Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾವೇ ನಿರ್ಮಿಸಿ
ನಾವೇ
ನಿರ್ದೇಶಿಸಿ
ನಾವೇ ನಟಿಸಿ
ನಾವೇ ನೋಡುವ
ನಮಗೇ ಅರ್ಥವಾಗದ
ಮತ್ತು ಅರ್ಥವಿಲ್ಲದೇ
ಅಂತ್ಯ ಹೇಗೇಂದು
ತಿಳಿಯದೆ
ಸಾಗುವ ಕಪ್ಪು ಬಿಳುಪಿನ
ಚಿತ್ರವೇ
ಜೀವನ
- ಅಂಜಲಿ
19 Jul 2017, 05:37 pm
ಬೋರ್ಗರೆವ ಮಳೆಯಲಿ,
ಹರಿಯುವ ಝರಿ ನೀರಲಿ,
ಅತ್ತಿತೆನಗೆ ಉಂಬಳವು(ಜಿಗಣೆ),
ಮೈಯೆಲ್ಲಾ ಕಥಕಲಿ,
ಮನಸಿಗೆ ಭಯದ ಹಾವಳಿ,
ಅವ್ವ ನಿನ್ನ ಕಂಡೊಡೆ
ನನ್ನ ಮನದಿ ಕಚಗುಳಿ...
- Spb...@#
19 Jul 2017, 05:32 pm
ಕಲೆಗಾರನ ಕುಂಚದಲ್ಲಿ
ಮೂಡಿ ಬಂದ ಚಿತ್ರ ಕಲೆಯೇ
ನೀ ಜೀವ ತಳೆದು ಕಲೆಗಾರನ
ಬದುಕಿಗೆ ಬಣ್ಣ ತುಂಬು ಬಾ!!
ಅವನ ಕಲ್ಪನೆಯ
ವಿಧ ವಿಧದ ಭಂಗಿಯಲಿ
ರೂಪುಗೊಂಡಿರುವೆ ಅಪೂರ್ವ
ಪ್ರತಿಭೆಯ ತೇಜಸ್ಸು ನೀನು!!
ಅವನ ಕಲಾ ಲೋಕದಲ್ಲಿ
ಬೀಗಿ ಮೆರೆಯುತ್ತಿರುವ
ಅಪರೂಪದ ಸುಂದರ
ಕಲೆಯ ಆಕೃತಿ ನೀನು!!
ಕುಂಚದಲೇ ನಿನಗೆ ಜನುಮವಿತ್ತ
ಆ ಮಹಾ ಕಲೆಗಾರನಿಗೆ
ನಿನ್ನ ಕೃತಜ್ನತೆಯ ತಿಳಿಸಲು
ನೀನು ಜೀವ ತಳೆದು ಬಾ!!
- ಪಿ.ಜಿ.ಜ್ಯೋತಿ
19 Jul 2017, 05:03 pm
ಮುಂಜಾನೆ ಮಂಜಿನ ಹನಿಗಳೇ
ತಂಗಾಳಿ ತೂಗಲು ಕೆನೆಗಳೇ!!
ನನ್ನ ನಲ್ಲ ಬರುವನು ಎಂಬ
ಸಂತಸ ನನಗೆ ಈ ದಿನ!!
ಮನದುಂಬಿ ಹಾಡುವೆ ಈಗಲೇ
ಮೈದುಂಬಿ ನಲಿಯಿರಿ ಗಿಣಿಗಳೇ!!..
ಮಧು ತಂದು ಸುರಿಯಿರಿ
ಅದರದಿ ಜೇನು ಹುಳುಗಳೇ!!
ಬಾಡದಿರಿ ಅರಳಿರೋ ಹೂಗಳೇ
ಉದುರದಿರಿ ಮರದಿ ಎಲೆಗಳೇ!!
ಅವನಿಲ್ಲಿ ಬರುವನು ಈಗಲೇ
ಅದಕಾಗೇ ಸಂತಸ ನನಗೆ ಈ ದಿನ!!
ಇರುಳಲ್ಲಿ ಕನಸಿನ ಕಚಗುಳಿ
ಹಗಲಲ್ಲಿ ನೆನಪಿನ ಚಿಲಿಪಿಲಿ!!
ಮನಸಲ್ಲಿ ಅವನದೇ ಗಲಿಬಿಲಿ
ಅವನನ್ನೇ ಕಾದಿದೆ ಈ ತನು ಮನ!!
