Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೊಡಬಲ್ಲೆಯ ಓ ಮುಗಿಲೆ
ನಿನ್ನದೊಂದು ಮನಸನ್ನ
ನನಾಗುವೆ ನಿನ್ನಂತೆ ಎಂದಿಗು ಕುಗ್ಗದಂತೆ................
ಕೊಡಬಲ್ಲೆಯ ಓ ನದಿಯೆ
ನಿನ್ನದೊಂದು ಹನಿಯನ್ನ
ನನಾಗುವೆ ನಿನ್ನಂತೆ ಎಂದಿಗು
ನಿಲ್ಲದಂತೆ..........
ಕೊಡಬಲ್ಲೆಯ ಓ ಧರೆಯೆ
ನಿನ್ನದೊಂದು ಋತುವನ್ನ
ನನಾಗುವೆ ನಿನ್ನಂತೆ ಎಂದಿಗು
ಬದಲಾಗದ ಹಾಗೆ........
ಕೊಡಬಲ್ಲೆಯ ಓ ಬದುಕೆ
ನಿನ್ನದೊಂದು ಪರಿಯನ್ನ
ಬದುಕಿಬಿಡುವೆ ಎಂದಿಗು
ಈ ಬದುಕೆ ನನ್ನದೆಂದುಕೊಂಡು.......
- ರಾಗಸಿರಿ....
22 Oct 2018, 01:50 pm
ನವಿರಾದ ನಗುವಿನೊಂದಿಗೆ
ರವಿಕಿರಣದ ಹೊಳಪಿಗೆ
ಮುಂಜಾನೆಯ ಶುಭ ಗಳಿಗೆಯಲ್ಲಿ
ಶುಭ ಕೊರುವ ಸವಿ ಈ ದಿನಕ್ಕಿಂದು
ನಲುಮೆಯಲಿ ಸಾಗಲಿ ಈ ದಿನ
ಸುಖ ಸಂತೋಷದಾಯಕವಾಗಿ
ಗರಿಗೆದರಿದ ಬದುಕಿನಂತೆ,,,,
- ಎಸ್.ಬಿ
22 Oct 2018, 07:24 am
ಜಾವದಲ್ಲಿ ನೀ ಕಳಿಸಿದ
ಎರಡು ಪದಗಳು
ನನ್ನ ಮನದ ಪಡಸಾಲೆಯಲಿ
ಸಿಲುಕಿದ್ದ ಚಳಿಯನ್ನು
ಬಡಿದೋಡಿಸಿದವು ಗೆಳತಿ!
ಅಪರೂಪದ ಬೆಡಗಿಯ
ಬಿನ್ನಾಣದ ನುಡಿಗಳ
ಎಣಿಸುತ ಗುಣಿಸುತ
ಎನ್ನ ಮನವನು ನಾನೇ ತಣಿಸುತ
ತಲ್ಲಣಗೊಂಡೆನಲ್ಲೇ..
ಎಂದೋ ನೀನುಟ್ಟ ಸೀರೆಯ ಜಲಕು
ನೆರಿಗೆಗಳ ಅಂದದ ಪಲಕು
ಮನದನಿಸಿಕೆಗಳು ಕದಡಿ ಕಲಕಿ
ಸೆರಗಿನಂಚಿಗೆ ನನ್ನ ಒಲುಮೆ ಸಿಲುಕಿ
ಕೊರಗಿ ಸೊರಗಿತಲ್ಲೇ ಹುಡುಗಿ..
ಬದುಕಿನ ಬರಿ ಬಂಡಿಯಲಿ
ಕುಲುಕುತ್ತ ಹೊರಟ ಪಯಣಿಗಳು ನೀನು..
ಬಂಡಿ ಓಡಿಸುವಾತನ ಹಂಗಿನಲಿ
ಸಿಲುಕಿದ ಹೊಂಗನಸು ಎಂದೋ ಹೊಸಕಿದೆ..
