Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ಹೃದಯದ ರೂಪ

ಹೃದಯದೊಳಲಗೋಗಿ ಕೇಳಿದ ಒಂದು ಪದ ನಿನ್ನನು ಇದು ನಿನ್ನ ಹೃದಯವಾ ಎಂದು ಅಂದು ............

ನೀ ಮೌನಿಯಾದ ಕ್ಷಣ ಅದು ಹೇಳಿತು ನನಗೆ ಇಂದು ನಿನ್ನ ಮಾತಿಲ್ಲದೆ ನನ್ನ ಬಡಿತಸಾಧ್ಯವಿಲ್ಲವೆಂದು,ನಿನ್ನ ನಗುವಿಲ್ಲದೆ ನನ್ನ ಚಲನವಲನ ಸ್ಥಗಿತವೆಂದು ಹಾಗಾದರೆ ಅದು ನಂದೇನಾ ಅಲ್ಲಿರುವುದು ನಾನಾದರೆ ಇಲ್ಲಿ ನಿನ್ನಿಂದಾ ದೂರವೇಕೆ ಗೆಳೆಯಾ........

ಏಕೆಂದರೆ ಅಲ್ಲಿನ ನನ್ನ ಬಿಂಬ ಇಲ್ಲಿರುವ ನನ್ನ ಹೃದಯದಜೊತೆ ನಿನ್ನ ಹೃದಯ ಕಳೆದಸಮಯದಿಂದಲೇ ಅಲ್ಲವೇ ನನ್ನ ರೂಪ ನಿನ್ನ ಹೃದಯದ್ದಾಯಿತು.............

- ಚುಕ್ಕಿ

11 Jun 2017, 12:19 am

ನೀ ನಾದಂತೆ ನನ್ನ ಮನದ ಪರಿವರ್ತನೆಯ ಪರಿ

ನನ್ನ ಮನದ ಮನೆಯಲಿ ಮನೆ ಮಾಡಿ ನೀ ಕುತಂತೇ
ಹಸಿದ ಬಾಳಲಿ ಉಸಿರಾಗಿ ನೀ ಬಂದಂತೇ
ಮನದ ಮುಗಿಲಲ್ಲಿ ಮಳೆಹನಿಗಳ 
ನೀ ಸುರಿದಂತೆ 
ಜೇನಿನ ಗುಡಲಿ ಸಿಹಿಜೇನ ನೀ
ಸವಿದಂತೆ 
ಸೋತ ಸಾಲಿನಲ್ಲಿ ಗೆಲುವಿಗೆ ನೀ ರುವಾರಿಯಾದಂತೆ..       ಈ ಪದಗಳ ಸಾಲುಗಳ ಪೋಣಿಸೋ 
ಪೂರ್ಣಿಮ ನೀ ಬರೆದಂತೆ
ನನ್ನ ಬಾಳ ಬದುಕಿನಲಿ ನೀ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದಂತೇ
ಅಂದಗಳ ಸಂಕೀರ್ಣ ಸಾವಿರ ಬೊಂಬೆಸಂಗ್ರಹದಿ ನೀ 
ನೀ ಪಳ ಪಳ ಹೊಳೆದಂತೇ
ನನ್ನ ನೋವ ನಗಿಸೋ ಗುಳಿಕೆನ್ನೆ 
ಕನ್ಯೆ ನೀ ನಾದಂತೆ

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

11 Jun 2017, 12:04 am

ಉಸಿರ ಉಯ್ಯಾಲೆ

ಮನದಲ್ಲಿ ಕಟ್ಟಿದ ತೂಗು ಉಯ್ಯಾಲೆಯಲ್ಲಿ ನಿನ್ನೀರಿಸಿ
ತೂಗುವೆ ನಿನ್ನನು ನನ್ನ ಉಸಿರಾಟದ ವೇಗದಲ್ಲಿ ಬಂಗಾರಾ...............

ಜಾರಿ ಬಿಲದಿರು ನೀನು ಉಸಿರಾಟದ ರಭಸಕ್ಕೆ
ಜಾರಿದರು ನಿನ್ನ ಪಾದವನ್ನು ಹಿಡಿದೆತ್ತುವೇ ನಾನು ನನ್ನ ಅಂಗೈಯಲ್ಲಿರಿಸಿ ಭುವಿಗೆ ಬೀಳದಂತೆ ಮನದರಸಿ .............

- ಚುಕ್ಕಿ

10 Jun 2017, 11:51 pm

ವಿದಾಯ....

