Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಉಚಿತ ಪ್ರವೇಶ

ನೀ ಬಂದೆ ನನ್ನ ಕನಸಲ್ಲಿ
ನನ್ನ ಅನುಮತಿ ಇಲ್ಲದೆ
ತುಂಬಿದೆ ಬೆಳದಿಂಗಳು ಮನದಲ್ಲಿ
ಚಂದ್ರನ ಅವನತಿ ಇಲ್ಲದೆ
ಆ ಬೆಳದಿಂಗಳಲ್ಲಿ ಮಿಂದು ಬಂದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಬಣ್ಣಗಳಿಗೆ ಕೊನೆಯಿಲ್ಲದ ಲೋಕ
ಬಯಕೆಗಳು ಕೈಗೂಡುವ ಲೋಕ
ಕನಸುಗಳು ನನಸಾಗುವ ಲೋಕ
ಎಲ್ಲರಿಗೂ ಬಲು ಇಷ್ಟವಾದ ಆ ಕನಸಿನ ಲೋಕ
ನನ್ನ ಕನಸಿಗೆ ಬಣ್ಣ ತುಂಬುವುದಾದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಬಾಡುವುದಿಲ್ಲ ಹೂಗಳು ಅಲ್ಲಿ
ಚಿಟ್ಟೆಗಳ ಓಟ ನಿಲ್ಲದು ಅಲ್ಲಿ
ಸೂರ್ಯನ ಶಾಖ ಮುದ್ರಿಸದು ಅಲ್ಲಿ
ಸಂತೆ-ಗದ್ದಲವಿಲ್ಲ
ಭ್ರಮೆ-ವಾಸ್ತವದ ಅರಿವಿಲ್ಲ
ಈ ಕನಸನ್ನು ನಿಜವೆಂದು ನಂಬಿ ಬಂದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ


ಒಲವು ಕುಣಿದು ಕುಪ್ಪಳಿಸುವ ಪ್ರೇಮಲೋಕ
ಸಾವು ಸವರಿದರೂ ತಿಳಿಯದ ಮಾಯಾಲೋಕ
ಕಾದಿರುವೆ ನಲ್ಲ ನೂರು ಮಾತನ್ನಾಡಲು
ಮರೆತಿರುವೆ ಎಲ್ಲಾ ನೀ ನನ್ನ ನಗಿಸಲು
ಕನಸುಗಳು ಮತ್ತೆ ಮರುಕಳಿಸುವ ಬಯಕೆಗಳು
ಸಾವಿರ ಮುತ್ತಿಟ್ಟು ನಂಬಿಕೆಯ ನೆರಳಾಗಿ ಕೂನೆವರೆಗೂ ನನ್ನೊಡನೆ ಇರುವುದಾದರೆ ಮಾತ್ರ
ನಿನಗಿಲ್ಲಿ ಉಚಿತ ಪ್ರವೇಶ

- Jayanthi

08 Jul 2017, 09:08 am

ಆಷಾಢ !

ನಮ್ಮ ಕಾಲದಾಗ
ಬೆಳಿಗ್ಗೆ ಸಂಜೆ ಎನ್ನದೆ ಒಂದೇ
ಸಮನೆ ತುಂತುರು
ಗಡಗಡ ನಡಗುವ ದೇಹ
ಗಾಳಿ ಮಳೆ ನಡುವೆ ಗುದ್ದಾಟ

ಆದರೀಗ ಕಾಲವೇ ಬದಲಾಗಿದೆ
ಬಿಸಿಲ ಮಳೆಯ ಚಳಿಯ ಕಾಲ
ಕಂಡು ಹಿಡಿಯಲು ಸಾಧ್ಯವಿಲ್ಲ
ಮಾರ್ಪಟ್ಟಿದೆ ಪ್ರಕೃತಿ ನಿರಂತರ
ಮಾನವನ ಅವಾಂತರಗಳಿಗೆ
ಇದು ಬರೀ ಕಲಿಗಾಲ

- sathyabapuji

08 Jul 2017, 12:42 am

ಅನಿವಾರ್ಯ

ಪ್ರೀತಿ ತೊರೆದು ಒಲವು ಬಚ್ಚಿಡಲು ಅನಿವಾರ್ಯ
ಜೋತೆಗಿದ್ದು ದೂರ ‌ಬಾಳುವುದು‌ ಅನಿವಾರ್ಯ
ಮಾತು ಬಂದರು ಸನ್ನೆ ಮಾಡುವ ಅನಿವಾರ್ಯ
ಕಷ್ಟವಾದರು ಸಹಿಸಿಕೊಳ್ಳಬೇಕಾದ ಅನಿವಾರ್ಯ..

