೃತಿ ನೋಡಿ
ಇಡೀ ಜಗತ್ತನ್ನು ನಾ ಮರೆತೇ
ಸುಂದರವಾದ ಗಾಳಿ,ಬೆಳಕು
ನೋಡಿ ನನ್ನ ಮನಸ್ಸು ಸೋತಿತು.....

- Ajay

05 Feb 2020, 07:18 am

ಮನಸಿನ ಮಾತು

ಚಂದಿರನ ಅಂಗಳದಿ ಬೆಳದಿಂಗಳ ಬಾಲೆ ನೀ
ಸುಂದರ ಬನದಲ್ಲಿ ಅರಳಿದ ಹುವು ನೀ
ಬಯಸಿ ಕೋಳುತೀರುವೆ ನೀನ್ನ ಪ್ರೀತಿಯನು
ಏಕೆ ಹೆಳುತ್ತಿಲ್ಲ ನಿನ್ನ ಮನಸ್ಸಿನ ಮಾತನ್ನು
ಕೋರಗಿ ಸಾಯುತ್ತಿರುವುದು ನನ್ನ ಆಸೆಯನದು
ಇತ್ತಿ ಭರತ ಕುಮಾರ್ ಆರ್ ಬಿ.
9972664589

- bharath kumar r

04 Feb 2020, 10:44 am