ಹೇ ಗೆಳತಿ ನೀನು ನನ್ನ ಬಾಳು ಬೆಳಗಿದ ಸಂಗಾತಿ....
ನಿನ್ನ ಜೀವನ ಬೇರೆಯವರ ಕೈಯಲ್ಲಿ ಇಟ್ಟು ಅವರ ಕೈ ಗೊಂಬೆ ಆಗಬೇಡ....
ನಿನಗೆ ಅಂತ ಇರುವುದು ಇದು ಒಂದು ಜನ್ಮ....
ನಿನಗೆ ಇಷ್ಟವಾದ ಎಲ್ಲಾ ಆಸೆ ಆಕಾಂಕ್ಷೆಗಳನ್ನೂ ನೀನೇ ಈಡೇರಿಸಿಕೋ...
ನಿನ್ನ ಸಂತೋಷವನ್ನು ನೀನೇ ಗಳಿಸಿಕೋ...
ನಿನ್ನ ಜೀವನ ಬೇರೆಯವರಲ್ಲಿ ಇಟ್ಟು ಅವರ ಕೈ ಗೊಂಬೆ ಆಗಬೇಡ....
ಜೀವನ ಪೂರ್ತಿ ಅವರು ಬೆಳೆಸಿದ ಕುರಿಮರಿಯಾಗಿ ಬೆಳೆಯುವದಕಿಂತ...
ಕೊಂಬೆ ಕೊಂಬೆಗೆ ಜಿಗಿದಾಡುವ ಕೋತಿಮರಿಯಾಗಿ ಇರಲಿ ನಿನ್ನ ಜೀವನ...
ನಿನ್ನ ಬಾಳು ಬೆಳಕಾಗಲಿ ಸುಖಮಯವಾಗಲಿ.....
ಇಂತಿ ನಿನ್ನ ಪ್ರೀತಿಯಾ ಕೋತಿಮರಿ....
ನಮ್ಮೂರೊಳಗ ಮತ್ತೊಂದು ನಾಟಕ ನೇಡಿಸ್ಯಾರ!!
ಹೆಸರು ಸುಂದರ ಸಾಮಾಜಿಕ ನಾಟಕ ಅಂತಾರ!!
ಇಬ್ಬಿಬ್ಬರು ಸ್ಕಾಚ್-ನಾಚ್ ಡ್ಯಾನ್ಸರ್ ಕರಿಸ್ಯಾರ!!
ಕಲೆಗೆ ಬೆಲೆ ಕಟ್ಟಲು ಐದು ನಿಮಿಷಕ್ಕ ಐದು ಸಾವಿರ ಕೊಟ್ಟಾರ!!
ಸೊಂಟ ಹಿಡಿಯೋ ಪಾತ್ರಕ್ಕ ಪೈಪೋಟಿ ನೆಡಿಸ್ಯಾರ!!
ಕೇಕೆ ಹಾಕಿ,ರೊಕ್ಕ-ಹುಗ್ಗಿ,ತೆಗ್ಗಿಸಿ ಮೋಜು ನೋಡ್ಯಾರ!!
ಹ್ಯಾಂಡ-"ಬಿಲ್" ನಲ್ಲಿ ಹಾಲಿ-ಮಾಜಿಗಳ ಹೆಸರ ಹಾಕಿಸ್ಯಾರ!!
ಹೆಸರ ಹಾಕಿದ್ದಕ ಪರೋಕ್ಷವಾಗಿ ಹ್ಯಾಂಡಿಗೆ - "ಬಿಲ್" ಕೇಳ್ಯಾರ್!!
ಊರು ಮುಂದಿನ ಗಟಾರದಾಗ ವಾಸನಿ ಎಬ್ಬಿಸ್ಯಾರ!!
ಝಗ-ಮಗಿಸೋ ಬೆಳಕಿನಲ್ಲಿ ಮುಖಕ್ಕ ಬಣ್ಣ ಹಾಚ್ಯಾರ!!
ಸಹಕಾರಿ ಸಂಘದ ಸದಸ್ಯತ್ವಕೆ ಒಂದಾಗಲು ಬೆಂಕಿ ಹಾಚ್ಯಾರ!!
ಮತಿಗೆಟ್ಟ ದೊಡ್ಡವರು ಒಂದು ದಿನಕ್ಕೆ ಒಗ್ಗಟ್ಟು ತೋರಿಸ್ಯಾರ!!!!!
ಖುಶಿಯಾಗಿರು ನಗುನಗುತಿರು
ಚಿಂತೆಯಾಕೆ ನಿನಗೆ ಗೆಳತಿ
ನಾನಿರುವೆ ಸದಾ ನಿನ್ನ ಜೊತೆಗೆ
ಓ ನನ್ನ ಬಾಳ ಸಂಗಾತಿ
ಮಾಡ್ಬೇಡ ನನಗೆ ಪ್ರೀತಿಯಲ್ಲಿ ಮಿತಿ
ನೀನೆ ನನ್ನ ಆಸ್ಥಿ
ಹೇಗೆ ಇರಲಿ ನಾ ನಿನ್ನ ಮರೆತಿ.
ಎಂದಿಗೂ ನೀ ಜೊತೆಯಾಗಿರಲು
ಬೇಗಾ ಬಾ ಚೆಲುವೆ. ನೀ ಎಲ್ಲಿರುವೆ?
ಹೇಗೋ ಇದ್ದೆ ನನ್ನ ಪಾಡಿಗೆ ನನ್ನ ಜೀವನದಲ್ಲಿ.....
