Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ವಾಗತ ಸುಸ್ವಾಗತ

ಸ್ವಾಗತ ಸುಸ್ವಾಗತ
ಏನೇ ಬರಲಿ ಹೃದಯಪೂರ್ವಕ ಸ್ವಾಗತ...
ಸ್ವಾಗತ ಸುಸ್ವಾಗತ
ನೋವೇ ಆಗಲಿ ನಗುನಗುತ ಸ್ವಾಗತ...
ಗೆಳೆಯರೇ ಓ ಗೆಳೆಯರೇ
ಈ ಲೋಕವೇ ನಮ್ಮ ಸ್ನೇಹಿತ...
ದಿನದಿನವೂ ಅನುಕ್ಷಣವು ಮನವಾಗಲಿ ಜಗ ಎನಿಸಲಿ ಹೊಸ ಸಂತೋಷ ಸಂಗೀತ...

ಸೂರ್ಯ ಮುಳುಗುವ ಹಾಗೆ ಚಂದ್ರ ನಗುವ ಹಾಗೆ ಜೀವನ
ನಿನ್ನೆಯ ಯಾತನೆ ನಾಳೆಯ ಯೋಚನೆ ಯಾಕೆ ಸುಮ್ಮನೆ
ಈ ದಿನವೇ ನಗುತಿರಬೇಕು ನೀನು ಕಿಲಕಿಲನೆ...
ಬಾಳಬಂಡಿ ನಡೆಸು ನೀನು ಜೊತೆಯಾಗಿ ಸಾಗುತ
ನಾನು ನನ್ನದು ಎಲ್ಲ ನಾಶವಾಗೋದು ಖಚಿತ
ಪ್ರೀತಿ ಸ್ನೇಹ ಒಂದೇ ಎಂದೆಂದೂ ಶಾಶ್ವತ...

ಮರುಭೂಮಿ ಇರುವ ಹಾಗೆ ನದಿ ಹರಿವ ಹಾಗೆ ಜೀವನ
ದ್ವೇಷರೋಷ ಏಕೆ ನಿನಗೆ ಧನಕನಕ ಬರದು ಕೊನೆಗೆ
ಒಲವಿನ ಕಡಲಿಗೆ ನೀನು ಧುಮುಕು,ಪರರ ಒಳಿತಿಗಾಗಿ ಬದುಕು...
ನಕ್ಕರೆ ನಿನ್ನ ಬಾಳು ಸುಂದರ ನಗಿಸಿದರೆ ನಿನ್ನ ಹೆಸರು ಅಮರ
ಸುಳ್ಳು ಮೋಸ ಎಲ್ಲ ನಾಶವಾಗೋದು ಖಚಿತ
ದಾನ ಧರ್ಮ ಒಂದೇ ಎಂದೆಂದೂ ಶಾಶ್ವತ...

- suresh

18 Mar 2019, 07:57 am

ಅಜರಾಮರ

ಅವಳ ನೆನಪಿನ ಗುಂಗಲಿ ಲೋಕವ ಮರೆತೆನು
ಅವಳ ಕೈಹಿಡಿದು ಅದ್ಭುತವ ನಡೆಸಲು
ನಾ ನಿನ್ನಯ ಭಕ್ತನು ನನ್ನಯ ಪಾಡುನೋಡು
ಓ ದೇವರೇ...ಓ ದೇವರೆ ನೀನೊಮ್ಮೆ ಕಣ್ತೆರೆದು ನೋಡು
ಅವಳ ಕೈ ಹಿಡಿದು ನಡೆಯಲು ನಾ ಯಾರೊ
ನನ್ನ ಬಾಳಲ್ಲಿ ಬರಲು ಅವಳ್ಯಾರೊ?

