Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
- Shridevi
14 Jan 2026, 07:43 am
ಕತ್ತಲ ನಿಟ್ಟುಸಿರು...
ನಿನ್ನ ಬೆತ್ತಲೆ ಬೆನ್ನಮೇಲೆ
ಮುತ್ತಿಟ್ಟು ನನ್ನ ತಾಜಾ ಕನಸು
ನನಸಾಗಲಿಯೆಂದು
ಆಶಿಸುತ್ತೇನೆ ಹುಡುಗಿ
ಪ್ರತಿ ನಿದೀರೆಗೂ
ನಿನ್ನ ನೆನಪೊಂದನೇ
ಸ್ಖಲಿಸೋ ಅಮಾಯಕ
ನಾನೀಗ ಪೋಲಿಯೆನ್ನದಿರು
ತುಟಿಕಚ್ಚುತ್ತೇನೆ
ಒಂದಿಷ್ಟು ತಪ್ಪುಗಳಾಗಲಿ
ನಿನ್ನವನೆಂಬುದಕ್ಕೆ ಮುನ್ನಿಸಿಬಿಡು
ಪರಮಪಾಪಿಯ ಪ್ರೇಮಕ್ಕೆ
ಜಗದ ಹಂಗು
ಬೇಕಾಗಿಲ್ಲ ಇವಳೇ
ಬೇವರುಗಳನ್ನೆಲ್ಲಾ
ಅದಲು ಬದಲು ಮಾಡಿಕೊಳ್ಳೋಣ
ಪರಿಪೂರ್ಣ ನಿಶ್ಯಬ್ದಲಿ
ನಿನ್ನ ನಿಟ್ಟುಸಿರಿಗೆ ಕಿವಿಯಾಗುತ್ತೇನೆ
ಜಗದ ಕತ್ತಲಿಗೆ
ಪ್ರೇಮದ ಬೆಳಕನಿಡಿವ
ನಾವಿಕ ನಾನು ಹಾಗಾಗಿ
ನಮ್ಮ ನಡುವೆ
ಮರೆಯಾಗದಿರಲಿ
ನಾಚಿಕೆ ತುಂಡಡುಗೆಯು ಸಹ
ನಾ ನಿನ್ನಲಿ ಕಳೆದುಹೋಗುವಾಗ
ಮರೆಯುತ್ತೇನೆ ನನ್ನನ್ನೇ
ಬರಸೆಳೆದುಕೋ ಬಿಗಿದಪ್ಪಿ
ಲೇ ಇವಳೇ
ನೀ ಅಷ್ಟು ಮಾತ್ರ
ಕಾಡುವವಳಾಗಿದ್ದಿ
ನನ್ನನ್ನು..!
Instagram:- unique_abhyaa
- abhi.s.j
11 Jan 2026, 06:45 pm
ಸೀಗೆಯ ಹುಡುಗಿ..
