Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಿಳಿ, ಇದು ನಿಜಾ

ಕುಣಿಯ ಬ್ಯಾಡ
ನೀ ಮನುಜಾ,
ನಡುವೆ ಬಂದ
ಕಸವರವ ನೆನೆದು.
ದುಡುಕ ಬ್ಯಾಡ
ನೀ ಗಿರಿಜಾ,
ನಡಕ್ಕೆ ಬಿದ್ದ
ನಡುಪಟ್ಟಿಯ ನೆನೆದು.
ಹುಡುಕ ಬ್ಯಾಡ
ನೀ ಕಣಜಾ,
ನಿನ್ನಲ್ಲಿ ಇದ್ದ
ಸಂಪತ್ತ ನೀ ಮರೆತು.
ಹಾಲುಣಿಸ ಬ್ಯಾಡ
ನೀ ಹಾವಿಗೆ,
ವಿಷ ಕಕ್ಕದೇ ಬಿಡದು
ನಿನ ಕರ್ಮದ ಹಾದಿಗೆ.
ಮೆರೆಯ ಬ್ಯಾಡ
ನೀ ತನುಜಾ,
ಹಿಡಿಮಣ್ಣು ಹಾಕಿದರೆ
ನಿನ್ನಸ್ಥಿಗೆ ನೀನೇ ರಜಾ.!

- ನಾಗರಾಜ ಬಾಕೆ೯ರ್

30 Jun 2019, 05:46 pm

ಅಕ್ಕ

ಅಕ್ಕ ನೀನೆಂದರೆ ನಂಗೆ ಪಸಂದ
ಅದಕ್ಕೆ ಬರೆದೆ ಒಂದು ಕವನ ನನ್ನ ಕಡೆಯಿಂದ
ನಿನ್ನ ಆ ಧ್ವನಿ ಚೆಂದ ಚೆಂದ
ನಿನ್ನ ಆ ನಗು ಆನಂದ
ನಿನ್ನ ಆ ಮಾತು ಆನಂದವೋ ಪರಮಾನಂದ


ಓ ನನ್ನ ಮುದ್ದು ಅಕ್ಕ
ಸೋತುಹೋದೆ ನಿನ್ನ ಪ್ರೀತಿಗೆ ಪಕ್ಕ
ನೋವು ನಲಿವಲ್ಲಿಯೂ ಬೇಕು ನೀನು ಅಕ್ಕ
ಕಷ್ಟ ಸುಖದಲ್ಲಿಯೂ ಬೇಕು ಅಕ್ಕರೆ ಅಕ್ಕ


ನೀ ನನ್ನ ಒಲವು
ನಿನ್ನ ಜೊತೆ ಹಂಚಿಕೊಳ್ಳುವೆ ನನ್ನ ನೋವು ನಲಿವು
ಅಕ್ಕ ನೀನೆಂದರೆ ಪ್ರಾಣ
ನಿನ್ನಿಂದಲೇ ನನಗೆ ತ್ರಾಣ
ನೀನೆಂದೆಂದಿಗೂ ಚೆನ್ನಾಗಿರಬೇಕು
ನೀ ನನಗೊಂದು ಮಾದರಿಯಾಗಬೇಕು

ತ್ರಿಷಾ.......
plzz support my kavanas

- Trupthi Trupthi

30 Jun 2019, 02:34 pm

ವಯ್ಯಾರೀ ಚೆಲುವೆ

ವಯ್ಯಾರೀ ಚೆಲುವೆ


ಮಲೆನಾಡಿನ ಒಡತಿ ಮೈಸೂರಿನ ಗೆಳತಿ
ಮಳೆ ಬೀಳುವುದೇ ನಿನಗೆ ಸೊಗ್ಗಡತಿ
ಚಿನ್ನರಿಯೇ ನಿನ್ನ ಕಣ್ಣ ಶ್ರೀಗಂಧದ ಮೈ ಬಣ್ಣ
ಬಳಕು ಸೊಕಲಿದೆ ತಾನಿನ ತಳುಕಿನ ನಡೆ ಚಂದ
ತಾನಿನ ನಡು ಚಂದ ಅ ಆನಂದ,,,,,
ಈ ವಯ್ಯಾರೀಯ ಕಣ್ಣ,,
ಈ ವಯ್ಯಾರೀಯಬಣ್ಣ,,,,,

ನೀ ಹೇಳಲೇ ಬೆಡಗಿ ಚಿನ್ನರ ಹುಡಗಿ
ಚಿಲುಪಿಲಿ ನಗುವಿನ ಮುದ್ದಾದ ಈ ಹುಡುಗಿ
ಸಿಂಗಾರದ ಚೆಲುವೆ ಎನ ಬಂಗಾರದ ನವಿಲೆ,,

