Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೋವನು ಮರೆ

ನಿನ್ನ ದುಃಖ ದುಮ್ಮಾನಗಳ ಮೂಟೆ ಕಟ್ಟಿ
ಕತ್ತಲ ಕೋಣೆಯಲಿಟ್ಟು ಹೊರಡು ಗೆಳತಿ
ಹೊಸ ದಿನವು ನಿನಗಾಗಿ ಈ ಭುವಿಗೆ ಬಂದಿದೆ..
ನೋಡಲ್ಲಿ ಆ ರವಿಯು ಬೆಳಕ ಬಲೆಯನ್ನು ಹರಡಿ
ಭುವಿಯನ್ನೆಲ್ಲ ಸೆರೆ ಹಿಡಿಯುತಲಿಹನು,
ಬೊಗಸೆ ಖುಷಿಯನ್ನು ಮೊಗೆದು
ನಗುತ ಈ ದಿನವ ಕಳೆಯೋಣ,
ಕಟ್ಟಿಟ್ಟ ಕಷ್ಟದ ಬುತ್ತಿಯನು
ಹಸಿವಲ್ಲಿದ್ದರೂ ಮರೆಯೋಣ..

- ಶ್ರೀಗೋ.

29 Oct 2018, 06:14 am

ದೂರವಾಗಿ

ನೀನೇ ಉಸಿರಾಟ ಎಂದು ನನಗೆ
ತಂದೆ ನೀ ವನವಾಸ ಈ ಈ ಈ ಮನಸಿಗೆ
ಹಗಲು ಇರಳು ನಿನ್ನ ನೋಡದೆ ಇರದ ಕಣ್ಣಿಗೆ, ಮರೆಯಾಗಿ ನಿಂತು ಕೊಂಡೆ ನನ್ನ ಬಾಳಿಗೆ
ದಯಮಾಡಿ ಬೀಳ್ಕೊಡವೆ ನಿನ್ ಈ ಈ ಈ ಹೃದಯಕ್ಕೆ
ಪ್ರತಿಜನ್ಮದಲ್ಲಿ ಸ್ವಾಗತಿಸುವೆ ಮನದಿ ಮಂದಿರಕ್ಕೆ
ನಿನ್ ಹೆಜ್ಜೆ ಮುಂದೆ ಹಿಟ್ಟು ಹಿಂತಿರುಗಿ ನೋಡದಿರು
ನನ್ನ ಮನವು ಆಗುವುದು ಚೂರು ಚೂರು
ಕಣ್ಣು ತೆರೆದು ಕಂಡ ಕನಸು ಹೊರಟಿದೆ ಒಂಟಿಯಾಗಿ
ಅವಳು ಹೋದಳು ನನ್ನಿಂದ ದೂರವಾಗಿ

- Prakash Angadi

27 Oct 2018, 07:19 pm

ಒಡಕು ಒಡಕು...........

ಬದುಕು ಬದುಕು ಬದುಕು
ಬರೆದುಕೊಳ್ಳಲಾಗದಷ್ಟು ಒಡಕು

ತಿದ್ದಿ ತೀಡಿದರು ಸರಿಯರಾದಷ್ಟು
ಒಡಕು ಒಡಕು ಈ ಬದುಕು

ಬರೆದು ಬಿಟ್ಟವರಿಗೆ ಅರ್ಥವಾಗಲಿಲ್ಲ
ಬರೆಯದೆ ಇದ್ದವರಿಗೆ ಸುಳಿಯಲಾಗಲಿಲ್ಲ

ಜೀವನದ ಅಣೆಕಟ್ಟನ್ನು ಕಟ್ಟಿ ಬಿಟ್ಟವನೆ
ಮೇಲೆ ಕೂತು ಬಿಟ್ಟ......
ಅದರ ಆಳವೆ ತಿಳಿಯದೆ
ಜೀವವೆ ಸವೆಸಿ ತುಂಬಿಸುತ್ತಿದ್ದರು
ತುಂಬುತ್ತಿಲ್ಲ ಈ ಜೀವನದ ಅಣೆಕಟ್ಟು.....
ಇರುವವರಿಗೇ ಹಸಿದ ಹೊಟ್ಟೆಯೆ
ತುಂಬುತ್ತಿಲ್ಲ........
ಇಲ್ಲದರವರಿಗೇ ಬದುಕಿನ ಬುತ್ತಿಯೆ
ತುಂಬುತ್ತಿಲ್ಲ...........‌‌‌‌‌‌
ನಗಿಸುವ ಮುನ್ನ ಆಡಿಸಿ ಅಳಿಸುವ
ಈ ಬದುಕು ಬರಿ ಒಡಕು......
ಎಂದಿಗು ತುಂಬಲಾಗದ ಒಡಕು......‌‌.

