Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸಿನ ಮಾತು

ಕೊರಗಿದೆ ಮನಸು ನಿನದೆ ನೆನಪಲಿ
ದಿನಾ ನಿನ್ನ ನೋಡುವೆ ಯಾವೋದೊ ಒಂದು ನೆಪದಲಿ
ಎಣಿಸಲಾರದಷ್ಟು ಕನಸ ಕಂಡಿರುವೆ ನಿನ್ನ ನೆನಪಲಿ
ಸಹಿಸಲಾರದಷ್ಟು ನೋವು ಅನುಭವಿಸಿದೆ
ನೀ ಇಲ್ಲದೆ ನನ್ನ ಈ ಬಾಳಲಿ

ನನ್ನ ಪ್ರೇಯಸಿಯ ನೆನಪು ಲಕ್ಷ್ಮೀ

........ ಮನೋಜ್ .......

- manoj

10 Sep 2017, 12:28 pm

ಮನಸಿನ ಮೌನ....

ಯಾರು ಕಾಣದಿಹರು
ಮನಸಿನ ಹೆಜ್ಜೆಯ ಗುರುತು
ಮನಸಿನ ಮರೆಯಲ್ಲಡಗಿದೆ
ಮೌನ ತುಂಬಿದ ಜಗತ್ತು!

ಬರಿದಾದ ಮನಸಿನಲಿ
ಕದಡಿದ ಕನಸಿದೆ
ನನ್ನಲ್ಲೇ ಬೆರತುಹೋದ
ಅಂತರಂಗದ ಮುನಿಸಿದೆ!

ಸವಿನೆನಪಿನ ಬುತ್ತಿಯಲ್ಲಿ
ಅಲೆದಾಡುವ ಮನಸ್ಸು
ಜೀವನದ ಜೊತೆಜೊತೆಯಲ್ಲಿ
ಹೆಜ್ಜೆಹಾಕುವ ಕನಸು!

ಕಂಡ ಕನಸಿಗಿಂತ
ಕಾಣದ ಮನಸಿನ ವ್ಯಥೆ
ಮೌನದ ಕಡಲಿಗಿಂತ
ಕಾಣದ ತಂಗಾಳಿಯ ಉಸಿರು!

ಇಬ್ಬನಿಯಲ್ಲಿ ಅಡಗಿದೆ
ನೋವಿನ ಮಾತು
ಮನಸ್ಸಿನಲ್ಲಿ ಮೂಡಿದೆ
ಮೌನದ ನೆನಪು!

- ಪ್ರಿಯಾಂಕ

10 Sep 2017, 11:22 am

ನೇಸರದ ಮಗಳಿವಳು

( ನೇಸರದ ಮಗಳಿವಳು )

"ನನ್ನ ಕನಸ್ಸಲ್ಲಿ ಬಂದವಳು.
ನೇಸರದ. ಮಗಳಿವಳು.
ಕಪ್ಪೆ ಚಿಪ್ಪಿನಂತ ಹುಬ್ಬವಳು.
ನೇರಳೆಯ ಕಣ್ಣವಳು.
ದಾಳಿಂಬೆ ಹಣ್ಣಿನ ಹೆಸಳಿನಂತ ತುಟಿಯವಳು"

" ನನ್ನ ಉಸಿರಲ್ಲಿ ಬೆರೆತವಳು.
ಮನಸ್ಸನ್ನು ಕದ್ದವಳು.
ಹ್ರುದಯಾನ ಗೆದ್ದವಳು.
ಚಂದಿರನ ಮಡಿಲಲ್ಲಿ ಮಲಗಿಹಳು.
ಮಂಜಲ್ಲಿ ಬೆರೆತಿಹಳು "

"ಹನಿಯಾಗಿ ಧರೆಗಿಳಿಯಲು
ತುದಿಗಾಲಿನಲಿ ನಿಂತಿಹಳು.
ನನ್ನ ಮನಸ್ಸನ್ನು ಕದಿಯಲು ಬಾನಿನಂಗಳದಿ
ಬಣ್ಣದ ಕಾಮನ ಬಿಲ್ಲನ್ನು ಮೂಡಿಸಿಹಳು.
ಧರೆಗಿಳಿವೆ ಎಂದು‌. ಸಂದೇಶವನ್ನು
ಮಿಂಚಾಗಿ ಕಳಿಸಿದಳು "

"ಹನಿಯಾಗಿ ಬಂದು ಧರೆಯಲ್ಲಿ ನಿಂದು
ಪ್ರೀತಿಯೆಂಬ ಮೊಳಕೆಯನ್ನು ತಂದು
ಚಿಗುರೊಡೆದ ಗಿಡದ ಉಸಿರಾಗಿ ಬೆರೆತಳು.
ನೇಸರದಲ್ಲಿ ಕಲೆತಿಹಳು.
ನನಗಾಗಿ ಕಾದಿಹಳು // ನನ್ನವಳು //

