Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು ನಿನಗೆ ಅಥ೯ವಾದಾಗ

ನಾನು ನಿನಗೆ ಅಥ೯ವಾಗಿಲ್ಲವೆಂದರೆ
ತಪ್ಪು ನನ್ನದಲ್ಲ
ಏಕೆಂದರೆ...
ನೀನು ನಿನಗೇ ಅಥ೯ವಾಗಿಲ್ಲ
ನಿನ್ನನ್ನೇ ಅಥೈ೯ಸಿಕೊಳ್ಳದ ನೀ
ನನ್ನ ಹೇಗೆ ಅಥೈ೯ಸಿಕೊಳ್ಳುವೆ???
ಮೊದಲು ನಿನ್ನ ನೀ ಅಥೈ೯ಸಿಕೋ
ಆಗಲಾದರೂ ನಿನಗೆ ನಾನು
ಅಥ೯ವಾದರೂ ಆಗಬಹುದು...

- ಶಂಭು

25 Nov 2017, 10:25 am

ಹೊಸ ಬೆಳಕು

ನಾನಿಲ್ಲವೆಂಬ ಬೇಸರ ಬೇಡ
ಇಂದು ನಾನಿರದಿರಬಹುದು
ನಾಳೆ ಮತ್ತಿನ್ನ್ಯಾರೋ ಬರಬಹುದು
ಕಳೆದುದರ ಬಗೆಗೆ ಚಿಂತಿಸದೊಬೇಡ
ಚಿಂತಿಸುತ...
ನಾಳೆ ಸಿಗುವುದ ಕಳೆದುಕೊಳ್ಳಬೇಡ
ಜೀವನ ಮಾಯೆ ಹೀಗೇನೇ
ಬಯಸುವುದೇನೋ...
ಸಿಗುವುದು ಮತ್ತಿನ್ನೇನೋ...

- ಶಂಭು

25 Nov 2017, 10:16 am

ಹೆಣ್ಣು

ಹೆಣ್ಣು ಒಂದು ಪ್ರಜ್ವಲಿಸುವ ಸೂರ್ಯನಂತೆ
ಅವಳು ತಂಪಾದ ಗಾಳಿಯಂತೆ
ಆಕೆಯ ತ್ಯಾಗ ಜೀವಿ
ಕಾಳಜಿವುಳ್ಳ ವ್ಯಕ್ತಿತ್ವವನ್ನು ಹೊಂದಿದವಳು
ಅವಳ ಮನಸು ನೋಯಿಸಿದರೆ ಅವಳ ಕಣ್ಣಲ್ಲಿ ಕಣ್ಣಿರು ತರಿಸಿದರೆ
ಅವಳ ಶಾಪವೇ ಗಂಡಿನ ಅಂತ್ಯ

- ನೆನಪಿನ ನಾವಿಕ

25 Nov 2017, 10:02 am

ಮುಗುಳುನಗೆ

ಅವಳ ಮುಗುಳುನಗೆ
ಒಂಟಿತನದ ಮಡಿಲಿನಲ್ಲಿ
ಮಲಗುವುದು ಮಗುವಾಗಿ
ಅವಳು ಮುಗುಳುನಗೆ
ಅವನ ಬದುಕಿನ ಗೋರಿ ಮೇಲೆ
ಅರಳಿರುವ ಹೂವು
ಅವಳ ಮುಗುಳುನಗೆ
ನೆನಪಿನಲ್ಲಿ ಬರೋ ಕಣ್ಣ ಹನಿಗಳಿಗೆ
ಅವಳ ಕೈ ಬೆರೆಳು ಮುಗುಳುನಗೆ
ಒಟ್ಟಾರೆ ಅವನ ಬದುಕಿಗೊಂದು ಕಾರಣ ಅವಳ ಮುಗುಳುನಗೆ
ಅವಳೇ ಮುಗುಳು ನಗೆ ಹುಡುಗಿ
ಸುಮ್ನೆ ಕವನ ಅಷ್ಟೇ ಹುಡುಗಿ ಇದು

- Nagesh M

25 Nov 2017, 09:41 am

ಪರಿಮಳ

ಎಲ್ಲಿಂದಲೋ ಬಂದ ತಂಪಾದ ಗಾಳಿ ಮಲ್ಲಿಗೆಯ
ಪರಿಮಳವ ತಂದು ಚೆಲ್ಲಿತು ಒಂಟಿಯಾಗಿ
ಅಲೆದಾಡದೆ ಜಂಟಿ ಹೂಗಳ ಜೊತೆಗೂಡಿ
ಬಾಳೆಂದು ಹಾರೈಸಿದೆ ಗಿಡದಲ್ಲಿ ಜೀವವಿರುವರೆಗೂ.

ನನ್ನ ಗೋಳು ಕೇಳದೇನೆ ಮಲ್ಲಿಗೆ
ಕಣ್ಮರೆಯಾಯಿತು ಸುಗಂಧ
ಕಳೆದು ಹೋಗುವಷ್ಟರಲ್ಲಿ ಬಾಡಿ ಹೋಯಿತು.

ಗಿಡದಲ್ಲಿನ ಸಿರಿಮಲ್ಲಿಗೆಯು ಮೊಗ್ಗಾಗಿ ಜನಿಸಿ
ಹೂವಾಗಿ ಬೆಳೆದು ಮಂದಹಾಸದಿ ಅರಳಿತು
ಸಂಗಡಿಗರೊಡನೆ ಬಣ್ಣ ಕಳೆದು ಕೊಂಡರು ಸುವಾಸನೆ ಬಿರದಿದ್ದರು ಬದುಕಿರುವ
ಕೊನೆಯವರೆಗೂ ಜೊತೆಗೂಡಿ ಬಾಳಿತು
ತೃಪ್ತಿಯಿಂದ ಕೊನೆಯುಸಿರೆಳೆಯಿತು
ಜೀವನದ ಸ್ವಾಧ ಸವಿದು.

