Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನಗ್ಯಾರು ಕೊಟ್ಟರೆಂದು

ಕೆಳಗೆ ಬೀಳದ ಹೃದಯ ಕೇಳುತ್ತಿದೆ ನನ್ನನ್ನು ನನ್ನ
ಮೊದಲ ಉಸಿರು ನಿನಗೆ ತಿಳಿದು ಶುರುವಾಗಿಲ್ಲ
ಕೊನೆಯ ಉಸಿರು ನಿರ್ಧರಿಸುವ ಅಧಿಕಾರ ನಿನಗ್ಯಾರು ಕೊಟ್ಟರು ಎಂದು............

- ಚುಕ್ಕಿ

24 Sep 2017, 11:27 pm

ಸ್ನೇಹವೋ ಇಲ್ಲ ಮೊಸವೋ

ಸ್ನೇಹವೋ ಮೊಸವೋ ತಿಳಿದಿಲ್ಲ ನನಗಿನ್ನೂ
ಸ್ನೇಹದ ಮರೆಯಲ್ಲಿ ಮಾಡಿದ ಮೋಸಕ್ಕೆ............

ಕೊರದೇನೆ ಕಾಣಿಕೆಯೊಂದು ಕೊಡು ದೇವರೇ ಕೊಂದು ನನ್ನ ಕಣ್ಣೀರನ್ನು ಇಂದು..............

ಬೇಡವಾಗಿದೆ ನನಗೆ ನೀ ಕೊಟ್ಟ ಕಣ್ಣೀರಿನ
ಜೀವನವೇ ನಿನ್ನಲ್ಲಿ ಶಕ್ತಿ ಇದ್ದರೆ ಹಿಂತೆಗೆದುಕೊ...........

ನಂಬಿಕೆಯೆಂಬ ಪದದ ಮೇಲೆ ನಂಬಿಕೆ ಕಳೆದೊಗುವ ಮುನ್ನ ನನ್ನೊಳಗೆ ಸೇರಿಸೋ ನನ್ನ ನಗುವಿನ ಪ್ರಪಂಚವನ್ನು.........

ಸ್ವಾರ್ಥ ನನಗೂ ನೀಡು ಈ ಸ್ವಾರ್ಥಪರರ ಮಧ್ಯದಲ್ಲಿ ಇನ್ನಾದರೂ ಬದುಕುತ್ತೇನೆ ನಾನೊಂದು ಸ್ವಾರ್ಥಿಯಾಗಿ..........

ಯಾರನ್ನು ನೆನಪಿಸಿಕೊಳ್ಳಲಿ ನನ್ನ ಸಂತೋಷ ಬಯಸುವ ವ್ಯಕ್ತಿಯೆಂದು ಅವರ ಸ್ವಾರ್ಥವಿಲ್ಲದೇ..............

ಯಾರನ್ನು ಕೇಳಲಿ ನನ್ನ ನಗುವಿನ ಬೆಲೆ ತಿಳಿಸಿ ನಿವಾದರೂ ನನ್ನ ಅಳುವಿಗೆ ಎಂದು.................

- ಚುಕ್ಕಿ

24 Sep 2017, 11:23 pm

ಕಣ್ಣೀರಿಗೊಂದು ಲೇಖನ

ಕಣ್ಣೀರಿಗೊಂದು ಲೇಖನ ಬರೆಯುವ ಆಸೆ ನನಗೆ
ಪ್ರತಿದಿನವು ಬರುವ ಕಂಬನಿಯ ಹನಿಗಳನ್ನು ಸೇರಿಸಿ....................

ನೂರಾರು ನೋವುಗಳ ಶಾಯಿಯಲ್ಲಿ ಮುಳುಗಿಸಿ ಕೊನೆಯಲ್ಲಿ ಒಂದೊಂದು ಅಕ್ಷರ ಜಿಗುಪ್ಸೆಯಿಂದ ಬರೆಯುವ ಆಸೆ ಚುಕ್ಕಿಗಳನು ಕೊಂಚ ಕೊರೆದು ಮೌನದಲ್ಲಿ ಮಾತಂತೆ.................

- ಚುಕ್ಕಿ

24 Sep 2017, 11:20 pm

ಕಾಲೇಜಿನ ದಿನಗಳು

ಮೊದಲ ಬಾರಿ ನಿನ್ನನ್ನೇ
ಕಂಡೆ ನಾನು ಕಾಲೇಜಿನಲ್ಲಿ
ಅಂದು ನಿನ್ನ ಹೆಸರೇ ಗೊತ್ತಿಲ್ಲ
ಇಂದು ನಿನ್ನನು ಮರೆಯಲಾಗುತ್ತಿಲ್ಲ.........

ಓದಿನಲ್ಲಿ ಜೊತೆಗಿದ್ದೆ ಊಟವನ್ನು ಹಂಚಿಕೊಂಡಿದ್ದೆ
ಮನದಲ್ಲಿನ ನೋವನ್ನು ಮಂಜಿನಂತೆ ನಿನ್ನ ನಗುವಲ್ಲಿ ಮರೆಸುತ್ತಿದ್ದೆ...........

