Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಪಯಣ

ಎತ್ತ ಸಾಗಿತು ನಿನ್ನ ಪಯಣವು
ನನ್ನ ಬದುಕನು ಒಂಟಿಯಾಗಿ ಬಿಟ್ಟು
ಎತ್ತ ಜಾರಿತು ನಿನ್ನ ಮನವು
ನನ್ನ ಮನದೊಳಗೆ ನೆನಪುಗಳನ್ನಿಟ್ಟು
ಹೆಜ್ಜೆಗೆ-ಹೆಜ್ಜೆ ಹಾಕಿ ಬಲು ದೂರ ಸಾಗಿ
ಎತ್ತ ಹೋದೆ ಕವಲು ದಾರಿಯಲಿ ನನ್ನ ಹೀಗೆ ಬಿಟ್ಟು
ಜೊತೆಗೂಡಿ ನಕ್ಕು ನಲಿದು
ಎತ್ತ ಹೋದೆ ಕಂಬನಿಗಳನು ಕಣ್ಣಲ್ಲಿ ಬಿಟ್ಟು
ಕಣ್ಣಂಚಿನಲಿ ತುಂಬಿ ಹರಿಯುತ್ತಿದೆ
ನೀನು ಬಿಟ್ಟು ಹೋದ ನೆನಪುಗಳು
ಆ ನೆನಪಿನ ದೋಣಿಯಲಿ ಆರಂಭವಾಗಿದೆ
ನನ್ನೀ ಜೀವನದ ಪಯಣವು

- ವಿನೋಬ ಕೋಟೆ

21 Sep 2017, 06:50 pm

ವೇದನೆ

ನೆನಪುಗಳು ಮರುಕಳಿಸುವಾಗ
ಮನಸ್ಸು ಮೂಕವಾಗಿದೆ
ನಿನ್ನ ಸೇರಬೇಕೆಂದು ಹೊರಟಿದ್ದ
ಹೃದಯ ಈಗ ಭಾರವಾಗಿದೆ

ನೆರಳಂತೆ ಜೊತೆನಿಂತೆ
ನೆನಪಂತೆ ಮನಃಕುಂತೆ
ಕನಸಲ್ಲಿ ಜೊತೆ ಸೇರುವ ಮುನ್ನ
ಜಗ ಕಣ್ಣ ತೆರೆಸಿತು
ಮನಃವು ಮರೆಯಾಗಿ ಪ್ರೀತಿ ದೂರಾಯಿತು
ನೆಲೆಯಿಲ್ಲದ ನೆನಪೊಂದು
ಅಲೆಯಂತೆ ಮನಕೆ ನುಗ್ಗಿ ಕನಸುಗಳ ಕೊಲೆಗೈದಿದೆ
ಸೋತ ಮನಸ್ಸೀಗ ಮೈ ಕೊಡವಿ ಮೇಲೆಳುವ ಮುನ್ನ
ನಿನ್ನ ಮೊಗನೋಡಿ ಮತ್ತೆ ಮೌನತಾಳಿದೆ

- ವಿನೋಬ ಕೋಟೆ

21 Sep 2017, 06:49 pm

ನೋವು..

ಉತ್ತರವಿಲ್ಲದ ಬದುಕಿನ ಪ್ರಶ್ನೆಗೆ
ನಿನ್ನ ನೆರಳನೆ ನಂಬಿಹ ನನಗೆ
ಬೊಗಸೆಯಲ್ಲಿ ತುಂಬಿಹ ನೋವಿನ ಜೊತೆಗೆ
ಇದೇ ನೀಕೊಟ್ಟ ಸೋಲಿನ ಕಾಣಿಕೆ.....

- ಪ್ರಿಯಾಂಕ

21 Sep 2017, 01:58 pm

ಚೆಲುವ ಚಂದ್ರಿಕೆ.....