ಎದೆಯಲ್ಲಿ ಬಣ್ಣದ ಓಕುಳಿ
ಚೆಲ್ಲಡಿದೆ ನಲ್ಲನ ಹಾದಿಗೆ!!
ಪ್ರೀತಿ ಹೊತ್ತು ಬರುವ ನನ್ನ ನಲ್ಲ
ಎಂಬ ಸಂತಸ ನನಗೆ ಈ ದಿನ!!
- ಪಿ.ಜಿ.ಜ್ಯೋತಿ
19 Jul 2017, 04:59 pm
ಮೀಸೆ ಮರೆಯಲ್ಲಿ ನೀನು ನಗುವಾಗ
ಓರೆ ಕಣ್ಣಿಂದ ನಾ ನೋಡಲೇನು!!
ಕಣ್ಣ ರಪ್ಪೇಗೂ ಏನೋ ಆನಂದ
ನಾಚಿ ನೀರಾಯಿತು ನಿನ್ನನ್ನು ಕಂಡು!!
ಬಳಿ ನೀನು ಬರುವಾಗ
ಮನಕೇನೋ ಆನಂದ!!
ನಿಂತು ಬಿಟ್ಟೆ ನಾನು ಇಲ್ಲಿ
ಅರಿವಿಲ್ಲದ ಹಾಗೆ!!
ಕಾಲ ಬೆರಳು ರಂಗೋಲಿ
ಬಿಡಿಸಿತು ನೆಲದಲ್ಲಿ!!.
ನನ‌್ನ ಮುಂಗುರುಳು ಕಾದಿಹುದು
ಹಂಬಲಿಸಿ ನಿನ್ನ ಬೆರಳ!!
ಅಂಗೈಯ ಮರೆಯಲ್ಲಿ
ಅದರವದು ತಡವರಿಸಿಹುದು!!
ಏನನ್ನೂ ಹೇಳಲಾರದೇ
ಸೋತಂತೆ ಆಗಿಹುದು!!
ನನ್ನ ಮೌನದ ಉತ್ತರವೇ
ನಿನ್ನ ಎಲ್ಲ ಪ್ರಶ್ನೆಗಳಿಗೂ!!
ಏನನ್ನೂ ಕೇಳದಿರು ನೀ
ಎಲ್ಲವೂ ಸಮ್ಮತಿಯೇ ನನಗೆ!!
- ಪಿ.ಜಿ.ಜ್ಯೋತಿ
19 Jul 2017, 02:17 pm
ತುಳುನಾಡಿನ ನಾಗಾರಾಧನೆ
ಅದೊಂದು ರೀತಿಯ ನಿಸರ್ಗರಾಧನೆ
ಈಗ ಎಲ್ಲಿದೆ ನಾಗನಿಗೆ ವನ-ಬನಗಳ
ಅರಮನೆ?
ಈ ಕಾಲದ ನಾಗನೂ ಇರುವುದು
ಬರೀ ಕಾಂಕ್ರಿಟ್ ಮನೆಯೊಳಗಡೆನೆ
- ಎಸ್.ಬಿ
19 Jul 2017, 12:43 pm
ಚಂದನಕೆ ಸಿರಿ ಚಂದನಕೆ
ಕಸ್ತೂರಿ ಕಂಪನದ ಬಂಧನವೇ!!
ಚಿಗುರಿನ ಎಲೆಗಳಿಗೆ
ವಸಂತ ತುಂಬಿದ ಸಂಭ್ರಮವು!!
ಹೂಗಳಿಗೆ ಹೂಬನದೊಳಗೆ
ಪರಿಮಳದ ಸರಿಗಮವೇ!!
ಶ್ರೀಗಂಧವೇ ಸುಗಂಧವೇ
ಘಮಿಸಿ ಹೊರಡಿಸು ಸಂಗೀತವ!!
ಆಲ ಬೇಲ ಮಾವು ಬೇವು
ಹಸಿರಿನ ನೀಡೋ ಮರಗಳೇ!!
ಹಸಿರಿನ ಈ ಉಸಿರಲಿ
ಬೆರೆತ ಜೀವದ ವರಗಳೇ!!
ಸಸಿ ನಡುತಿರೇ ನೀ ಖುಷಿಯಲಿ
ಕಸಿದು ಕೊಳ್ಳದ ಹರುಷವು!!
