Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳು

ಪಿಸುಮಾತಿನ ಸರಮಾಲೆ ಹಾಕುವಾಸೆ ನಿನ್ನ ಕೊರಳಿಗೆ
ಇದಕ್ಕಿಂತ ಚಂದದ ಕೆಲಸ ಉಂಟೆ ಏನೆಗೆ
ಎನಿತು ಚೆಂದ ನಿನ್ನ ಮಾತು
ಕೇಳುತಿರಳು ಸಮಯ ಮರೆತು
ನೀ ನೆಡೆಸು ಕನಸಿನ ವ್ಯಾಪಾರ
ಅದ ಕೊಳ್ಳುವ ನಾ ನಿನ್ನ ವರ

- pavan

13 Jul 2017, 10:44 am

ಏನೆಂದು ವರ್ಣಿಸಲಿ ನೀನೇ ಹೇಳು ಗೆಳತಿ......?

ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ..........?
ನೀನು ನನ್ನೆಡೆ ನೋಡಿ
ನಿನ್ನ ಕಂಗಳಲಿ
ಮೋಡಿ ಮಾಡಿ
ನಿನ್ನೆಡೆಗೆ ನನ್ನ
ಗ "ಮನ" ಸೆಳೆದ
ಆ ಮಧುರ ಕ್ಷಣಗಳನ್ನ...........?

ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ...........?
ಇಳಿ ಸಂಜೆಯ ಹೊತ್ತಿನಲಿ
ಬೀಸುವ ಸುಮಧುರ
ತಂಗಾಳಿಯಂತೆ ಬಂದು
ನನ್ನೊಡಲ ಸೋಕಿದ
ಸವಿಯ ನೆನಪುಗಳನ್ನ.........?

ಏನೆಂದು ವರ್ಣಿಸಲಿ
ನೀನೇ ಹೇಳು ಗೆಳತಿ............?
ನಿನ್ನ ಬರುವಿಕೆಗಾಗಿ
ನಾನು ಕಾದು ಕುಳಿತ ಕ್ಷಣವ.......?
ಯಾರಲ್ಲಿ ಹೇಳಿಕೊಳ್ಳಲಾಗದೇ
ಅನುಭವಿಸಿದ ಸಂಕಟವ........?

ಮತ್ತೆ ಮತ್ತೆ ಹೇಗೆ ಬರೆಯಲಿ
ನೀನೇ ಹೇಳು ಗೆಳತಿ...............?
ನನ್ನೆದೆಯು ನಿನ್ನ ನೆನಪಿಗೆ
ಮಿಡಿಯುತಿದೆಯೋ........?
ಅಥವಾ
ಕೊರಗುತಿದಿಯೋ.........?
ಒಂದೂ ಅರ್ಥವಾಗದ ಚಡಪಡಿಕೆಯಾ........?

ಏನೆಂದು ಸಮಾಧಾನಿಸಲಿ
ನೀನೇ ಹೇಳು ಗೆಳತಿ.........?
ಎದೆಯಲ್ಲಿ ಜಾಗವಿದ್ದರು
ಎದುರಲ್ಲಿ ನಿಲ್ಲಲಾಗದ.........?
ಎದುರಿಗಿದ್ದರು ಕೈ ಸನ್ನೆಯಲಿ
ಮಾತನಾಡುವ ಈ ಮನಸಿನ
ಮೂಕ ರೋದನವ..........?

ಹೇಗೆಂದು ಕಟ್ಟಿ ಹಾಕುವುದು
ನೀನೇ ಹೇಳು ಗೆಳತಿ..........?
ಮರೆಯಲಾಗದ ನಿನ್ನ
ಸವಿ-ನೆನಪುಗಳ ಸೆಳೆತವನ್ನ…........!
ಕೊಲ್ಲಲಾಗದ ನನ್ನ
ಕನಸುಗಳ ಮಿಡಿತವನ್ನ...............?

ಏನೆಂದು ಅರ್ಥೈಸಲಿ
ನೀನೇ ಹೇಳು ಗೆಳತಿ..........?
ಮರೆತರು ಕಣ್ಣ ಮುಂದೆಯೇ
ಬರುವ ಈ ನಿನ್ನ ಮುಖವನ್ನ.............?
ಪದೇ ಪದೇ ನಿನ್ನನೇ ನೆನಪಿಸಿ ನೆನಪಿಸಿ
ಕಾಡೋ ಈ ವಿರಹವನ್ನ........?

