Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಿರಿವಂತಿಕೆಯ ಬಡಿವಾರ ತುಂಬಿರಲು ಮನಕೆ
ಕಾಣದು ಬಡತನದ ವೇದನೆಯು ಕಣ್ಣಿಗೆ
ಆಡಂಬರದ ಜೀವನ ಬರಿ ಕ್ಷಣಗಳ ಎಣಿಕೆ
ಆಗಸದೆತ್ತರಕೆ ಹಾಕುವ ಕನಸುಗಳ ಹೆಣಿಕೆ
ದುಡ್ಡಿನ ದರ್ಪದ ಪೊರೆ ಕಣ್ಣ ಮೇಲಿರಲು
ಪ್ರೀತಿ ಅಕ್ಕರೆಯ ಸಿಹಿಯ ಸವಿಯದು ಮನವು
ಕ್ಷಣ ಸನಿಹ ನೀರ ಮೇಲಿನ ಗುಳ್ಳೆ ಮಾಯವಾಗಲು
ಬೇಡುವುದು ಮನಸು ಬರಿ ಆಸೆಗಳ ಹವಣಿಕೆಯ
ಸಂಪದವ ಗಳಿಸಿ ಸಾಹುಕಾರರಾದರೇನು
ತೂರಿದರು ಸಂಬಂಧಗಳ ಬಿರುಗಾಳಿಯ ಒಡಲಿಗೆ
ಎಲ್ಲವನು ಗೆಲ್ಲಲು ಬೇಕಿಲ್ಲ ಈ ಹಗಲುವೇಷ
ಸಾಕು ಪ್ರೀತಿಯ ನಡೆ ನುಡಿಯ ನಾಲ್ಕು ಮಾತು ಜೀವಕೆ ....
- Irayya Mathad
16 Jul 2017, 04:17 pm
ಹಣ್ಣೆಲೆ ಉದುರಲೇಬೇಕು,
ಮಣ್ಣಿಲ್ಲಿ ಬೆರೆತು ಅಮೃತವಾಗಲು,
ಕವನ ಮನಮುಟ್ಟಬೇಕು,
ಕವಿಯ ಮನಸ್ಸು 'ಸಂಜೀವಿನಿ' ಆಗಲು.
- Srinivasakavana
16 Jul 2017, 10:45 am
ಕಣ್ಣಿಂದ ನೋಡಿದ ಬಿಂಬ ನಿನ್ನದು
ಅಲ್ಲಿಂದ ಹೊರಡಿದ ಮಾತಿನ ಮಧುರ
ನನ್ನ ಮನಸ್ಸಿನಲ್ಲಿನ ನಿನ್ನ ಪ್ರೀತಿಯದ್ದು........
- ಚುಕ್ಕಿ
16 Jul 2017, 10:15 am
ಆಷಾಢ ಗಾಳಿ ಆಗಸದಿ ಬಿಸಿರಲು
ಆನಂದ ಬೋಜನವಾ ಉದರದಲ್ಲಿ ಸರಿದಿರಲು
ಕಾಲಗಳ ಸರಿದುಗಿಸೋ ಗಳಿಗೆಯ
ಸಂಗಮವ ಸಡಿಲಿಸೋ ಕಾಲ ಆಷಾಢಗಾಲ....
ಹೊಟ್ಟೇಲಿ ಕಾಲಕೆಜಿ ಮನೆಯಲಿ ಪಾವಕೆಜಿ
ಬಿದಿಬಂಡೀಲಿ ಪೌಣಾಕೇಜಿ ಒಟ್ಟನಲ್ಲಿ ಕೈಬಾಯಿಗೆ
ಕೆಲಸದ ಕಲಿಸುವಕಾಲ
ಜಗಳವಾಡುವಗಾಲ ಆಷಾಢಗಾಲ ಆಷಾಡಗಾಲ್.....
ಶುದ್ದ ಗಾಳಿಯ ಗುಳಿಗೆಯ ನುಂಗಿ
ಸತ್ತು ಸೌರಗಿರುವಾ ದ್ರಾಕ್ಷವಾ ಅಮಲ ಸವಿದು
ಬ್ರುಸ್ಟಾನ ಬಾಡೂಟ ಉಂಡು
ಸದ್ದು ಮಾಡದೆ ಕುಂಡೆಯುರಿ ಮುಂಡೆದಿದಿರು
ನಾಕಾಣೆ ನಾಚಿಕೆಯ ನಾಲಿಗೆಯ ಒಳಹಿಡಿದು
ಗಬ್ಬನ್ನೇ ಗಮ್ ಗಮಿಸಿಸೋ ಸುವಾಸಮಾನಗಾಲ್..
ಕಿತ್ತೊದ ರಂಧ್ರಗಳ ಕಿಡಕಿಯ ಮುಚ್ಚಿಸೋಗಾಲ....
