Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವ - ಜೀವನ

ಜೀವಕ್ಕೂ ಜೀವನಕ್ಕೂ
ಅಗಾಧ ವ್ಯತ್ಯಾಸವುಂಟು..

ಒಂದು ಬಾರಿ ಹೋದರೆ
ಮತ್ತೆ ಬಾರದರಿವುದೆ " ಜೀವ.."

ಕೆಟ್ಟು ಹೋದರು ಮತ್ತೆ
ಸರಿ ಪಡಿಸಿಕೊಳ್ಳಬಹುದಾದುದೆ " ಜೀವನ... "

ಧರ್ಮ ರಾಜ್

- ಧರ್ಮರಾಜ್

05 Aug 2017, 12:47 pm

ಕಣ್ಣೊಳಗೆ ಕಳ್ಳಿ ಒಬ್ಬಳು

ಕಣ್ಣೊಳಗೆ ಕಳ್ಳಿ ಒಬ್ಬಳು
ಕುಂತವಳೆ ಮನೆ ಮಾಡಕೊಂಡು
ನಿನ್ನ ಕಂಡಾಗಲೆಲ್ಲ ನನಗೆ
ಕಣ್ಣ ಹೂಡಿತಾಳೆ ನಕ್ಕೊಂಡು....

ರೊಪಿಸಿಕೊಂಡು ಸಂಚೂಂದು
ಹೆಣಿತಾವಳೆ ಬಲೆಯೊಂದು
ಹೃದಯಾನ ಕದಿಯೋಕೆ
ಕಾಯ್ತಾವಳೆ ನಕ್ಕೊಂಡು....

ಮಿಂಚುಗಳ ಹಾವಳಿಯಿಂದ
ಮುಗುಳ ನಗೆ ಬಾಣಗಳಿಂದ
ಪಾರಾಗುವುದು ಹೇಗೋ ಕಾಣೆ
ಎದುರಲಿ ಬರ್ತಾವಳೆ ಸಿಂಗರಿಸಿಕೊಂಡು...

ಕೆನ್ನೆ ಮೇಲಿನ ಗುಳಿಗಳಲಿ
ಮುಳುಗಿ ಹೋಗುವ ಬಯದಲಿ
ಓಡುತಿರುವೆ ನಾ ಎದ್ದು ಬಿದ್ದು
ಬೆಂಬಿಡದ ದೆವ್ವದಂತೆ ಬರತಾವಳೆ ಹೂವಿಡುಕೊಂಡು....

ನಾಚಿಕೆ ಇಲ್ಲದ ಕಳ್ಳಿ ಇವಳು
ಕೆಳ್ತಾವಳೆ ಪ್ರಿತ್ಸು ಎಂದು
ಹೃದಯದ ಕೊಳದೊಳಗೆ ಬಿಟ್ಟಾವಳೆ
ಆಸೆಗಳ ಮೀನುಗಳು ನೂರಾವಂದು...

- ಕುಮಾರ ಸಿದ್ದರಾಜ

05 Aug 2017, 12:35 pm

ನೆನಪಿನ ನೋವು

ಬೇಸಿಗೆಯಲೂ ಹೃದಯವನು
ನೆನೆಸಿಟ್ಟಳು ಒಲವ ಮಳೆ ಸುರಿಸಿ...

ಬಿಟ್ಟೋದಳು ಅತ್ತರೂ ಕಾಣಿಸಿದ
ಮಳೆಗಾಲದಲಿ ಕಣ್ಣೀರು ತರಿಸಿ...

ಜೊತೆಗಿದ್ದಾಗ ಅವಳ ಮನದಲ್ಲೇನಿತ್ತೋ
ನಾ ಅರಿಯಲಾಗಲಿಲ್ಲ...

ದೂರಾಗುವಾಗ ನನ್ನ ಮನಕ್ಕಾಗುವ ನೋವು
ಅವಳಿಗೆ ತಿಳಿಯಲಿಲ್ಲ...

ಕೇಳಲು ಕಾತುರದಿಂದ ಕಾಯುತ್ತಿದ್ದೆ
ಅವಳಾಡುವ ಪೆದ್ದು ಮಾತುಗಳ...

ಈಗ ಕೊಟ್ಟೋದಳು ಮರೆತರು
ಮರೆಯಲಾಗದ ಲೆಕ್ಕವಿಡದಷ್ಟು ನೆನಪುಗಳ.....

