Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಗನೆಂಬ ಮಮಕಾರ!

ಸುತನಿಗಾಗಿ ಹಂಬಲಿಸುತಿತ್ತು
ಆ ದಂಪತಿಗಳ ಮನವು
ಆಡು ಮುಟ್ಟದ ಸೊಪ್ಪಿಲ್ಲ
ಅವರು ಮಾಡದ ಪೂಜ- ವ್ರತಗಳಿಲ್ಲ

ನೆಚ್ಚಿನ ಅಮ್ಮನು ಹರಸಲು
ಹಟ್ಟಿಯಲ್ಲಿ ಸುತನು ನಲಿದಾಡಲು
ಅಮ್ಮನ ಪತಿಯ ನಾಮದಿಂದ
ಅಲಂಕೃತಗೊಂಡು ಬೆಳಗಿದನು
ಲಕ್ಷ್ಮೀಪತಿಯಾಗಿ.............

ಚುರುಕುತನದಲಿ ಮುಂದಡಿಹಿಡುತ್ತ
ತಂದೆಯ ಮೆಚ್ಚುಗೆ ಗಳಿಸುತ್ತ
ಕಳೆದನು ಯೌವ್ವನವ ಆಡುತ್ತ
ತರಗತಿಗಳಲ್ಲಿ ವಿಜಯ ಗಳಿಸುತ್ತ........

ಸುತನನ್ನು ಸಂಸಾರದಲ್ಲಿ
ಸೆರೆಹಿಡಿಯುವ ಸಮಯದಲ್ಲಿ
ಎದುರಾದ ಸಮ್ಯೆಯು ಮನೆಮಂದಿಯಲ್ಲಿ ಮೂಡಿಸಿತು
ಅಚ್ಚರಿಯು....,,,,,
ಅದೆ ಪ್ರೇಮಾಂಕುರವು...?

ಮಗನ ಅಗಲಿಸಲು ಮನಸಾಗಲಿಲ್ಲ
ಮನೆಮಂದಿಯ ಒಪ್ಪಿಸಲು ಹರಸಾಹಸ ಪಡಬೇಕಾಯಿತಲ್ಲ
ನಡೆಯಿತು ಪ್ರಯತ್ನಗಳು
ಪ್ರೇಮಿಗಳ ಅಗಲಿಸಲು
ಅವ ನುಡಿದ ಅವಳಿಲ್ಲದೆ ನಾನಿಲ್ಲ;
ನಾನಲ್ಲದೆ ನಿಮಗಾರಿಲ್ಲ?
ಮಾಡಿರಿ ವಿವಾಹವ
ತೋರಿರಿ ಹೃದಯ ವೈಶಾಲ್ಯವ!


ಶಾರಧ

- ಶಕುಂತಲಾ

10 Jun 2017, 12:17 pm

ಹನಿ..

ರವಿಯ ಕೆಂಪಲಿ
ಮಿಂದ ತಾರೆಯು ಜಾರಿ...
ಬಿಂದಿಯಾಗಿ ನಿನ್ನ
ಹಣೆಯಲಿ ಮಿನುಗಿದ
ಬೆಳಗು...

- Indushekar Chinivar

10 Jun 2017, 07:07 am

***ನನ್ನ ಹುಡುಗಿ***

ತಿಳಿಯದ ಮನಕೆ
ಸೆಳೆದ ನೋಟ
ಮೊಗ್ಗು ಮನಸ್ಸಿನ
ಸುಗ್ಗಿಯ ಆಟ

ಕವಿದ ಮನಕೆ
ಮಿಂಚಿನ ಬೆಳಕು
ಅಳುಕಿನ ಮನಕೆ
ಹುರುಪಿನ ಬೆಳಕು

ಅರಿಯದೆ ಇದ್ದೆ ಕರೆಯದೆ ಬಂದೆ
ಸೆರೆಯಾದೆ ನನ್ನ ಮನದಲಿ
ಮರೆಯದಿರು ಮರೆಯಾಗದಿರು ಎ೦ದು
ನನ್ನ ಜೀವನದಲಿ . . . . .

- RohithRam

10 Jun 2017, 01:59 am

ನನ್ನ ತಂಗಿ......

ಹುಟ್ಟು ಹಬ್ಬದ ಶುಭಾಷಗಳು ಮುದ್ದು ಪೆದ್ದಮ್ಮ....

ಒಡಹುಟ್ಟಿದವಳು ನೀನು
ನೀನಿರದೆ ನಾನಿರಲಾಗವುದೇನು
ನನ‌ ಪ್ರತಿ ಬಾಳಿನ ಹೆಜ್ಜೆಯ ಗುರುತು‌ ನೀನು
ನೀನಿರದೆ ಅವುಗಳಿಗೆ ಅರ್ಥಬರಹುದೇನು
ಉಣಿಸಿರುವೆ ನಿನ್ನ ಪ್ರೀತಿಯ ಸವಿ ಜೇನು
ಆ ಪ್ರೀತಿಯ ಸಿಹಿಗೆ ಕೊನೆಯಿರಲು‌ ಸಾಧ್ಯವೇನು