ಆತ್ಮೀಯಳು ನೀನು ಗಳತನಕೆ ಹೊಸದಾದ
ಚಿಹ್ನೆ ನೀನು ಇಂದಿಗೂ ಎಂದಿಗೂ ನೀನೇ ನನ್ನ ಪ್ರೀತಿಯ ಗೆಳತಿ.........

ಎರಡು ವರ್ಷಗಳು ಈ ವಾತಾವರಣದಲ್ಲಿ ಕಳೆದ ಕ್ಷಣಗಳು ನನ್ನ ನೆನಪಿನ ಪುಸ್ತಗದಲ್ಲಿ ಸವಿಯಾದ ಸಾಲುಗಳು.............

ಈ ಕೊನೆಯ ಕಾಲೇಜಿನ ದಿನಗಳಲ್ಲಿ ಎಲ್ಲರೂ ಓದುತ್ತಿರುವರು ಒಂದು ಘಳಿಗೆಯು ವ್ಯರ್ಥ ಮಾಡದಂತೆ
ಆದರೆ ನಾನು ಮಾತ್ರ ಅಳುತ್ತಿರುವೆನು ನಿನ್ನಿಂದ ದೂರವಾಗಲಾರದೆ...........

- ಚುಕ್ಕಿ

24 Sep 2017, 11:12 pm

ಗುರಿ

ಅಂದು,ಮುಂದೆ ಗುರಿ ಹಿಂದೆ ಗುರು
ಸಾಗುತಲಿತ್ತು ಧೀರರ ದಂಡು!!!

ಇಂದು,ಮುಂದೆ ಗುರಿಯೂ ಇಲ್ಲ ಹಿಂದೆ ಗುರುವೂ
ಇಲ್ಲ ಸಾಗುತಲಿದೆ ಕುರಿಗಳ ದಂಡು!!!

- ಶಾಫಿ

24 Sep 2017, 09:25 pm

ಶ್ಯಾಮನ ನೆನಪಲಿ.....

ಆ ಶ್ಯಾಮನ‌ ನೆನಪಲಿ‌
ನನ್ನನೆ‌ ಮರೆತಿರುವ ನಾನು ರಾಧೆ
ಅವನ‌ ಪ್ರೀತಿಯ ಮೋಡಿಯಲಿ
ಬಂಧಿಯಾಗಿ‌‌ ನಾ ಕರಗಿ ನೀರಾದೆ

ಕೊಳಲನೂದುತಿರಲವನು ಬಲು ಮೋಹಕ
ನೆನೆಯುತಿರಲವನ‌ ನನ್ನೊಳಗೆ ಏನೊ ಪುಳಕ
ಅವನ‌ ಪ್ರೇಮದೊಳಗೆ‌ ಎಲ್ಲವೂ ಭಾವುಕ‌
ಕನಸಿನ‌‌ ಲೋಕಕ್ಕೆಲ್ಲ‌ ಅವನೆ‌ ನಾಯಕ

ಸನಿವಿರಲು ಅವನದು ಅತಿ ತುಂಟತನ
ದೂರ ಸರಿದರವನು ತಾಳಲಾರೆ ಒಂಟಿತನ
ನನ್ನ ಬಾಳ ತುಂಬೆಲ್ಲ ಅವನದೆ ಕಥನ
ಅವನಿಲ್ಲದೆ ಸಾಗುವುದೆ ಈ ಬಾಳಯಾನ

- ಶ್ರೀಕಾವ್ಯ

24 Sep 2017, 08:43 pm

ಹಕ್ಕಿಧರ್ಮ

ಹಕ್ಕಿ ಧರ್ಮ
---------------

ಕಾಣದ ಕಣ್ಣಿನ ಆಳದಲ್ಲಿ ಮಿನುಗುವ ನಕ್ಷತ್ರವು
ಹೂಮಾಲೆಯಾಗಿ ಕೊರಳೊಳು ಮಿನುಗಲು
ನೆನಪಾಯಿತು ನನಗೆ ಸಾವಿರ ಸ್ತಂಬಗಳ ಕಂಬಸಾಲು
ಅದು ಧ್ವನಿ ಪೂರ್ಣ ಕವಿತೆಯ ತಾಜಾ ಬಾಬತ್ತು.

ಮಲಗಿದ ಕಣ್ಣುಗಳು ಏನನ್ನೋ ಕಾಣುತ್ತಲಿದ್ದವು
ಹೃದಯ ಇನ್ನೇನನ್ನೋ ಬಡಬಡಿಸುತ್ತಲಿತ್ತು
ಸಾವಿರಾರು ಮೈಲಿ ಸಾಗಿ ಬಂದ ಮನಸ್ಸು
ಭಾವೋದ್ವೇಗದ ಬುದ್ಧಿ ನೆನೆಪಿಸಿಕೊಂಡ ಹಾಡು.