ಮನಸ್ಸಿನ ಮಾತುಗಳು
ಇಷ್ಟೆಲ್ಲಾ ಇದ್ದರು
ಯಾರಲ್ಲೂ
ಹೇಳಿಕೊಳ್ಳಲಾಗದೆ ನಾನು
ಅಲೇಮಾರಿಯಂತೆ
ಅಲೆದಾಡುವಾಗ..........!
ನಿನ್ನ ನೆನಪೇಂಬ
ತುಂತುರು ಮಳೆಯ
ಸೋನೆ ಸುರಿದು
ಪದಗಳ ಅಲೆಗಳಾಗಿ
ಭೋರ್ಗರೆದು ಧುಮ್ಮಿಕ್ಕಿ
ಹರಿಯುತಿದೆ ನೋಡು ಗೆಳತಿ
ನನ್ನೊ (ಲವಿನ) ಡಲ ಕಣಿವೆಯಲಿ…....

ಪ್ರೀತಿಯಿಂದ..
ವಿಜಯಾನಂದ..
9741940305

- ವಿಜಯಾನಂದ

13 Jul 2017, 10:00 am

ಸ್ನೆಹದ ಮೆಲೆ ಅಪನಂಬಿಕೆ

( ದುಃಖ. )

ಸ್ನೇಹದಮೇಲೆ ಪರರೆಂಬ ಕಲ್ಪನೆಯು ಮನದಲ್ಲಿ ಅಡಿ ಇಟ್ಟು ಬಂದಾಗ.
ನನ್ನವರು ಎಂಬುವವರು. ಬಾಗಿಲ ಹಿಂಬದಿಯಿಂದ ಹೊರಟ್ಯಾರು.
ತನ್ನವರನ್ನು ಕಳೆದು ಕೊಂಡಾಗ. ಮನಕ್ಕಾಗುವ ದುಃಖ. ಚಾಪೆ ಹಾಕಿ ಮಲಗಬಹುದು .

ಮರೆಯ ಬೇಡಿ ನನ್ನ ಮ್ರುದು ಮನಸುಗಳೇ.
ಈ ಓಳ್ಳೆಯ ವಾಕ್ಯವನ್ನು.
ಸುಡಬೇಡಿ ನಂಬಿಕೆಯನ್ನು. ಕೋಪವೆಂಬ ಜ್ವಾಲೆಯಲ್ಲಿ..
ಆಲಿಂಗಿಸಿಕೊಳ್ಳಿ ನಿಮ್ಮ ಸ್ನೇಹಿತರನ್ನು ನಿಮ್ಮ ಮುದ್ದಾದ ಪ್ರೀತಿಯೆಂಬ ಕಡಲಿನಲ್ಲಿ

( ಸಂತೋಷ್ / ಜೀತು )

- ಸಂತೋಷ್//ಜೀತು

13 Jul 2017, 08:58 am

ಮನಸಿನ ಕಣ್ಣಿರು..............

ಮರೆಯಾಗದ ಮನಸಿನ ಕಣ್ಣೀರಿಗೆ
ಕನಸ್ಸೆಂಬ ಕಂಬಲಿಯೊದೆಸಿ ನಾನಸಾಗುತ್ತೆಂಬ ಆಸೆ ತೋರಿಸಿ ಮಲಗಿಸುವೆ ನಾಳೆ ಎದ್ದು ನನ್ನ ಮರಳಿ ನಿಂದಿಸದೆ ಮತ್ತೊಮ್ಮೆ ನಾನು ಕಣ್ಣ ತೆರೆಯಬಾರದೆಂದು ದೇವರಲ್ಲಿ ಬೇಡುವೆ.......

- ಚುಕ್ಕಿ

12 Jul 2017, 10:40 pm

ಹುಸಿಯ ನುಡಿದಿಲ್ಲವೇ ಗೆಳತಿ.......

ಹುಸಿಯ ನುಡಿದಿಲ್ಲ ಗೆಳತಿ
ನಿನ್ನ ಅಗಲಿ ಇರಲಾರೆನೆ ತಿಳಿಯೇ
ನನ್ನೊಳವೆ............

ಕರ್ಪುರದ ಗೊಂಬೆ ನೀನು ಅಗ್ನಿಯ
ಶಾಖಕ್ಕೆ ತಾಗದಂತೆ ನನ್ನ ಕಣ್ಣಲ್ಲಿನ
ತಂಪಲ್ಲಿ ಕೂಡಿಟ್ಟು
ನಿನ್ನ ನೋಡಿಕೊಳ್ಳುತ್ತಿರುವೆ...........

