Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಂಜೆ ಗೆಂಪಿನ ನಡುವೆ

ಸಂಜೆ ಗೆಂಪಿನ ನಡುವೆ
ರವಿ ಕಾಣದ ನಿನ್ನಂದವ ನನ್ನ
ಕಣ್ಣಿಂದ ನೋಡುತ್ತಾ ನಿಂತು................

ಜುಳು ಜುಳು ಪಾದದಿ ಕಚಗುಳಿ ಇಡುವ
ನೀರಲೆಯಲ್ಲಿ ನಿನ್ನ ನಾಚಿಕೆಯಿಂದ ಕೂಡಿರುವ
ಕೆಂಪಾದ ಕೆನ್ನೆಯನ್ನು ಚುಂಬಿಸುವ
ಆಸೆ ಆಯಿತು ಮನಕೆ ಈ ಕ್ಷಣ.........

ಇಳಿಸಂಜೆ ಹೊತ್ತಲ್ಲಿ ಗಗನದಿಂದ ಜಾರುತಿರುವ
ಸೂರ್ಯನ ಬೆಚ್ಚಗಿನ ಶಾಖದಲ್ಲಿ ನಿನ್ನ
ನೋಡುತ್ತಾ ನಿಂತು ನನ್ನ ಕಣ್ಣಲ್ಲಿ...........

ಆ ಅಲೆಗಳ ಸದ್ದಲ್ಲಿ ನಿನ್ನ ಅದರವನ್ನು ನನ್ನ
ಅದರದೆಡೆಗೆ ಎಳೆದುಕೊಂಡು ಈ ಕ್ಷಣ ಭುವಿ
ತಿರುಗಾಟ ನಿಲ್ಲುಸುವ ಆಸೆ ನನ್ನಲ್ಲಿ...........

ಬಲೆ‌ ಮೋಜು ಆ ಗಾಳಿಯು ಪ್ರೀತಿ ರಾಗವನ್ನು
ಹಾಡುವಂತಿದೆ ನಮ್ಮಿಬ್ಬರ ನಡುವಿನ
ಅನ್ಯೋನ್ಯತೆ ನೋಡಿ...............

ಆ ಕತ್ತಲಾದರು ಕತ್ತಲಾಗದಂತಹ ಈ
ಸಮಯದಲ್ಲಿ ನೀನೇ ಉದಯದ ರವಿಯೂ
ನಿನ್ನಲ್ಲೇ ತಂಪಾದ ಶಶಿಯೂ ನನ್ನುಸಿರಿಗೆ
ಪ್ರಿಯೇ...........

- ಚುಕ್ಕಿ

13 Aug 2017, 04:51 pm

ಬರೆದಿಟ್ಟು ಹೋಗಲೇ ಒಂದು ಕವನ...........

ಸಾಯುವ ಮುನ್ನ ಬರೆದಿಟ್ಟು ಹೋಗಲೇ
ಒಂದು ಕವನ ಅದರಲ್ಲಿ ತಿಳಿಸಲೇ ಈ ಬದುಕಲ್ಲಿನ ಬೇಸರನಾ............

ಆಸೆಯಿಲ್ಲದ ಬದುಕಲಿ ಕಣ್ಣೀರಿನ
ನೆಪಕೆ ಏತಕೆ ನಾ ಬದುಕಲಿ
ನಾನಲ್ಲದ ನಾನಾಗಿ ಮನಸ್ಸಿಲ್ಲದ ಜಡ ಪದಾರ್ಥವಾಗಿ...........

ಕಿರು ಕಾದಂಬರಿಯ ಲೇಖನ ನನ್ನ ಈ ಜೀವನ
ಅದರಲ್ಲಿನ ಶಾಯಿ ಮುಗಿದ ಮೇಲೆ ನೆಲಕ್ಕೆ ಜಾರಿದರು ಮೇಲಕ್ಕೆತ್ತಿ ಜೋಪಾನ ಮಾಡುವ ಕೈಯಿಲ್ಲ ನನ್ನ ಜೊತೆಯಲ್ಲಿ.............

ಅನಿಲವಾದೆಡೆ ಅಗಸದಲ್ಲಾದರು ಹಾರಾಡಿ ಉಸಿರಾಡುತ್ತಿದೆ ಘನವಲ್ಲ ಮೃದುವಲ್ಲ ಈ ನನ್ನ ಹುಚ್ಚು ಮನ ತಾ ಬಯಸುವುದರ ಮೇಲೆ ಆಸೆಯೊರೆತು ಬೇರೊಂದು ತನಗೆ ಬೇಡವೆಂದು ನನ್ನ ಶಾಸಿಸುತ್ತದೆ ಪ್ರತಿಯೊಂದು ಕ್ಷಣ...........