---- ಧರ್ಮ ರಾಜ್

- ಧರ್ಮರಾಜ್

05 Aug 2017, 11:45 am

ಒಂಟಿಯಾಗಿರುವೆ ಅವಳಿಲ್ಲದೆ

ಕಂಬನಿಯನು ಕರಗಿಸಿ ಮಂಜಾಗಿಸಲೆ
ನನ್ನ ಪ್ರೀತಿಯ ಸಾಕ್ಷಿಗೆ,
ಮುಸುಕಿದಾ ಮಂಜಲಿ ಹುಡುಕುತಾ ಬಾರೆ
ಕಾಯುತಲಿರುವೆ ಕೊನೆಯವರೆಗೆ,
ಸೂರ್ಯನ ಬೇಡಿ ಮಂಜನು ಕರಗಿಸಿ
ನಾನೆ ಅರಸಿ ಬರುವೆ ಸಿಗುವೆಯ ಒಲವೆ,
ಮುನಿಸೇನೊ ನಿನಗೆ ಮುಸುಕಿದೆ ಮೋಡ
ಮಳೆಯಾದರೀಗ ಕರಗೀತೆ ಗಾಢ ಮೌನ,
ಮೌನವೆ ಸಮ್ಮತಿ ಎಂದುಕೊಳ್ಳಲೆ,
ಮೌನವೆ ಅಂತ್ಯ ಎಂದುಕೊಳ್ಳಲೆ,
ಅರಗಿಸಿಕೊಳ್ಳಲಾಗದ ಸತ್ಯಕ್ಕೆ
ನನ್ನ ಅರೆಜೀವವಾಗಲೆ ಹೋಗಿದೆ,
ಜಗವೇಕೆ ಬೇಡವೆನಿಸಿತು ನಿನಗೆ
ನನ್ನ ನೆನಪಾಗಲಿಲ್ಲವೆ,
ನೀನಿಲ್ಲದ ಬದುಕು ಇನ್ನೇಕೆ,
ನಾನು ನಿನ್ನೊಡನೆ ಬರುವೆನೆಂದುಕೊಂಡರು,
ನೀ ಬರೆದಿಟ್ಟ ಹಾಳೆಯ ಪದಗಳು
ಕಟ್ಟಿ ಕೂರಿಸಿವೆ ನನ್ನ,
ಇದ್ದರೆ ನನಗೆ ಇನ್ನೊಂದು ಜನ್ಮ
ನಿನಗಾಗೆ ಕಾದಿರುವೆ,
ಒಂಟಿಯಾಗಿರುವೆ ನಾ, ಮತ್ತೆ ಬರುವೆಯಲ್ಲವೆ...!

(ಮನೋಜ್)

- manoj kumar

05 Aug 2017, 11:33 am

ರೆಕ್ಕೆ ಮುರಿದ ‌ಹಕ್ಕಿ ನಾನು

ರೆಕ್ಕೆ ಮುರಿದ ಹಕ್ಕಿ ನಾನು
ಹಾರುವಾಸೆ ಮುಗಿದಿಲ್ಲ ನನಗಿನ್ನು
ಬುವಿಯ ಮೇಲೆಯೆ ಉಳಿದುಬಿಡುವನೇನು
ಮತ್ತೆ ಆಗಸವ ನೋಡಲಾರನೇನು
ನನ್ನಾಸೆಗಳೆಲ್ಲ ಬಣ್ಣ ಕಳೆದುಕೊಂಡವೇನು ?

ಮೋಡದೊಳಗೆ ತೂರುವಾಸೆ
ರೆಕ್ಕೆ ಬಿಚ್ಚಿ ಅತ್ತ ಇತ್ತ ಹಾರುವಾಸೆ
ಬಾನಾಡಿಗಳೊಡನೆ ಆಡುವಾಸೆ
ಬಾನಿಂದ ಬುವಿಯ ನೋಡುವಾಸೆ
ಭುವಿಯ ಮುಟ್ಟಿ ಬಾನಿಗೆ ಚಿಮ್ಮುವಾಸೆ
ಎಲ್ಲವು ನನಗಿನ್ನು ಬರಿಯ ಕನಸೆ ?

ರೆಕ್ಕೆ ಇರದ ನಾನು ಮೂಕ‌ವಿನ್ನು
ನಗುವ ತುಂಬಿ ಹಾಡಲಾಗದ ಹಕ್ಕಿ‌ ನಾನು‌
ಹಾರಿ‌ ಹುಡುಕಿ ಹೆಕ್ಕಿ ತಿನ್ನುವಾಸೆ ಸುಳ್ಳಾಯಿತೇನು
ದೂರ ಸಾಗುವ ಆಸೆ ಬಹು ದೂರವಿನ್ನು
ನನಗೇನೆ ನಾನು ಭಾರವಾದೆನು
ಆಗಸವು ಕನಸಷ್ಟೆ ಉಸಿರೋಗುವವರೆಗೆ ಇನ್ನು

- ಶ್ರೀಕಾವ್ಯ

05 Aug 2017, 08:44 am

ದೇವರಿರುವುದಿಲ್ಲ

ದೇವರು ಇರೋ ಕಡೆ
ಮನುಷ್ಯ ಹೋಗೊಕ್ಕಾಗಲ್ಲ..
ಮನುಷ್ಯ ಹುಡುಕುವ
ಗುಡಿ-ಗೋಪುರಗಳಲ್ಲಿ ದೇವರಿರುವುದಿಲ್ಲ..

--- ಧರ್ಮ ರಾಜ್

- ಧರ್ಮರಾಜ್

04 Aug 2017, 08:18 pm

ದಾರಿಗೋ ಸಾಸಿರ ಸಂಗತಿ

ದಾರಿಗೋ ಸಾಸಿರ ಸಂಗಾತಿ,ನನಗೇ ನಿನಷ್ಟೇ ಜೊತೆಗಾತಿ, ಬಿಡುವದಾದರೆ ಹೇಳಿ ಬಿಡು ಮುನ್ನ,ಹಿಡಿಯುವೆ ನಾನೂ ಮರಳಿ ಬಾರದ ದಾರಿಯನ್

- Manju...