ಚೆಲುವ ಚಂದ್ರಿಕೆ
ಕನಸಿಗೆಲ್ಲ ನೀನೆ ಮಾಲಿಕೆ
ನಗುವ ನಿನ್ನ ನವಿರು ಅಧರಕೆ
ದೃಷ್ಟಿಬೊಟ್ಟು ಬೇಕಿದೆ ಅದರ ಚೆಂದಕೆ
ಮರೆತೆನು ನಾನು ನನ್ನನೆ ಆ ಅಂದಕೆ

ಮಿನುಗುವ ನಿನ್ನ ಕಣ್ಗಳ ಕಡಲಲಿ‌
ಬಂಧಿಯಾಗಿರುವೆನು ಪ್ರೀತಿಯ ಅಲೆಯಲಿ
ಪ್ರೀತಿ ತುಂಬಿದ ಈ ಕಡಲ‌‌ ಒಡಲಲಿ
ಸೇರಿ ಹೋಗಿರುವೆ ನಾನಾದ ನಿನ್ನ ಭಾವದಲಿ
ಕಳೆದೋಗಲೆ ನಾನು ನಿನ್ನದೆ ಕನಸಲಿ

ಕಂಡಾಗ ಹಾರುವ ನಿನ್ನ ಮುಂಗುರುಳ
ತಿಳಿಯದೆ ಸೆಳೆದಿದೆ ಅತ್ತ ನನ್ನ ಬೆರಳ
ನೀ ನೋಡತಿರಲು ನನ್ನ ಕಣ್ಣುಗಳ
ಆ ಕ್ಷಣವಲ್ಲ ಅಷ್ಟೊಂದು ಸರಳ
ಅರಿವಿರದೆ ಆಗಿ ಹೋಗುವೆನು ನಾ ಮರುಳ

ತುಸು ನುಡಿವಾಗ ನೀನು
ಕೊಂಚ ಮೌನಿಯಾಗಿ ಬಿಡಲೇನು
ನಿನ್ನ ಕಾಡಿಸಿ ಕೆಣಕಿ ನೋಡಲೇನು
ಮುದ್ದಿಸಿ ಕೋಪವ ಮುರಿಯಲೇನು
ಆ ಮುದ್ದು ನಗುವಿಗೆ ಕಾಯುವ ಪ್ರೇಮಿ ನಾನು

ಇಬ್ಬರ ಕಿರುಬೆರಳ ಜೋಡಿಸಿ
ನಡೆಯುವಾಸೆ ಹೆಜ್ಜೆಗಳ ಕೂಡಿಸಿ
ಕಾಯುವೆನು ನಿನ್ನ ಎಂದಿಗೂ ನನ್ನೆದೆಗೊರಗಿಸಿ
ಬಾಳ ತುಂಬಾ ಸವಿಜೇನ ಸೇರಿಸಿ
ಎಂದಿಗೂ ಜೊತೆಯಾಗಿರುವೆನೆ ನನ್ನ ಪ್ರೇಯಸಿ

ಮಾಡುವಾಸೆ ನೀ ಮೆಚ್ಚುವಂತ ಪ್ರೇಮ ನಿವೇದನೆ
ನಿನಗಾಗಿ ನನ್ನ ಈ ಹೊಸ ಶೋಧನೆ
ನೀ ಮೆಚ್ಚಿದರೆ ಪ್ರೀತಿಯಲಿ ‌ನನ್ನದೊಂದು ಸಾಧನೆ
ಮೆಚ್ಚದಿದ್ದರೆ ಪಡಬೇಕೆ ವೇದನೆ?
ನನ್ನೆದೆಗೆಂದಿಗೂ ನೀನೆ ಅಲ್ಲವೆ ಮನದನ್ನೆ.

- ಶ್ರೀಕಾವ್ಯ

21 Sep 2017, 12:24 pm

ಮಿಂಚುಹುಳುವಿಗೆ ದೀಪವನಿಟ್ಟವನಾರು

ಮಿಂಚುಹುಳುವಿಗೆ ದೀಪವನಿಟ್ಟವನಾರು...!
ಗೂಬೆಗೆ ರಾತ್ರಿಯಲ್ಲಿ ದಾರಿ ತೂರಿದವನಾರು...!

ಬೆಕ್ಕನ್ನು ಅಪಶಕುನವೆಂದು ಮನೆಯಲ್ಲೇ ಸಾಕುವರು..!
ನಾಯಿಗೆ ನಿಯತ್ತಿದೆ ಎಂದು ಒಡೆಯುವರು...!

ತಾ ಮಾನವನೆಂದು ಕೃರಮೂಡತೆಗೆ ಮಾರು ಹೋಗಿ ಅಂಧಕಾರದಲ್ಲಿನಡೆಯುವ ಮನುಜನೆ ಅರಿತುಕೋ...