ನಾ ಸಾಧಿಸುವ ಛಲಕೆ ಸಾರ್ಥಕತೆಯು ಅವಳೆ
ನನ್ನ ಕನಸನ್ನು ನನಸಾಗಲು ಅದೃಷ್ಟವು ಅವಳೆ
ನನ್ನ ಪ್ರೀತಿಯ ದಾರಿಯಲ್ಲಿ ಅವಳೊಂದು ಕನಸಂತೆ
ಈ ಕನಸನ್ನು ನನಸಾಗಲು ಅವಳು ಇರಬೇಕಂತೆ
ನನ್ನ ಪ್ರೀತಿಯು ಸಾಗಲಿ ಕಷ್ಟನಷ್ಟದ ದಾರಿಯಲಿ
ನಂಬಿಕೆಯು ಹುಟ್ಟಲಿ ಅವಳ ನೋಡಿದ ಕ್ಷಣದಿಂದ
ನನ್ನೊಲವಿನ ಬದುಕು ಅವಳು, ಆ ಬದುಕೆ ನನದಾಗಲಿ

ಕಣ್ತುಂಬ ನಿನ್ನ ಬಿಂಬ ತುಂಬುತ ಭಾರವಾಗಿದೆ ಮನಸು
ನೋವು ನುಂಗುತ ಸಹಿಸುತಲಿ ಕೊರಗುತಿರುವೆ
ಮೌನಿಯಾಗಿ, ಅಳಿಸಿ ಬಿಡು ದೇವರೆ ನಿನ್ನ ಹಸ್ತದಲಿ
ಅವಳನ್ನು ಕರುಣಿಸು ದೇವರೆ ಈ ಕ್ಷಣದಲಿ
ಅವಳ ಮನಸಲಿ ಏನಿದೆ ನನಗಂತು ತಿಳಿಯದು
ನನ್ನ ಮನಸಿನ ಮಾತನು ಹೇಳಲು ಆಗದು
ಒಂದಾದರೆ ನಾವಿಬ್ಬರು ನೋಡಲು ಕಣ್ ಸಾಲದು
##ಮೌನಿ##

- RajaneeshNandikolmath

15 Mar 2019, 02:42 am

ಮಾತು

ಹೃದಯದ ಮಾತು
ಒಂದೊಂದು ಮುತ್ತು
ಜಿಹ್ವೆಯ ಮಾತು
ತರುವುದು ಆಪತ್ತು
ಯೋಚಿಸಿ ಯಾವೊತ್ತು
ಬರಬೇಕು ಶಬ್ದಸಂಪತ್ತು
ಸೌಜನ್ಯದ ಮಾತು
ಇರಲಿ ನಮ್ಮೊಂದಿಗೆ ಯಾವತ್ತು




ಶಾರದ

- ಶಕುಂತಲಾ

14 Mar 2019, 04:43 pm

ಹನಿಗವನಗಳು

ಸುಹಾಸ
ನಗುಮೊಗದ ಮನ್ಮಥ
ಸದಾ ಪರಿಮಳವ ಚೆಲ್ಲುತ
ಸುವಾಸನೆಗೆ ಆವಾಸಸ್ಥಾನ ವಾದವನಾರೊ
ಅವನೇ ನಮ್ಮೆಲ್ಲರ ಪ್ರೀತಿಯ ಸುಹಾಸ

ಶ್ರಾವಂತ
ಹಸುನಗೆಯ ಬೀರುವನಿತ
ತುಸುವು ಕಲ್ಮಶವಿರದಾತ
ಸಾಧನೆಯಲಿ ಛಲವಂತ
ಅಲುಗಾಡದ ಮೇರು ಪರ್ವತ
ಅವನೆ ನಮ್ಮೆಲ್ಲರ ನೆಚ್ಚಿನ ಶ್ರಾವಂತ

