ನಿನ್ನಿಂದ ನಿನಗಾಗಿ ನಿನಗೋಸ್ಕರ
ಬದುಕುತೇನಿ ಎಂಬ ಹಂಬಲವಿಲ್ಲ
ನೀನಿಲ್ಲದೇ ನಿನಗಿಂತ ಒಂದು ಕೈ
ಜಾಸ್ತಿ ಬದುಕಿ ತೋರಿಸ್ತಿನಿ ಯಾಕಂದ್ರೆ
ನಾನು ನಿನಗಾಗಿ ಬದುಕುತ್ತಿಲ್ಲ
ನನಗಾಗಿ ನಾನು ಬದುಕತ್ತಿದ್ದೇನೆ....
ಹಕ್ಕಿಗಳ ಇಂಚರಗಳ ನಡುವೆ
ಬೆಳ್ಳಿರಥವನ್ನೇರಿ ಬಂದ ಬಾಸ್ಕರ
ಸೋಗಸಾದ ಮುಂಜಾನೆಯಲಿ
ಮಂಜುಗಳ ಬಿತ್ತರಿಸಿ ಮುದ ನೀಡಿದ ರವಿತೇಜ
ಕತ್ತಲೆಯ ಕರಗಿ ಬೆಳಕಿನ ಹಾಲು ಚೆಲ್ಲಿದ ನೇಸರ
ಎದ್ದೇಳಿ ಸ್ನೇಹಿತರೆ ನಿಮಗಿದೋ
ಮುಂಜಾನೆಯ,ನಮನ
ಶುಭ್ರವಾಗಿರಲಿ ನಿಮ್ಮ ಮನ
ಖುಷಿಖುಷಿಯಿಂದಿರಲಿ ಈ ದಿನ
ಶುಭದಿನ
ಬೆಳೆ ಬೆಳೆದು ಕಾಡು
ನಿಂತುಪುದು ಬೀಡು
ವನವೆಲ್ಲ ಜೇನುಗೂಡು
ಕಡಿಕಡಿದು ನೀವು
ಮಾಡಬೇಡಿ ನೋವು
ಎಂದೆಂದೂ ಇರಲಿ ಅರಿವು
ನನ್ನಿಂದ ನಾ ಹುಟ್ಟಿ ಬರುವೆ
ನನ್ನ ಮೇಲೆ ಕೋಪವೇಕೆ???
ಹೂ ಹಣ್ಣು ಕೊಡುವೆ ನೆರಳನ್ನು ನೀಡುವೆ
ನನ್ನನ್ನು ಕಡಿವಿರೇಕೆ??
ಬಿಸಿಲಲ್ಲಿ ನಾನು ನೆರಳಿನಲ್ಲಿ ನೀವು
ನಿಮಗಾಗಿ ನಾನು ಇರುವೆ
ಯಾರಿಂದ ನನಗೆ ಆಸರೆಯು ಬೇಡ
ನನ್ನ ಮೇಲೆ ಕರುಣೆವಿರಲಿ
ನನ್ನನ್ನು ಕಡಿಯದಿರಿ
ನನ್ನನ್ನು ಕಡಿದು ಹಣಕ್ಕಾಗಿ ಮಾರಿ
ಕ್ಷಣಕಾಗಿ ಬಾಳಬೇಡಿ
ಕಾಡನ್ನು ಉಳಸಿ ನಾಡನ್ನು ಬೆಳಸಿ
ಉಸಿರಾಗರಲಿ ಹಾಡು
ನೆನಪಿರಲಿ ನನ್ನ ಹಾಡು