ದುಃಖವಿದ್ದರು ಸಮಾಜದೆದುರು ನಗುವ ಅನಿವಾರ್ಯ
ಇಷ್ಟವಿದ್ದರು ಕಳೆದುಕೊಳ್ಳುವ ಅನಿವಾರ್ಯ
ಪ್ರಾಮಾಣಿಕವಾಗಿರ ಬೇಕೆಂದರು ಸುಳ್ಳು ಹೇಳುವ
ಅನಿವಾರ್ಯ
ಅವಶ್ಯವಾಗಿರುವುದನ್ನು ಗಳಿಸಲು ಸಂಬಂಧಗಳನ್ನು ನಾಶಮಾಡಿಕೊಳ್ಳುವ ಅನಿವಾರ್ಯ..
- aish

- aish

07 Jul 2017, 10:23 pm

ಶುಭಸಂಜೆ

ಶುಭಸಂಜೆ

ಮೊಡದ ಮರೆಯಲ್ಲಿ.ಸಿಡಿಲೊಡೆಯುತಿದೆ ಅದರ ನಡಿವಿನಲಿ.
ಮಿಂಚೊಂದು ಹಾದು ಹೊಗುತಿದೆ ಈ ಕ್ಷಣದಲ್ಲಿ.
ತುಂತುರು ಮಳೆ ಹನಿಯು ಮೈ ಸೊಕುತಿದೆ ಇ ಧರೆಯಲ್ಲಿ.
ನಾ ನಡೆಯುತಿರುವೆ ಅದರ ನಡುವಿನಲಿ .
ಇ ಮುಸ್ಸಂಜೆ ಹೊತ್ತಿನಲಿ.

ನನ್ನ ಗೆಳೆಯರಿಗೆ ಹೆಳುತಿರುವೆ ನಾ ಇ ಕ್ಷಣಲ್ಲಿ.
ಜಿನುಗುತಿರುವ ಮಳೆಯಲ್ಲಿ .ಅವರನ್ನು ನೆನೆಯುತಿರುವೆ ನನ್ನ ಮನದಲ್ಲಿ.
ಶುಭಕೊರುತಿರುವೆ ಇ ಸಂಜೆಯಲಿ
ಶುಭಸಂಜೆ ಗೆಳೆಯರೆ

( ಜೀತು )

- ಸಂತೋಷ್//ಜೀತು

07 Jul 2017, 10:04 pm

ಭಯವಿನ್ನು ಹೋಗಿಲ್ಲ...........

ಭಯವಿನ್ನು ಹೋಗಿಲ್ಲ ಈ ಜನರ
ಕಟುವಾದ ಮಾತುಗಳನ್ನು ಕೇಳಿ...........

ಭಯವಿನ್ನು ಹೋಗಿಲ್ಲ ಸುಡುಗಾಡಲ್ಲಿ ಸುಟ್ಟ ದೇಹಗನ್ನು ಕಿತ್ತು ತಿನ್ನುವ ನರ ರೂಪ ರಾಕ್ಷಸರನ್ನು ನೋಡಿ...................

ಭಯವಿನ್ನು ಹೋಗಿಲ್ಲ ನಂಬಿಕೆಯ ನೆಪದಲ್ಲಿ ನನ್ನ ನೂರು ನೋವುಗಳಿಗೆ ಗುರಿಮಾಡಿದ ಜನರೆಂಬ ಜಾನುವಾರುಗಳನ್ನು ನೋಡಿ..........

ಭಯವಿನ್ನು ಹೋಗಿಲ್ಲ ಕತ್ತಲಲ್ಲಿ ಕಾಣುವ ಬಾವಲಿಯನ್ನು ನೋಡಿಯಲ್ಲ ಜನರ ಮಧ್ಯ ನಡೆಯುವ ಮುಖವಾಡವೋತ್ತ ನರಿಗಳನ್ನು ನೋಡಿ................