ಗುರು
ತರಗತಿಯಲ್ಲಿ ಇದ್ದರೆ ಆನಂದ
ಬೆಳೆಸುವನು ಎಲ್ಲರೊಂದಿಗೆ ಸಂಬಂದ
ಸರ್ವರನು ಸೆಳೆವನು ತನ್ನ ಮಾತಿಂದ
ಗುರು ರಾಘವೇಂದ್ರರ ವರಪ್ರಸಾದ
ಅವನೇ ನಮ್ಮೆಲ್ಲರ ಪ್ರೀತಿಯ ಗುರು ಪ್ರಸಾದ

ರಕ್ಷಿತ
ಪ್ರಯತ್ನ ಪಥದಲ್ಲಿ
ಸಾಧನೆಯ ರಥವೇರಿ
ಮೀರಿಸುವ ಛಲದಲ್ಲಿ
ಸಾಗುತಿಹಳು ಈ ಸುಂದರಿ
ಅವಳೇ ನಮ್ಮೆಲ್ಲರ ಪ್ರೀತಿಯ ರಕ್ಷಿತ

ತೋರಿಕೆಯಲಿ ಭೂಪ
ತೋರುವನು ಉತ್ತರನ ಪ್ರತಾಪ
ಸಾಧನೆಯಲಿ ಬಲು ಅಪರೂಪ
ಚರ್ಚೆಗೆ ಇವನೇ ಚಾಲಕ
ಅವನೇ ತರಗತಿಗೆ ನಾಯಕ
ನಮ್ಮೆಲ್ಲರ ನೆಚ್ಚಿನ ಕಾರ್ತಿಕ


ನಮ್ಮ ಶಾಲೆಯ ಕ್ಯೂಟಿ
ಹೊಂದಿರುವಳು ಬ್ಯೂಟಿ
ಮೌನವೆ ಇವಳ ದಾಟಿ
ಬೀಸುವಳು ಮುಗುಳುನಗೆಯಚಾಟಿ
ಅವಳೆ ನಮ್ಮೆಲ್ಲರ ಪ್ರೀತಿಯ ಶುಶ್ಮಿತ ಪುಟ್ಟಿ

ಸ್ಪುರದ್ರೂಪಿ ಯುವಕನೀತ
ಹೆತ್ತವರ ಪ್ರೀತಿಯ ಸುತ
ಸ್ನೇಹವೇ ಇವನಿಗೆಲ್ಲ
ಮಾತೊಂದು ಸಿಹಿ ಬೆಲ್ಲ
ಹೊಂದಿರುವನು ಕಿರುಗಲ್ಲ
ಅವನೇ ನಮ್ಮೆಲ್ಲರ ಪ್ರೀತಿಯ ಅನಿಲ

ಪಲ್ಲವಿಯೆ ಹಾಡಿಗೆ ಭ್ರೂಣ(ಪ್ರಾಣ)
ಹರಟೆಗೆ ಇವನೆ ಕಾರಣ
ಇವನಿಗಿದೆ ರಂಜಿಸುವ ಗುಣ
ತರಗತಿಗೆ ಇವನೆ ಭೂಷಣ
ಅವನೇ ನಮ್ಮೆಲ್ಲರ ಪ್ರೀತಿಯ ಚರಣ

ಗುರು-ಹಿರಿಯರಲ್ಲಿ
ತೋರುವನು ನಯ-ವಿನಯ
ಪಠ್ಯೇತರ ಚಟುವಟಿಕೆಗಳಲ್ಲಿ
ತೋರುವನು ಅತಿ ಜಾಣ್ಮೆಯ
ಮಾತಿನಲ್ಲೇ ಇವನೆಂದೂ ತನ್ಮಯ
ಅವನೇ ನಮ್ಮ ಅಭಿನಯ

ಅಂದು ಲಂಕೆಗೆ ಹಾರಿದ ಹನುಮಂತ
ಇಂದು ಅಂಕಿಯಿಂದ ಜಾರುತಿಹನೀತ
ಏರಲೆಂಬಾಸೆ ಮೇರು ಪರ್ವತ
ಸಕಲವ ಸಹಿಸುವ ಗುಣವಂತನೀತ
ಅವನೇ ನಮ್ಮೆಲ್ಲರ ನೆಚ್ಚಿನ ಹೇಮಂತ