ಸಾಯುವ ಮುನ್ನ ನಾ ಬರೆದಿಟ್ಟು ಹೋಗಲೇ ಒಂದು ಕವನ ನಿಮ್ಮ ಮನದಲ್ಲಿ ನನ್ನ ಹೆಸರು ಎಂದಿಗೂ ಹಳಿಯದಂತೆ ಈ ನನ್ನ ರಚನಾ......

- ಚುಕ್ಕಿ

13 Aug 2017, 11:06 am

ನನ ತೋಳ ನೆರಳಿನಲಿ ಹೂವಂತೆ ಅರಳು

ನಿನ್ನ ಕಂಬನಿ ನನ್ನ ಕಣ್ಣಲಿ
ನನ್ನ ನಗುವದು ನಿನ್ನ ಮೊಗದಲಿ
ನಿನ್ನ ಬಾಳದು ಬೆಳಗುತಿರಲಿ
ಬೆಳಗೊ ಹಣತೆಯು ನನದಾಗಿರಲಿ

ಸೋಲಿರಲಿ ಗೆಲುವಿರಲಿ ಸಂತೋಷ ನಿನಗಿರಲಿ
ಸುಖವಿರಲಿ ದುಃಖವಿರಲಿ ನಿನಗೆ ಮುದ ಕೊಡಲಿ
ಹಗಲಿರಲಿ ಇರುಳಿರಲಿ ನಿನ ನೆನಪು ನನಗಿರಲಿ
ಬದುಕಿರಲಿ ಇರದಿರಲಿ ಈ ಜೀವ ನಿನಗಿರಲಿ

ತರಗೆಲೆಯ ಹಾಗೆ ನಮ್ಮದೀ ಬಾಳು
ಬಿರುಗಾಳಿ ಬೀಸಿದಲಿ ತಪ್ಪದು ಗೋಳು
ನಿನ ಗೋಳು ನನಗಿರಲಿ‌ ನನ ಮಾತ ಕೇಳು
ನನ ತೋಳ ನೆರಳಿನಲಿ ಹೂವಂತೆ ಅರಳು

-ಇಂತಿ ನಿನ್ನ ಪ್ರೀತಿಯ ಬಂಗಾರ

- ನಾಗು

12 Aug 2017, 07:07 pm

ಅಮರ- ಮಧುರ -ಪ್ರೇಮ

ನಿನ್ನ ಕಂಡ ದಿನದಿಂದ
ನನ್ನ ಕಣ್ಣು ಹೊಂಚು ಹಾಕುತ್ತಿದೆ
ಮಿಂಚು ಮೂಡುತ್ತಿದೆ
ಸಂಚು ಮಾಡುತ್ತಿದೆ
ಅದ ಮನ ತಡಿಯುತಿದೆ
ನೀನು ದೂರಾದ ಕ್ಷಣದಿಂದ
ಮನ ಕಣ್ಣೀರಿಟ್ಟು ಮರುಗುತಿದೆ
ಕರಗಿ ಕೊರಗಿ ಸೊರಗಿ ಬರಿದಾಗುತ್ತಿದೆ


ಮಧುರ ದಿನಗಳ ಮಧುರ ನೆನಪುಗಳು
ಒಡೆದ ಕನ್ನಡಿಯಂತೆ ಚೂರಾಗಿದೆ
ಮನದ ಕನಸಿನ ಸವಿ ಭಾವಗಳು
ಸುಡುವ ಮರು ಭೂಮಿಯಂತೆ ಬಿರುಕಾಗಿದೆ
ಇನ್ನೇಕೆ ಬದುಕು ಎಂಬ ವೇದನೆ
ಮಾಡಿದೆ ತನು-ಮನ ಖಾಲಿ ಮನೆ


ಒಲವನ್ನೆಲ್ಲಾ ಗಂಟು ಕಟ್ಟಿ ಬೆಂಕಿಗಾಹುತಿ ಕೊಟ್ಟು
ನನ್ನಿಂದ ಬೇಗ ಬಹುದೂರ ಸಾಗಿರುವೆ
ಮನದ ಆಸೆಯಲ್ಲಿ ಬುತ್ತಿ ಮಾಡಿ ಕೊಳ್ಳಿ ಇಟ್ಟು
ವಿರಹದ ಬೇಗೆಯಲ್ಲಿ ಉಸಿರುಗಟ್ಟಿ ಸಾಯಿಸಿರುವೆ
ಎಲ್ಲಾ ತಂಪಾದ ಮೇಲೆ ಶೋಕಾಚರಣೆ ಆರಂಭಿಸಿದೆ
ತಪ್ಪಿನ ಅರಿವಾಗಿ ಮನ ಪರಿತಪಿಸಿದೆ.