ಯಾರು ನೀವೆಲ್ಲರು ನಾ ಕಾಣೆ
ಎಲ್ಲರು ಬೆರೆತು ಮಾತಾಡಿ ನೋವ ‌ಮರೆಸಿದಿರಿ‌ ನನ್ನಾಣೆ
ಗೆಲ್ಲುವ ಶಕುತಿ ಮನಸುಂಟು ನಿಮ್ಮಲಿ ಜಗವನ್ನೆ
ಅರಿಯದೆ ನೋಯಿಸಿದ್ದರೆ ಕ್ಷಮಿಸಿ ಬಿಡಿ ಸುಮ್ಮನೆ
ಕಲರವದೊಳು‌ ಮರೆತು ಬಿಟ್ಟಿದ್ದೆ ನನ್ನನ್ನೆ

ಕನ್ನಡ ಕವನವಿದು ಉದಯೋನ್ಮುಖ ‌ಬರಹಗಾರರ ತಾಣ
ಬರೆಯುವರೆಲ್ಲರು ಸುಂದರ ಕವಿತೆಗಳ ತೊಟ್ಟು ಪಣ
ಮನಸ ಭಾವ ಬಂಧನಗಳ ಬಿಡಿಸಿಡುವರು ಕವನಗಳಲೆ
ಯಾರು ಅರಿಯದವರ ಸುಖ ದುಃಖಗಳು ಹರಿದು ಬರುವವು ಪದಗಳಲೆ
ನಾನು ಸೇರಿ ಕಳೆದು ಹೋದೆನು ಕವನಗಳ ಮಧ್ಯದಲ್ಲೆ

ತುಂಬಿದಿರಿ ನನ್ನೊಳು ಬರೆಯುವ ಹಂಬಲ
ನಿಮ್ಮೆಲ್ಲರ‌ ಸಹಕಾರ ಹುಟ್ಟಿಸಿತು ಬರೆಯುವ ಚಲ
ನಿಮ್ಮೆಲ್ಲರ ಸಹಕಾರ ಪ್ರೀತಿಗೆ ನಾನೆಂದು‌ ಆಭಾರಿ‌
ನೀವೆಂದು ಬಾಳಲಿ ‌ನಗುನಗುತ ಬಾಳಿರಿ

ನನ್ನೊಳಗಿನ ನನ್ನನು‌ ಪರಿಚಯಿಸಿತು ಕನ್ನಡ ಕವನ
ನಿಮಗೆ ನನ್ನಯ ಮನಃಪೂರ್ವಕ ನಮನ
ಬರೆಯುವ ಕನಸು ನನಸಾದ ಜಾಗವಿದು‌, ಎಂದೂ‌‌ ಮಾಡುವೆನು ಕವನದ ‌ಮನನ
ಎಂದಿಗೂ‌ ನಿಲ್ಲದೆ ಸಾಗುತಿರಲಿ ಕವಿಗಳ‌ ಸೃಷ್ಟಿಸುತ್ತಿರುವ ಸಾಧನ

ಹೇಳೆಬೇಕೆನಿಸುತಿದೆ ಇಂದು ವಿದಾಯ
ಹೊತ್ತುಯ್ಯುತ್ತಿರುವೆನು ನೀವೆಲ್ಲ ನೀಡಿದ ಸದಾಷಯ
ನೀವೆಲ್ಲರು ತಿದ್ದಿದಿರಿ‌‌ ನನ್ನ ನೀಡಿ ನಿಮ್ಮ ಅಭಿಪ್ರಾಯ
ಎಂದಿಗೂ ಜತನ ಮಾಡುವುದು ಅವುಗಳ ನನ್ನೀ ಹೃದಯ

ತುಂಬು ಮನಸಿನ ಧನ್ಯವಾದಗಳು ಎಲ್ಲರಿಗೂ
ನಿಮ್ಮ ಅಭಿಪ್ರಾಯ ಪ್ರೋತ್ಸಾಹಗಳೊಟ್ಟಿಗೆ ನನ್ನನ್ನು ಒಪ್ಪಿ ಸಹಕರಿಸಿದ್ದಕ್ಕೆ, ನಾನೆಂದು ಚಿರಋಣಿ....

- ಶ್ರೀಕಾವ್ಯ

10 Jun 2017, 09:55 pm

ತೂಗುದೀಪ.............✍

ಗಾಳಿ ಜೋಕಾಳಿಗೆ ತೂಗುದೀಪವನಿಡುವೆ
ಮಂದಹಾಸದ ಅರಮನೆಯಲ್ಲಿ
ಅದನ್ನೀರುಸಿ ಬೆಳಗಿಸುವೆ ಬೆಳದಿಂಗಳ
ಬೆಳಕಿನಿಂದ ನನ್ನ ಪ್ರೀತಿಯ ಬತ್ತಿ ಹಚ್ಚಿ
ನಿನಗಾಗಿ..................