ವನ ಬೆಳೆಸಲು ಮನ ತಣಿವುದು
ನೀ ಪಾಲಿಸಬೇಕು ಬದುಕಲಿ!!
- ಪಿ.ಜಿ.ಜ್ಯೋತಿ
19 Jul 2017, 12:29 pm
ನಿದಿರೆಯಲಿ ಕನವರಿಕೆ
ಏನೋ ಚಡಪಡಿಕೆ!!
ಎದ್ದಾಗ ಮನವರಿಕೆ
ಕನಸಿನ ಚಟುವಟಿಕೆ!!
ಯಾರದೋ ನೆರಳಿನ
ಗೋಚರವು ಕನಸಲ್ಲಿ!!
ಎದ್ದಾಗ ಯಾರೆಂಬ
ಯೋಚನೆಯು ಮನದಲ್ಲಿ!!
ಸದ್ದಿಲ್ಲದಂತೆ ನಿದ್ದೆಯಲಿ
ಬಂದು ಹೋಗುವರಾರೋ!!
ಎದ್ದಾಗ ಎದುರಲ್ಲಿ
ಇಲ್ಲದಿರುವವರು ಯಾರೋ!!
ಏನು ಮಾಡಲೀ ಕನಸೇ
ಕಲುಕದಿರು ಮನಸನ್ನು!!
ಬರುವುದಾದರೆ ಬಂದು
ಕಾಣೊಮ್ಮೆ ನೀ ನನ್ನನ್ನು!!
- ಪಿ.ಜಿ.ಜ್ಯೋತಿ
19 Jul 2017, 12:25 pm
ಮಲ್ಲಿಗೆಯ ಮೈ ತೂಕದ
ಚೆಲುವೆಯು ಅವಳು!!
ಮೆಲ್ಲಗೆ ಬಂದು ನನ್ನೆದೆಯಲಿ
ಅಡಿಪಾಯ ಹಾಕಿದಳು!!
ಹಾಲು ಬೆಳದಿಂಗಳಿನ
ಓಕುಳಿಯಲಿ ಮಿಂದವಳು!!
ಬಳ್ಳಿಯ ಮೈ ಮಾಟದ
ಅಪರೂಪದ ಚೆಲುವೆ ಅವಳು!!
ನೀಲ ಮೇಘಗಳ ಕಂಡು
ಮೈ ಮರೆತವಳು!!
ಮಳೆಹನಿಗಳ ಸೆರಗ
ಹೊದ್ದು ನಗುತಿರುವವಳು!!
ಅಪರೂಪದ ಕನ್ಯೆ ನನಗಾಗಿ
ಅವನಿಯಲ್ಲಿ ಜನಿಸಿಹಳು!!
ಅವಳೇ ನನ್ನವಳು
ನನ್ನೆದೆಯ ಪ್ರತಿ ಮಿಡಿತ ಅವಳು!!
- ಪಿ.ಜಿ.ಜ್ಯೋತಿ
19 Jul 2017, 12:13 pm
ಮರೆತಿರುವ ವಿಷಯವೊಂದು
ಅಸ್ಪಷ್ಟ ಕನಸಿನಲಿ
ಮತ್ತೆ ನೆನಪಿಗೆ ಬರುವ
ರಣ ಪ್ರಯತ್ನ ನಡೆಸಿಹುದು!!
ಮರೆತು ಹೋಗಿರುವ
ಬಹಳ ಹಳೆಯ ವಿಷಯವದು
ಎಷ್ಟೇ ಪ್ರಯತ್ನಿಸಿದರೂ
ಮತ್ತದೇ ಅಸ್ಪಷ್ಟತೆಯ ಉತ್ತರ!!
ಏನು ಮಾಡಲಿ ಹೇಳು
ಹೇಗೆ ಹುಡುಕಲಿ ನಾ
ಮರೆತಿರುವ ಆ ಹಳೆಯ ನೆನಪಿನ
ಸ್ಪಷ್ಟತೆಯ ರೂಪ!!
ಕನಸಿಗಾದರೂ ಸರಿಯಾಗಿ
ಇಲ್ಲ ನೆನಪಾಗಿಯಾದರೂ
ಬಂದುಬಿಡು ಒಮ್ಮೆ ನೀ
ನಾ ಮರೆತಿರುವ ಹಳೆಯ ನೆನಪೇ!!
- ಪಿ.ಜಿ.ಜ್ಯೋತಿ
19 Jul 2017, 10:03 am