ನಿನ್ನ ಕಾಲ್ಗೆಜ್ಜೆಯ
ನಾದಕ್ಕೆ ನನ್ನ ಒಂಟಿತನ
ಮುದುರಿಕೊಳ್ಳುತ್ತದೆ ಹುಡುಗಿ
ನೆಪದುರಿಗೆ ಹೆಜ್ಜೆ ಇಟ್ಟ
ಪಾದವನೊಮ್ಮೆ ತೋಳಲ್ಲಿ
ಬಂದಿಸಿಡಬೇಕೆಂದಾಗುವುದೇ ಆಗ
ನೆನೆದುಕೊಳ್ಳುವ ಉಮೇದುವಾರಿಕೆಗೆ
ಕತ್ತಲು ಬೆರಳ ಕೂಡಿಸುತ್ತದೆ
ನೆರಳೊಂದಿಗೆ ನೆನಪುಗಳಿಗೆ
ಜೋಗುಳ ಹಾಡುವ ಬೆಳಕು
ನನ್ನೊಳಗೊಂದು ಕಿಡಿ ಹೊತ್ತಿಸಿಕೊಳ್ಳುತ್ತದೆ
ಕೆನೇಕಟ್ಟಿದ ಕಣ್ಣೀರಲ್ಲಿ
ನವಿರಾದ ಪತ್ರ ಬರಿಯುತ್ತೇನೆ
ಹುಡುಗಿ
ಸೀಗೆಗಂಟಿದ ಹೆರಳಂತಿನ
ಸಿಳುಕೂದಲಿನ ಜೋಂಪು
ನಾ ಅಚ್ಚಿಸಿಕೊಂಡಿದ್ದರ ತರುವಾಯದ್ದು
ವಿಷಯಾಂತರಗಳ ಸರಹದ್ದಿನ
ಮೂಕ ಮಾತುಗಳೇ ಇವು
ನಿನ್ನೆದುರಿಗೆ ಬಟಬಯಲಾಗಿಸಿದ
ನನಗೆಂದಿರುವ ನಿಜಾಯಿತಿಗಳು
ಎದೆಮಗ್ಗುಲ ಇಶ್ಕಿನಲ್ಲಿ
ತಿಳಿಯಬೇಕಾದ ಕುತೂಹಲಗಳಿವೆ
ಲೇ ಇವಳೇ,
ನಿನ್ನ ಆಪ್ತತೆಯೊಂದಿದ್ದರೆ
ಸಾಕು
ನನ್ನ ಒಂಟಿತನ ಮುದುರಿಕೊಳ್ಳುತ್ತದೆ..!
Instagram:- unique_abhyaa
- abhi.s.j
11 Jan 2026, 06:19 pm
- Veereshappa v Khairawadagi lyrics in Kannada
09 Jan 2026, 11:07 pm
- Veereshappa v Khairawadagi lyrics in Kannada
09 Jan 2026, 10:43 pm
ಚಂದನವನ ಚಂದದ ಚಿಟ್ಟೆ
ಕೆನ್ನೆಗೆ ಬಂದು ಬಂದು
ಮುತ್ತನು ಕೊಟ್ಟೆ.. ll
ಓ ಬಂಗಾರದ ಬಣ್ಣದ ಚಿಟ್ಟೆ...ll
ಹಾರುತ ಹಾರುತ
ಹರುಷದಿ ಹರುಷದಿ
ಬಣ್ಣ ಬಣ್ಣದ ರೆಕ್ಕೆಯ
ಬಡಿಯುತ ನಲಿಯುತ
ನೀ ಎಲ್ಲಿಗೆ ಹೊರಟೆ
ನೀ ಎಲ್ಲಿಗೆ ಹೊರಟೆ
ಹೂ ಬನಸಿರಿಗೆ ಬಂದೆ
ಚಂದನಗೆ ವನಸಿರಿ...
ಬಂದೆ. ll
ಹೂವಿನ ಮಕರಂದ
ಸವಿಯಲು ಬಂದೆ...ll ಪಲ್ಲವಿ ll
llಚಂದನವನ ಚಂದದಚಿಟ್ಟೆll
ನಿನ್ನಂದಕೆಅಂದಕೆ
ನಿನ್ನಂದಕೆ ಅಂದಕೆ
ಮುದ್ದುಮಾಡಲೇ
ಮುತ್ತುನಿಡಲೇll
ಬಂಗಾರದ ಬಣ್ಣದ
ಸುಂದರ ಚಿಟ್ಟೆ..
llಚಂದನವನ ಚಂದದ ಚಿಟ್ಟೆ ll
✍️ವೀರೇಶ್ ವಿ ಖೈರವಾಡಗಿ
- Veereshappa v Khairawadagi lyrics in Kannada
09 Jan 2026, 09:22 pm
- Shambhulinga R Chigari
07 Jan 2026, 12:09 pm
- Shambhulinga R Chigari
06 Jan 2026, 05:58 pm
- Shambhulinga R Chigari
06 Jan 2026, 05:55 pm
- Shambhulinga R Chigari
06 Jan 2026, 05:53 pm