ಇವನಿಗೆ ಪಠ್ಯ ಅಪರಿಚಿತ
ಪಠ್ಯೇತರ ಚಿರಪರಿಚಿತ
ಇವನ ಗಣನೆಗಿಲ್ಲ ಗಣಿತ
ಇರುವ ಹವ್ಯಾಸಗಳು ಅಗಣಿತ
ನಟನೆಯಲ್ಲಿ ಪರಿಣಿತ
ಅವನೇ ನಮ್ಮೆಲ್ಲರ ನೆಚ್ಚಿನ ರೋಹಿತ

ಮೌನ ಇವನಿಗೆ ಉಚಿತ
ಇವನೆಂದು ನಿಶ್ಚಿಂತ
ಸಾಗುವ ಹಾದಿ ನಿಶ್ಚಿತ
ಆಗು ಹೋಗುಗಳಿಗೆ ತಲೆ ಕೆಡಿಸಿಕೊಳ್ಳದಾತ
ಅವನೇ ನಮ್ಮೆಲ್ಲರ ನೆಚ್ಚಿನ ಸುಚಿತ

ಜಗ್ಗದ ಕುಗ್ಗದ ಸರದಾರ
ಬದಲಾಗದ ಛಲಗಾರ
ಪ್ರಶಂಸೆಗೆ ಬಲು ದೂರ
ಮಾತಿನಲಿ ಸಾಹುಕಾರ
ಅವನೇ ನಮ್ಮೆಲ್ಲರ ನೆಚ್ಚಿನ ಸುಭಾಷ್ ರಾಜ

ಮಾತಿನಮಲ್ಲ ಇವನಲ್ಲ
ಇವನೇ ತರಗತಿಗೆ ಬಲ
ಮುಗ್ದ ಮನದ ನಲ್ಲ
ಅವನೇ ನಮ್ಮೆಲ್ಲರ ನೆಚ್ಚಿನ ನಿಖಿಲ

ಹಿತ್ತಾಳೆ ಕರ್ಣಗಳ ಮೂಲಕ
ಹರಟೆಯೆ ಇವಳ ಕಾಯಕ
ನೇತ್ರಗಳಾಶ್ರಯಿಸಿವೆ ಕನ್ನಡಕ
ಇವಳೊಂದು ಬೇದಿಸಲಾಗದ ಗವಿ
ಅವಳೇ ನಮ್ಮೆಲ್ಲರ ಪ್ರೀತಿಯ ಶಾಂಭವಿ

ಸೌರಮಂಡಲದ ಅಧಿಪತಿ ಆ ಭಾನು
ಅಪಜಯದ ಅಧಿಪತಿ ಈ ಭಾನು
ಪ್ರಕಾಶವೆ ಅವನ ಕಾಯಕ
ಮುಗುಳುನಗೆಯೆ ಇವನ ಉತ್ತರ
ನಿಂದನೆಗಳನೆ ಅಭಿನಂದನೆಗಳೆನ್ನುವನೀತ
ಅವನೇ ನಮ್ಮ ನೆಚ್ಚಿನ ಭಾನುಪ್ರಸಾದ

ಮೌನವೇ ಇವಳಿಗೆ ಆಭರಣ
ಮುಗುಳುನಗೆ ಒಂದು ಶಶಿಕಿರಣ
ನೋಟದಲ್ಲೆ ಬಿಡುವಳು ಹೂಬಾಣ
ಸದಾ ಕೈಗೊಳ್ಳುವಳು ಗಗನಯಾನ
ಅವಳೇ ನಮ್ಮ ನೆಚ್ಚಿನ ಗಗನ


