ನೀನೆನೆ ಜ್ಞಾನದ ಊರಿನ ಹೆಬ್ಬಾಗಿಲಲಿಟ್ಟ ಕದ
ನಿನ್ನರಿಯದೆ ತಲುಪಲಾಗದು ಆ ಊರ ಸೀದಾ
ನಿನಗಿಲ್ಲ ಬಡವ ಬಲ್ಲಿದನೆಂಬ ಯಾವ ಭೇದ
ನಿನ್ನಿಡಿದವರ್ಯಾರಾದರು ನೀ ತೋರುವುದಿಲ್ಲ ಮದ
ಅದಕೆ ಮನೆ ಮನಗಳಲ್ಲಿ ನೀ ಪೂಜನೀಯ ಸದಾ
ನೀನಲ್ಲ ಕೇವಲ ಮಸಿ ತುಂಬಿದ ಲೇಖನಿ
ನಿನ್ನೊಳಗುಂಟು ಶಕ್ತಿಯು ಒರೆಸಲು ಕಂಬನಿ
ನೀನಿದ್ದರೆ ಅಲ್ಲುಂಟು ಹತ್ತು ಹಲವು ಕಹಾನಿ
ಕೆಲವೊಂದು ನಗು ಪ್ರೀತಿಯ ತುಂತುರು ಹನಿ
ಮತ್ತಷ್ಟು ನೋವು ಕಣ್ಣೀರಿನಿಂದಾದ ಗಣಿ
ನೀನು ಆ ಖಡ್ಗಕ್ಕಿಂತ ಹರಿತ
ಕಂಡಾಗ ಜನಸಾಮಾನ್ಯರ ಮೇಲೆ ತುಳಿತ
ಬರೆಯುವೆ ಬಯಸಿ ಆ ಜನರಿಗೆ ಒಳಿತ
ಏರುಪೇರಾಗಿಸಿರುವೆ ತುಳಿವವರ ಎದೆಯ ಬಡಿತ
ಸೋತವರ ಪಾಲಿಗೆ ತೋರಿ ಪ್ರೇಮದ ಮಿಡಿತ
ನಿನ್ನ ಹಿಡಿದವನ ಮನಸಾದರೆ ದುಷ್ಟ
ಅದು ಈ ಸಮಾಜಕ್ಕೇನೆ ದುರಾದೃಷ್ಟ
ಅವನು ಹೇಳಿದಂತೆಯೆ ನೀ ಬರೆಯುವುದು ಸ್ಪಷ್ಟ
ಅದರಿಂದಾಗುವ ಒಳಿತು ಕೆಡುಕುಗಳಂತು ಅಸ್ಪಷ್ಟ
ಹಾಗೆ ಸಿಕ್ಕಿದನ್ನೆಲ್ಲ ಬರೆಯುವಾಗ ನಿನಗೆಷ್ಟಾಗಿರಬೇಕು ಕಷ್ಟ
ಆಡಂಬರ ಆಚೆಗಳಿಸಿ ಅಲೌಕಿಕದೆಡೆಗೆ ನಡೆಯುವ
ದೀಪ
ಗೋವರ್ಧನಗಿರಿರೂಪ ಗೊವುಗಳಿಗೆ ಹಚ್ಚೆಯ ದೀಪ
ಭುವಿನಂಗಳದಿ ಜ್ಯೋತಿಗುಚ್ಛದ ನಕ್ಷತ್ರಮಳಿಗೆಯ ದೀಪ
ವೈಜ್ಞಾನಿಕ ನಿಘುಡಗಳ ಅಡಗಿರುವ ಹಬ್ಬದ ಈ ದೀಪ...
ದೀಪ..ದೀಪ..ಸುಖ ಶಾಂತಿ ನಲಿವ...ದೀಪ..
ದೀಪ..ದೀಪ..ಆತ್ಮವ ಬೆಸೆಯುವ ಜ್ಞಾನ 'ಪ್ರ'ದೀಪ.....ದಾನ 'ಪ್ರ'ದೀಪ
ದಾಟುತ್ತೇವೆ ನಾವು ಆಗೊಮ್ಮೆ ಈಗೊಮ್ಮೆ
ಕೊನೆ ಕೊನೆಗೆ ಗಳಿಗೆಗೊಮ್ಮೆ
ವಾಸ್ತವದ ರೇಖೆಯ,
ಅರಿವಿದ್ದರೂ ಯೋಚಿಸದೆ ನಮ್ಮ ಪರಿಮಿತಿಯ.
ಅದೇನೋ ಕುಶಿ ನಮಗೆ
ವಾಸ್ತವವ ಮರೆತು ಕನಸ ಲೋಕದಿ ತೇಲಲು,
ಹೊಸ ಭರವಸೆಗಳ ಬಣ್ಣದ ಕೊಳದಲ್ಲಿ
ಮನಸು ಬಿಚ್ಚಿ ಮುಳುಗಲು.
ಈ ವಾಸ್ತವ ರೇಕೆಗೆ ಬೇಲಿ ಕಟ್ಟಿ
ಮುಳ್ಳು ಬಡಿದು ಡಾಟದಂತೆ
ನಮ್ಮನು ತಡೆದವರಿಲ್ಲ.
ತುಡುಗು ದನಗಳಂತೆ ದಿನವೂ
ತಡೆ ಬೇಲಿ ಎಗರುವೆವಲ್ಲ ?!
ಒಡೆಯುತ್ತೆ ಕನಸು ಕಟ್ಟಿದ ಪುಗ್ಗಿ
ಬಡಿಯುತ್ತೆ ಕಠೋರ ವಾಸ್ತವ ಹಿಗ್ಗಿ
ಆದರೂ ಬುದ್ದಿ ಬಲಿತಿಲ್ಲ,
ಬಣ್ಣಗೆಟ್ಟ ಬದುಕಿಗೆ ಸುಮ್ಮನೆ ಸುಣ್ಣ
ಬಳಿವ ಕೆಲಸ ಇನ್ನೂ ನಿಂತಿಲ್ಲ !!