ಏ ಕಂಡದ್ದು ಮಾತ್ರಕ್ಕೆ ನೋಡೇನು ತಿಳಿಯ
ತಿಳಯ ಒಳಪಿನ ತಾ ನೀನ ಸುಂದರ ಮೊಗದವಳೆ
ತಾ ನಿನ್ನ ಅಂದ, ತಾ ನಿನ್ನ ಚೆಂದ
ಈ ವಯ್ಯಾರೀಯ ಕಣ್ಣ
ಈ ವಯ್ಯಾರೀಯ ಬಣ್ಣ,,

ಬಿಡಲು ಬಿಳುಕಿನ ಬಿಳುಪಿನ ಬಾನಿನಲಿ
ಬಸವಳಿಯದ ನಸುಕಿನ ಸಂಜಯಲಿ
ನಸುನಗೆಯ ಬೀರುತ ಗೆಜ್ಜೆಯ ಕುಲುಕುತ ನಡೆಯುವಳೆ,,
ಓಹೋ ನಡೆಯುವಳೆ, ಬಲು ಚೆಲುವಿವಳೆ
ಬಲು ಚೆಲುವಿವಳೆ ನನ್ನ ಮಂದಾರಾದ ಹೂವೇ,,
ಶ್ರೀಗಂಧದ ಮೈ ಬಣ್ಣದ ಚಲುವೆ.. ಓಹೋ
ನೀನು ಬಲು, ಮುದ್ದಾದ ಮೊಗದವಳೆ,,,
ಓಹೋ ಮುದ್ದಾದ ಮೊಗದವಳೆ,,,

--by Rajfrom Raj

- null

30 Jun 2019, 01:44 pm

ಕಾಗದದ ದೋಣಿ

ನನ್ನೆದೆಯಲಿ ನೋಡಿದೆ ಅವಳನು
ಅವಳ ಮನಸ್ಸು ಅರಿಯಲಿಲ್ಲ ನನ್ನನು
ಅಲೆಗಳು ಸದ್ದು ಮಾಡುತ್ತಿವೆ ನನ್ನಲಿ
ಕಾಗದದ ದೋಣಿ ತೆಲುತ್ತಿದೆ ಏನು ಮಾಡಲಿ........?

- ak

30 Jun 2019, 12:05 pm

ಕಥಾ-ನಾಯಕ 'ಕಟ್ಲಾಯ'ನೀತ

ಗಿಡ್ಡನೆಯ-ದಪ್ಪನೆಯ ದೇಹದ ಆಕಾರ..
ಹೆಗಲಮೇಲೊಂದು ಉದ್ದದ ಸೇಲ್ಯದ ವಿಕಾರ..
ದಣಿವರೆಯದೆ ಬೆವರ ಸುರಿಸುವ ಕೆಲಸಗಾರ..
ಏಟ್ಟಿ-ಗಟ್ಟಿತನಕೆ ನಮ್ಮಪ್ಪನೆ ಕಾವಲುದಾರ..

ವೃತ್ತಿಯಲ್ಲಿ ಮೂಟೆನೋರುವ ಹಮಾಲನಾತ..
ಪ್ರವೃತ್ತಿಯಲ್ಲಿ ಎಂಟೆತ್ತಿನ ಕೊಬ್ಬ ಕುಗ್ಗಿಸುವ ವಕ್ಕಲಿಗನಾತ..
ಉಟ್ಟ-ಬಟ್ಟೆಯಮೇಲೆ ಮನೆಯಿಂದ ನೂಕಿಸಿಕೊಂಡ ನತದೃಷ್ಟನಾಟ..
ಬಾಳೆಯ ಹಣ್ಣಿನ ಸಿಪ್ಪೆಯ ತಿಂದು ಬದುಕಿದಾತ.

ಸಾಲ-ಸೂಲಕೆ ಎದೆಯೋಡೆಯುವ ಗೀರಾಕಿಯಾತ
ಬೀಗರು-ಬಿಜ್ಜರನು ಗುಜ್ಜರಿಗೆ ಹಾಕುವಾತ..
ಮಾನ-ಅವಮಾನಕೆ ಭಯಂಕರ ಹೆದರುವಾತ..
ಅಭಿಮಾನ-ಸ್ವಾಭಿಮಾನಕೆ ಎಡೆಗೊಟ್ಟು ನಿಲ್ಲುವಾತ.

ಅಲ್ಬಳ-ತೋಳ್ಬಲಕೆ ಹೆಸರುವಾಸಿಯಾತ..
ಸಿಟ್ಟು-ಬಂದರು ಪಟ್ಟ ಅಂತ ಬಡಿಯದಾತ..
ಅವಾಗವಾಗ ಅವ್ವನ ಜೊತೆ ಕೋಳಿ ಜಗಳ ಆಡುವಾತ..
ಈತನೇ ನಮ್ಮಪ್ಪ ಏಟ್ಟಿ-ಗಟ್ಟಿ ಕಟ್ಲಾಯ'ನೀತ

- ಆರ್ ಎಸ್ ಸುಗ್ಗಿ.

29 Jun 2019, 07:37 pm

ನೀನೆ ಬಂದು ಹೇಳೂ......