ಶಾರದ

- ಶಕುಂತಲಾ

14 Mar 2019, 04:41 pm

ತಪ್ಪದೇ ಮಾಡು ಇಂದು ಮತದಾನ

ಪ್ರಜಾತಂತ್ರದ ಯಶಸಸ್ಸಿಗೆ ಸೋಪಾನ
ನೀನು ಮಾಡುವ ಮತದಾನ
ಓ ಮಾನ್ಯ.ಮತದಾರ....
ಗಣತಂತ್ರದ ಗೆಲುವಿಗೆ ಮೆಟ್ಟಿಲು
ನೀನು ಬೆಳಗಿಸುವ ಶಾಹಿ ಗುರುತಿನ ಬೆರಳು
ಓ ಅಭಿವೃದ್ಧಿಯ ಹರಿಕಾರ....
"ತಪ್ಪದೇ ಮಾಡು ಇಂದು ಮತದಾನ
ನಿನ್ನಿಂದಲೇ ಆಗಲಿ ಬಲಿಷ್ಟ ರಾಷ್ಟ್ರದ ನಿರ್ಮಾಣ..
ಚಲಾಯಿಸು ನಿನ್ನ ಹೆಮ್ಮೆಯ ಹಕ್ಕನ್ನ
ನನಸಾಗಿಸು ದೇಶದ ಹಿರಿಮೆಯ ಕನಸನ್ನ"....

ನಿನ್ನ ವೋಟಲಿ ಅಡಗಿದೆ
ರಾಷ್ಟ್ರದ ಉದ್ಧಾರ
ನಿನ್ನಿಂದಲೇ ತೊಲಗಬೇಕಿದೆ
ರಾಷ್ಟ್ರದ ಭ್ರಷ್ಟಚಾರ....
ನಿನ್ನ ಒಪ್ಪಿಗೆ ಬೇಕಿದೆ
ಮಾಡೋ ಸೂಕ್ತ ನಿರ್ಧಾರ
ನಿನ್ನ ತೀರ್ಪಿಗೆ ಬೆಲೆಯಿದೆ
ನೀಡೋ ಉತ್ತಮರಿಗೆ ಅಧಿಕಾರ....
ನೂರೆಂಟು ಸಮಸ್ಯೆಗಳನು ಎದುರಿಸಬೇಕಿದೆ
ಅದಕೆ ಹದಿನೆಂಟು ತುಂಬಿದವರ ಮತವಾಗಲಿ ಉತ್ತರ...
ಮತದಾರರಿಂದಲೇ ಸರ್ಕಾರ
ಮತದಾರರಿಗಾಗಿಯೇ ಸರ್ಕಾರ....

ಇಲ್ಲಿ ನಡೆಯೋದು ಪ್ರಜೆಗಳ ಪ್ರಭುತ್ವ
ನೀಡೋ ಪ್ರಾಮಾಣಿಕರಿಗೆ ನಾಯಕತ್ವ...‌.
ಜಾತಿಧರ್ಮದ ಸರಪಳಿಗೆ ಸೋಲದಿರಲಿ ಮನುಷ್ಯತ್ವ
ದೇಶದ ಒಳಿತಿಗೆ ಜನರ ಹಿತಕ್ಕೆ ನೀಡು ಮಹತ್ವ..
ಓ ಮತದಾರನೇ ನೀನೆ ಈ ದೇಶದ ಸಂಪತ್ತು
ಹಣಕ್ಕೆ ವೋಟು ಮಾರಿಕೊಂಡು ಊರಿಗೆ ತರದಿರು ಆಪತ್ತು..
ಮರೆಯದಿರು ಮತದಾರನೇ ಈ ಪವಿತ್ರ ಕರ್ತವ್ಯ
ತಂದುಕೊಡು ದೇಶಕೆ ಸುಂದರ ಭವಿತವ್ಯ...
ನಿನ್ನ ಒಂದೊಂದು ಮತ
ದೇಶಕೆ ಎಂದೆಂದೂ ಹಿತ....

