Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಬಂದು ಸೇರಿಕೋ ನನ್ನ

ಕರಗಿದೆ ಬಾನು
ಭೂಮಿಯನು ಸೇರಲು ತಾನು!!
ಮುತ್ತಿಡುವ ಮಳೆಹನಿಯೆಲ್ಲ
ಬಿತ್ತಿಹುದು ಹಸಿಹಸಿರನ್ನು!!

ಹುಣ್ಣಿಮೆಯ ಆ ಚಂದ್ರ
ಸಾಗರದ ಹೆಗಲನು ಏರಿ!!
ಅಲೆ ಅಲೆಯ ಹಿಡಿಯಲು ಬಯಸಿ
ಇಳಿದಿಹನು ಬೆಳಕನು ಸುರಿಸಿ!!

ತಂಪಾದ ತಂಗಾಳಿ
ಹೂ ಗಂಧವನು ಆಳಿ!!
ಹರಡಿಹುದು ಎಲ್ಲೆಲ್ಲೂ
ಘಮ ಘಮಸೋ ಪರಿಮಳವ!!

ನನ್ನ ಹೃದಯದ ರಾಗ
ಮಿಡಿದಿಹುದು ಅನುರಾಗ!!
ನುಡಿಯಲದು ಸುಂದರ ಗಾನ
ಅಡಗಿಹುದು ನನ್ನಯ ಪ್ರಾಣ!!

ನೀ ಬಂದು ಸೇರಲು ನನ್ನ
ಬದುಕಿನಲಿ ಸುಂದರ ಬಣ್ಣ!!
ಹೂ ಬನಕೆ ದುಂಬಿಯ ಹಾಗೆ
ನೀ ಬಂದು ಸೇರಿಕೋ ನನ್ನ!!

- ಪಿ.ಜಿ.ಜ್ಯೋತಿ

17 Sep 2019, 10:31 am

ಆಪ್ತರಕ್ಷಕ

ನಾಗರಹಾವಿನ ರಾಮಾಚಾರಿಯಾಗಿ
ತ್ಯಾಗದಲಿ ಕರ್ಣನಾಗಿ
ಊರಿಗೆ ಬಂಗಾರದ ಕಳಶವಾಗಿ
ನ್ಯಾಯಕ್ಕೆ ಸಿಂಹನಾಗಿ
ಗೆಳೆತನಕ್ಕೆ ಬೆಲೆಕೊಡುವ ಹೃದಯವಂತ
ಎಲ್ಲರನ್ನು ಪ್ರೀತಿಯಿಂದ ಕಾಣುವ ಆಪ್ತಮಿತ್ರ
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಮೂಲ್ಯ ರತ್ನ
ಎಂದು ಮರೆಯದ ಮಾಣಿಕ್ಯ

ಕನ್ನಡಿಗರ ಹೃದಯದಲ್ಲಿ ಎಂದೆದೆಂದಿಗೂ ಅಜರಾಮರವಾಗಿ ಉಳಿದಿರುವ ಕರುನಾಡ ಸಿಂಹ.


❤️ಇಂತಿ ನಿಮ್ಮ ಅಭಿಮಾನಿ.✍️✍️✍️

- ಆದರ್ಶಎನ್ಎಸ್

16 Sep 2019, 05:26 pm

ನನ್ನ ತಂಗಿಗೆ

ಮೌನದಲೆ ಗುನುಗುವ
ನನ್ನೆದೆಯ ಹಾಡಿಗೆ
ಮಿಡಿದು ಉಸಿರಾಗುವ
ನೀನು ಪ್ರೇಮನುರಾಗ ಬಾಳಿಗೆ

ನಗುವ ಉಣಿಸಿ
ಅಳುವ ಒರೆಸಿ
ನೋವ ಮರೆಸಿ
ಕುಣಿಸುವೆ ಮನವ ತಣಿಸಿ

ಆ ಮೂಗಿನ‌ ತುದಿಯೇ
ಉರಿವ ರವಿಯ ಹಾಗೆ
ಮನವೂ ಒಂದು ನದಿಯೇ
ಹರಿವಳು ಬತ್ತದ ಕರುಣಾಗಂಗೆ

ಮಾತು ಒರತೆ
ಮೌನ ಕೊರತೆ
ಮೌನ ಕೊಲ್ಲುವಾಗ
ನಿನ್ನ ಮಾತೇ ಚೆಲುವಾಗ

ಯಾವ ಪುಣ್ಯವೊ,ಋಣವೊ
ಬಿದ್ದೆ ಬೆನ್ನಿಗೆ ತಂಗಿಯಾಗಿ
ನೋವುನಲಿವಿನಲಿ ಕಾದಾಡಿ ಗುದ್ದಾಡಿ
ಅಳಿಸಿ ರಮಿಸಿ ನಗಿಸಲು ಜೊತೆಯಾಗಿ