ನೀ ಇರುವ ಜಗವು ನಿನದಲ್ಲ ನಿನ್ನಾಯಸ್ಸು ಮುಗಿದನಂತರ ನಿನ್ನನ್ನು ಮೂಟೆಯಂತೆ ಹೊತ್ತು ಕೊಂಡುಹೊಗಿ ಮಣ್ಣು ಮಾಡಿ ನಿನ್ನ ಒಂಟಿಯಾಗಿ ಬಿಟ್ಟು ಬರುವರು...!

- Rahul manoj v r

21 Sep 2017, 10:24 am

ನನ್ನೊಳಗೊಳಗೆ...

ಬರುತೇನಂದೆಲ್ಲಾ ನೀನು
ಭವ ಸಾಗರದ ಪ್ರೀತಿಯೊಳಗೆ !!
ಬಡಪಾಯಿ ಪ್ರೀತಿ ನಂದು,
ಬರದ ಸಿಡಿಲಿನಲಿ ನಿನ್ನ ಕಾಯುವ
ಬೆಂದು ನೊಂದ ಹೃದಯ
ಇಂದುಳಿಯಿತು ನನ್ನೊಳಗೊಳಗೆ.....!!!

ಇಂತಿ ಸ್ನೇಹ ಸಿಂಚನ
ನಾಗರಾಜ ಬಿ {9743216235}

- ನಾಗರಾಜ ಬಾಕೆ೯ರ್

20 Sep 2017, 10:34 pm

ನಗುವ ಗುಲಾಬಿ

ನಿ ನಗುವ ಗುಲಾಬಿ

ಅರಳಲು ಕಂಡೆ ನಾ ನಿನ್ನ ವೈವಿದ್ಯಮಯ ಬಣ್ಣ

ಹಸಿರು ಕೆಂಪು ನೀಲಿ ಅರಿಶಿನ ಮತ್ತೊಂದು ಮಗದೊಂದು ಇನ್ನೊಂದು ಮಿಶ್ರಣ ಉಡುಪು
ನಿನ್ನದು


ಯಾರನ್ನು ಆಕರ್ಷಿಸಿ
ಯಾರನ್ನು ಕರೀದಿಸಿ
ಯಾರನ್ನು ಆವರಿಸಿ
ಯಾರನ್ನು ಸೆಳೆಯುವ ಹೆಬ್ಬಯಕೆ ನಿನಗೆ

ನಿ ನಲಿವ ಗುಲಾಬಿ...

- ಮಧುರ

- ಮದನ್

20 Sep 2017, 06:43 pm

ಕನಸು...

ಕನಸಿನಲ್ಲಿ ಕಂಡ ಕನ್ಯೆ...
ಎದುರಲ್ಲಿ ಸಿಕ್ಕಳು ನನಗೊಮ್ಮೆ...
ಮೈಮರೆತು ನಿಂತೆನು ಸುಮ್ಮನೆ..
ನಕ್ಕು ಮರೆಯಾದಳು ಕಡೆಗೊಮ್ಮೆ....

- ಪ್ರಿಯಾಂಕ

20 Sep 2017, 06:37 pm

ಕಾಡುವುದೇತಕೆ

ಕಾಡುತಿರುವೆ ಏತಕೆ ಗೆಳತಿ
ಕಾಡುತಿರುವೆ ಏತಕೆ
ಪ್ರೀತಿ ದೂರಾದ ಮೇಲು ಕಾಡುತ್ತಿರುವೆ ಏತಕೆ
ಕಾಟ ಕೊಡುವುದೇತಕೆ ಗೆಳತಿ ಮರೆಯಬೇಕೆಂದಿರುವ ಹೃದಯಕ್ಕೆ
ನಿನ್ನ ಮರೆತೆನೆಂದು ಮನ ಬಯಸಿದೆ ಕಾಣದ ಕಡಲಿಗೆ

- ವಿನೋಬ ಕೋಟೆ

20 Sep 2017, 04:20 pm

ನೆನಪಿನ ತೀರದಲ್ಲಿ

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು…
ಕಾರಣ..
ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ..
ಅಲ್ಲ..!!
ನೀ ನೆನಪಾಗೋ ವೇಳೆ ಮಾತ್ರ
ನಾನು ಜೀವಿಸುತ್ತೇನೆ..!!

- ವಿನೋಬ ಕೋಟೆ

19 Sep 2017, 10:06 pm