ನನ್ನೊಲುಮೆಯಲಿ ನಿನ್ನದೆ ಮೊದಲ ಹೆಸರು
ನೀನೆಂದು ನನ್ನಯ ನಗುವಿನ ಉಸಿರು
ಬಾಡದಿರಲಿ ಎಂದೆಂದೂ ನಿನ್ನಯ ನಗುವಿನ ಹಸಿರು
ನಗಿಸಿ ನಗುತ ಕಟ್ಟಿರುವೆ ಎಲ್ಲರ ಮನಸಲಿ ಸಂತೋಷದ ತಳಿರು

ನೀನೆನೆ ನನ್ನ ಮುದ್ದು ಪೆದ್ದ ತಂಗಿ
ಆಗಾಗ ಖುಷಿಯ ತರಲು ಆಗುವೆ ಕೋಡಂಗಿ
ಹರಿಸುವೆ ಮನೆಯಲಿ‌ ಹರುಷವ ನಗುವಲಿ ಬೆಳಗಿ
ನೀ ನಗಿಸಲು ನಗುವೆವು ನೋವೆಲ್ಲ ಕರಗಿ

ಆ ದೇವರಲಿ ನನ್ನದೊಂದು ಹರಕೆ
ಈಡೆರಲಿ‌ ನಿನ್ನದೆಲ್ಲ ಬಯಕೆ
ಎಂದೂ ನಗುತ ಸಾಗಲಿ ನಿನ್ನ ಬಾಳ ನೌಕೆ
ನೀನೆಂದು‌ ಎದಿರಾಗದಿರಲಿ‌ ನೋವಿನ ಕ್ಷಣಕೆ
ನೀನಾಗಿರು ನಗುವ ಹರಡುವ ಹೂವು‌ ಈ ಜಗಕೆ

- ಶ್ರೀಕಾವ್ಯ

10 Jun 2017, 12:07 am

ತುಂತುರು

ಪೂರ್ಣ ಚಂದಿರನ ಅಪ್ಪಿ ಮುದ್ದಾಡುವ
ಮೋಡಗಳು ಮುದದಿಂದ ಮೈಮರೇತ ಇರುಳು .

- Chandni

09 Jun 2017, 11:15 pm

ಹನಿ..

ಪೌರ್ಣಮಿಯ ಒಲವಲಿ ಮಿಂದು
ಚಂದಿರ ಪೂರ್ಣನಾದ ಇರುಳು...

- Indushekar Chinivar

09 Jun 2017, 10:21 pm

ತುಂತುರು...

ಮೇಘಗಳ ತಿಳಿ ಸೆರಗಲ್ಲಿ
ನಕ್ಷತ್ರ ಕುಚ್ಚುಗಳ ಮೆರಗು
ತಂದಿದೆ ಸಂಭ್ರಮ...
ತಂಗಾಳಿಗು ತುಡಿತ
ಮೇಘಗಳ ಆಲಂಗಿಸಲು...
ತುಂತುರು ಹನಿಗಳ ಸಿಂಚನ
ಹಾಡಿದೆ ಸರಿಗಮ...
ಹಾಕಿದೆ ಹೆಜ್ಜೆ ಪುಳಕಿತ ಪ್ರಕೃತಿ
ಮೌನ ಮುರಿದು ಈ ದಿನ...

- Chandni

09 Jun 2017, 07:56 pm

ನೊಂದ ಮನ

ನೊಂದ ಮನದ ಮಡಿಲಲ್ಲಿ
ಮಾತಿಲ್ಲದೆ ಮಲಗಿರುವೆ........
ಬೆಳಕಲ್ಲಿ ಕುಳಿತು ಕತ್ತಲೆಯ
ಮರೆಯಲಾಗದೆ ನರಳುತಿರುವೆ........

ಕಣ್ಣೀರು ನೋಡಿತಿರುವ ನನ್ನ
ಸನ್ನಿಹಿತರು ಅಂದುಕೊಂಡರು
ಅವು ಅತಿಯಾದ ಸಂತೋಷಕ್ಕೆ
ನಿಲುವೆಂದು................

ಆದರೆ ಆ ಕಣ್ಣೀರಿಗೆ ಗೊತ್ತು
ನೋವಿನಲ್ಲಿ ಯಾರು ನೋಡಾದ
ನನ್ನ ಮನಸ್ಸನ್ನು ಸಮಾಧಾನ ಪಡಿಸಲು
ಅವು ಹೊರ ಬಂದಿರುವುವೆಂದು.................

- ಚುಕ್ಕಿ

09 Jun 2017, 07:32 pm

ಮಳೆ ಹನಿಯೊಂದು...

ಮಳೆ ಹನಿಯೊಂದು ಬಂದು
ಭುವಿಗೆ ಬಿದ್ದಾಗ..