- ರಾಗಸಿರಿ....

25 Oct 2018, 05:27 pm

ಮನಸ್ಸು.........

ಆ ಬಾನು ಕೂಗಿ ಹೇಳುತ್ತಿದೆ
ನನೆಂದು ಸಿಗದ ಮರಿಚಿಕೆ
ಎಂದು...........‌
ಆದರೂ ಮನಸು ಎರುತ್ತಲೆ
ಇದೆ ತನ್ನ ಹಟವ ಬಿಡದೆ..‌‌‌‌‌‌‌‌...
ಆ ತಾರೆ ನೋಡಿ ನಗುತ್ತಿದೆ
ನಾನೇಂದು ಕೈಗೆಟುಕದ
ನಕ್ಷತ್ರ ಎಂದು........
ಆದರು ಮನಸು ಕೈ
ಚಾಚುತ್ತಲೆ ಇದೆ...........
ಆ ಜರಿಯು ದುಮುಕಿ ಹರಿಯುತ್ತಲೆ
ಇದೆ ನಾನೆಂದು ನಿಲ್ಲಲಾರೆ ಎಂದು....‌‌
ಆದರು ಮನಸು ನಿಲ್ಲದೆ
ಅದರಿಂದೆಯೆ ನಡೆಯುತ್ತಲೆ ಇದೆ.........
ಆ ಕಡಲು ಅಬ್ಬರಿಸಿ ನಲಿಯುತ್ತಲೆ ಇದೆ
ನಾನೆಂದು ಮರೆಯಾಗಲಾರೆ ಎಂದು.......
ಆದರು ಮನಸು ಕಣ್ಮುಚ್ಚದೆ
ನೋಡುತಲೆ ಇದೆ....‌‌‌‌‌‌‌‌
ನಾ ಬೇಡಿ ಬಂದದ್ದು ನನಗಾಗಿ ಬಂದರು
ಪಡೆದು ಕೊಳ್ಳದೇ ಮನಸು ಅಳುತ್ತಿದೆ.....
ಓ ನನ್ನ ಮನವೆ........
ರಾಗ......‌‌‌‌

- ರಾಗಸಿರಿ....

25 Oct 2018, 05:12 pm

ಚಂದ್ರಮ

ಮುಗಿಲಲ್ಲಿ ಇಣುಕಿ
ನಗುತ್ತಿರುವ ಚಂದ್ರಮ
ನಾ ಬಂದು ಬಿಡಲೇ
ನಿನ್ನಲ್ಲಿಗೆ..
ಮನುಜರೆ ಇಲ್ಲದ
ಅಂಗಳದಲಿ ನಿಂತು
ನಾ ನಕ್ಕು ಬಿಡಲೇ
ನಿನ್ನೊಂದಿಗೆ ?

- ಶ್ರೀಗೋ.

24 Oct 2018, 08:46 pm

*ಗೆಳೆಯ ನಿನಗೂ ಇರಬಹುದು*

ಗೆಳೆಯ ನಿನಗೂ ಇರುತ್ತಾನೆ
ಇಂದಲ್ಲ ನಾಳೆಯೂ ಬರಬಹುದು
ಹಸಿವು ಬಾಯಾರಿಕೆಯ ಪರಿವನ್ನು ಮರೆತು
ನಿನ್ನ ಗೆಜ್ಜೆಯ ಸದ್ದನು ಅರಸುತ್ತಿರಬಹುದು!

ನಿನ್ನ ಕಣ್ಣ ಹನಿಗಳ ಸಾಲುಗಳು
ಅವನ ಪಾದಗಳ ಸುತ್ತೆಲ್ಲ ಸುಳಿದಾಡಿ
ಕಮರಿಹೋದ ಆಸೆಗಳ ಬಡಿದೆಬ್ಬಿಸಿ
ಆತ್ಮವಿಶ್ವಾಸದ ಹಸಿವನ್ನು ಉಣಬಡಿಸುತ್ತಿರಬಹುದು!

