Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾನೊಂದು ಕೊಂಡಿದ್ದೆ
ಅವಳು ನನ್ನ ಬಾಳ ಉಸಿರಿನ
ಮೆಡಿಸಿನ್
ಹೆಚ್ಚು ಸಮಯ ಬೇಕಾಗಿರಲಿಲ್ಲ
ಅವಳು ಬಿಸಿ ಉಸಿರು ನಿಲ್ಲಿಸೋ
ಪಾಯಿಸಿನ್
-ಎಸ್ಕೆ
- ಎಸ್ಕೆ
15 Oct 2017, 08:47 pm
ಯೋಧನ ಗುಂಡಿಗೆಯಲ್ಲಿ ಕುಂತು ನಾನು
ದೇಶ ಕಾಯುವೆನು ..... ನಾನು
ದೇಶದ ಒಳಿತಿಗಾಗಿ ಪ್ರಾಣವನ್ನು
ಅರ್ಪಿಸುವೆನು ನಾನು
ತಾಯಿಯ ಮನದಲ್ಲಿ ನಿಂತು ನಾನು
ಪ್ರೀತಿಯನು ದಾರೆಯೆರೆಯುವೆನು. ನಾನು
ಕೊನೆಯವರೆವಿಗೂ ಬೆರೆಯವರಿಗಾಗಿ
ಬಾಳುವೆನು. ನಾನು
ರೈತನ ಬೆವರಿನಲ್ಲೂ ನಾನು
ನೇಗಿಲ ಬದಿ ನಿಂತು ಉಳುವೆನು ನಾನು
ಭೂಮಿಯಲ್ಲಿ ಫಲ ತೆಗೆಯಲು
ಅನ್ಯರ ಹಸಿವಿಗಾಗಿ ನಾನು
ಕಾರ್ಮಿಕರ ಭುಜ ಬಲದಲ್ಲೂ ನಾನು
ಹಗಲು ಇರುಳು ದುಡಿವೆನು ನಾನು
ದೇಶದ ಆರ್ಥಿಕತೆಯ ಉದ್ಧಾರಕ್ಕಾಗಿ
ಏಳಿಗೆಗಾಗಿ............. ನಾನು
ಕವಿಗಳ ಕನಸುಗಳಲ್ಲಿಯೂ ನಾನು
ಕನಸುಗಳನ್ನ ಕವಿತೆಗಳಾಗಿ ರೂಪಿಸಲು ನಾನು
ಸಾಹಿತ್ಯದ ಬೆಳವಣಿಗಾಗಿ
ಶ್ರಮಿಸುವೆನು ......... ನಾನು
ಸಮಾಜ ಕಂಟಕರಲ್ಲೂ ನಾನಿರುವೆನು
ಪ್ರಪಂಚದಲ್ಲಿಅಶಾಂತಿ ಉಂಟುಮಾಡುವ ನಾನು
ಕೊನೆಗೆ ಬಲಿಯಾಗುವೇನು........ನೀನು
ಎಂಬುವ ವೀರನಿಂದ ನಾನು
ನೀವು ಬಳಸಿಕೊಂಡಂತೆ ...............ನಾನು
------- ಮಂಜು
- ಮಂಜು
15 Oct 2017, 06:16 pm
ಕಣ್ಣು ಮನುಷ್ಯನ ಇನ್ನೊಂದು ಮುಖ .....
ನಮ್ಮ ಮನಸ್ಸಿನಲ್ಲಿರೊ ನೋವಿಗೆ ಸ್ಷಂದಿಸುವ ಇನ್ನೊಂದು ಜೀವ .....
ಮನಸ್ಸಿಗೆ ನೋವಾದ ತಕ್ಷಣ ಕಣ್ಣಿರಾಗಿ ಹೋರ ಬಂದು ಸಮದಾನ ಮಾಡುವ ಸ್ನೇಹಿತ ......
ಮನಸ್ಸಿಗೆ ತುಂಬ ಹತ್ತಿರವಾಗಿರುವ
ಮೋಸ ಮಾಡದೆ ಇರುವ ಒಂದು ಜೀವ ...