ಸಾವಿರ ಹೃದಯಗಳ ಅರಮನೆಯಲ್ಲಿ ಅರಳಿ
ಜನರ ಮಾತಾಗಿತ್ತು ಸಂತೆ ನಡುಬೀದಿಯಲ್ಲಿ
ಇಬ್ಬನಿಯಂತೆ ಜೀವ ಸಾರ್ಥಕತೆಯನ್ನು ಸಾರಿ
ಬಿದ್ದ ಮಳೆಯಂತೆ ತನ್ನ ಕಾರ್ಯವನ್ನು ನೀಗಿ

ಧನ್ಯತೆಯ ಭಾವದಲ್ಲಿ ನಿರಾಳ ಆಸ್ವಾದನೆ
ನನ್ನ ಅನಾಹತ ಚಕ್ರದ ಧ್ವನಿ ನನಗೆ ಕೇಳಿದಂತೆ
ಪದೋನ್ಮತ್ತ ಸುವಿಶಾಲ ಆಳ ಸಾಗರದಂತೆ
ಕನಸಲ್ಲಿ ಬರೆದಂತೆ ಕವಿತೆಯೊಂದ ಕನವರಿಸಿದೆ.

ಅಂದು ಮುಂಜಾನೆಯ ವೇಗ
ತಡವಾಯಿತೇನೋ ಎಂದೆ,ಎದ್ದು ಬೇಗ
ಅಸತ್ಯ ರಾತ್ರಿಯ ಕಾವ್ಯನಶೆಯ ಮೆಲುಕು ತಳುಕುಹಾಕುತ್ತಲಿತ್ತು .ಮನ ಸುಮ್ಮನೆ ಹಾಡುತ್ತಿತ್ತು

ಹಾಡಲು ಹೊರಟೆ ಬಹುರೂಪಿಗಳಂತೆ
ಗೀಚಲು ಹೊರಟೆ ಕಬ್ಬಿಗರಂತೆ
ಗಿಡಗಂಟೆಗಳಂತೆ ನನ್ನ ಕವಿತೆ.
ಹಾಡಿಬಿಟ್ಟಿದ್ದವು ಹಕ್ಕಿಗಳು ಆಗಲೇ.

ಎದ್ದು ನಾನು ಬರೆಯುವ ಹೊತ್ತಿಗೆ........

----ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

24 Sep 2017, 06:08 pm

ಬದುಕು

ಹುಟ್ಟು ಸಾಧನೆಯ ಜೊತೆಯಲ್ಲಿ
ಕಲಿಕೆ ಮನಸುಗಳ ಜೊತೆಯಲ್ಲಿ
ಗುಣ ಭಾವನೆಗಳ ಜೊತೆಯಲ್ಲಿ
ವಿವೇಕ ಗುರುಗಳ ಜೊತೆಯಲ್ಲಿ
ಬದುಕಿನ ಪಯಣ ಸಮಯದ ಜೊತೆಯಲ್ಲಿ

- nageshwarh

24 Sep 2017, 04:58 pm

ಪರದಾಟ...

ತುಸು ನಗೆಯ ನಕ್ಕು
ಅವಳಾದಳು ನನ್ನ ಸಂಗಾತಿ...
ಕಸಿದುಕೊಂಡಲು ನನ್ನೆಲ್ಲಾ ಹಕ್ಕು
ಕೇಳೊರಿಲ್ಲಾ ಯಾರು ನನ್ನ ಗತಿ...

- ಪ್ರಿಯಾಂಕ

24 Sep 2017, 04:09 pm

ಅಂದು-ಇಂದು....

ಕೊಳೆತು ನಾರಿದ ಸಮಾಜವ
ಬದಲಿಸುವ ಬಯಕೆ ಅಂದು
ಕೊಳೆತ ಕೆಸರಲೆ ಹೊರಳಾಡುವ
ಸಾಮರಸ್ಯದ ಜೀವನ ಇಂದು

ಸೋಲೆ ಇಲ್ಲದ ಸರದಾರಳು
ನಾನೆಂಬ ಅಹಂ ಅಂದು
ಸೋಲಿನ ಸರಮಾಲೆಯ ದರಿಸಿದವಳು
ಸಂದರ್ಭದ ಕೈಗೊಂಬೆ ನಾನಿಂದು

ದೂರದ ಶಿಖರವ ಮುಟ್ಟಲು
ಕ್ಷಣಿಕ ಸುಖವ ತ್ಯಜಿಸಿದೆನಂದು
ನಿಖಟ ಗಿರಿಯ ಮುಟ್ಟಲಾಗದೆ
ಪರಿತಪಿಸುತಿರುವೆನು ಇಂದು




ಶಾರಧ

- ಶಕುಂತಲಾ

23 Sep 2017, 11:15 pm