ಇಂತಿರುವ ನಿನಗೆ
ಸರಿಯಲಿ ನೋವೆಲ್ಲ ಮರೆಗೆ
ಸಿಗಲಿ ನಗು ಗೆಲುವೆ ಜೊತೆಗೆ
ನೂರಾರು ವರುಷಗಳ ದಾರಿಗೆ

- ಶ್ರೀಕಾವ್ಯ

16 Sep 2019, 04:57 pm

ಕನ್ನಡವೇ ನಮಗೆಲ್ಲ

ಕನ್ನಡವೇ ನಮಗೆಲ್ಲ
ಸವಿಯಾದ ಸಿಹಿ ಬೆಲ್ಲ
ಕನ್ನಡಕೆ ಒಂದೇ ಕುಲ
ಕನ್ನಡಿಗರು ನಾವೆಲ್ಲ

ಭಾಷೆ ಹಲವಾರೇ ಇರಲಿ
ಕನ್ನಡವೇ ನಮಗೆ ಮೊದಲಿಲ್ಲಿ
ಸಹ ಬಾಳ್ವೆಯೇ ಧ್ಯೇಯವಿಲ್ಲಿ
ಸಕಲ ಭಾಷಿಗರಿಗೂ ಸಮ ಸ್ಥಾನವಿಲ್ಲಿ

ಸರ್ವಜ್ಞನ ಜ್ಞಾನ, ಬಸವಣ್ಣರ ವಚನ
ಕೇಳವಾ ಕಿವಿಗಿಂಪು ಕನ್ನಡ ಸವಿ ಗಾನ
ದಾಸರ ಪದಗಳು, ಶರೀಫರ ತತ್ವವೆಷ್ಟು ಚೆನ್ನ
ಕಸ್ತೂರಿ ಕನ್ನಡದ ನುಡಿ ನುಡಿವ ನಾಲಗೆಯು ಚಿನ್ನ

ಹಳೆಗನ್ನಡ, ನಡುಗನ್ನಡ, ಹೊಸ ಕನ್ನಡ
ಕಾಲ ಕಾಲಗಳಿಂದ ಬೆಳೆದು ಉಳಿದ ಕನ್ನಡ
ಇಂದು, ಮುಂದು, ಎಂದೆಂದಿಗೂ ಕನ್ನಡ
ಕೆಚ್ಚೆದೆಯ ಕನ್ನಡಿಗನಲ್ಲಿ ಅಚ್ಚಿಳಿದು ಉಳಿದಿದೆ ನೋಡ

ನರಕಕ್ಕೆ ಕಳ್ಸಿ ನಾಲ್ಗೆ ಸೀಳ್ಸಿ ಬಾಯೊಲ್ಸಾಕಿದ್ರೂ
ಮೂಗ್ನಲ್ ಕನ್ನಡ ಪದವಾಡೋರು ನಮ್ ಕನ್ನಡದವ್ರು
ಎಂಥಾ ಸ್ವಾಭಿಮಾನ, ಭಾಷಾಭಿಮಾನಿಗಳು ನಮ್ಮವ್ರು..!
ಕೇಳಲು ಮೈ ನವಿರೇಳುವುದು ಕನ್ನಡವೇ ನಮ್ಮ್ ದೇವ್ರು

- Tribhuvan

15 Sep 2019, 11:07 pm

ಕವಿಯ ಕನಸು

ಈ ಮಾಯಾಲೋಕದಲ್ಲಿ ಕಂಡ ಕನಸು ನನಸಾಗುವ ಕಲ್ಪನೆ..
ಚಿಂತೆಗಳ ತೊರೆದು ಚಿಂತನೆಗೆ ಮುನ್ನುಡಿ ಬರೆಯುವ ಸೂಚನೆ..

ಹೊಸ ಕನಸ ಬೇಗೆಗಳಿಗೆ ಹೊಸ ಹರುಷ ನೀಡಿದಂತೆ ಯೋಚನೆ..
ಕನಸ್ಸು ನನಸಾಗುವಂತೆ ಮಾಡುವ ಮನಸ್ಸಿನ ಭಾವನೆ..

ಮನಸ್ಸ ಮಡಿಲೊಳಗೆ ಹೊಸ ಆಲೋಚನೆಗಳ ಮೆರವಣಿಗೆ..
ಮನ ಮಂದಿರದಲ್ಲಿ ಹೊಸ ಆಕಷ೯ಣೆಗಳ ನಡಿಗೆ..