ಅಂಬಿಗನಿಲ್ಲದ ದೋಣಿಯಲಿ
ಕೂತಿರುವ ಒಬ್ಬಂಟಿ ನಾನು,
ಹುಟ್ಟು ಎಂದೋ ಕಳೆದು ಹೋಗಿದೆ
ದೋಣಿ ಸಾಗುತ್ತಿಲ್ಲ, ದಡವ ಸೇರುತ್ತಿಲ್ಲ
ಒಂಟಿ ಬಾಳಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!
- ಶ್ರೀಗೋ.
21 Oct 2018, 08:06 am
(ಎರಡು ಹಳೆಯ ಸಾಲು)
1. ಕಣ್ಣು ಕಾಯುತಿವೆ
ಹಗಲುರಿದು ಸರಿದು ಇಳಿ ಸಂಜೆಯಾದರೂ ನಿರ್ಜನ ದಾರಿಗೆ ನೆಟ್ಟ ಕಣ್ಣು ಕಾಯುತಿವೆ
ಯುಗಗಳೇ ಸರಿದು ದಣಿದರೂ ತಣಿಯದೆ ಎದೆಕದ ತೆರೆದಿಟ್ಟು ಕಣ್ಣು ಕಾಯುತಿವೆ
ಯಾವ ಗರ್ಭದೊಳು ಮಿಡುಕುವ ಶೈಶವ ಜೀವ ಮತ್ತದೇ ದಾರಿಯೊಳು ಮಸಣಕೆ ಹೊರಟ ಶವ
ಇರುಳೆದೆಯೂ ಬಸಿಬಸಿದು ಒಸರುತಿದೆ ನೋವ ವೇದನೆಯೊಳದ್ದಿದ ಕಣ್ಣೀಗ ಯಾರ ಕಾಯುತಿದೆ..
ಗಾಳಿಗದುರಿರಬೇಕು ದಾರಿ ಮೇಲಿನ ತರಗೆಲೆ
ಕದಡಿತು ಮೌನದೆದೆಗಡಲು ಮೊರೆದೆದ್ದವಲೆ
ಕಸುವೆಲ್ಲಿಯದದು ತುಂಬಿ ಬಂದುದು ಕ್ಷಣದಿ ಬಂದವರಾರೆಂದು ತುಳುಕಿ ಕಣ್ಣರಳಿ ಕಾಯುತಿವೆ
ಋತುಗಳೂ ಒಂದೊಂದಾಗಿ ನಡೆದು ಸಾಗುತಿವೆ
ಹೂ ಹಣ್ಣು ಎಲೆ ಇದೇ ಹಾದಿಯೊಳುದುರಿಸಿ
ಕಾಲುಕೊಡವಿ ಹೊರಟೇ ಹೋದವರ ನೆನೆದು
ಹನಿ ಹನಿದು ಕಣ್ಣೇಕೋ ಇನ್ನೂ ಕಾಯುತಿವೆ
ಕಾವಳ ಇನಿಸಿನಿಸೇ ಸುರಿಯತೊಡಗಿದೆ ಸಖೀ ಹಾದಿಗೆದುರಾಗಿ ಎದೆಬಾಗಿಲಿನ್ನೂ ತೆರೆದೇ ಇದೆ
ರೂಹುತಳೆಯಲಿ ಈ ಇರುಳು ಪ್ರೇಮವೋ ಸಾವೋ ಆಲಿಂಗನಕೆ ಕಾತರಿಸಿ ಕಣ್ಣುರಿದು ಕಾಯುತಿವೆ
2. ಮುಚ್ಚಿಕೋ
