ತನ್ನ ತೊರೆದೊದವನ ಮೇಲಿನ
ಕೋಪ , ಆಕ್ರೋಶ , ನೋವುಗಳನ್ನೆಲ್ಲ
ತನ್ನ ಕಣ್ಣೀರಿನಲ್ಲಿ ದೋಣಿ ಮಾಡಿ
ತೇಲಿ ತೇಲಿ ಬಿಟ್ಟಳು..
ಆದರದು ಅವನಿಗೆ ತಲುಪುವ ಮುನ್ನ್ನವೆ ಅವಳ ಕಣ್ಣೀರಿನ ಹೊಳೆಯಲ್ಲಿ ಕರಗಿ ಕಣ್ಮರೆಯಾಗಿ
ಅವನಿಗವಳ ನೋವಿನ ಭಾವನೆಗಳು ತಲುಪದಾದವು..
ಅವನು ಹುಟ್ಟಿದ ಆ ಸುದಿನ
ನಾ... ಹೆತ್ತ ನೋವನ್ನು ಮರೆಸಿತ್ತು
ಆ ಕ್ಷಣ
ಖುಷಿಗೆ ಪಾರವೇ ಇಲ್ಲಾ ಆ ದಿನ
ನನ್ನ ಮನೆಯ ರಾಜಕುಮಾರ ಹುಟ್ಟಿದ ದಿನ
ಅವನು ಮೊದಲ ತೊದಲು ನುಡಿಯಲ್ಲಿ
ಅಮ್ಮ ಎಂದ ಆ... ಕ್ಷಣ
ಮೊದಲು.. ಶಾಲೆಗೆ ಹೊರಟ
....... ಆ ದಿನ
ನನ್ನ ಬಿಟ್ಟು ಕ್ಷಣವೂ ಇರಲಾರದೆ
ಅತ್ತ ...... ಆ ಕ್ಷಣ
ಮೊಟ್ಟ ಮೊದಲು ನನ್ನ ಬಿಟ್ಟು
ಸೈನ್ಯಕ್ಕೆ...ಬಹುದೂರ ಹೊರಟ
ಆ ದಿನ
ನನಗೆ ಗೊತ್ತಿಲ್ಲದೆ ನೋವು ಕಣ್ಣಿನಿಂದ
ನೀರಾಗಿ ಹರಿದಿತ್ತು..... ಆ ದಿನ
ಅವನಿಗಾಗಿ ಬಾಗಿಲಲ್ಲಿ ಕಾಯುತ್ತ ...
ಕುಂತ .... ಈ ತಾಯಿಯ ಮನ
ಆದರೂ ನನ್ನ ಮಗ ಯೋಧನೆಂದು
ಗರ್ವ ಪಡುವ ನನ್ನ ಮನ......
ಅವನು ಬಂದನು ಒಂದು ದಿನ....
ಆತ್ಮವಿಲ್ಲದ ಶರೀರದೊಂದಿಗೆ... ಆ ದಿನ
ಆ ದಿನ ನನ್ನ ಹೃದಯಕ್ಕೇ... ಸಿಡಿಲು
ಬಡಿದ ದಿನ
ಅವನ ಪಡೆದದಕ್ಕೇ ಹೆಮ್ಮೆ ಪಡುವೆ
ಈ ದಿನ............
ಅವನು ಅರ್ಪಿಸಿದ್ದ .. ನನ್ನ ದೇಶಕ್ಕಾಗಿ
ತನ್ನ........ ಪ್ರಾಣ
ಅವನ ನೆನಪು ಮಾತ್ರ ಉಳಿದಿದೆ...
ನನಗೆ ...... ಈ ದಿನ
ಬಾಲ್ಯದ ನೆನಪುಗಳು ಇಂದಿಗೂ
ಹಚ್ಚಹಸಿರಾಗಿವೆ ಮನಸಿನ ಪುಟದಲಿ.
ಲಗೋರಿ,ಚಿನ್ನಿದಾಂಡು,
ಮರಕೋತಿಯಾಟಗಳು
ಮರೆಯಾಗಿವೆ ಇಂದು
ಮರೆತೋದ ಆಟಗಳೀಗ,
ನೆನಪಿನಂಗಳದಿ ಬಂದು ಕುಳಿತಿದೆ.