ಬದುಕಿನ ಸುಂದರ ಕ್ಷಣಗಳ ಪಯಣದ ಆರಂಭ..
ಜಗದೆತ್ತರಕ್ಕೆ ತಲುಪಲು ಯತ್ನಿಸುವ ಕನಸ್ಸುಗಳು ಪ್ರಾರಂಭ..

ಮೋಡ ಮುಸುಕಿದ ಕಂಗಳಲ್ಲಿ ಏನಾದರೂ ಸಾಧಿಸುವ ತವಕ..
ಭೂಮಿಯ ಮೇಲೆ ಬೆಳಕು ಮೂಡುವುದಿಲ್ಲವೆ ಎಂಬ ಆತಂಕ..

ಸೋಲು ಗೆಲುವಿನ ಹಾದಿಯ ಎದುರಿಸಿ ನಿಲ್ಲೋ ತುಡಿತ..
ಜೀವನದ ನೋವಿನ ದಿನಗಳು ಮನದ ಕನಸಿನ ಮುರಿತ..

ಕನಸು ನನಸಾಗುವ ಭರವಸೆ ಮನದಲ್ಲಿ ಮೂಡಿದೆ..
ನಂಬಿಕೆಯಿಂದ ಗೆಲ್ಲುವ ಹುರುಪಿನಲ್ಲಿ ಮನ ಹಾಡಿದೆ..

ಬೆಳಕು ನೀಡುತ್ತಿದೆ ಕಣ್ಣುಗಳ ಹೊಸ ಕನಸು..
ಕವಿ ಕಂಡ ಈ ಕನಸು,ತಿರುಕನೋವ೯ನ ಕನಸು..

- HarshithaAcchu

15 Sep 2019, 11:17 am

ನನ್ನ ಗೆಳತಿ

ಇರಲಿ ಗೆಳತಿ ವಿಶ್ವಾಸ
ಮಾಡಬೇಡ ಗೆಳೆತನಕ್ಕೆ ನೀ ಮೋಸ
ಬೇಡ ಗೆಳತಿ ಮನಃಸ್ಥಾಪ
ನಂತರ ಪಡಬೇಡ ನೀ ಪಾಶ್ಚಾತಾಪ.
:- ವೀಣಾ ಲಿಂಗಣ್ಣ
ರಾಯಚೂರು

- Veena

14 Sep 2019, 02:07 pm

ಕಾದಿರುವೆ ನಿನಗಾಗಿ

ಹಿಂತಿರುಗಿ ನೋಡದೆ ಹೋದೆ
ಮರಳಿ ಎಂದಿಗೂ ಬಾರದೆಡೆ..
ಕಾಯುತ್ತಾ ನಿಂತಲ್ಲೆ ನಾ ನಿಂತೆ
ನೋಡುತ್ತಾ ನೀ ಹೋದೆಡೆ...

ಇಂದಿಗೂ ಕಾಯುತ್ತಲೇ ಇರುವೆ..
ಮರಳಿ ಸೇರುವೆವು ನಾವೆಂದು..
ನೀ ಎಲ್ಲಿರುವೆಯೋ ನಾನರಿಯೆ...
ಆದರೂ ಅನಿಸಿದೆ ಬಳಿ ಇರುವೆ ನೀನೆಂದು

ಸಿಕ್ಕಿತ್ತೇ ಸೂಚನೆ ಚೂರಾದ ಕೈ ಬಳೆಗೆ
ಶವಯಾತ್ರೆ ನಡೆದಿತ್ತು ಕನಸಲ್ಲಿ ಕಂಡ ಹಾಗೆ..
ಮೃಗವೊಂದು ಚೀರುತ್ತಲಿತ್ತು ಮಲಗದ ಹಾಗೆ
ದರ್ಪಣವೆ ಚೂರಾಯಿತು ತಾನೇ ತನಗೆ

ಹಾರಿ ಹೋಯಿತು ನಂದಾ ದೀಪ
ನಂದಿಸಿ ಹೋದವಳು ನೀನಿರಬಹುದೇ..?
ಬೀಸುವಾ ಆ ಗಾಳಿಯಾದರೂ
ನೀ ಹೋದ ದಾರಿಯ ಗುರುತಿಸಬಹುದೇ...?