ಕಣ್ಣಿನ ಭಾಷೆ ತಿಳಿದವರು ಯಾರು ???
ಕಣ್ಣಲ್ಲಿ ಕಾಣೊ ಖುಷಿ ನೋಡುತ್ತಾರೆ ಆದರೆ
ಮನಸ್ಸಿನಲ್ಲಿರೋ ನೋವನ್ನು ತಿಳಿಯುವವರು ಯಾರು???
- Shilpa
15 Oct 2017, 11:56 am
ನಿನ್ನನು ನೋಡುವ ಹಂಬಲವೇನೋ
ತುಂಬಲಾರದ ಹೃದಯದೊಳು,
ನನ್ನೊಳ ಬೇಗುದಿ ಕುದಿಯುತಲಿಹುದು
ತನ್ನೊಳ ತಾನೇ ಹಗಲಿರುಳು.
ಇಂದಿನ ಮಿಲನ, ಸ್ನೇಹದ ತನನ
ಎಲ್ಲಾ ಆ ಕ್ಷಣ ಸಂಪದವು,
ಒಬ್ಬರನೊಬ್ಬರು ಅರಿಯುತಲಿದ್ದರೆ
ಬಲ್ಲೆವು ನಮ್ಮನು ಅನುಕ್ಷಣವು.
ಬುಜಕೆ ತಲೆಯನು ಆನಿಸಿ ಚೆಲುವಿ
ಕೊಟ್ಟಳು ಮುಗುಳ್ನಗೆ ಮನ ಪಟಕೆ,
ಪಟ್ಟಳು ನೆಮ್ಮದಿ, ಇತ್ತಳು ಹೊನ್ನುಡಿ
ಮನಸು ಜಾರಿತು ಸಂಭ್ರಮಕೆ..
ಮೃದು ಮಲ್ಲಿಗೆ ಹೂ, ಕರಗಳ ಪಿಡಿದು
ಪಟ್ಟೆನೋ ನಾನು ಚಡಪಡಿಕೆ,
ಕೊಟ್ಟೆನೋ ಮುತ್ತ, ಕೆನ್ನೆಯ ಸುತ್ತ
ಪಡೆದಳೋ ಚಂದ್ರಿಕೆ ನಸು ನಾಚುತ್ತ..
ನನ್ನದು ಬಡತನ, ನಿನ್ನದೋ ಬಂಧನ
ಎರಡೂ ಮೀರುವ ಬಾ ಗೆಳತಿ,
ದುಡಿಯುತ ಹಾರುವ, ಎತ್ತರಕೇರುವ
ಎಲ್ಲವ ಮರೆತೂ ಬಾನಬಕೆ...
- ಶ್ರೀಗೋ.
15 Oct 2017, 12:35 am
ಒಲವೆ ಚಂದ ಮಾಮ
ಕತ್ತಲಿನೇಡೆಗೆ ಸಾಗುತಿರುವ
ನಿನ್ನ ನಗು ಸುಂದರ
ಇಡಿ ಕತ್ತಲನೆ ನುಂಗಿ ಬಿಡುವಷ್ಟು
ಕತ್ತಲ ಲೋಕದ ಮಾಮನೆ
ನಿನ್ನ ಒಂದು ನಗು ಸಾಕು
ಜಗತ್ತಿನ ಅಂದಕಾರವೆ ಮರೆಯಾಗಿ ಹೋಗೂಕೆ
ಮಕ್ಕಳ ಮುದ್ದು ಚಂದ ಮಾಮ
ಮನಸ್ಸುಗಳ ಮೌನದ ಚಂದ ಮಾಮ
ತಾರೆಗಳ ನಾಚಿಸೂ ಚಂದ ಮಾಮ
ಗಗನಕ್ಕೆರಿ ಕೂಳಿತಿರು ಚಂದಮಾಮ
ಕೈ ಚಾಚಿ ಕರೆದರು ಬಾರದೆ ಇರುವ ಚಂದಮಾಮ
ಒಲವೆ ಚಂದಮಾಮ..........
- ರಾಗಸಿರಿ....