ಆಡುವ ಬಾಯಿಗಳ ಮುಚ್ಚಲಾಗದೆಂದೂ ನಗೆಯ ಹರವಿ ಅಪಮಾನಗಳ ಮುಚ್ಚಿಕೋ
ಪ್ರೇಮವಿದು ಇರಿವ ಇಬ್ಬಾಯಿ ಕಟುಕತ್ತಿ
ಸೆರಗಿನೊಳಗೆ ಗಾಯಗಳ ಮುಚ್ಚಿಕೋ
ಸಂಜೆ ಸರಿದು ಗಾಢ ಕತ್ತಲು ಕವಿಯುತಿದೆ ಒಳಮನೆಯೊಳೊಂದು ದೀಪ ಹಚ್ಚಿಕೋ
ಬಿರುಗಾಳಿ ಬೀಸೀತು ಬೆಳಕು ಆರೀತು ಒಳಬರುವವರಾರಿಲ್ಲ ತಿಳಿದು ಕದವ ಮುಚ್ಚಿಕೋ
ನಕ್ಕ ಹಾಗೆಯೇ ನಟನೆ ಒಳಗೆ ಕುಟಿಲ ನೂರು ದುಃಖ ನುಗ್ಗಿದರೆ ತುಟಿಕಚ್ಚಿ ತಡೆದುಕೋ
ಬೆಸೆದ ಕೈ ಸಡಿಲಿಸೀತು ಮತ್ತಾರನೋ ಬಳಸೀತು ತುಳುಕುವ ಹನಿ ಕಾಣದಿರಲಿ ಕಣ್ಣ ಮುಚ್ಚಿಕೋ
ದೂರದವರ ಕೊರಳೆತ್ತಿ ಕೂಗಬಹುದು ಸಖೀ ಹೇಗೆ ಕರೆಯುವೀ ಮನಮುಚ್ಚಿ ಕುಳಿತ ಸನಿಹದವರ
ಯಾರ ಪಾತಕವಲ್ಲಿ ಯಾರೋ ನಗುವ ಸದ್ದಿಲ್ಲಿ ಕೆಸರೆರಚಿಹುದು ಬೊಗಸೆಯಲಿ ಮೊಗವ ಮುಚ್ಚಿಕೋ - ಕಾದಂಬಿನಿ
- ಕಾದಂಬಿನಿ
21 Oct 2018, 06:23 am
ತಳಿರು ತೋರಣದಿ ಸಿಂಗಾರಿಸುವರು
ದೇವಿಯನು ತಂದು ಕೂರಿಸುವರು
ತುಪ್ಪದಾರತಿಯ ಬೆಳಗಿ ಕೈಮುಗಿಯುವರು
ಬೇಡಿದ್ದನ್ನು ಈಡೇರಿಸೆಂದು ಶಿರಬಾಗಿ ನಮಿಸುವರು!
ಭಕ್ತಿ ಭಾವದಿಂದ ಜಪವ ಮಾಡಿದರೆ
ಹರುಷದಿ ಹಾರೈಸುವಳು ಆ ತಾಯಿ
ಮದ-ಮತ್ಸರವ ಎದೆಯಲಿಟ್ಟು ಪೂಜಿಸಿದರೆ
ಕೋಪಗೊಳ್ಳುವಳು ಆ ಮಹಾತಾಯಿ!
ನವರಾತ್ರಿ ಹಬ್ಬದ ಸಂಭ್ರಮ ಸಡಗರ
ಪ್ರತಿ ಮನೆ ಮನಗಳಲ್ಲೂ ಸಂತಸ
ದ್ವೇಷವ ಬಿಟ್ಟು ತಪ್ಪನ್ನು ಒಪ್ಪಿಕೊಂಡರೆ
ಕ್ಷಮಿಸಿ ವರವ ನೀಡುವಳು ದೇವಿ!
