ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....
ಬೇರಿದ್ದರೆ ಮರವುಂಟು
ಮರವಿದ್ದರೆ ಕೋಂಬೆಯುಂಟು
ಕೋಂಬೆಯಿದ್ದರೆ ಎಲೆ ಉಂಟು
ಎಲೆಯಿದ್ದರೆ ಹೂವು ಉಂಟು
ಹೂವುಯಿದ್ದರೆ ಕಾಯಿ ಉಂಟು
ಕಾಯಿಯಿದ್ದರೆ ಹಣ್ಣು ಉಂಟು
ಹಣ್ಣುಯಿದ್ದರೆ ಬೆಲೆ ಉಂಟು
ಈ ಬೆಲೆಗಾಗಿ ಹೋರಾಡುವ ನಿನ ಬದುಕು
ಎಂಥದೋ ಒ ಮನುಸಾ.....
ವಿದ್ಯೆಯಿದ್ದರೆ ಜ್ನಾನ ಉಂಟು
ಜ್ನಾನವಿದ್ದರೆ ಕೆಲಸ ಉಂಟು
ಕೆಲಸವಿದ್ದರೆ ದುಡ್ಡುಂಟು
ದುಡ್ಡಿದ್ದರೆ ಬಂದುಗಳು ಉಂಟು
ಬಂದುಗಳಿದ್ದರೆ ಖರ್ಚುಂಟು
ಖರ್ಚಿದ್ದರೆ ದುಡ್ಡಿನ ಆಸೆಉಂಟು
ಆಸೆಯಿದ್ದರೆ ಸ್ವಾರ್ಥ ಉಂಟು
ಆ ಸ್ವಾರ್ಥದ ನಿನ ಬದುಕು
ಎಂಥದೋ ಒ ಮನುಸಾ........
ನೆಲೆಯಿದ್ದರೆ ಕಾಳುಂಟು
ಕಾಳುಯಿದ್ದರೆ ಕೂಳೂಂಟು
ಕೂಳುಯಿದ್ದರೆ ಆಳುಂಟು
ಆಳುಯಿದ್ದರೆ ದರ್ಪ ಉಂಟು
ದರ್ಪಯಿದ್ದರೆ ಅಹಂ ಉಂಟು
ಅಹಂಬಿಟ್ಟರಂ ನೀನುಂಟು
ನೀನುಯಿದ್ದರೆ ಸ್ನೇಹ ಉಂಟು
ಸ್ನೇಹಯಿದ್ದರೆ ಸೇವೆ ಉಂಟು
ಸೇವೆಯಿದ್ದರೆ ನಿನ್ನ ಹೆಸರುಂಟು
ಆ ಹೆಸರು ಮಾಡದ ನಿನ ಬದುಕು
ಎಂಥದೋ ಒ ಮನುಸಾ...
ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....
ಹೊರಟಿರುವೆ ತುಂಬಾ ದೂರ ನೀನು
ಕೈ ಸೇರಿದ್ದ ಪ್ರೀತಿ ಜಾರಿ ಹೋಯಿತೇನು
ಹೊರಟಾಗ ಕೂಗಿ ಕರೆಯಲು ಮಾತೆ ಬಾರದಾಯಿತಲ್ಲ
ನೀ ಹೊರಟ ಮೇಲೆ ಮನಸಿನ ನೋವು ಹೇಳಿತೀರುವುದಲ್ಲ
ನುಡಿದೆ ಮಾತು ಅರಿಯದೆ ಮನಸ
ಮಾತಲ್ಲೆ ಕೊಂದೆಯಲ್ಲ ನನ್ನೆಲ್ಲ ಕನಸ
ಮನಸ ಅರಮನೆಗೆ ಅರಸಾದವನು ನೀನೆನೆ
ಅಲ್ಲಿ ಈಗ ಇರುವುದೆಲ್ಲ ಸ್ಮಶಾನ ಮೌನನೆ
ಸೋತ ಮನಸು ಮತ್ತೆ ಕರೆಯದೆ ಬೀಳ್ಕೊಟ್ಟಿದೆ ನಿನ್ನನು
ನಿನ್ನೆಲ್ಲ ನೆನಪುಗಳು ಎಡಬಿಡದೆ ಕಾಡುತಿವೆ ನನ್ನನು
ತಿರುಗಿ ನೋಡದೆ ಜಾರುತಿದ್ದ ಕಣ್ಣಹನಿಯ ಕಾಣದೆ ಕುರುಡಾದೆ ನೀನು
ನನ್ನೆಲ್ಲ ಭಾವವ ತಿಳಿಸಿ ಹೇಳಲಾಗದೆ ಮೂಕಿಯಾದೆ ನಾನು
ನೀ ಸಾಗುವಾಗ ಮನಸು ಕಂಡ ನೋವಿಗೆದರಿ ಕಲ್ಲಾಯಿತಲ್ಲ
ನೀನಿರದೆ ಈ ಜೀವವು ಕ್ಷಣಕ್ಷಣಕು ಬರಡಾಗುತಿದೆ ನಲ್ಲ
ನಿನ್ನಲೂ ತುಂಬಿದೆ ಈ ಬೀಳ್ಕೊಡುಗೆಯ ನೋವು
ಬರಬಾರದಿತ್ತೆ ನಗುತ ನಾವು ಜೊತೆ ಇದ್ದಾಗಲೆ ಆ ಸಾವು
ಕಾಯುತಿರುವೆನು ಕಾಲ ಸರಿದರು ನಿನ್ನ ಹಾದಿಯನೆ ನಾನು
ಮತ್ತೊಮ್ಮೆ ತಿರುಗಿ ನೆನೆದು ಇತ್ತ ಬಂದು ಬಿಡು ನೀನು
ಒಡೆದ ಮನಸುಗಳು ತಿಳಿಯಲಿ ದೂರ ಇರುವ ನೋವು
ಇನ್ನೆಂದು ದೂರ ಸರಿಯದಂತೆ ಇರಲಿ ನಮ್ಮ ಮನವು
ಮತ್ತೆ ಸೇರಿ ಜೊತೆಯಾಗಿ ಬಾಳುವ ಕರೆಯುವರೆಗೆ ಸಾವು