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

10 Sep 2017, 09:22 am

ಮಾಯೆ

ಮರೆತೆನೆಂದರು ಮರೆಯದು ಈ ಮಾಯೆ
ಎದೆಯ ಗೂಡಲಿ ನೀಬಿಟ್ಟು ಹೋದ
ನೆನಪುಗಳ ಛಾಯೆ

ಹೃದಯ ಅಂಚಿಪೆಟ್ಟಿಗೆಗೆ
ಕಳಿಸಿರುವೆ ಒಲವಿನ ಓಲೆ
ಪ್ರೀತಿಯ ಹಣತೆ ಹಚ್ಚಲು
ನೀಡುವೆಯಾ ಸವಿ ಒಪ್ಪಿಗೆ

ಆರಾಧನೆ ಆರೈಕೆಯಲು ನಿನ್ನ
ಮಧುರ ಪ್ರೀತಿಯೆ ಹಿತ ನನಗೆ
ಬರಡಾದ ಬದುಕಿಗೆ ಬಣ್ಣ ತುಂಬಿಸಲು
ಬಾ ನೀನು ಕಾಮನಬಿಲ್ಲಿನ ಹಾಗೆ

ನಾನೇ ನೀನಾಗಿರುವಾಗ ಎದೆಯಾಳದಲಿ
ಹೊಮ್ಮಲಿ ಒಲವ ಭಾವಗೀತೆ
ಮನದ ರಥದಲ್ಲಿ ಕೂತು ಸದ್ದಿಲ್ಲದೇ
ಸಾಗಲಿ ಒಲವ ಮೆರವಣಿಗೆ

*ಮಾನಸಾ ಎಪಿ..*

- ಮಾನಸಾ ಎಪಿ

10 Sep 2017, 05:51 am

.........?????????

ಭಾವನೆಗಳ ಅಡಿ ನಿಂತಿತ್ತು ,ಆಸೆ ಕಾಣದ ಮನಸೊಂದು ಒಡೆದು ನೀ ಹೋಗುವಾ ಮನಸೆಕೆ .....
ಕಾದು ಕುಳಿತ ಹೃದಯವ ನೀ ಅರಿಯದೆ ಹೋದೆ ...ಮನಸಿನ ಕಣ್ಕನ್ನಡಿಯ ಒಡೆದು ನೀ ನಗುತ್ತಿರುವೆ.......
ಸಹಾಯದ ಮನವಿಟ್ಟು ನೀ ದೂರವಾಗುವ ನಿರ್ಧಾರವೇಕೆ ........

- Acchu love

09 Sep 2017, 11:34 pm

ಮೋಹದ ಪ್ರಾಯ

ಹಸಿರು ಸಮೃದ್ಧದ ಪ್ರಕರ
ತೊಟ್ಟಿದ್ದು ಅದೆ ಉಡುಗೆಯ ಆಕಾರ
ಇದೋ ಪ್ರಾಯ ಕಾಲದ ಸಡಗರ

ನಯನಗಳ ಪ್ರಾಧಿಕಾರ
ಹೃದಯಗಳ ಅಧಿಕಾರ
ಮನಸ್ಸುಗಳ ಸಾರ್ವಭೌಮಾಧಿಕಾರ

ಪ್ರಣಯ ಕನಸುಗಳ ಮನೋಹರ
ಕಲ್ಪನೆ ಚಿತ್ರಗಳ ಮಧುರ
ವಿರಹ ನೋವಿನ ಭ್ರಮರ

ಚೆಲುವು ತೋರುವ ಮಾಯಾಮರ
ಆಕರ್ಷಣೆಯ ಮಿಲನ ಜ್ವರ
ಹಿರೇಉಳ್ಳಿಗೇರಿ ಕರೆಮ್ಮ ಹೆಣ್ಣು ಗಂಡಿನ ಪ್ರಕೃತಿ ಸಮರ

- MB

09 Sep 2017, 09:01 pm

ಮೌನ...

ಬೆಳದಿಂಗಳಿಗೆ
ಕಾವಲಾಗಿದ್ದ
ಚಂದ್ರ,
ಮರೆಯಾದ ಮೇಲೆ
ನಕ್ಷತ್ರದ ಮೌನದ
ಬೆಳಕಿಗೆ
ಸ್ತಬ್ಧವಾಯಿತು
ಕಡಲು....

- ಪ್ರಿಯಾಂಕ

09 Sep 2017, 08:21 pm

ಭಗ್ನ ಪ್ರೇಮಿ...

ಒಲುಮೆ ತುಂಬಿದ ಕಂಗಳಲಿ
ಕನಸಿನ ಕವಿತೆಯನು
ಹೃದಯದಲಿ ಕೆತ್ತಿಸಿ
ಭಗ್ನ ಪ್ರೇಮಿಯಂತೆ
ನಿನಗಾಗಿ ಕಾದಿರುವೆನು!