- ಪ್ರಿಯಾಂಕ
19 Oct 2018, 08:08 pm
"-ಕರ್ನಾಟಕದಲ್ಲಿ -ಕನ್ನಡಿಗನೇ -ಸಾರ್ವಭೌಮ"
ಭುವನೇಶ್ವರಿಯ ಒಡಲಲಿ ಹುಟ್ಟಿರುವುದಕ್ಕೆ ಹೆಮ್ಮೆಪಡುವೆ ಕನ್ನಡಿಗನಾಗಿ
ಏಳೇಳು ಜನ್ಮಗಳಲ್ಲಿಯೂ ಇಲ್ಲಿಯೆ ಬದುಕಲೆಂದು ಇಚ್ಚಿಸುವೆ ಕನ್ನಡಿಗನಾಗಿ
ನೋಡುತ್ತ ಹೋದಂತೆ ಹೆಚ್ಚಿಸಿಕೊಳ್ಳುವಳು ತನ್ನಂದವ ಕನ್ನಡತಾಯಿ
ಕರುನಾಡ ಮಾತೆಯ ಅಮೃತವ ಕುಡಿದು ಬದುಕು ಸಾಗಿಸುವೆ ಕನ್ನಡಿಗನಾಗಿ
ಶಿಲ್ಪಕಲಾ ಕಣಜವು ಕರೆತರುವುದು ಅಸಂಖ್ಯ ದಾರ್ಶಾನಿಕರನು ಪ್ರತಿವರ್ಷ
ಅವರಾಡುವ ಕೀರ್ತಿಯ ಮಾತುಗಳ ದೂರದಿ ನಿಂತು ಕೇಳಿಸಿಕೊಳ್ಳುವೆ ಕನ್ನಡಿಗನಾಗಿ
ಪ್ರೀತಿಯ ಬಾಂದವ್ಯದಿ ಸಾಗರದಂತೆ ಮುನ್ನುಗುವರು ಸಪ್ತಕೋಟಿ ಮಕ್ಕಳು
ಹೆಸರುಳಿಸಲು ನನ್ನ ಪ್ರಾಣವನೆ ಪಾದಕಿಟ್ಟು ಶ್ರಮಿಸುವೆ ಕನ್ನಡಿಗನಾಗಿ
ಎಷ್ಟು ಹಾಡಿದರು ಮುಗಿಯದ ಇತಿಹಾಸ ನನ್ನವ್ವ ಕನ್ನಡತಿಯದು
ನಿಮ್ಮ ಚರಣದಡಿಯ ಧೂಳಂತೆ ನಂರುಶಿಯೊಡನೆ ಬದುಕುವೆ ಕನ್ನಡಿಗನಾಗಿ.
"ಮಹೇಶ್ ಮೂಡಿಗೆರೆ"
- BenakaTaxi
18 Oct 2018, 11:10 pm
ಕೆಲಸದ ಸ್ಥಳದಲ್ಲಿ ಒತ್ತಡ ಹಾಕುವ ವೇಷ..
ಬೆನ್ನ-ಹಿಂದೆ ಯಾಕೆ ಮಾಡ್ತಾರೆ ಇಂತ ದ್ವೇಷ..
ಹೊಟ್ಟೆ ಹೊಡೆಯೋಕ್ಕಿಳಿದಿದೆ ಈ ಆಳಾದ ರೋಷ..
ತಲೆ-ತಲಾಂತರದಿಂದ ಇದೆ ಅಲ್ಲವೇ ಮೀನಾ-ಮೇಷ.
ವೇಷದ-ಮೋಸಕೆ ಶ್ರೀ ರಾಮನೇ ವನವಾಸಕ್ಕಿಳಿದ!
ದ್ವೇಷದ-ಮೋಸಕೆ ಬಸವಣ್ಣನೆ ಬಸವಳಿದ!!
ರೋಷದ-ಮೋಸಕೆ ರಾಯಣ್ಣನೆ ನೇಣಿಗೇರಿದ!!!
ಮೇಷದ-ಮೊಸಕೆ ಭಗತ್ ಸಿಂಗನೇ ಹುತಾತ್ಮನಾದ!!!!
ನೆನಪಿಟಕಳ್ಳಿ ಬಸವಳಿದವನೆ ವಿಶ್ವಗುರುನಾದ...
ಬರೆದಿಟಕಳ್ಳಿ ವನವಾಸಕ್ಕಿಳಿದವನೆ ಆರಾಧ್ಯ ದೈವನಾದ..
ಗಮನಕ್ಕಿರಲಿ ನೇಣಿಗೇರಿದವನೆ ಮನ-ಮನೆ-ಮಾತಾದ..
ತಿಳಿದಿರಲಿ ಹುತಾತ್ಮನಾದವನೆ ಚಿಲುಮೆಯ ಸ್ಫೂರ್ತಿಯಾದ..
ಸುಗ್ಗಿ..
- ಆರ್ ಎಸ್ ಸುಗ್ಗಿ.
14 Oct 2018, 09:46 pm
ಕೋಗಿಲೆಗೂ ಬಂತು ವಸಂತ
ನೀ ಆದಮೇಲೆ ನನ್ನ ಸ್ವಂತ!!