ನಾವಂದು ಮಾಡಿದ ತುಂಟಾಟಗಳು
ಸಹಪಾಠಿಯೊಂದಿಗೆ ಜಗಳವಾಡಿ
ಮೊದಲಸಲ ಮೇಷ್ಟ್ರರ ಕೈಯಿಂದ
ಏಟು ತಿಂದು ಅತ್ತಾಗ
ಗುಂಪು ಕಟ್ಟಿ ಮುಗ್ದ ಮಾತುಗಳಿಂದ
ಸಮಾಧಾನಪಡಿಸಿದ ಗೆಳತಿಯರು.
ತಪ್ಪಾಗಿ ಮಗ್ಗಿ ಹೇಳಿದ ತಪ್ಪಿಗೆ
ಬೆಂಚಿನ ಮೇಲೆ ನಿಲ್ಲಿಸಿದಾಗ
ನಿಂತುಕೊಂಡೆ ನಿದ್ದೆಮಾಡಿ
ಎಲ್ಲರ ನಗುವಿಗೆ ನಾ ಕಾರಣಳಾಗಿ
ಬೆಪ್ಪನಂತೆ ನಾನು ನಕ್ಕಿದ
ಆ ಕ್ಷಣವ ನೆನೆದು
ತುಟಿಯಂಚಿನಲಿ ಮಂದಹಾಸವೊಂದು ತೇಲಿಹೋಗಿದೆ.
ಎಷ್ಟೊಂದು ಸುಂದರವಾಗಿದೆ
ಬಾಲ್ಯದ ನೆನಪುಗಳು
ಒಮ್ಮೊಮ್ಮೆ ನೋವನ್ನು ಮರೆಸುವ ಒೌಷಧವೇ
ಬಾಲ್ಯದ ಆದಿನಗಳ ನೆನಪುಗಳು!
ಬಾಳ ಬೆಳದಿಯಿಂಗಳಾದೆ ನನ್ನಲ್ಲಿ ನೀನು
ಪ್ರೀತಿಯ ಧಾರೆ ಪ್ರೀತಿಸುವೆನು ನಿನ್ನ
ನಿನ್ನಮಾತುಗಳು ನಿದ್ದೆಯ ಕೆಡಿಸಿದೆ
ಮನಸಲ್ಲಿ ಬಂಧನವಾಗಿದೆ
ಬಾಳ ಜೊತೆಗಾತಿ ಪ್ರೀತಿಯ ಸಂಗಾತಿ
ಪ್ರೀತಿಸುವೆನು ನಿನ್ನ ಮನಸಾರೆ ಗೆಳತಿ
ಎಳೆಯ ಪ್ರಾಯದಲಿ ಸ್ನೆಹಿತರೊಂದಿಗೆ ಕೂಡಿ ಆಯಾಸಗುವಷ್ಟು ಆಡುವ ಆಸೆ
ಹದಿ ಹರಯದಲ್ಲಿ ಹೆಳಿಕೊಳ್ಳದ ಆಸೆ
ಪ್ರೌಡಯುದಲಿ ಚಲದ ಗುರಿಯ ತಲುಪುವ ಆಸೆ
ಮದುವೆಯನಂತರ ಮಕ್ಕಳ ಜೊತೆ ಬೆಳಯುವ ಆಸೆ
ಮುಪ್ಪಾದಾಗ ಹೊಸ ಪೀಳಿಗೆಯರೊಂದಿಗೆ ಬೆರೆಯುವ ಆಸೆ
ಇ ಆಸೆಯನ್ನು ಹುದುಗಿಸಿದವನು ಯಾರು ಯಲ್ಲಿಹನು, ಕಾಲಚಕ್ರದಲಿ ಅಳವಡಿಸಿ ಬೆಕಂತೆ
ಮಾರ್ಪಡಿಸಿ ಜೀವನಕ್ಕೆ ಒಲವನ್ನು ಬೆಲೆಯನ್ನು ತುಂಬಿ ಸಾತ್ಕರಿಸಿ ಬದುಕನ್ನು ಒಂದು ಕತೆಯಾಗಿಸಿರುವನು. ನಾ ಒಲ್ಲೆ ಇವನ ...
ಆದರೂ ಆಸೆ ಅತ್ಯವಶ್ಯಕ... ನಾ ಹೊಗೊಲ್ಲೆ ಇದರ ಮೂಲ ಜಾಡಿಡಿದು..