ಹುಟ್ಟು ಇದು
ಹುಟ್ಟು ಸಾವು ಇದು
ಹುಟ್ಟುತ್ತಲೆ ತಾಯಿಯ ಕರುಳ ಕತ್ತರಿಸಿ
ಕೊಂಡು ಹುಟ್ಟುವವರು ನಾವು
ಬೆಳೆಯುತ್ತ ಬೆಳೆಯತ್ತ ಅವರ ನಂಬಿಕೆಗಳನ್ನ
ನಾಶ ಮಾಡುವವರು ನಾವು
ತಂದೆಯ ಹೇಗಲೆರಿ ಬೇಳೆದು
ಆ ಹೆಗಲನ್ನೆ ಮರೆತು ಬದುಕುವವರು ನಾವು
ಅಕ್ಕ ತಂಗಿ ಅಣ್ಣ ತಮ್ಮ ಇವರ ವಾತ್ಸಲ್ಯ ಮರೆತು
ಬದುಕುವವರು ನಾವು
ಗೆಳೆಯರ ಸಲಿಗೆಯ ಮರೆತು
ದೂರ ಆಗುವವರು ನಾವು
ಯಲ್ಲರು ದೂರಾದರು ಮರೆತು
ಬುದುಕುವವರು ನಾವು
ಇನ್ನು ಈ ಹುಚ್ಚು ಪ್ರೀತಿ ಇದು
ಯಾವ ದೋಡ್ಡದು ಅದನ್ನು ಮರೆತು
ಬದುಕಿದರಾಯಿತು......
ಸಾವಿನ ಮನೆ ಸೇರುವ ವರೆಗು
ಮರೆವು ಮನುಷ್ಯನಗೆ ಇರುವ ದೋಡ್ಡ
ವರ ಮರೆತು ಮರೆತು ಬದುಕಿ ಬಿಡಿ ಎಲ್ಲರು......
ನನ್ನಲ್ಲಿ ರಕ್ತದ ನಾಲೆ ಇದೆ
ಉಸಿರಲ್ಲಿ ಜ್ವಾಲೆ ಇದೆ
ಎದೆಯಲ್ಲಿ ಪ್ರೇಮವಿದೆ
ನೀನ್ನಲ್ಲಿ ......?
ಆದರೂ ನಾವು ಬೇರೆ ಬೇರೆ
ನನಗೆ ಕಣ್ಣೆರಡು ಕಾಲೆರಡು
ಕಣ್ಣೊಳಗೆ ಕಡಲು
ಕಾಲಗಳಲ್ಲಿ ಬಲವು
ನಿನಗೂ ಅಷ್ಟೇ .....?
ಆದರೂ ನಾವು ಬೇರೆ ಬೇರೆ
ಮೇಲ್ ಬಾಯಿ ಕೇಳಗುದ್ದ
ತಿಂದು ಹೊರ ಹಾಕುವೆನು
ನೀನು ಅಷ್ಟೇ .......?
ಆದರೂ ನಾವು ಬೇರೆ ಬೇರೆ
ನೀನು ಹೆಣ್ಣಂತೆ ನಾನು ಗಂಡಂತೆ
ಅವರು ಇನ್ನನೆನೊ ಅಂತೆ
ಜಾತಿಯಂತೆ ಕುಲವಂತೆ
ನಾವಿಬ್ಬರೂ ದೂರವಂತೆ
ನಾನು ಮರಗಳನ್ನ ಅಪ್ಪಬೆಕಂತಿದ್ದೆ
ಕಡಿದು ಹಾಕಿದಿರಿ ನೀವು
ನಾನು ಕೆರೆಯಲಿ ಈಜ ಬೆಕೆಂದಿದ್ದೆ
ಮುಚ್ಚಿ ಹಾಕಿದಿರಿನೀವು
ನಾನು ತೋಟಕ್ಕೆ ಬೇಲಿ ಬಳ್ಳಿಯ
ಬೇಳಸ ಬೆಕೆಂದಿದ್ದೆ
ರೆಸಾರ್ಟ್ ಗಳು ನಿರ್ಮಿಸಿದ್ದಿರಿ ನೀವು
ದುಂಬಿಯೊಂದಿಗೆ ದೊಂಬಿ ಮಾಡಬೆಕೆಂದಿದ್ದೆ
ಪ್ಲಾಸ್ಟಿಕ್ ಹೂಗಳನ್ನು ಇಟ್ಟಿರಿ ನೀವು
ಮೊದಲ ಮಳೆಗೆ ಮಣ್ಣ ಮೂಸಬೆಕೆಂದಿದ್ದೆ
ಗಾಳಿಗೆ ರೋಗ ತಂದಿರಿ ನೀವು
ಮರಿ ಹಕ್ಕಿಗೆ ಗೂಡ ಕಟ್ಟಬೆಕೆಂದಿದ್ದೆ
ಹುಲ್ಲನ್ನ ಬೆಳಸದೆ ಹೊದಿರಿ ನಿವು
ನಾನು ಹಾಲ ಹಂಚ ಬೆಕೆಂದಿದ್ದೆ
ಹಸುವನ್ನೆ ಕೊಂದಿರಿ ನೀವು
ನಾನು ಅನ್ನ ಇಕ್ಕ ಬೆಕೆಂದಿದ್ದೆ
ರೈತನ ಬೆನ್ನ ಮುರಿದಿರಿ ನೀವು