ನೀ ಕೊಟ್ಟ ಈ ಪ್ರೀತಿ ಗಂಟು
ಬದುಕಲ್ಲಿ ಬಿಡದಂತ ನಂಟು!!
ನಾ ಬಿಡದೇ ಹಿಡಿದಿರಲು ಕೈಯ
ನೀ ಸೋತು ಬಳಸಿರುವೆ ನನ್ನ!!
ಬೆಪ್ಪಾದ ಆ ಚಂದ್ರ ಆಗ
ಮೆತ್ತಗೆ ತಾ ಕರಗಿ ಹೋದ!!
ಸುತ್ತೆಲ್ಲ ನಾ ನೋಡುವಾಗ
ಕಂಡದ್ದು ನಿನ್ನನ್ನೇ ಆಗ!!
ನೀ ಮಿಡಿದ ಈ ಪ್ರೇಮ ರಾಗ
ನನಗಾಗಿಯೇ ಬಂದ ಯೋಗ!!
- ಪಿ.ಜಿ.ಜ್ಯೋತಿ
14 Oct 2018, 02:09 pm
ಚಿಪ್ಪಿಂದ ಮುತ್ತನ್ನು ತೆಗೆಯೋ
ಹೊತ್ತಾಯ್ತು ಓ ನನ್ನ ಮುತ್ತೆ!!
ಎದೆಯಾಳ ಕಡಲಾಯಿತೀಗ
ಅದರಲ್ಲಿ ನೀ ಸ್ವಾತಿ ಮುತ್ತು!!
ನೀ ನಗಲು ನಕ್ಷತ್ರ ಜಾರಿ
ಬಾನಿಂದ ಭೂಮಿನ ಸೇರಿ!!
ನೀ ನಡೆವ ಹಾದಿಯಲ್ಲಿ
ಇಬ್ಬನಿಯು ತಂಪನ್ನು ಚೆಲ್ಲಿ!!
ನೀ ಬರೆದ ಕವತೆಯ ಸಾಲು
ನಾನೆಂದೂ ಮರೆಯದ ಹಾಡು!!
ನೀ ಬಳಸಿ ನುಡಿಸಿದ ಕೊರಳು
ಆಗಿಹುದು ಸುಂದರ ಕೊಳಲು!!
ನೀ ಸಿಗಲು ಸರಿದಿರೆ ಇರುಳು
ಕೈ ಚಾಚಿ ಬಾಗಿಹುದು ಬಾನು!!
ಬಳಿ ಸೇರೆ ಹಿತವಾಯ್ತು ಕಡಲು
ಈ ಪ್ರೀತಿ ಸ್ವರ್ಗಕ್ಕೂ ಮಿಗಿಲು!!
- ಪಿ.ಜಿ.ಜ್ಯೋತಿ
14 Oct 2018, 02:07 pm
ಮುತ್ತೊಂದು ಉತ್ತುಂಗಕ್ಕೇರಿ
ಮತ್ತಲ್ಲಿ ಮೈ ಮರೆತಿದೆ!!
ನೀ ಕೊಟ್ಟ ಈ ಪ್ರೀತಿ ಮುತ್ತು
ನನ್ನೊಳಗೆ ಬೇರೂರಿದೆ!!
ನೀ ಕಂಡ ಆ ಕ್ಷಣವೇ ತಾನೇ
ಮೈ ಮರೆತು ನಿಂತದ್ದು ನಾನೇ!!
ನೀ ದೊರೆತ ಕ್ಷಣದಿಂದಲೇನೇ
ಬದುಕಾಯಿತು ಸುಂದರ ವೀಣೆ!!
ಗಂಧರ್ವ ಲೋಕದಿಂದ
ಚಿಮ್ಮಿಹುದು ಪ್ರೀತಿಯ ಗಂಧ!!
ಒಡನಾಡಿ ನಿನ್ನ ಒಡಗೂಡಿ
ನಾನಿರಲು ಪ್ರೇಮ ಬಂಧ!!
- ಪಿ.ಜಿ.ಜ್ಯೋತಿ
13 Oct 2018, 05:19 pm