- suresh

13 Mar 2019, 06:58 pm

ಮತದಾನ ಮಾಡೋಕೆ ಅಭಿಮಾನದಿಂದ ಬಾರೋ

ಮತದಾನ ಮಾಡೋಕೆ
ಇಂದು ಅಭಿಮಾನದಿಂದ ಬಾರೋ....
ಷಾಹಿ ಗುರುತಿನ ಬೆರಳನ್ನು
ನೀನು ಹೆಮ್ಮೆಯಿಂದ ತೋರೋ....
ನಮ್ಮ ನಾಡಿನ ಏಳಿಗೆ
ನಿನ್ನ ವೋಟಿನಿಂದ ನೋಡೋ....
ಈ ದೇಶ ಈ ಜನಕೆ
ಸುಂದರ ನಾಳೆಯ ನೀಡೋ....

ಜಾತಿಧರ್ಮದ ಸಂಕೋಲೆಗೆ ವೋಟು ಮುಡಿದು
ಹಾಳು ಮಾಡದಿರು ಸಮಾಜದ ನೆಮ್ಮದಿ....
ಹಣದ ಗುಂಡಿಗೆ ಮತವ ಸುರಿದು
ದೇಶದ ಭವಿಷ್ಯವನ್ನು ಮಾಡದಿರು ಸಮಾಧಿ...‌.
ಆಸೆ ಆಮಿಷಗಳ ಕುತಂತ್ರಕೆ ಸೋತು
ಜನತಂತ್ರ ವ್ಯವಸ್ಥೆಗೆ ತರದಿರು ಕುತ್ತು....
ಮತದಾನ ನಿನ್ನ ಪವಿತ್ರ ಅಧಿಕಾರ
ಎಲ್ಲಾ ಆಗುಹೋಗುಗಳಿಗೆ ನೀನೇ ಜವಾಬ್ದಾರ....

ಭ್ರಷ್ಟರಿಗೆ ಮಣೆ ಹಾಕದಿರು
ರಾಷ್ಟ್ರ ಪ್ರಜ್ಞೆ ಮರೆಯದಿರು....
ಅರ್ಹ ಪ್ರತಿನಿಧಿಯನು ಆರಿಸು
ದೇಶದ ಮಂದಿಯನು ಬೆಳಗಿಸು....
ನೀನಾಗು ನಾಡಿನ ಜೀವನಾಡಿ
ನಿನ್ನ ವೋಟು ಬರೆಯಲಿ
ನಾಡಿನ ಪ್ರಗತಿಗೆ ಮುನ್ನುಡಿ....
ನೀನಾಗು ದೇಶದ ಭದ್ರ ಬುನಾದಿ
ನಿನ್ನ ವೋಟು ಹಾಡಲಿ
ದೇಶದ ಅಭಿವೃದ್ಧಿಗೆ ನಾಂದಿ....

- suresh

13 Mar 2019, 06:26 pm

ಭಾವಗೀತೆ-ಇರಲಿ ಹೀಗೇ

ಇರಲಿ ಹೀಗೇ...

ನನ್ನ ನಿನ್ನ ನಡುವೆ ಇಲ್ಲವು
ಯಾವ ರೀತಿಯ ಕಂದರ..
ತಿಳಿದುಕೊಂಡೇ ನಾವು ಇರುವೆವು
ಜೊತೆ ಜೊತೆಯಲಿ ನಿರಂತರ..

ಭಾವ ಬಳ್ಳಿಯ ಬೇರುಗಳಲೂ
ಮನದ ಮಾತದು ಸುಮಧುರ..
ಬದುಕು ಬಹಳ ಬೇಡ ತಳಮಳ
ಇರದಿರಲಿ ನಮಗೆ ಅವಸರ..