ಅದುವೇ ....ಆಶಾಡ....ಗಾಲ್ಲ ಮಜೆಯ ತರುುುವ
ಇದುವೇ ಆಷಾಢ . ಕಾಲ...........
- ಪ್ರದೀಪ.ಮ.ಪಾಡಮುಖೆ
16 Jul 2017, 06:22 am
ತನ್ನ ಬಲವಾದ
ಏಟಿಗೆ
ಬಲಿಯಾದವನ್ಯಾರೆಂದು
ಪಾಪ
ತಲವಾರಿಗೆ ಗೊತ್ತಿಲ್ಲ...
ಆದರೆ ತನ್ನನ್ನು
ಕ್ರೌರ್ಯಕ್ಕೆ
ಬಳಸಿದ ಕಟುಕನ
ಮೇಲೆ ಕೋಪವಿದೆ ...
ತಾನು ಯಾಕೆ
ಕೊಂದೆನೆಂಬುದು
ಕೊಲೆಗೆಡುಕನಿಗೆ
ಗೊತ್ತಿಲ್ಲ
ಕಷ್ಟದಲ್ಲಿದ್ದವರನ್ನು
ಮತ್ತಷ್ಟು ಕಷ್ಟಕ್ಕೆ
ನೂಕಿ ಜೈಲು
ಪಾಲಾದವನಿಗೆ
ಕುಟುಂಬದವರ
ಶಾಪವಿದೆ..
ತನ್ನಷ್ಟಕ್ಕೆ ಇದ್ದ
ತನ್ನನ್ನು ಯಾಕೆ
ಕೊಂದರೆಂದು
ಬಲಿಯಾದವನಿಗೂ
ಗೊತ್ತಿಲ್ಲ
ಹೆತ್ತ ಕರುಳ
ಉಸಿರು ನಿಲ್ಲುವವರೆಗೂ
ಶಾಶ್ವತವಾದ
ನೋವಿದೆ...
ಕೊಂದವನು
ಎರಡು ಕುಟುಂಬವನ್ನು
ನೋವಿನ ಕಡಲಿಗೆ
ನೂಕಿ, ಜೈಲಿಗೆ ಹೋಗಿ
ಸಾಧಿಸಿದಾದರೂ
ಏನು ???
ಹೆತ್ತವರ ನೋವಿನ
ಲಾಭ ಪಡೆದವರು
ನಾಡಿಗೆ ಬೆಂಕಿ
ಹಚ್ಚುವವರ
ಹುಡುಕಾಟದಲ್ಲಿ
ತೆರೆಮರೆಯಲ್ಲಿ
ಹೊಂಚು ಹಾಕುತ್ತಿದ್ದಾರೆ
ಸಾಯುವವನಿಗಾಗಿ
ಜೈಲಿಗೆ
ಹೋಗುವವನಿಗಾಗಿ.
- ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
15 Jul 2017, 11:45 pm
ಹಸಿರಾಗಲಿ ಚಿಗುರೊ ಬಳ್ಳಿಯ ಬಾಳಲಿ
ತಿಳಿಆಗಸದಿ ನದಿಹರಿಯಲಿ ಸುಳಿಸಿಗದೇ ಝರಿ ಝರಿಯಾಗಿ ಪಸರಿಸಲಿ ನವಜೋಡಿಯ ಹೊಂಗನಸ ಹೊಸ್ತಿಲ ಹೊಂಬಾಳಲಿ
ಆ ಬಾನಂಗಳದಿ ಸುಡುತಿರಲಿ ಸೂರ್ಯಕಿರಣ್
ಈ ಭೂಮಂಡಲದ ಕಿರಣ ತಂಪೆರೆಯಲಿ ಸರು ಮನದ ಮನೆಯ ಅಂಗಳದಿ
ಜಿನುಗೊ ತುಂತುರು ಮಳೆ ಹನಿ ಹನಿಯ
ಅರಿವ ಬಾಳಲಿ ಬೆಳಗಲಿ ಜಿಟಿಮಳೆಯ ಬೆಳದಿಂಗಳವಾ
ಇದೆಲ್ಲವ ಜರುಗಲಿ ನಿಮ್ಮಿಬರ
ಶುಭ ಗಳಿಗೆಯ ದಿನದಿ
✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
15 Jul 2017, 11:05 pm
ಇಬ್ಬನಿಯ ತಂಪಲ್ಲಿ ಇಣುಕಿಣುಕಿ
ನೋಡುತ್ತಿದ್ದಳು ನನ್ನವಳು ಜಾಜಿಮಲ್ಲಿಗೆಯಂತೆ
ಮುಂಜಾನೆ ಸೊಗಸಾದ ಸೂರ್ಯರಶ್ಮಿಯ ಬೆಳಕಲ್ಲಿ................
ನೋಡ ನೋಡುತ್ತಲೇ ಕೆಂದಾವರೆ
ಹೂವಾದಳು ನನ್ನ ನಾಯನದಲ್ಲಿ ನವ ನವೀನ ಚೈತನ್ಯ ಪಡೆದು ಕೇಸರoಟದ ಲಲಿತೆಯವಳು......