14 Oct 2017, 07:25 pm
ಭೂಮಿಗೆ ಬರುವಾಗಲೆ ಹೆಣ್ಣಿನ
ಮಡಿಲು ಬೇಕು ತಾಯಿಯಾಗಿ
ಬಂದವಳು ಹೆಣ್ಣು.........
ಜೊತೆ ಯಲ್ಲಿ ಹುಟ್ಟಿ
ಕಾಳಜಿ ತೂರುವ ತೂರವ ಅಕ್ಕ ತಂಗಿಯರ
ಪ್ರೀತಿ ಬೇಕು ಅಕ್ಕ ತಂಗಿಯಾಗಿ
ಬಂದವಳು ಹೆಣ್ಣು..........
ನಗುವಿನಲಿ ಜೂತೆಯಾಗಿ ನಿನ್ನ ಸಂತೋಷ ವನ್ನು
ಬಯಸುವ ಗೆಳತಿ ಗೆಳತಿಯಾಗಿ
ಬಂದವಳು ಹೆಣ್ಣು..........
ನಿನ್ನ ಕೈ ಹಿಡಿದು ಹೆಜ್ಜೆ ಹೆಜ್ಜೆಗೆ ಜೊತೆಯಾಗಿ
ನೂವು ನಲಿವಿನಲಿ ಬೆರೆತು ಪ್ರೀತಿ ತೂರುವ ಮಡದಿ ಮಡದಿಯಾಗಿ
ಬಂದವಳು ಹೆಣ್ಣು.......
ಮಮತೆ ತುಂಬಿ ನಿನ್ನ ಒಂದು ಜೀವವಾಗಿ
ಬರುವ ಮಗಳು ಅ ಮಗಳು
ಒಂದು ಹೆಣ್ಣು ಆ ಮಗಳ ಹೆಣ್ಣೆಂದು ದೂಷಿಸಿ
ಆ ಜೀವ ಹುಟ್ಟು ವ ಮೂದಲೆ ಸಾಯುವುದು ಬೇಡ...........
ಹೆಣ್ಣು ಕರುಣೆಯ ತವರು ಹೆಣ್ಣೆಂದು ಅವಮಾನಿಸದಿರಿ...........
- ರಾಗಸಿರಿ....
14 Oct 2017, 04:56 pm
ಧರೆಯ ಒಡಲೆ ಕೇಳು ಇಲ್ಲಿ
ನನ್ನ ಮನದ ಮಂಪರು .
ಸುಖದ ಸಡಗರ ಅವಳ ಸೆಳೆಯಲು
ನನ್ನ ತನವು ಮೌನಿಯು .
ಮಾತು ಮೌನ ತಳೆದರೆನು
ಭಾವ ಪ್ರೀತಿ ಮರೆಯದು .
ಭೂಮಿ ಕಸೀದ ಮುಗಿಲ ಮೋಡಕೆ
ಗುಡುಗು ಸಿಡಿಲು ಜೋರು ಜೋರು.
ಜೀವ ಹೋದ ದೆಹ ದನಿಕೆಗೆ
ಚಂದ್ರ ಬಂದರೇನು ಚೂರು.
ಒಲವು ಸಿಗದ ಕಣ್ಣ ಅಂಚು
ಹನಿಯೊಂದವ ಚೆಲ್ಲದಿರದು .
ನನ್ನ ಹಸಿದ ಹೃದಯ ನಶೆಗೆ
ಬೆಕು ಅವಳ ಹೆಸರ ಉಸಿರು......
ಬೆಕು ಅವಳ ಹೆಸರ ಉಸಿರು......
ನೊಂದ ಕವಿತೆ.
ಸಚಿನ್ ಪತ್ತಾರ .
(ಕಪ್ಪು ಹುಡುಗಿ ಕವನ ಸಂಕಲನ)
- Sachin Pattar
14 Oct 2017, 03:35 pm
ತುಂಟ ನಗೆಯನ್ನು ಚೆಲ್ಲಿ
ಕಣ್ಣಲ್ಲೇ ನನ್ನ ಸೆರೆಯಾಗಿಸಿ
ನನ್ನ ಇರುವಿಕೆಯನ್ನು ಮರೆಸಿ
ಮರೆಯಾಗಿಬಿಟ್ಟಳಲ್ಲ, ಯಾರವಳು!