- Jayanthi

12 Aug 2017, 09:55 am

ಹಾರೈಕೆ

ಹಕ್ಕಿಗಾನದ ಇಂಚರ
ಸಂಗೀತದಂತೆ ಸುಮಧುರ
ಹಾಡಬಲ್ಲನು ಗಾಯಕ
ಬರೆಯಬಲ್ಲನು ಲೇಖಕ

ಬಂತು ಹೊಸದಿನದ ಪರಿಚಯ
ಹೊಸ ಬದಲಾವಣೆ ಬರಲೀ
ಹಳೆಯ ಕಹಿಯನ್ನು ಮರೆಯಲಿ
ಹೊಸ ಬದುಕು ಸಮೃಧ್ದಿಯಾಗಲಿ

- ಶಾಫಿ

11 Aug 2017, 09:29 pm

ಬದಲಾಗಿಲ್ಲ

ಎಲ್ಲವೂ ಬದಲಾಗಿತ್ತು.....
ಪುಟ್ಟ ಪುಟ್ಟ ಹೆಜ್ಜೆಯನಿಡುತ್ತಿದ್ದ ಮಗು
ಹರೆಯಕ್ಕೆ ಕಾಲಿಟ್ಟಿದೆ,
ಬೇಸಿಗೆಯ ಕಾಲ ಮುಗಿದು
ಮಳೆಗಾಲ ಬಂದಿದೆ,
ನಿನ್ನೆ ಕಂಡ ಚಿಗುರು ಇಂದು
ಬೆಳೆದು ಹೂ ಬಿಟ್ಟಿದೆ,
ಆಗ ಕಂಡ ಹೂ ಈಗ
ಇನ್ಯಾರದೋ ಪಾಲಾಗಿದೆ,
ಆದರೆ......
ಬೀಸಿ ಬಂದ ಗಾಳಿ ಬದಲಾಗಲೇ ಇಲ್ಲ.

- ಅಕ್ಷತ

11 Aug 2017, 06:08 pm

ಪ್ರೀತಿಯ ಗುಟ್ಟು

ಮನ ಮರುಗಿದಾಗೆಲ್ಲ ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೇನು.. ಕೂಡಿ ಬೆಳಯಲಿಲ್ಲ,, ಕುಡಿ ಹುಟ್ಟಲಿಲ್ಲ ಆದರು ಅರೆಕ್ಷಣಾ ನಿನ್ನ ಅಗಲಿರಲಾರದ ಮಧುರ ನೋವಿನ ಗುಟ್ಟೇನು‌‌!!!

- ಪ್ರವೀಣ್(OLLEHUDGA)

11 Aug 2017, 03:24 pm

ಕನ್ನಡ ಪ್ರೇಮ

ಹೊರದಬ್ಬೋಣ ಹೊರದಬ್ಬೋಣ ಹಿಂದಿ ಭಾಷೆಯನ್ನ
ಉಳಿಸಿಕೊಳ್ಳೋಣ ಎಂದೆಂದಿಗೂ ನಾವ್ ಕನ್ನಡ ತನವನ್ನ

ಪರಭಾಷಾ ಮೋಹವ ಇಂದೇ ತ್ಯಜಿಸಿರಿ
ಕನ್ನಡ ಮಹತ್ವವ ತಿಳಿಯುತ ಸಾಗಿರಿ
ಕನ್ನಡಕ್ಕಾಗಿ ನಾವ್ ಒಗ್ಗೂಡೋಣ
ಜಾತಿ-ಭೇದವ ಮರೆತು ಹೋರಾಡೋಣ

ಕನ್ನಡ ನಾಡು ಅಂದದ ಗೂಡು
ಕವಿ-ಕೋಗಿಲೆಗಳ ನೆಲೆಬೀಡು
ಕನ್ನಡ ಬೇರು -ಕನ್ನಡ ಸೂರು
ಎಳೆಯುವೆ ಏಕೆ ಆಂಗ್ಲದ ತೇರು

ಗೆಳೆಯನ ಪ್ರೀತಿಯ ಮಾಡುವ ಮೊದಲು
ತಾಯಿಯ ರಕ್ಷಣೆ ನೀ ಮಾಡು
ಕನ್ನಡ ಕಲಿಸಿ-ಕನ್ನಡ ಬೆಳೆಸಿ
ಕನ್ನಡ ಉಳಿಸಿ ನೀ ಬೀಗು