04 Aug 2017, 08:06 pm

ಕೆಟ್ಟ ಮರೆವು , ಒಳ್ಳೆ ನೆನಪು

ಕೆಟ್ಟ ಮರೆವು , ಒಳ್ಳೆ ನೆನಪು
ಎಂದೂ ಗೆಳೆಯರಲ್ಲ
ಮರೆತು ಹೋದ ಗಳಿಗೆಯನು
ನೆನಪು ಜಪಿಸುತಿಲ್ಲ
ನೆನೆಯುವ ಹಿತ ಕ್ಷಣವನು
ಮರೆವು ಅಳಿಸಿತಲ್ಲ
ನೆನಪು ಉಳಿಯುವುದು ಮರೆಯುವರೆಗು
ಮರೆವು ಇರುವುದು ನೆನಪಾಗುವವರೆಗು
ಮರೆವು ನೆನಪು ಎಂದೂ ಸ್ನೇಹಿತರಲ್ಲ
ಅವರಿಲ್ಲದೆ ಜೀವನ ಮುಂದೆ ಸಾಗುವುದಿಲ್ಲ

- harsha

04 Aug 2017, 07:02 pm

ಯಾರು ನೀ ಮಾಯಾವಿ

ಯಾರು ನೀನು ಮಾಯಾವಿ
ಎಲ್ಲಿ ಕದ್ದೆ ಮನಸಿನ ಮನೆಯ ಛಾವಿ
ಎದೆಯಲಿ ತುಂಬಿದೆ ಸಿಹಿ ಪ್ರೀತಿಯ ಸವಿ
ನಾನಿನ್ನ‌ ಸೇರುವ ಮುನ್ನ‌ ನಾನಾದೆ ನಿನ್ನಾಸೆ ಬಟ್ಟಲಿಂದ ಆವಿ

ಮನಸ ತುಂಬಿದ ನೋವುಗಳೇ ಪ್ರೀತಿಗೆ ಬಳುವಳಿ
ನೆನ್ನೆಗಳ ನೆನಪಲಿ ನಡೆಯುತಿದೆ ಎದೆಯಲಿ ಚಳುವಳಿ
ಅರುಕು ಮುರುಕು ಭಾವಗಳೆ‌ ಜೀವಕಿನ್ನು ಉಸಿರು
ಮನಸಿಗಿಲ್ಲ ಇನ್ನೂ ಸಹಜ ನಗುವಿನ ಅಲಂಕಾರದ ತಳಿರು

ಹೊರಟದ್ದಾಗಿದೆ ಈ ನನ್ನ ಮನಸು ಗೂಡ ತೊರೆದು
ನೋಡಲಾರದೆ‌ ಹೋದೆ ನೀನು ಮನಸಿನ ಕಣ್ಣ ತೆರೆದು
ಬದುಕಬೇಕು ಬಣ್ಣವಿರದ‌‌ ಕನಸಿಗೆ ತೇಪೆಯ ಬಣ್ಣ ಬಳಿದು
ಬಚ್ಚಿಡಬೇಕು ಆಸೆ ಕನಸುಗಳ ಎದೆಯಾಳದಲಿ ಕನ್ನ ಕೊರೆದು

- ಶ್ರೀಕಾವ್ಯ

04 Aug 2017, 05:19 pm

ಸ್ವಾತಿ

ಸ್ವಾತಿ ಮುತ್ತಿಗಾಗಿ ಬರದೆ ಪ್ರೇಮದ ಸಂದೇಶ
ಕಣ್ಣಂಚಿನಲಿ ನೋಟದ ನಗೆ ಬೀರಿ
ಬಂಧಿಸಿದಳು ಹೃದಯ ಅಂತರಾಳದಲ್ಲಿ
ಏನೋ ಹರುಷದಲ್ಲಿ ತೂಗುತ್ತಿತು ಪ್ರೀತಿಯ ಜೋಕಾಲಿ
ಈಗೇ ಸಾಗುತ್ತಿರುವಾಗ ಹರಿದು ಬಂತು ಪ್ರೀತಿಯ ಆದೇಶ
ಮನಸ್ಸು ಒಪ್ಪಲಿಲ್ಲ ಆವಳ ಉಪದೇಶ
ಅದಕ್ಕೇ ಬಿಟ್ಟು ಆರಿಸಿದಳು ಹೊರದೇಶ
ಪ್ರೀತಿ ಹಾ(ಆ)ರಿ ಹೋಯಿತು ಆ ದೇಶಕ್ಕೇ
ಆದರೂ ನೆನಪುಗಳಿಂದ ನೆನಯುತ್ತಿರುವೇ ಸ್ವಾತಿ ಮಳೆಯಲ್ಲಿ....
ಎ ಜಿ ಶರಣ್

- ಎ ಜಿ ಶರಣ್

04 Aug 2017, 04:38 pm