ಪ್ರೀತಿ ಎಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಮುಳುಗಿಯೂ ತೇಲಲಾಗದ
ನಡುವಿನ ಪ್ರೀತಿಯಲಿ
ನೀ ಬಂದೆ ಬರುವೆ ಎನ್ನುವ
ನಿರೀಕ್ಷೆಯ ಜೊತೆಯಲ್ಲಿ
ಸಾಗುತ್ತಿದೆ ನನ್ನೀ ಪಯಣ!

ನೆನಪಿನಂಗಳದ ಈ ಪಯಣದಲಿ
ಮುಗ್ದ ಮನಸಿನ ಸಾಹಿತಿಯಾಗಿ
ನಾ ಕಾಣದ ಹಾದಿಯಲ್ಲಿ
ಕಾಣಸಿಗದ ನಿನ್ನಯ
ಹೆಜ್ಜೆಗುರುತನು
ಅರಸಿ ಬಂದಿರುವೆನು
ಸಿಗುವೆಯಾ?

- ಪ್ರಿಯಾಂಕ

09 Sep 2017, 07:37 pm

ಗಗನತಾರೆ

ಗಗನತಾರೆ ನಿನ್ನ ನೋಡಿ ಮನಸು ಮೆಚ್ಚಿದೆ
ರಾಜಕೀಯ ವಲಯದಲ್ಲಿ ಅವಿನೀತಿಯ ಖಂಡಿಸಲೆಂದು ಹೋರಟ ನಿನ್ನ ಉಸಿರ ಲೇಖನ
ರಚಿಸಿದೆ ನಾವೆಂದಿಗೂ ಮರೆಯದಂತ ನಿನ್ನ ಜೀವನ ಶಾಸನ......................

ಗೌರಿಯಾಗಿ ಭುವಿಸೇರಿದೆ ಅಮರಳಾಗಿ ನನ್ನ ಮನಸೇರಿದೆ ಬೆದರಿಕೆಗಳಿಗೆ ಹಿಂಜರಿಯದೆ ಲೇಖವೆಂಬ ಖಡ್ಗವಿಡಿದು ವೀರನಾರಿಯಂತೆ ಹೋರಾಡಿದೆ ಅಕ್ರಮಗಳ ವಿರುದ್ಧ.........

ಇಲ್ಲದಿರಬಹುದು ನೀನಿಂದು ಈ ದುರ್ಜನರ ಮಧ್ಯದಲ್ಲಿ ಆದರೆ ನಿನ್ನ ನೋವಿಗೂ ನಲಿವಿಗೂ ಸ್ಪಂದಿಸಿದ ನಿನ್ನ ಪ್ರತಿಯೊಂದು ಹೆಜ್ಜೆಗುರುತಿಗೆ ಮಣ್ಣಾಗಿ ನಿನ್ನ ಹಿಂಬಾಲಿಸಿದ ಅಭಿಮಾನಿಗಳ ಹೃದಯದಲ್ಲಿ ನೀನೆಂದಿಗೂ ಜೀವಂತ............

ಕೊಂದಿರಬಹುದು ಒಂದು ಕಿಡಿಗೇಡಿಯ ಗುಂಡೇಟು ನಿನ್ನನ್ನು ಏಡಿಯಾದ ಗುಂಡು ನಿನ್ನ ಕಣ್ತಪ್ಪಿ ನಿನ್ನ ಶರೀರವ ಸೇರಿದೆ ಆದರೆ ಪರಿಶುದ್ಧ ಆತ್ಮವನ್ನಲ್ಲ ಎದೆಂದಿಗೂ ಅಜರಾಮರ ಗೌರಿ........

- ಚುಕ್ಕಿ

09 Sep 2017, 03:17 pm

ಮನಸಿನ ಮಾತು

ಹೇಳಲಾಗದ ಮಾಂತೊದ ಹೇಳಲು
ಚಡಪಡಿಸುತ್ತಿದೆ ಈ ಗುಂಡಿಗೆ
ಜಗದೋಳಗೆ ಏನೇ ನಡೆದರು
ಗೊತ್ತಾಗದು ಈಗ ನನಗೆ
ನೀ ಆಶಾಕಿರಣವಾಗು ನನ್ನ ಈ ಬಾಳಿಗೆ
ನಿನ್ನ ನೋವೆಲ್ಲ ಇರಲಿ ನನಗೆ
ನಗು ನಗುತ ಇರು ನೀ ಎಂದು ಹೀಗೆ

ನನ್ನ ಪ್ರೇಯಸಿಗೆ ನನ್ನ ಈ ನುಡಿ

ಮನೋಜ್...........

- manoj

09 Sep 2017, 01:14 pm