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

11 Aug 2017, 12:01 pm

ಮೆಲುಕು

ನೆನಪೆಂಬ ಪುಸ್ತಕವ ತೆರೆದು
ಪ್ರೀತಿ ಪುಟಗಳ ಹುಡುಕಿ
ಮತ್ತದೇ ಹಾಳೆಗಳ ತಿರುಗಿಸಿ ಮುರುಗಿಸಿ
ಆ ಚೆಂದದ ದಿನಗಳ ಮತ್ತೆ ಮತ್ತೆ ನೆನಪಿಸಿ
ನಮ್ಮಿಬ್ಬರ ಪಟವ ನಾ ನೋಡುತಿರಲು
ಕಣ್ಣಂಚಿನಲ್ಲಿ ನೀರಾದೆ ನೀನು

ನಿನ್ನ ನೋಡುತಿರಲು ಮನಕುಣಿಯುತಿತ್ತು,
ತುಟಿ ನಗುತಲಿತ್ತು, ಕಣ್ಣರಳುತಿತ್ತು
ನಿನ್ನ ನೆನದರಿಂದು ಮನಶೋಕವಾಯ್ತು, 
ತುಟಿ ಬಾಡಿಹೋಯ್ತು, ಕಣ್ಣೀರು ಬಂತು

ಕಣ್ಣೀರಿನ ಜೊತೆಗೆ ದಿನ ಬಳಿಗೆ ಬರುವೆ
ಕೆನ್ನೆ ಮೇಲೆ ಮುತ್ತಿಟ್ಟು ನೀ ಜಾರಿ ಹೋಗುವೆ
ಎದೆಗೂಡನಿಂದು ಖಾಲಿ ಮಾಡಿ ಹೋದೆ
ಎಲ್ಲರಿದ್ದರೂ ನೀನಿಲ್ಲ, ನಾ ಒಂಟಿಯಾದೆ

ಪ್ರೀತಿ ಎಂದರೇನಂತ ನೀ ಕಲಿಸಿಕೊಟ್ಟೆ
ಆಕಾಶ ಮುಟ್ಟಿಸಿ ಕೆಳದೂಡಿಬಿಟ್ಟೆ
ಈ ಮುರಿದ ಹೃದಯವ ನಾ ಹೇಗೆ ಜೋಡಿಸಲೇ?

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

11 Aug 2017, 11:49 am

ಬಂಜೆ ಎನ್ನುವ ಪಟ್ಟ

ತಾಯ ಮಮತೆ ನನ್ನಲ್ಲಿ ಇದ್ದರೂ
ನಾ ಕಂದನ ಮುದ್ದಿಸಲಿಲ್ಲ!!
ಮುದ್ದಿಸುವ ಮನಸಿದ್ದರೂ
ನನ್ನ ಮಡಿಲಲ್ಲಿ‌ ಕಂದನಿಲ್ಲ!!

ಕಂದನ ಹೆರುವ ಬಯಕೆ ಇದ್ದರೂ
ಆ ಯೋಗ್ಯತೆ ನನ‌ಗೆ ಇಲ್ಲ!!
ನನ್ನ ಬಂಜೆ ಎನ್ನುವರು ಎಲ್ಲ
ಪುಟ್ಟ ಮ‌ಕ್ಕಳಿಂದ ದೂರ ಇರಿಸಿದರಲ್ಲ!!

ಮಡಿಲಲ್ಲಿ ನಗುವ ಕಂದನ ಬಯಸಿ
ಮನಸು ಹಂಬಲಿಸುತ್ತಿದೆ!!
ಈ ತಾಯ ಮಮತೆಯ ವೇದನೆ
ಯಾರಿಗೂ ಹೇಳ ತೀರದು!!

ಮಕ್ಕಳಿಲ್ಲವೆಂದು ‌ನನ್ನ ಪ್ರೀತಿಯ ಪತಿ
ನನ್ನ ತೊರೆದು ಹೋದನಲ್ಲ!!
ಗಂಡನ ಬಿಟ್ಟವಳು ಎಂದು
ನನ್ನ ಹೆತ್ತವರು ನನ್ನ ದೂರಿದರಲ್ಲ!!

ಒಡ ಹುಟ್ಟಿದವರಿಗೂ ನನ್ನ
ಒಡಲಿನ ವೇದನೆ ಅರ್ಥವಾಗಲಿಲ್ಲ!!
ಬಂಜೆ ಎನ್ನುವ ಪಟ್ಟ ಹೊತ್ತು
ನಾ ಬದುಕ ಸಾಗಿಸುತ್ತ ಇರುವೆನು!!

- ಪಿ.ಜಿ.ಜ್ಯೋತಿ

11 Aug 2017, 11:24 am