ನೀಬರುವ ದಾರಿಕಾಯುವೆ ಆ ದೀಪದ
ಬೆಳಕಿನಲ್ಲಿ ನಿನ್ನ ಗುಣಾಗಣವ ಮಾಡುವೆ
ಆ ದೀಪದ ಕಿವಿಯಲ್ಲಿ ಪಿಸುಮಾತನಾಡುತ
ಮುದ್ದು ಮುದ್ದಾಗಿ ನೀ ನನ್ನ ಜೊತೆಗಾಡಿದ
ಸೊಗಸಾದ ಮಾತುಗಳೇಳುತಲಿ...............

ಇಲಿಸಂಜೆ ವೇಳೆಯಲ್ಲಿ ಮನತಣಿಸಲು
ಬಂದ ನಿನ್ನ ನೆನಪು ಕಾಡುತ್ತಿತ್ತು ನನ್ನ
ನಿನ್ನ ಹೆಸರ ನೆನೆಸುತ್ತ ನನ್ನ ನಾಚಿಕಿಗೆ
ತಾನು ನಾಚುತ್ತಾ ..............

ಬೊಗಸೆಯಲ್ಲಿಡಿದ ತಿಳಿನಿರ ಸೆರೆಯಲ್ಲಿ
ನಗುತ ನಿಂತ ಚಂದಿರನು ಹೇಳುತ್ತಿರುವ
ನನಗೆ ನಿನ್ನ ನೋಡಿ ಮೇಲಿಂದ ನನ್ನ ನೆನೆದು ನೀ
ನನ್ನಾಗೆ ನಗುತ್ತಿರುಯೆಂದು ಗೆಳೆಯಾ...........

- ಚುಕ್ಕಿ

10 Jun 2017, 08:24 pm

ಸಂಜೆಯ ಸೊಬಗು

ಸುಂದರ ಸಂಜೆಯಲ್ಲಿ
ಸುಮಧುರ ಸಂಗೀತ ಕೇಳುತ್ತ
ಸುಗಂಧ ಬೀರುವ ಕಾಫಿಯನ್ನು
ಮನಸಾರೆ ಸವಿಯುತ್ತಾ......

ರವಿಗೆದಿನವೆಲ್ಲ ನಮ್ಮ ಜೊತೆ
ನಗು ನಗುತ್ತಾ ಕಳೆದುದ್ದಕ್ಕೆ
ಧನ್ಯವಾದಗಳು ತಿಳಿಸೋಣ .........

ಶಿಶಿಯ ಆಗಮನಕ್ಕೆ ಸ್ವಾಗತಿಸಿ
ಅವನ ತಂಪಲ್ಲಿ ಹಾಯಾಗಿ ಮಲಗೊಣ

- ಚುಕ್ಕಿ

10 Jun 2017, 08:20 pm

ತುಂತುರು

ಇರುಳ ಜಡೆಯಲ್ಲಿ
ನಕ್ಷತ್ರಗಳ ಮಲ್ಲೆ
ಕುಚ್ಚು ಚಂದಿರ..
ಮೇಘಗಳ ಸೀರೆ
ತಿಳಿಯಾಗಿ ಹರಿದಾಡಿದೆ
ಮುಗಿಲ ಚಪ್ಪರದಲಿ..
ನದಿ ಕೊಳಗಳು
ದರ್ಪಣವಾಗಿ ಬಿಂಬಿಸಿದೆ
ಇರುಳ ಕಾಂತಿ...

- Chandni

10 Jun 2017, 07:35 pm

ಮನದ ಕನ್ನಡಿ !

ಯಾರಾದರೂ ನನಗೆ ಕುರೂಪವಾಗಿ ಕಂಡರೆ
ನನಗನ್ನಿಸುವುದು,
ನನ್ನ ಮನವೇಕೆ ಇಷ್ಟೊಂದು ಕುರೂಪ?
ತೋರುತಿಹುದು ಎದುರಿನ ಮುಖದಲ್ಲಿ
ನನ್ನದೇ ನಿಜ ರೂಪ!