ಯಾರಿಗೂ ನೀನೊಲಿಯ ಬಾರದೇ ನನ್ನ ತೊರೆದು ಈ ಜಗದಲ್ಲಿ ಸ್ವಾರ್ಥವಾದರು ತಿಳಿಯೇ ಅತಿಯಾದ ಪ್ರೀತಿಯೆಂದಾದರು ಅರಿಯೇ ನನ್ನ ಮನದ ಮಲ್ಲಿಗೆ..............

ಹುಸಿಯ ನುಡಿದಿಲ್ಲವೇ ಗೆಳತಿ ನಿನ್ನ ಪ್ರತಿಯೊಂದು ಕ್ಷಣವೂ ನನಗೆ ಮಿಸಲಿಡೆಂದು ಮನವು ದಿನವೂ ನಿನ್ನ ಬೇಡುತ್ತಿದೆ ಚೆಲುವೆ........

ನಿನಗೆ ಇರಬಹುದು ನೂರಾರು ಪರಿಚಿತರು ನಿನ್ನ ಸುತ್ತಲಿನ ವಾತಾವರಣದಲ್ಲಿ ಆದರೆ ನನಗೆ ನಿನ್ನ ಬಿಟ್ಟು ನನ್ನ ನೆರಳು ಕೂಡ ನನ್ನದಾಗಿ ಕಾಣಲಾರದೆ ಸಂಗಾತಿ...............

ಕಲ್ಲಿನ ಕೋಟೆಯಂತ ನನ್ನ ಮನದಲ್ಲಿ ಮೃದುವಾದ ಹೂವಾಗಿ ಅರಳಿರುವೆ ನೀನು ಪ್ರೀತಿಯ ಬಂಧನವನ್ನು ಬೆಸೆದು................

ಹುಸಿ ನುಡಿದಿಲ್ಲವೇ ಗೆಳತಿ ನೀನೇ ನನ್ನ ಹೃದಯದೊಡತಿ ಇಂದಿಗೂ ಎಂದಿಗೂ ನಾನೆಂಬ ಅಚ್ಚಳಿಯದ ಕನಸು ನನಸಾಗಿ ಇರುವವರೆಗೂ..........

- ಚುಕ್ಕಿ

12 Jul 2017, 10:10 pm

ಮನದ ಮಾತುಗಳು...........

ಕಣ್ಣುಗಳು ಮಲಗಿದ್ದರೇನು ಪ್ರಯೋಜನ ಮನಸು ಮಲಗಿದ್ದಾರೆ ತಾನೇ ಸಂಪೂರ್ಣ ನಿದ್ರೆ
ಅದು ಎಂದಿಗೂ ಸಾಧ್ಯವಿಲ್ಲ ಸಾಯೋವರೆಗೂ........

ಕೆಲಬಯಸುವ ಧ್ವನಿ ಕಿವಿಗಳಿಗೆ
ಎಂದಿಗೂ ಕೇಳುವುದಿಲ್ಲ..........
ಆ ಸ್ವರವ ಬಿಟ್ಟು ಮನಸು ಯಾವ ಸದ್ದನ್ನು ಒಪ್ಪುವುದಿಲ್ಲ ಆದರೂ ಎಲ್ಲರ ಮಾತು ಕೇಳಲೇ ಬೇಕು ನಾವಿನ್ನೂ ಜೀವಂತವಾಗಿದಿವೆಂದು ತಿಳಿಸಕ್ಕೆ ಶಾರೀರಿಗವಾಗಿ...............

ಎಲ್ಲರ ನೋವು ತಿಳಿಯೇ ಮನಸೇ ಎಂದು ಹೇಳುವ ಮೊದಲು ನಿನ್ನ ನೀನು ಅರಿಯೇ ಎಂದು ಹೇಳಿಕೊಡಿ ಬುದ್ದಿಯಿಲ್ಲದ ಮನಸ್ಸಿಗೆ..........

- ಚುಕ್ಕಿ

12 Jul 2017, 09:52 pm

ಒಮ್ಮೆಯಾದರು ಕೈಚಾಚು

ಚಂದದ ಕೈಯಿಂದ ಕೈಚಾಚು
ಅಂದದ ಚನ್ನಿಗ ನಿನಗಾಗಿ ಕಾಯುತ್ತಿರುವ
ಒಲವೆ ಚಂದ ನಮ್ಮಿಂಬ್ಬರ ಮನಸ್ಸುಗಳಿಗೆ ಆನಂದ
ಹಗಲಿನಲ್ಲಿ ಕೈಚಾಚು
ಇರುಳಿನಲ್ಲಿ ನನ್ನ ಬಾಚು

ನಿನ್ನವನು ಸೂತ್ರಇಲ್ಲದ ಪತಂಗದ ರೀತಿ
ಗಾಳಿ ಬೀಸಿದಕಡೆ ಹಾರಾಡಲು ಬಯಸುತ್ತಿರುವನು
ಸೂತ್ರವನ್ನು ಕಟ್ಟಲು ಕೈಚಾಚು..........................
ಆಸೆಯೇಕೈಚಾಚು..
ನಿರಾಸೆಯನ್ನು ತಳ್ಳಿನನ್ನಬಾಚು.......