- Tribhuvan

13 Sep 2019, 10:51 pm

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ'
ನಾಣ್ಣುಡಿಯೊಂದು ಹೇಳುವ ಹಾಗೆ
ವಿದೇಶವೆಂಬ ವ್ಯಾಮೋಹ ಕೆಲವರಿಗೆ
ಕನ್ನಡಿಯೊಳಗಿನ ಗಂಟಿನ ಹಾಗೆ

ಹಕ್ಕಿಯೊಂದು ಗೂಡು ಬಿಟ್ಟು
ಮೊದಲ ಬಾರಿ ಹಾರುವಂತೆ ಹೊರಗೆ
ತಾಯಿ, ತಂದೆ, ಬಂದು ಬಳಗವ ಬಿಟ್ಟು
ಹೋಗುವರಿವರು ಹೊರ ದೇಶಗಳಿಗೆ

ಮರೆವರು ತಮ್ಮ ಭಾಷೆ, ನೆಲ
ಮರೆವರು ತಮ್ಮ ಸಂಸ್ಕೃತಿ ಎಲ್ಲಾ
ಗುಲಾಮರಾಗುವರು ಪರರಿಗೆ
ಸುಪ್ಪತ್ತಿಗೆಯ ಸೆರೆವಾಸ ಇವರಿಗೆ

ಏಕಾಂಗಿ ಬದುಕು ಬಳಲಿ ಖಿನ್ನತೆಯಲಿ
ಜೀವನವನ್ನೇ ಕೊಡುವರು ದುಡಿಮೆಗೆ ಬಲಿ
ಮರಳಿ ತಾನು ಬರಲು ಮುಪ್ಪಿನಲಿ
ಮನೆ ಇರಲು ಖಾಲಿ.. ತಾಯಿ, ತಂದೆ ಬರಿ ನೆನಪಲ್ಲಿ

- Tribhuvan

13 Sep 2019, 10:50 pm

ತಂದೆ ತಾಯಿ

ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತೀರಾ ಸಾವಿರಾರು ಮೆಟ್ಟಿಲುಗಳ ಹತ್ತಿರ,

ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತೀರಾ ಸಾವಿರಾರು ಮೆಟ್ಟಿಲುಗಳ ಹತ್ತಿರ,
ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕೊಡ್ತೀರಾ
ದರ್ಶನ ಪಡೆದು ಮನೆಗೆ ಬರ್ತೀರಾ ತಂದೆ-ತಾಯಿಯ ಕಸಕ್ಕಿಂತ ಕೀಳಾಗಿ ನೋಡ್ತಿರಾ,

ತಂದೆ ತಾಯಿಯಲ್ಲಿ ದೇವರನ್ನು ಕಾಣಬೇಕೆ ವಿನಹ ದೇವರಲ್ಲಿ ತಂದೆ-ತಾಯಿಯನ್ನಲ್ಲ.
:- ವೀಣಾ ಲಿಂಗಣ್ಣ
ರಾಯಚೂರು

- Veena

13 Sep 2019, 02:55 pm

ಶೂನ್ಯ

ಅಪ್ಪ ಹೇಳಿದ್ದು ನೆನಪುಂಟು
ವಿದ್ಯೆಯೇ ಮೊದಲು
ಕಲಿತು ಒಳ್ಳೆಯವನಾಗು
ಉತ್ತಮ ಭವಿಷ್ಯ ನಿನಗುಂಟು

ಓದಿದ್ದು ಆಯಿತು ಕಲಿತದ್ದು ಆಯಿತು
ಹರಸುತ್ತ ನಾ ಹೊರಟೆ ಭವಿಷ್ಯ
ಎಲ್ಲೆಲ್ಲೋ ಅಲೆದಾಡಿ ಸಾಕಯ್ತು
ಕೊನೆಗೆ ದಕ್ಕಿದ್ದು ಮಾತ್ರ ಶೂನ್ಯ

ಆಟವಾಯಿತು ಬದುಕು
ಇಳಿ ಜಾರು ಬಂಡಿ
ಎಷ್ಟೆತ್ತರಕ್ಕೆ ಏರಿದರೂ..
ಕೊನೆಗೆ ಸೇರಲೇಬೇಕು ಗುಂಡಿ

ನಾ ತಿಳಿದಂತೆ ಜೀವನದ ಪಾಠ,
ನಮ್ಮಂತೇನೂ ನಡೆಯದು, ಎಲ್ಲವೂ ಮಾಟ
ಕೊರಗದಿರು ಮನವೇ ಶೂನ್ಯವಾದಾಗ ಬದುಕು
ಎಲ್ಲವೂ ಶೂನ್ಯದಿಂದಲೇ ಆರಂಭವಾಗಬೇಕು

- Tribhuvan

13 Sep 2019, 11:05 am