ಅವಳ ಏಕಾಂತವ ಬಯಸಿ ಮನವಿಂದು
ಹುಚ್ಚನಂತೆ ಅಲೆಯುತ್ತಿದೆ,
ಸಮಯದ ಅರಿವು ಇಲ್ಲದಂತೆ
ನನ್ನ ಕೊಲ್ಲುತ್ತಿದ್ದಳಲ್ಲ, ಯಾರವಳು!
ಬೀಸುವ ತಂಗಾಳಿಯ ಜೊತೆಯಲ್ಲಿ
ತನ್ನುಸಿರನು ಸೇರಿಸಿ
ಸದ್ದಿಲ್ಲದೆ ನನ್ನುಸಿರಿನಲಿ ಬೆರೆತು
ಹೃದಯವ ಕದ್ದಳಲ್ಲ, ಯಾರವಳು!
ಕಣ್ಣರೆಪ್ಪೆಯೊಳಗೆ ಅಡಗಿ ಕುಳಿತವಳು
ಕಣ್ತೆರೆದರೆ ಕಾಣಿಸದವಳು
ಕನಸಲ್ಲೂ ಕಾಡುತಿಹಳು
ಹುಡುಕಿದರೆ ಸಿಗದವಳು, ಯಾರವಳು!
ಪ್ರಿಯಾಂಕ✍
- ಪ್ರಿಯಾಂಕ
14 Oct 2017, 03:09 pm
ಎಲ್ಲೋ ಇದ್ದ ಎರಡು ಹಕ್ಕಿ
ಹಾರಿ ಬಂದವು
ಅಕ್ಕ ಪಕ್ಕ ಕೂತುಕೊಂಡು
ಹಣ್ಣು ತಿಂದವು.
ಸಣ್ಣ ಹಕ್ಕಿ ತನ್ನ ನೋವ
ಹಂಚಿಕೊಂಡಿತು
ಕಣ್ಣ ಹನಿಯ ಜೊತೆಗೆ ಹೃದಯ
ತಣ್ಣಗಾಯಿತು.
ಎರಡೂ ಹಕ್ಕಿ ಸೇರಿ ನಾಲ್ಕು
ಮಾತನಾಡಲು
ಬರಡು ಬನದಿ ಕೊರಡು ಕೊನರಿ ಅರಳಿಕೊಂಡಿತು.
ಹೊತ್ತು ಜಾರಿ ಕತ್ತಲಾಗಿ
ಚುಕ್ಕಿ ಮೂಡಿತು
ಹಕ್ಕಿ ಎರಡು ಗೂಡು ಹುಡುಕಿ
ಮತ್ತೆ ಹಾರಿತು.
- ಶ್ರೀಗೋ.
14 Oct 2017, 07:39 am
ಹೂಸ ನಗುವುಂದು ಬಂದರೆ
ಮುಖದಮೇಲೆ
ಹಳೆಯ ನೂವು ಮರೆತಂತೆ....
ಆದರೆ ನೋವಿನ ನೆನಪು ಹಾಗೆಯೆ
ಉಳಿದು ಬಿಡುತ್ತದೆ....
ಎಲ್ಲ ವನ್ನು ಗೆಲ್ಲುವ ನಗುವಿನ ಮುಂದೆ
ಎಲ್ಲ ವನ್ನು ನೆನಪಿಸುವ ಅಳುವು ಮಂಜಿನಂತೆ...
ನಗು ಅಳುವಿನ ಮುಖ ಒಂದೆ ಅದರೆ
ಬಾವನೆಗಳೆಕೆ ಬೇರೆ ಬೇರೆ.........
ನೀವೆಕೆ ಹೀಗೆ ನಗುವ ಅಳುವ ಮನಸ್ಸು....
- ರಾಗಸಿರಿ....
13 Oct 2017, 09:12 pm