ಕಾಮನಬಿಲ್ಲಿನ ಜೊತೆ ನಿನ್ನಂದವ ಹೊಗಳುತ್ತಾ
ಹೂವಲ್ಲಿ ನಿನ್ನೆಸರನು ಬರೆಯುತ್ತಿರಬಹುದು
ಹೃದಯದಂಗಳದಲಿ ಬೃಂದಾವನವ ನಿರ್ಮಿಸಿ
ಉಯ್ಯಾಲೆಯಲಿ ನಿನ್ನ ತೂಗುವ ಕನಸು ಕಾಣುತ್ತಿರಬಹುದು!

ಅವನ ನೆನಪಲ್ಲೇ ವರುಷಗಳು ಕಳೆದಾಗ
ತಂದೆ-ತಾಯುಯರ ಪ್ರೀತಿಯ ಬಲವಂತಕ್ಕೆ ಮಣಿದು
ನೀನು ತಾಳಿಗೆ ಕೊರಳೊಡ್ಡುವ ದಿನದಿಂದು
ಮರೆಯಲ್ಲಿ ನಿಂತು ಹರಸಿ ಅಳುತ್ತಿರಬಹುದು!

✍ ಪ್ರಿಯಾಂಕ

- ಪ್ರಿಯಾಂಕ

24 Oct 2018, 10:58 am

ಪ್ರೀತಿಯ ಬುತ್ತಿ

ನೆನಪಿನ ಬುತ್ತಿ
ತೆರೆದರೆ ಸಂತೆಯಲಿ
ನಾಚುತ ನಲಿಯುತಿಹಳು ಪ್ರೀತಿಯಲ್ಲಿ
ಕನಸಿನ ಕಣ್ಣಿನಲ್ಲಿ
ನೆನೆದರೆ
ನೆಪದಲ್ಲಿ ನಿದ್ರಿಸುವವಳು
ಮನದಲ್ಲಿ
ಭಾವನೆಗಳು ಸುಳಿದಾಗಲೆಲ್ಲ
ನಮ್ಮಿಬ್ಬರ ನಡುವೆ
ಸಂತೆ ಕನಸಿನ ನಿದ್ರೆ ಸಾಕ್ಷಿಯಾಗಿವೆ... ಪ್ರೀತಿಗೆ.....✍️

- Prakash Angadi

23 Oct 2018, 05:26 pm

ಪ್ರೀತಿ ನೋಟ

ನೀನು ಮುಟ್ಟಿದ ಕೈಗಳು ಕರುಣೆತೋರಿ
ಮುಟ್ಟಿದವು ನನ್ನ ಎದೆಯ ಬಾಗಿಲಿಗೆ
ನಿನ್ನ ನೋಡುತ್ತಾ ನನ್ನ ಮನವು ಕರಗಿತು ಹೀಗೆ
ಕೈಬೀಸಿ ಸ್ವಾಗತಿಸಿದೇ ಹೃದಯದ ಮನೆಗೆ

ಕೈಯಲ್ಲಿರುವ ಗೆರೆಗಳ ನೋಡಿ
ಹೇಳದಿರು ನನ್ನ ಭವಿಷ್ಯವಾಣಿ
ನಿನ್ನ ಕಣ್ಣಗಳು ನೋಡಿ
ಕಾಡದಿರು ನನ್ನ ಕನಸಿನ ರಾಣಿ

ಇಬ್ಬನಿಯ ಹೊತ್ತಿನಲ್ಲಿ ತಬ್ಬಿಹಿಬ್ಬಯಾದೆ
ಬೆಳ್ಳಳಿಗೆ ನಿನದೇ ನೆನಪು ಇತ್ತೀಚೆಗೆ
ತಬ್ಬಿಕೋ ಹೀಗೆ ನನ್ನನ್ನು ಕೊನೆಯವರಿಗೆ
ಉಸಿರುವರಿಗೂ ನೋಡಿಕೊಳ್ಳುವೇ
ಕಣ್ಣಿನ ರೆಪ್ಪೆಯಾಗೇ

ನಮ್ಮಿಬ್ಬರ ನಡುವೆ ದೇವರು ಉಂಟು
ಯಾರು ಬಿಡಿಸಲಾರದ ಬ್ರಹ್ಮಗಂಟು
ಏನಾದರೂ ನಮ್ಮಿಬ್ಬರ ಈ ಒಲವಿನ ಮಿಲನ
ರಾಮ- ಸೀತೆಯಂತೆ ಬಂಧನ.........

- Prakash Angadi

23 Oct 2018, 05:26 pm

ಈ ಸಂಜೆ........