ಭಯವಿನ್ನು ಹೋಗಿಲ್ಲ.............

- ಚುಕ್ಕಿ

07 Jul 2017, 07:29 pm

ನೀರೆ ನೀರೆ ಬಾರೆ ಬಾರೆ....

ನೀರೆ ನೀರೆ ಬಾರೆ ಬಾರೆ
ನೀನಿರದ ಈ ಹೃದಯ ನುಚ್ಚುನೂರೆ
ಒಂದು ‌ನಗುವ ತೋರಲು ಬಾರೆ
ನಿನ್ನ ಒಲವಿನ ಸಿಹಿಯನು ತಾರೆ
ಬಾರೆ ಬಾರೆ ನನ್ನೊಲವಿಗೆ ಪ್ರೀತಿಯ ತೋರೆ

ನೀನೆ ನನ್ನ ಪ್ರೇಮಿ ನೀರೆ ನೀರೆ
ನನ್ನೊಲವ ಅಂಗಳಕೆ ನೀನೆ ತಾರೆ
ನೀನಿರದೆ ಕತ್ತಲು ನನ್ನೊಲವ ಅಂಗಳ ಬಾರೆ
ನೀನೆ ತಾರೆ ತಾರೆ ನನ್ನೆದೆಗೆ ಬೆಳದಿಂಗಳ ತಾರೆ

ನೀನಿರದೆ ಕಣ್ಣ ತುಂಬಾ ನೀರ ಧಾರೆ
ಈ ಪ್ರೇಮಿ ಕಣ್ಣ ನೀರ ಒರೆಸಲು ಬಾರೆ
ಬದುಕೆ ಕಾಣದಾಗಿದೆ, ನೀನಿರದೆ ಮನಸೆ
ದಾರಿ ತೋರಿ ಬಂದು ಕೈ ಹಿಡಿದು ನಡೆಸೆ

ನೀ ನನ್ನ ಕೈಯಿಂದ ಜಾರೆ
ನೋವೆ ನನ್ನ ಆವರಿಸಿದೆ ನೀರೆ
ನನ್ನ‌ ಮೌನದ‌ ನೋವಿಗೆ ಮಾತಾಗಿ ಬಾರೆ
ನಾನೆಂದು ನಿನಗೆ ಕಣ್ಣೀರ ತೋರೆ

ಬಂದು ನಿನ್ನ ಪ್ರೀತಿಯ ಸಾರೆ
ನೀರೆ ನೀರೆ ಬಾರೆ ಬಾರೆ
ನಿನ್ನ ಪ್ರೀತಿಯ ತೋರೆ
ಈ ಪ್ರೇಮಿಯ ಉಳಿಸಲು ಬಾರೆ

- ಶ್ರೀಕಾವ್ಯ

07 Jul 2017, 07:23 pm

ಭರವಸೆಯ ಬೆಳಕು

ಕನಸಿನ ಹನಿಯೊಂದು ಕಣ್ಣಿನಿಂದ ಜಾರುವ ಸಮಯ

ಕಾಗದದೋಣಿಯಲ್ಲಿ ಕುಳಿತು ಹೊರಟಿವೆ

ಅಂಬಿಗನಿಲ್ಲದ ಜೀವನದಲ್ಲಿ ನಂಬಿಕೆಯ ಸಾಗರದಲ್ಲಿ

ಭರವಸೆಯ ನೆನಪುಗಳ ಸರಮಾಲೆಯ ಹೊತ್ತು ಹೂರಟಿರುವೆ

ಎಲ್ಲಿಗೆ ಎಂದು ಕೇಳದೆ
ದಯೆ ತೋರು ಭಗವಂತ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:40 pm

ತಾಯಿಯ ಆಕ್ರಂದನ

ಹೇಳಿ ಹೋಗಬಾರದಿತ್ತೆ ಕೂಸೆ
ತಾಯಿಯ ಮಮತೆಗಿಂತ
ಪ್ರೀತಿಯ ವ್ಯಾಮೋಹ ಹೆಚ್ಚು ಆಯಿತೇ ?

