ನೀನು ಕನಸಿನ ಹುಡುಗಿ
ನನ್ನೆದುರು ನೀ ನಿಂತರೂ
ನಾ ಮಾತ್ರ ನಿನ್ನೆದುರು ಮೌನಿ....
ನನ್ನ ಕನಸಿನಲ್ಲಿ ಬಂದು
ಮುದ್ದು ಮಾತಿಂದ
ನನ್ನ ಹೃದಯವ ಕದ್ದರೂ...
ನೀನೆ ನನ್ನ ಹೃದಯದರಸಿ ಎನ್ನಲು
ಭಯವಾಗುತ್ತಿದೆ ಕಣೆ ಹುಡುಗಿ.....!
ಮೌನ ಮುದುಗಿತು ನಿಟ್ಟುಸಿರ ಶಾಖಕೆ ಪಯಣ ಸಾಗಿದೆ ಪರಿಕಲ್ಪನೆಯ ಪಥಕೆ..
ಸಾಕ್ಷಿಗಿದೆ ಮುಗಿದ ಮಳೆಯ ನೀರಿನ ಶಬ್ಧ
ಪರಿವಿಲ್ಲದ ಸುಖ ಕಣ್ಣೀರಿನ ವಿರುದ್ಧ...
ನನ್ನೀ ಭಾವಗಳ ಸಾಮ್ರಾಜ್ಯದ ಬೀದಿಯಲ್ಲಿ
ಸದ್ದಿಲ್ಲದೇ ಸೇರ್ಪಡೆಗೊಂಡ ನಿನ್ನೀ ಭಾವನೆಯಲ್ಲಿ....!!
ಮೌನ ಮಾತಿನ ನಡುವೆ ಚೂರಾಗಿದೆ ಕನಸುಗಳ ಹೃದಯ
ಸ್ವಾರ್ಥ ಸಾಧನೆಯಲ್ಲಿ ಭಾವನೆಗಳಿಗೆಲ್ಲಿದೆ ಬೆಲೆ.??
ಮಳೆಹನಿಯ ಸುರಿಸಿದ ಮುಗಿಲಿಗೂ ಬೇಸರವಂತೆ
ಒಡೆದ ಹೃದಯವು ಬಹಳ ಗಟ್ಟಿಯಂತೆ ...
ದನಿಯಿಲ್ಲದೆ ನೀಡಿದ ಮಾತಿನ ಉತ್ತರಕ್ಕೆ
ಮನವಿಲ್ಲದೆ ನೀಡಿದ ಮೌನದ ಪ್ರತ್ಯುತ್ತರ...!!!
ಧೋ ಎನ್ನುವ ಮಳೆ ಸದ್ದು ಛತ್ರಿಯಿಲ್ಲದೆ ಮನಗಳಿಗೆ ಓಡುವ ಮಕ್ಕಳ ಹೆಜ್ಜೆ ಸದ್ದು
ತಿಳಿನಿರ ತಂಪಲ್ಲಿ ಸ್ನಾನ ಮಾಡುವ ಎಲೆಗಳ ಸದ್ದು ಕೇಳುತ್ತಿರುವ ನನ್ನ ಮನಕೆ ಆ ಮಳೆಯಲ್ಲಿ
ನೆನೆಯುವ ಆಸೆಯೇ ಮುದ್ದು..................
ಚಪ್ಪರದ ಮೇಲಿಂದ ಜಾರುತ್ತಿದೆ ನೂರು ಹನಿಗಳು ಟಪ್ ಟಪ್ ಸದ್ದು ಮಾಡುತ್ತಾ
ಮಿಂಚಿಲ್ಲದ ಸೋನೆಯಿದು ಗುಡುಗಿಲ್ಲದ ಮುಂಗಾರಿನ ಅಬ್ಬರಕ್ಕೆ ಮನಸೋತ ಕ್ಷಣವಿದು...............
ಸೂರ್ಯನ ಕಣ್ಣುಮುಚ್ಚಿ ರಾತ್ರಿಯ ಕತ್ತಳನ್ನು
ಸಾಲವಾಗಿ ಕರೆತಂದ ಹಿಂಗಾರು ಮಳೆಬಿಲ್ಲಿನ ಸವಿ ಸೋಜಿಗದ ಸುಂದರದ ಕಾರುಬಾರು........