- ಚುಕ್ಕಿ

25 Nov 2017, 08:36 am

ವಿಚಾರದಾರೆ

ನಡೆವ ,ನುಡಿವ ದಾರಿಯಲ್ಲಿ
ಕಷ್ಟ ಇರಲಿ ನಿತ್ಯ ನೂರು
ಒಳಿತೆ ಜೀವನದ ಚೈತನ್ಯವಾಗಿ
ಬೆಳಕು ಬಾಳ ಬೆಳಗಲಿ

ಅಂತರಂಗದಂತರವನು
ಸರಿಸಿ ಒಂದುಗೂಡಲಿ
ಮನುಜ ಕುಲದ ಏಳ್ಗೆಯೊಂದೇ
ಧ್ಯೇಯ ಘೋಷಣೆಯಾಗಲಿ

ಎದೆಯ ಬಲವ ಮೆರೆಸುವಲ್ಲಿ
ಧೈರ್ಯ ಶಕ್ತಿ ಹೆಚ್ಚಲಿ
ಭಕ್ತಿ ಭಾವ ಕರುಣೆಯಿಂದ
ವಿಚಾರಧಾರೆ ಹರಿಯಲಿ

- ನಾಗರಾಜ್

25 Nov 2017, 07:47 am

ಮುಂಜಾನೆಯ ತೇರು....

ಕತ್ತಲು ಸರಿಸಿ ಬೆಳಕಿನೆಡೆಗೆ
ಸಾಗುತಿದೆ ಈ ಮುಂಜಾನೆಯ ತೇರು
ಸಾಲು ಸಾಲು ಬರುತಿದೆ ಇಬ್ಬನಿಯ ಬಳಗ
ಮುದ್ದು ಮನಸುಗಳು ಎದ್ದು ಬರಲಿ
ಸಡಗರವ ತರಲಿ.....
ನಗುಮುಖದ ಅಂಗಡಿಗಳೆ ತುಂಬಿರಲಿ
ಈ ಜಾತ್ರೆಯಲ್ಲಿ .....
ಸಡಗರವೆ ತುಂಬಿದೆ ಈ ತೇರಲ್ಲಿ
ಹಸಿರೆಲೆಯ ತೋರಣವು ಹೋಳೆಯುತಿದೆ
ಈ ಅಂಗಳದಲ್ಲಿ
ಬನ್ನಿ ಎಲ್ಲರು ಸಂತಸದಿ ಎಳೆಯೋಣ
ಈ ಮುಂಜಾನೆಯ ತೇರನ್ನ......

- ರಾಗಸಿರಿ....

25 Nov 2017, 07:42 am

ವಿಚಾರದಾರೆ

ನಡೆವ ,ನುಡಿವ ದಾರಿಯಲ್ಲಿ
ಕಷ್ಟ ಇರಲಿ ನಿತ್ಯ ನೂರು
ಒಳಿತೆ ಜೀವನದ ಚೈತನ್ಯವಾಗಿ
ಬೆಳಕು ಬಾಳ ಬೆಳಗಲಿ

ಅಂತರಂಗದಂತರವನು
ಸರಿಸಿ ಒಂದುಗೂಡಲಿ
ಮನುಜ ಕುಲದ ಏಳ್ಗೆಯೊಂದೇ
ಧ್ಯೇಯ ಘೋಷಣೆಯಾಗಲಿ

ಎದೆಯ ಬಲವ ಮೆರೆಸುವಲ್ಲಿ
ಧೈರ್ಯ ಶಕ್ತಿ ಹೆಚ್ಚಲಿ
ಭಕ್ತಿ ಭಾವ ಕರುಣೆಯಿಂದ
ವಿಚಾರಧಾರೆ ಹರಿಯಲಿ

- ನಾಗರಾಜ್

24 Nov 2017, 09:04 pm

ಒಂದು ದಿನ

ಒಂದು ದಿನ
ನನ್ನ ಮನ
ಕಾಡುತ್ತಿತ್ತು ಕ್ಷಣ ಕ್ಷಣ
ಅಂದಿನಿಂದ ಹಿಂಬಾಲಿಸಿದೆ ನಿನ್ನ
ಆದರೂ ನೀ ಸಿಗಲಿಲ್ಲ ಒಂದೂ ದಿನ
ಅಂದೇ ತೀರ್ಮಾನಿಸಿದೇ ಅದೇ ನನ್ನ ಮರಣ.....!

- ಶಿವು ಬಿ ಎಸ್

24 Nov 2017, 08:05 pm

ದಾಹ

ಚಂದಿರನ ನೋಡಿ ತಣಿಯಿತು ಕಣ್ಣಿನ ದಾಹ
ಮಲ್ಲಿಗೆಯ ಸುವಾಸನೆಯು ತಣಿಸಿತು ನಾಸಿಕದ ದಾಹ
ಕಾವೇರಿಯ ಹನಿಗಳು ನೀಗಿಸಲು ಬಾಯಾರಿಕೆ
ನಿನ್ನ ತಬ್ಬಿ ನಸುನಕ್ಕಾಗ ತಣಿಯಿತು ಈ ಹೃದಯದ ದಾಹ

- ಕನ್ನಡ ನಾಡು ಚಿನ್ನದ ಬೀಡು

24 Nov 2017, 07:41 pm