- ak

12 Jul 2017, 09:23 pm

ಸಿದ್ಧರಾಗಿ ಬನ್ನಿ ಈ ಭುವಿಗೆ................

ಸಿದ್ಧರಾಗಿ ಬನ್ನಿ ಈ ಭುವಿಗೆ ಮುದ್ದು
ಮುಖದ ಹೆಣ್ಣುಮಕ್ಕಳೇ...............
ಕಾದು ಕುಂತಿವೆ ಕ್ರೂರರ ನೂರಾರು
ಕಣ್ಣುಗಳು ನಿಮ್ಮನ್ನು ನುಂಗಳೆಂದು...........

ಬಿರುಕು ಬೀಳದ ಮುಗ್ದವಾದ
ಮನಸುಗಳೊತ್ತು ಜೀವನದಲ್ಲಿ ನೂರಾರು ಆಸೆಗಳೊತ್ತು ಬದುಕದಿರಿ ನೀವೆಲ್ಲಾ ನನ್ನಂತೆ.........
ಒಂದು ಆಸೆಯು ಹಿಡಿರಲಾರದು ನಿಮ್ಮ
ಅಪೇಕ್ಷೆಯಂತೆ.................

ಕೈಗೊಂಬೆಗಳಾಗುವಿರಿ ನೀವು ಹೆತ್ತವರಿಗೆ, ಒಡಹುಟ್ಟಿದವರಿಗೆ,ಸ್ನೇಹಿತರಿಗೆ ಸಮಾಜಕ್ಕೆ......... ನಿಮ್ಮನ್ನು ಮದುವೆಯೇನೆಂಬ ಬಂಧನದಲ್ಲಿ ಕಟ್ಟಿಹಾಕಿದ ಪತಿಗೆ ಕೊನೆಗೂ ನೀವು ಹೆತ್ತ ಮಕ್ಕಳಿಗೆ..................

ಯಾರಿಗಾಗಿ ನಿಮ್ಮ ಜೀವನ ಎಲ್ಲರಿಗೂ ನೀವು ಬೇಕು ನಿಮ್ಮ ನೋವಿನಲ್ಲಿ ಕಣ್ಣಿರುಕುಡ ಕಡೆವರೆಗೂ ನಿಲ್ಲುವುದಿಲ್ಲ...............
ಚಿತೆಯಲ್ಲಿಯೂ ಸಹ ವ್ಯಥೆಯಿಂದ
ಸುಟ್ಟು ಬೂದಿಯಾಗುವಿರಿ ಸ್ವಾತಂತ್ರ್ಯವಿಲ್ಲದೆ.........

ಅಮ್ಮ ನೀನು ಅಕ್ಕ ನೀನು ತಂಗಿ ನೀನು ಸ್ನೇಹಿತೆಯು ನೀನು ಹೆಂಡತಿಯೂ ನೀನು ಮತ್ತೆ ಕಾಲ್ಗೆಜ್ಜೆ ತೊಟ್ಟು ಮನೆಯೆಲ್ಲಾ ಓಡಾಡುವ ಮಗಳು ನೀನು ಹೆಣ್ಣೇ.....................

ಪ್ರೀತಿಯೆoಬ ಹಣತೆಯಲ್ಲಿ ಸ್ವಾರ್ಥವೆಂಬ ಬತ್ತಿಯ ಹಚ್ಚಿದ ಪುರುಷನಿಗೆ ಬೆಳಕು ನೀನು ಹೆಣ್ಣೇ ನಿನ್ನಲ್ಲೇ ನೀನು ಸುಟ್ಟು ಕತ್ತಲೆ ತುಂಬಿದ ಮೂಲೆ ಮೂಲೆಗೆ ಕಾಂತಿ ಬೀರುವ ಜ್ಯೋತಿ ನೀನು ಹೆಣ್ಣೇ.............