ಕಲ್ಲ ಪೊಟರೆಯಲ್ಲಡಗಿದ್ದ ಕಪ್ಪೆ
ಕುಪ್ಪಳಿಸಿತೊಮ್ಮೆ ಖುಷಿಯಲ್ಲಿ
ಕೆಮ್ಮಿ ಗಂಟಲ ಸರಿ ಪಡಿಸಿಕೊಂಡು
ಕಾರ್ಮುಗಿಲು ಭುವಿಯ ಕವಿದಿಹುದ ಕಂಡು
ತನ್ನ ಬಂದು ಬಳಗವ ಕರೆಯಲು
ತನ ತೋಮ್ ಎಂದೆನ್ನುವುದಕೆ
ತಯಾರಾಗಿತು ಆಗಲೇ..

ಎಂದೋ ಉದುರಿ ಹಕ್ಕಿಯುದರವ ಸೇರಿ
ಹೇಗೋ ಉರುಳಿ ಉಳಿದುಕೊಂಡಿದ್ದ ಬೀಜವು
ಮರಳಿ ಕೊನರಿ ಹೆಮ್ಮರವಾಗಲು
ಸಾವಕಾಶದಿ ಆಕಾಶ ನೋಡುತ
ನವಿರುಗೊಂಡಿತು ನೆಲದಲಿ...

ಬೆವರ ಸುರಿಸುತ ಬರಿಯ ಮೈಯಲ್ಲಿ
ಬರದಿ ಬಸವಳಿದಿದ್ದ ರೈತನ
ಬೆನ್ನ ಮೇಲೆ ಬಿದ್ದ ಹನಿಯದು
ಬದುಕು ಕೊಡುವೆನೋ ಎಂದಿತು.

- ಶ್ರೀಗೋ.

09 Jun 2017, 07:30 pm

ಇಂದಿನ ಮಕ್ಕಳು.....

ಅಮ್ಮನ ಕೈ ತುತ್ತಿನ‌ ಪ್ರೀತಿ ಗೊತ್ತಿಲ್ಲ
ಆ ಚೆಂದಮಾಮನ ತೋರಿ ತಿನ್ನಿಸುವವರಿಲ್ಲ
ಕಥೆ ಹೇಳುವ ಅಜ್ಜಿ ಅಮ್ಮಂದಿರನ್ನಂತು ನೋಡಿಯೆ ಇಲ್ಲ
ಬಾಲ್ಯದ ತುಂಟಾಟ ಖುಷಿಯ ಅನುಭವಿಸಿಲ್ಲ

ಚಿನ್ನಿದಾಂಡು ಲಗೋರಿಯನ್ನಂತು ಕಂಡವರೆ ಅಲ್ಲ
ಅಳಿಗುಳಿ‌ಮನೆ ಚೌಕಬಾರಗಳಂತು ಹೇಗಿರಬಹುದೆಂದು ತಿಳಿದಿರಲಿಕ್ಕಿಲ್ಲ
ಕುಂಟೆ ಬಿಲ್ಲೆ ಅಣ್ಣೆಕಲ್ಲಿನಂತ ಆಟಗಳನು ಮತೊಮ್ಮೆ ನೋಡಲಾಗುವುದಿಲ್ಲ
ಸ್ನೇಹಿತರ ಜೊತೆ ಊರ ಸುತ್ತಿ ಆಡಲಂತು ಇವರ ಬಿಡುವುದೇ ಇಲ್ಲ

ಮಣ್ಣಿನ ಪ್ರೀತಿಯ ಸಖ್ಯವ ಬಲ್ಲವರಲ್ಲ
ಮರಕೋತಿ ಆಟವನ್ನಂತು ನೋಡಿಯೆ ಇಲ್ಲ
ಮಣ್ಣಲಿ ಆಡಿ ಸಂತಸ ಪಡಲು ಮಣ್ಣೆ ಕಾಣುವುದಿಲ್ಲವಲ್ಲ
ಮರವೇರಿ ಆಟವಾಡಿ ಹುಬ್ಬಿ ಬೀಗಲು ಮರಗಳಿರಬೇಕಲ್ಲ

ಮಣಬಾರ ಪುಸ್ತಕ ಹೊತ್ತು ದಿನ ತಿರುಗುವರು
ಸಾಮಾನ್ಯ ಬದುಕಿನ ಜ್ಞಾನವ ಅರಿಯಲಾಗದವರು
ಅಕ್ಕ ಪಕ್ಕದ ಜನರನ್ನೆ ನೋಡಲಾಗದವರು
ಮನೆಯೊಳಗೆ‌ ಸೇರಿ ಸೊರಗುತಿರುವರು
ಸಣ್ಣ ನೋವು ಸೋಲಿಗು ನಲುಗಿ ಹೋಗುವರು
ಸಣ್ಣ ಖುಷಿಯ ಸವಿಯನು ಸವಿಯದೆ ಮಂಕಾಗುವರು
ಬದುಕಿನ ಸ್ವಾರಸ್ಯವ ಅನುಭವಿಸಲಾರದೆ ಹೋಗಿರುವರು
ಬಾಲ್ಯದ ಚೆಲ್ಲಾಟ ತುಂತಾಟ ಖುಷಿಯ ಕಾಣದೆ ಬದುಕುತ್ತಿರುವರು
ಬಾಳಿದು ಇಂದಿನ ಮಕ್ಕಳ ಬಾಳಿದು

- ಶ್ರೀಕಾವ್ಯ

09 Jun 2017, 07:06 pm