ಬಾನಂಗಳದ ಕಡಲಲೀ ನಿಂತು
ಕೂಗಿದೆ ನಾ ನೂರೆಂಟು ಹೆಸರಿನಲೀ...
ನೀನೆ ಬಂದು ಹೇಳು ನಿನ್ನ ಹೆಸರು ಯಾವುದು

ಕಡಲ ತೀರದಲ್ಲಿ ನಿಂತು
ನಿನ್ನ ಹೆಜ್ಜೆಯ ಗುರುತು ಕಂಡು
ಹಿಂಬಾಲಿಸಿದಾಗಲೆಲ್ಲ.....
ಅಲೆಯು ಬಿಡುತ್ತಿಲ್ಲ
ನೀನೆ ಬಂದು ಹೇಳು ನಿನ್ನ ಮನೆ ದಾರಿಯಾವುದು.....

- ak

29 Jun 2019, 07:33 pm

ನನ್ನ ಬಾಳ ಪುಟದಲಿ

ಹಿಡಿ ಮನಸಿಗೆ ಹಿಡಿಯದಷ್ಟು ಒಲವ ನೀಡಿ
ಒಲ್ಲದ ಮನಸ್ಸಿಂದ ಇಲ್ಲದ ನೆಪ ಮಾಡಿ
ಕಾಣದ ಊರಲಿ ಕಣ್ಮರೆ ಯಾದೆಯಲ್ಲಾ.....
ಅಂದೇ ನಾ ಬರೆದ ಕವನಕ್ಕೆ ನೀನಾದೆ ಮುನ್ನುಡಿ
ಬಿಚ್ಚಿಟ್ಟೇ ಆ ನೋವ ಅಂತರಂಗದಿ ಹಾಡಿ
ಮತ್ತೆ ಮರಳಿ ಮರುಕಳಿಸುವೆಯಾ
ನನ್ನ ಬಾಳ ಪುಟದಲಿ ......


ದಯಮಾಡಿ .....

- dvja

23 Jun 2019, 09:20 am

ಹೇ ದರ್ಪಣ ನೀ..... ನು

ಕನ್ನಡಿಹೊಳಗಿನ ಪ್ರತಿಬಿಂಬ
ಕಾಣದಾಗಿದೆ ಕಣ್ಣಿಗೆ ಕತ್ತಲು ಕವಿದು

ಬದುಕೇ ಮಾಸಿ ಕರೆಗಟ್ಟಿರಲು
ಮುಖದ ಮೇಲಿನ ಕಲೆಗೆ ಪರಿಹಾರವೇಕೆ

ಮಾತುಗಳೆ ಬೆಲೆಕಳೆದು ಮುಕಾಗಿರಲು
ತುಟಿ ಒಣಗಿದ ಪರಿವೆಗಿರಬೇಕು

ದೇಹದ ತುಂಬೆಲ್ಲ ಗೊಂದಲದ ಗೂಡು
ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕರವಷ್ಟೇ

ಕೇಳುವರಾರಿಲ್ಲ ವ್ಯತೆಯ ಕತೆಯ
ಎಲ್ಲರ ಕಿವಿಯು ಕಿವುದಾಗಿದೆ ತಿಳಿಯದು.

ಆದರೆ

ಹೇ.... ದರ್ಪಣ ನೀನು
ನನ್ನ ಅಣಕಿಸಿ ನಗುತ್ತಿರುವೆಯಲ್ಲ

- ಮಂಜು

22 Jun 2019, 09:23 pm

÷÷÷÷

ಪರದೆ ಸರಿದಾಗಲೇ ತಿಳಿಯುವುದು ಪಾತ್ರ ಯಾವುದೆಂದು.........
ಬಣ್ಣ ಕಳಚಿದಾಗಲೇ ಅರಿವಾಗುವುದು ಪಾತ್ರ ಯಾರದೆಂದು..........
ಸುಖ ಇದ್ದಾಗಲೇ ಲೆಕ್ಕಕ್ಕೆ ಸಿಗುವುದು ಸ್ನೇಹಿತರು ಎಷ್ಟೆಂದು............
ಕಷ್ಟ ಬಂದಾಗಲೇ ಮನವರಿಕೆ ಆಗುವುದು ಯಾರು ನೀಜವಾದ ಸ್ನೇಹಿತರೆಂದು.....

- Shilpa

22 Jun 2019, 05:28 pm

ನಲಿವಿನ ನೋವು

ತಾಯಿ ಜೀವನದ ಆರಂಭವದು
ಜೀವಕ್ಕೆ ಜೀವ ನೀಡೊ ಹೊತ್ತದು
ಕಾಣುವುದು ಕಣ್ಣಿಗೆ ಎಂಥಾ ನೋವದು
ತಾಯಿ ಪದವಿ ಸಿಕ್ಕ ಹೆಣ್ಣು ಮನವದು
ಕರುಳ ಬಳ್ಳಿ ತೋಳಲಿಡಿದು
ನವಿಲ ಹಾಗೆ ನಲಿಯುತಿಹುದು
ತಾಯಿಗೆ ನಲಿವನ ನೋವದು

- dvja

21 Jun 2019, 09:16 pm