ನನ್ನ ಕಣ್ಣ ಮುಂದೆ ಬಂದು ಯಾಕೆ ಕಾಣಿಸಿಕೊಂಡೆ ನೀನು.....
ನಿನ್ನ ಕಂಡ ಹಾ ಕ್ಷಣ ನನ್ನ ಮನಸು ರೆಕ್ಕೆ ಬಿಚ್ಚಿ ಏಗುರಿತು ನಿನ್ನ ಮನಸಿನ ಕಡೆಗೆ.....
ಹಾಗೂ ಇಗೋ ಪರಿಚಯ ಆಯ್ತು...
ನಂತರ ದಿನಗಳಲ್ಲಿ ಅದು ಪ್ರೇಮವಾಗಿಯು ಹೋಯ್ತು....
ನೀನೇ ಜೀವ ನೀನೇ ಎಲ್ಲಾ ಅಂತ ಮಾಯಾ ಮಾತು ಹೇಳಿ ಈಗೇಕೆ ನನ್ನ ಆಗಲಿ ಹೋಗುತ್ತಿರುವೆ ಗೆಳತಿ....
ಇದಕ್ಕೆ ಕಾರಣವಾದರು ತಿಳಿಸುವೆಯ...
ಇಂತಿ ನಿನ್ನ ಪ್ರೀತಿಯಾ ಕೋತಿಮರಿ....
ನನ್ನ ನಗು ಅದರ ನನಗೆ ಹೆಮ್ಮೆ
ನನ್ನನ್ನು ನಗುತ್ತಾ ನೋಡಿ ಬೇಜಾರು ಆಗುತ್ತಾರೆ
ನನ್ನನ್ನು ಅಳುತಾ ನೋಡಿದರೆ
ಪ್ರತಿಯೊಬ್ಬರೂ ಅದನ್ನು ಬರೇ ತಮಾಷೆ ಎನ್ನುತ್ತಾರೆ
ಇಲ್ಲ ಆದರೆ ಸಂತೋಷ ಪಡೆಯುತ್ತಾರೆ
ಆ ನಗು ನನ್ನದು, ಆ ಅಳು ನನ್ನದು
ನಾನು ಬೇಕಾದಂತೆ ಅದನ್ನು ಉಪಯೋಗಿಸಬಹುದು
ನನ್ನ ಹ್ರದಯದಿಂದ ಅವರನ್ನು ಒಪ್ಪಿಸಿದ
ಯಾರು ಯಾರು ಎಲ್ಲಿ ಎಲ್ಲಿ ನನ್ನನ್ನು ಭೆಟ್ಟಿ ಆಗಿದ್ದರೂ
ಆದರೂ ಹಿಂದೆ ನನಗಾಗಿ ಕೆಟ್ಟದ್ದನ್ನು ಬಯಸಿದರು
ಆಶೆ,ಇಚ್ಛೆ ಇಲ್ಲದೆ ನಮ್ಮನ್ನು ಪ್ರಖ್ಯಾತಿ ಹೊಂದಿಸಿ ಕೊಟ್ಟರು
ಬಿಕೆ_ಸೊಲಾಪುರ
ಕವಿತೆಯೊಂದು ಮೋಜಿನ ಆಟ
ಬರೆಯಲು ನಡೆಸಬೇಕು ಪದಗಳ ಹುಡುಕಾಟ.
ಹೇಗೆ ಹುಟ್ಟು ಹಾಕಲಿ ನಾ ಕವಿತೆಯ ಸಾಲೊಂದ,
ಯೋಚಿಸಿ-ಯೋಚಿಸಿ ಸೋತು ಹೋದೆ ನಾ.
ಹೋಗಿ ಹುಡುಕಲೇ ಪದಗಳ ಪುಸ್ತಕದಂಗಡಿಯಲಿ,
ಅಲ್ಲಾದರು ಸಿಗಬಹುದೇನೋ ಒಂದು ಹೊಸ ಪದದ ನಿರೀಕ್ಷೆಯಲಿ.
ಮನಸಲಿ ಮೂಡುತಿವೆ ಹಳೆಯ ಪದಗಳ ನೆನಪು,
ಆದರೆ ನನಗೆ ಹೊಸ ಪದಗಳ ಹುಡುಕುವ ಹುರುಪು.
ಯಾರಿಗೆ ಕೇಳಲಿ ನಾ ಹೊಸ ಪದಗಳ ಭಂಡಾರ,
ಹೊಸ ಪದಗಳ ಸೃಷ್ಟಿಸದ ನನ್ನ ಬಗ್ಗೆಯೇ ಇರಲಿ ಧಿಕ್ಕಾರ.
ಹೇಗೆ ಬರೆಯಲಿ ನಾ ಹೊಸದೊಂದು ಕವನ,
ನನ್ನ ಮನವು ಮಾಡುತ್ತಲೇ ಇದೆ ಹೊಸ ಪದಗಳ ಧ್ಯಾನ.
ಕೊನೆಗೂ ಸಿಕ್ಕಿತೊಂದು ಹೊಸ ಪದ,
ಜೋಡಿಸುತಲಿ ಬರೆದೆ ಹೊಸ ಕವನ ಸಾಲೊಂದ.
ಯಾಕೋ ಗೊತ್ತಿಲ್ಲ ನನ್ನ ಲೇಖನಿಗೆ ಏರುತಿದೆ ಮದ,
ಮರೆತು ಹೋಗುತಿದೆ ಬಂದ ಒಂದು ಹೊಸ ಪದ.
-ಉಮೇಶ್.