ಸ್ಪರ್ಶ ಮುತ್ತದು ನಮ್ಮ ಒಡವೆಯು
ಬಾಳ ಹಸಿರದು ಅಮರವೂ
ಒಡಲ ಒಳಗಿನ ಕಿಚ್ಚು ದಹಿಸಲು
ಪ್ರೇಮವೊಂದೇ ಸ್ಪೂರ್ತಿಯೂ..

ನಿನ್ನ ಕರೆಗೆ ನನ್ನ ನೋಟವು
ಪುಳಕ ನಖ -ಶಿಖಾಂತದಿ
ಬೆವರ ಹನಿಗಳು ಮೂಡುವಾಗಿನ
ಬೆಚ್ಚನೆಯ ಹಿತವು ಮನದಾಳದಿ ...

ಅರ್ಥಗರ್ಭಿತ ಬದುಕ ತೀರದಿ
ವೇಗ ಓಡುವ ನಾವೆಯೂ
ಮಕ್ಕಳ ಸುಖ ಪಡೆದು ನಡೆಯುತ
ಮೌನವಿಲ್ಲದ ಗಳಿಗೆಯೂ...
@ಪ್ರೇಮ್@
12.03.2019

- PremUdayKumar

12 Mar 2019, 01:14 pm

ಬದುಕು

ಅಲ್ಪ ದಿನದ ಈ ಬದುಕು,
ಚೀರವಾಗಲಿ ಸವಿ ನೆನಪು,
ಬಂಗಾರದ ಈ ಜನುಮ,
ಸಾಗುತಿರಲಿ ಸಾವಿರ ದಿನ!!

ಹುಟ್ಟುವೆವು ಒಬ್ಬಂಟಿಯಾಗಿ,
ಬಾಳುವೆವು ಸಂಘಜೀವಿಯಿಗಿ,
ಕೊನೆಯ ಉಸಿರ ಎಳೆಯುವರೆಗು,
ನಡೆಹುತಿಹುದು ಈ ಬದುಕು!!

ತಿರುಗುತಿಹುದು ಕಿಲಚಕ್ರ,
ಉರುಳುತಿಹುದು ಜೀವನಚಕ್ರ,
ಹರುಷ-ಸಂತಸ ದುಃಖ-ದುಮ್ಮಾನ,
ಸಮ್ಮೀಲನವೆ ಈ ಬದುಕು!!

ಭವಾನಿ ಉಳ್ಮಣ್

- Bhavani Ulman

11 Mar 2019, 08:57 pm

ಹನಿಗವನ-2

2. ಟೋಪಿ

ಅಂದು ಗಾಂಧೀಜಿ, ನೆಹರು ಭಗತ್
ಹಾಕಿದ್ದರು ಬೇರೆ ಬೇರೆ ಟೋಪಿ!
ಇಂದು ಚುನಾವಣೆ ಮುಗಿದ ಕೂಡಲೇ ಜನನಾಯಕರು ಹಾಕುವರು ಜನರಿಗೇ ಟೋಪಿ!!!
@ಪ್ರೇಮ್@

- PremUdayKumar

11 Mar 2019, 06:21 am

ಹನಿಗವನ

ಹನಿಗವನಗಳು

1. ನಲ್ಲೆ

ಅತ್ತಿತ್ತ ಹೋಗಲೆಂದು
ಹೊರಡುವಾಗ ನೆನಪಾಗುವೆಯಲ್ಲೆ..
ಮನೆ ಹೊರಗೆ ಕಾಲಿಡಲು
ನಿನ್ನ ಮರೆವಿನ ನೆನಪು..
ಹೇಳು, ತೆಗೆದುಕೊಂಡ
ನನ್ನ ಹೊಸ ಚಪ್ಪಲಿಗಳನು
ಎಂದು ಹಿಂದಿರುಗಿಸಬಲ್ಲೆ?
@ಪ್ರೇಮ್@

- PremUdayKumar

11 Mar 2019, 06:20 am