ತಂಪಾದ ಈ ಸಂಜೆಯಲಿ
ಮನಸೇಕೊ ಕೊರಗುತಿದೆ
ಆತಂಕದ ಹೊಳೆಯಲ್ಲಿ
ಹೊರಲಾಡಿ ಬಂದಂತಿದೆ
ಆ ಮುಗಿಲ ಹೊಂಬಣ್ಣ
ನಗುವ ಮೊಗವನ್ನೆ ಬಾಡಿದಂತೆ
ಮಾಡಿದೆ..........
ಮುಳುಗುತಿಹ ಆ ಸುರ್ಯನ
ಕಂಡು ಕತ್ತಲು ನಾನೆದ್ದು ಬರುವೆ
ಎಂದು ನಗುತ ಅಣಕ
ಮಾಡುತ್ತಿದೆ.............‌.‌‌..‌‌‌..
ಕಂಡರು ಕಾಣದಂತೆ ಸಂಚಿನ
ಮಳೆಯೊಂದು ಇಣುಕಿ ನೋಡುತ್ತಾ
ಬಂದು ಬಿಡುವೆ ಎಂದು ಧರೆಯನ್ನೆ
ದಿಟ್ಟಿಸಿ ನೋಡುತ್ತಿದೆ............
ಭಯದ ಹೊಸಿಲಲ್ಲಿ ನಾನಿರುವೆ
ನಿರ್ಭಯವೆ ನಿನೇಲ್ಲಿ ಹೋದೆ ಎಂದು
ಹಕ್ಕಿಗಳು ತನ್ನ ಗೂಡನ್ನ ಹುಡುಕುತ್ತಾ
ಅಲೆಯುತ್ತಿದೆ.......
ಈ ಸಂಜೆಯಲಿ ಮನಸೇಕೊ
ಭಯದಲ್ಲೆ ನಾನೆಲ್ಲಿ ಎಂದು
ತನ್ನೊಳಗೆ ತನ್ನನ್ನೆ
ಹುಡುಕುತ್ತಿದೆ..........
ಈ ಪರಿಯ ತಂಪಾದ ಸಂಜೆಯಲಿ..........

- ರಾಗಸಿರಿ....

23 Oct 2018, 04:58 pm

ಬಂಧು

ತಿಂದು-ತೆಗಿದ ಮೇಲೆ ಖಾರಿಲ್ಲಾ-ಉಪ್ಪಿಲ್ಲಾ..
ಉಟ್ಟು-ಬಿಟ್ಟ ಮೇಲೆ ಚೆಂದಿಲ್ಲಾ-ಚಾರಿಲ್ಲಾ..
ಕೆಟ್ಟು-ಕೆರಹಿಡಿದಾಗ ತ್ವರೆಯಿಲ್ಲ-ಕರೆಯಿಲ್ಲಾ..
ಜುಟ್ಟು-ಜಟ್ಟಾದ ಮೇಲೆ ಮಧುವೆಗಿಲ್ಲ-ಮುಂಜಿಗಿಲ್ಲ..

ಕುಲಗೆಟ್ಟಾಗ ಮಸ್ತಾಗಿ ಎಣೆಯೋದು ತಂತ್ರ..
ಮತಿಗೆಟ್ಟಾಗ ಗಿಚ್ಚಾಗಿ ಮಾಡೋದು ಕುತಂತ್ರ..
ತಲೆಕೆಟ್ಟಾಗ ಶಿಸ್ತಾಗಿ ಆಗೋದು ಅತಂತ್ರ..
ಗತಿಗೆಟ್ಟಾಗ ಚೊಕ್ಕಾಗಿ ಹೇಳೋದು ಪಂಚತಂತ್ರ..

ದುಡ್ಡಿದ್ದಾಗ ಜಗ್ಗಿ-ಜಡಿಯೋದು ಮಂಡಳ ಒಗ್ಗಾಣಿ..
ಗೋಡ್ಡುಆದಾಗ ಶೆಟ್ಟರ ಅಂಗಡಿಯಲ್ಲೂ ನಡೆಯದ ಎಂಟಾಣೆ..
ಜಡ್ಡುಬಿದ್ದಾಗ ದೂರದಿಂದಲೇ ಇಣುಕಿ ಹಾಕುವ ಅವರಾಣೆ..
ಜಿಡ್ಡುಹತ್ತಿದಾಗ ಮಾದವೇರಿದ ಮಸಲತ್ತು ಮಾಡುವ ದುಗ್ಗಾಣಿ..
ಸುಗ್ಗಿ..

- ಆರ್ ಎಸ್ ಸುಗ್ಗಿ.

22 Oct 2018, 10:11 pm