ಪ್ರತಿ ಮನುಜನ ಮುಖವೂ ಒಂದು ಕನ್ನಡಿ
ನಮ್ಮ ಮನದ ಭಾವನೆಗಳ ತೋರಿಸುವ ಕೈಪಿಡಿ
ಸುಂದರವಾಗಿದ್ದರೆ ನಮ್ಮ ಮನ
ಎದುರಿದ್ದವರ ಮುಖವೊಂದು ಹೂಬನ
ಕೊಳಕಾಗಿದ್ದರೆ ನಮ್ಮದೇ ಒಳ ಮನ
ತೋರುವುದು ಎದುರಿನ ಮುಖದಲ್ಲಿ
ತೊಳೆಯಲಾಗದ ನಮ್ಮದೇ ಕೊಳಕನ್ನ!

ತಿಕ್ಕಿ ತೊಳೆದಿಟ್ಟುಕೊ ನಿನ್ನ ಮನವ
ದಿನವೂ ತೊಳೆದಂತೆ ಹೊರ ಚರ್ಮವ
ಶುಭ್ರ ಮನದಲಿ ಹೊಳೆವುದು
ಎದುರಲ್ಲಿ ಕಾಣುವ ಪ್ರತಿ ಮುಖವು.

- ಶ್ರೀಗೋ.

10 Jun 2017, 07:16 pm

ಸವಿ ನೆನಪುಗಳು

ನಾ ಬರೆದ ನಾಲ್ಕು ಕವನಗಳನ್ನು
ನಾ-ನೂರು ಬಾರಿ ತಿರುಗಿ ಓದಲು
ನನ್ನ ಮನವು ಕುಣಿದು......, ಕುಪ್ಪಳಿಸುವುದು ಸಡಗರದಲಿ
ನಾನು ಒಬ್ಬ ಕವಿ ಎಂದು.......,

ನನ್ನ ಗೆಳೆಯರು ಅದ ಓದಲು
ಅವರ ಸಲಹೆ-ಸೂಚನೆಗಾಗಿ
ಕಾತರದಿ ಹೃದಯ ಮಿಡಿಯಲು
ನನ್ನ ಮೆಚ್ಚುಗೆ, ಅವರ ಪ್ರಶಂಸೆಗಾಗಿ....

ಭಾವನೆಗಳೆ ಪದಗಳಾಗಿ
ಆ ಪದಗಳೆ ಸಾಲುಗಳಾಗಿ
ಆ ಸಾಲುಗಳೆ ಕವನಗಳಾಗಿ
ಕನ್ನಡ ಕವನಗಳು ಅಪ್ಲಿಕೇಶನ್ ಅಲ್ಲಿ
ಮೂಡಲು ಮನೋಹರವಾಗಿ.......
ಅದ ಓದಲು ಕಾಯುವವು ನನ್ನೀ
ಕಣ್ಣುಗಳು ಕಾತರವಾಗಿ......

ಎಲ್ಲೋ ಎಲೆ- ಮರೆಯ ಕಾಯಿಯಂತೆ
ಅವಿತಿರುವ ಪ್ರತಿಭೆಗಳಿಗೆ ಆಸರೆಯಂತೆ.....,ಮಮತೆಯಲಿ
ತಿದ್ದಿ ಬೆಳೆಸುವ ತವರಿನಂತೆ
ಜನ್ಮ‌ ತಾಳಿದೆ ಈ ನಮ್ಮ.....
ಅಂತರ್ಜಾಲವು....
ಇದಕೆ ನನ್ನ ಕೋಟಿ- ಕೋಟಿ
ನಮನವು....


ಶಾರಧ

- ಶಕುಂತಲಾ

10 Jun 2017, 05:07 pm

ಹುಟ್ಟಿದ ದಿನ (D.K ರವಿ)

ಹುಟ್ಟು ಸಾವೆಂಬ ಎರಡು
ದಾರಿಯ ದಾಟಿ
ದಕ್ಷ ಎಂದು ಬಿರುದು ಪಡೆದು
ಎರಡು ಅಕ್ಷರದ "ರವಿ" ಸೂಚಿಸಿ
ಜನರಲ್ಲಿ ಮರೆಯಾದೆಯಾ!!!!
ಕೊಲಾರವು ಕೊಲಾಹಲ
ಆ ದಿನವೂ ಈ ದಿನವೂ
ಕಾದಿರುವರು ನಿನಗಾಗಿ
ಮರುಜನ್ಮದ ನಿರೀಕ್ಷೆಯಲ್ಲಿ
-ಕೊಲಾರ

- ಹೇಮಚಂದ್ರ

10 Jun 2017, 01:50 pm