ಕರಗೋ ಕನಸು ನೀನು ಕೊರಗೋ ಚಿಂತಾ ಕಾಂತೆಯು ನೀನು ಬಿಸುವ ಬಿರುಗಾಳಿ ನೀನು ತಣ್ಣನೆಯ ತಂಗಾಳಿ ನೀನು ಮಾಯಾ ಲೋಕದ ಮೋಹಿನಿಯು ನೀನು ದೇವಲೋಕದ ಅಪ್ಸರೆಯು ನೀನು ಹೆಣ್ಣೇ...............

ಸಕಲವೂ ನಿನ್ನಿಂದಲೇ ಆರಂಭ ನಿಷ್ಕಾಳವೂ ನಿನ್ನಿಂದಲೇ ಪ್ರಾರಂಭ ಸಿದ್ಧವಾಗಿ ಬಾ ನೀನು ನೂತನ ಪ್ರಪಂಚಕ್ಕೆ ನಿನ್ನ ಎಂದಿಗೂ ಅರಿಯದ ಜನರ ದಾರುಣವಾದ ದೊರಣಿಯ ಜಗಕ್ಕೆ ಹೆಣ್ಣೇ ಎಂದಿಗೂ ಮಣ್ಣಲ್ಲೆ ಮರೆಯಾಗಿರುವ ಹೊನ್ನೇ......

- ಚುಕ್ಕಿ

12 Jul 2017, 09:18 pm

ಹೇ ಹೃದಯಾ

ಗೆಳತೀ...ನೀನೆಂದರೆ...?
ಕಾದು ಕಾವಲಿಯಾದ ಮನಸಿಗೆ..ಹೊಂಗೆ ತಂಪು....!!
ಇರುಳ ಕರಾಳತೆಯಲ್ಲಿ...ಕಳೆದು ಹೋಗುವ...ಕನಸು...!!
ಕಲ್ಪನೆ, ಪರಿಕಲ್ಪನೆ ಬದಲಾವಣೆ ! ನಾಳೆಯ ನಿರೀಕ್ಷೆ,..ಪ್ರತೀಕ್ಷೆ....!!
ಮುಂಗುರುಳು ಮುಂಜಾನೆಯ...ಮಂಜ ಹನಿ...!!
ಕೇಳಿದಷ್ಟೂ ಕೇಳಬೇಕೆನಿಸುವ...ಕಹಾನಿ...!!
ನನ್ನೊಳಗಿನ ತುಮುಲ...ಹೊಯ್ದಾಟ...!!
ತನ್ನ ಅಸ್ತಿತ್ವಕ್ಕಾಗಿ...ಮಾತಿನ ಮೊರೆ ಹೋದ..ಪರಾವಲಂಬಿ ಮೌನ....!!
ಭರವಸೆಯ ಆಲಿಂಗನ...ಕಣ್ಣೋಟದ ಸಿಹಿ ಚುಂಬನ…ಒಂಟಿ ಕತ್ತಲ ಏಕಾಂಗಿತನ....!!
ಮತ್ತೆ..ನನ್ನೀ ಜೀವನ..! !!

- shankarpaschapur@gmail.com

12 Jul 2017, 08:07 am

ಮೌನ ಕನಸು

ನನ್ನ ಎದೆಯಾಳದ ಕನಸುಗಳಿಗೆ ನೀನೆ ಒಡಯ
ನನ್ನ ಮೌನದ ಪ್ರೀತಿ ಕಾಣಲಿಲ್ಲವೆ
ಸಾಗಿದ ನೆನಪುಗಳ ಒತ್ತು ಒಂಟಿಯಾಗಿ ಸೋತೆನು
ಇಲ್ಲದ ಕನಸುಗಳ ಬಾನೆತ್ತರಕ್ಕೆ ಚಿಮ್ಮಿಸಿ
ವಸಂತಗೀತದ ಮೋಹಕ್ಕೆ.ಬಂದಿಯಾದೆನು
ಬಾ ಇನಿಯ ನಿನ್ನ ಬಿಗಿ ತೋಳುಗಳ ನಡುವೆ ಬಂದಿಸು
ನಿನ್ನ ಬಿಸಿಯುಸಿರಿಂದ ತುಟಿಗಳಿಗೆ ಚುಂಬಿಸು
ಕಾದ ಹೃದಯ ತಂಪಾಗುವ ಹಾಗೆ ಹಣೆಗೆ ಪ್ರೀತಿ ಮುತ್ತ ಸಿಂಪಡಿಸಿ ಎದೆಗೆ ಒರಗಿಸಿಕೊ..

- ರವಿಕುಮಾರ

12 Jul 2017, 07:59 am