ನಸುಗೆಂಪು ಬಣ್ಣದವಳು, ಮೃದುವಾದ ಕೇಶ ರಾಶಿಯ ಹೊಂದಿರುವವಳು, ವಯ್ಯಾರದ ಮೈಮಾಟ ಉಳ್ಳವಳು ಮಾತಿನಲ್ಲೇ ಸಿಹಿ ಜೇನು ತುಂಬಿರುವವಳು ನನ್ನವಳು ಇಬ್ಬನಿಯ ಬಿಳುಪಿನಲ್ಲಿ ನನ್ನ ಮನಸ ಕದ್ದವಳು...............
ಅವಳ ಹಣೆಯಮೇಲೆ ಬಿದ್ದ ಮಂಜಿನಾ ತಿಳಿನೀರು
ಜಾರಿತೇ ಸಂಪಿಗೆಯಂತ ಮುಗಿನಮೇಲಿಂದ ತುಟಿಯಂಚಿನ ಬೆವರಜೊತೆಗೂಡಿ ಸೊಗಸಾದ ಕತ್ತನ್ನು ಮುದ್ದಾಡಿ ಮುಂಗುರಳ ಸರೆಸುತ್ತಿರುವ ಕೈಬೆರಳ ಕೈಹಿಡಿದು ಪಾದದ ಕಿರುಬೆರಳ ಮಧ್ಯೆಯಿಂದ ಭುವಿಯ ಸೇರಿತು ಬೇಗೆ ಕಳೆಯಲೆಂದು.......
- ಚುಕ್ಕಿ
15 Jul 2017, 10:27 pm
ಓ ಸ್ವರ್ಗವೇ ನೀನೇಕೆ ಆಕಾಶದಷ್ಟು ಎತ್ತರ ಇರಬಾರದೇ. ಪಾತಾಳದ ಹತ್ತಿರ... ..... ಹುಡುಕುತ್ತ ಹೋದರೆ ನಿರುತ್ತರ......??
- Naveen
15 Jul 2017, 10:14 pm
ನಿದಿರೆಯಲಿ ಸುಂದರ ಸ್ವಪ್ನ
ನೀನಾಗಬೇಕು ಗೆಳೆಯ!!
ಸ್ಮರಣೆಯಲಿ ನಿನ್ನಯ ಸುತ್ತ
ನಾ ತಿರುಗಬೇಕು ಇನಿಯ!!
ಚಿಗುರಿನ ಎಲೆ ಎಲೆ ಮೇಲೆ
ಮುಂಜಾನೆ ಮಂಜಿನ ಪ್ರೀತಿ!!
ಕಡಲಿನ ಅಲೆ ಅಲೆಯಿಂದ
ಹೊರಬಂದ ಮುತ್ತಿನ ರೀತಿ!!
ಒಲವಿನ ಪದಗಳ ಕವಿತೆಗೆ
ಕೊರಳಾದ ಸುಂದರ ರಾಗ!!
ಚಲುವಿನ ಅರಿವನು ಮೂಡಿಸಿ
ಹೊಸತಾದ ಈ ಅನುರಾಗ!!
ದೊರೆಯಲು ನೀನು ನನಗೆ
ಹೊಸತಾದ ಜೀವನ ಬೆಸುಗೆ!!
ನವಿರಾಯ್ತು ಬದುಕು ಹೀಗೆ
ನಮ್ಮ ಈ ಒಲವು ಬೆರೆತ ಗಳಿಗೆ!!
- ಪಿ.ಜಿ.ಜ್ಯೋತಿ
15 Jul 2017, 09:02 pm
ಕರವ ಮುಗಿದು
ಕೇಳುವೇ ಗೆಳತಿ
ಹಗಲು ರಾತ್ರಿ ಎನ್ನದೆ
ನನ್ಯಾಕೆ ಕಾಡುತಿ...?
ನೆನಪು ಎಂಬ ನೆಪ ಮಾಡಿ
ಸವಿಗನಸುಗಳಿಗೆ ನನ್ನನು ದೂಡಿ..
ನೀ ಮಾಡಿದೆ ಗೆಳತಿ
ಒಲವೆಂಬ ಮೋಡಿ..
ಈ ನನ್ನ ಪ್ರೀತಿ ಹೂವಿನ ದಳದಲಿ
ಹೂಳೆವ ಮಂಜಿನ ಹನಿಯಂತೆ..
ನೀಲಿಯ ಬಾನಿಗೆ ರಂಗೇರಿಸಿದ
ಅಂದದ ಕಾಮನ ಬಿಲ್ಲಿನಂತೆ..
ಪ್ರೀತಿಯಿಂದ...
ವಿಜಯಾನಂದ...
9741940305
- ವಿಜಯಾನಂದ
15 Jul 2017, 08:09 pm