ನೀ ಬಯಸಿದವಳನ್ನು ನಾ ಮಗಳಾಗಿ ನೋಡಿಕೊಳ್ಳಲಾಗದವಳೇನು
ನನ್ನ ಹೃದಯ ಬಡಿತ ಗಿಂತ
ಪ್ರೀತಿಯ ಮಿಡಿತ ಮಿಗಿಲಾಯಿತೇ ?

ನಿನ್ನ ಅಪ್ಪನ ಆಕ್ರೋಂದನ ನಾ ಹೇಗೆ ಸಮಾಧಾನ ಮಾಡಲಿ ಕೂಸೆ
ಒಡಹುಟ್ಟಿದವರ ಆಸೆಗಳಿಗೆ ತಣ್ಣೀರು ಎರಚಿ ಹೊರಟು
ಹೋಗುವ ಮುನ್ನ ಅರೆಕ್ಷಣ ಯೋಚಿಸಬಾರದಿತ್ತೇ ಕೂಸೆ ?

ಮುಪ್ಪಿನಲ್ಲಿ ನೀನೆ ಆಸರೆಯಾಗುವೆಂದು ಹಂಬಲಿಸಿ
ಕಷ್ಟಗಳ ಮರೆಮಾಚಿ
ಸದಾಕಾಲ ನಿನ್ನ ನಗು ಬಯಸುತ್ತೀದೆ
ನೋವುಗಳಿಂದ ಸವೆದಿರುವ ಮನಕೆ
ಮತ್ತಷ್ಟೂ ನೋವಿನ ಕೊಳ್ಳಿ ಇಟ್ಟು ಹೋಗುವ ಮುನ್ನ ಒಮ್ಮೆ ಯೋಚಿಸಬಾರದಿತ್ತೇ ಕೂಸೆ ?

ಮತ್ತೆ ಬಯಸಿರುವೆ ನನ್ನ ಮಡಿಲಲ್ಲಿ ಹುಟ್ಟಿ ಬಾ ಕೂಸೆ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:35 pm

ಮದುವೆ ಆಗದವರ ಬಾಧೆ

ಇನ್ನೂ ಕೂಡಿಬಾರದ ಕಂಕಣಭಾಗ್ಯ
ಕರಿಮಣಿ ಕಟ್ಟುವ ಕನಸ್ಸು ಕನವರಿಸುತ್ತಿದೆ
ಬ್ರಹ್ಮ ಹಣಿದ ಮೂರು ಗಂಟಿಗಾಗಿ
ನಿಧಾನವಾಗಿ ನೆಡೆಯುತ್ತಿದೆ ಬಾಳಿನ ನಂಟು

ಎಲ್ಲಿ ಹೋದರು ಉತ್ತರಸದೆ ಆಗದು ಯವ್ವನದ ಅಂಟು
ಮೌನವಾಗಿ ಸಾಗುತಿದೆ ಕಾಲ

ಸಂಬಂಧಗಳು ಬೆಸೆಯುವ ಮದುವೆಯ ಒಲವಿನ ಕರೆಯೋಲೆಗೆ
ಕಾಯುತ್ತಿರುವೇ ನನ್ನ ನೆಚ್ಚಿನವರಿಗಾಗಿ
ಬೇಗ ಕೂಡಿ ಬರಬಾರದೇ ಆ ಘಳಿಗೆ

ಎ ಜಿ ಶರಣ್

- ಎ ಜಿ ಶರಣ್

07 Jul 2017, 05:32 pm

ಮೌನತುಂಬಿರುವ ಪ್ರಶ್ನೆಗಳು...!!

ಗೆಳತಿ...!!
ನಿರಂತರವಾಗಿ
ಬೀಡು ಬಿಡುತ್ತಿವೆ,
ನನ್ನ ಬರಡು ಹೃದಯದಲ್ಲಿ
ಉತ್ತರವಿಲ್ಲದ ನಿನ್ನ ಎಷ್ಟೋ,
ಮೌನತುಂಬಿರುವ ಪ್ರಶ್ನೆಗಳು...!!

- Kanakamurthi

07 Jul 2017, 01:00 am