Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಲುದಾರಿಯ ತಿರುವು

ಜನುಮ ಜನುಮದ ದಾರಿಯಲ್ಲಿ
ಹಲವು ಕವಲುದಾರಿಯ ತಿರುವು
ಯಾವ ಮಣ್ಣಿನಲ್ಲಿ ಯಾರ ಋಣವು
ಸೇರಿದೆ ಮೂರುದಿನದ ಬದುಕಿನಲ್ಲಿ
ಬದುಕೆಂಬ ಆಟದಲಿ ಆಟಗಾರರು ನಾವು
ಬಿಚ್ಚಿಡದೆ ಮುಚ್ಚಿಟ್ಟ ಭಾವನೆಗಳು ಹಲವು
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು
ಒಂದೂ ಅರಳದೆ ಹೊಸಕಿಹೊಯಿತು
ಒಂದೊಂದಕ್ಕೂ ಒಂದೊಂದು ಕಥೆಯು
ನೋವು ಸಂತಸದ ಹಲವು ಮುಖವು
ಮನದ ಮಾತು ಮೌನಕ್ಕೆ ಶರಣಾಯ್ತು
ಕ್ಷಣ ಕ್ಷಣವೂ ಕುಗ್ಗುತಿದೆ ನಂಬಿಕೆ
ಹತಾಶೆ ಮೂಡುತಿದೆ ಹೃದಯದ ಮೂಲೆಯಲ್ಲಿ...!!!

- Pb

02 May 2017, 12:56 pm

ಕನಸೆಲ್ಲ ಜಾರಿ.....

ಕನಸೆಲ್ಲ ಜಾರಿ , ಮಣ್ಣ ಸೇರಿ
ಕಣ್ಣ ಕಂಬನಿಯು ಕೆನ್ನೆಯ ಸವರಿ
ಸಾಗುತಿರುವವು ನನ್ನ ಮೀರಿ

ಕನಸಿನ ಆಸೆಯು ಮನಸಿಗೆ ಭಾರ
ಕಣ್ಣ ಹನಿಯು‌ ಅದಕೆ ತುಂಬಾ ತೀರ
ಕನಸ ಅರಸಿ ಕಂಬನಿಯು ಜಾರಿ
ಹೊರಟಿಹುದು ಸಾಂಗತ್ಯವ ಸೇರಿ

ಸೋತ ಕನಸುಗಳೆ‌ ಮನಸಿಗೆ ಮಾರಿ
ಕಾಡುತಿರುವವು ನೆನಪಾಗಿ ಬಾರಿ ಬಾರಿ
ಮನಸ ಮನೆಯಲಿ ಇವುಗಳದೆ ಚಾಕರಿ
ತಾಳಲಾಗುವುದೆ ಅವುಗಳ ವೈಖರಿ

ಬೇಡವಾಗಿದೆ ಸೋತ ಕನಸುಗಳ ಸವಾರಿ
ಹೇಳುತಿರುವೆನು ದೂರ ಸರಿಯಿರೆಂದು ಸಾರಿ ಸಾರಿ
ಮರೆಯಾಗದೆ ಕಾಡುತಿವೆ ನನ್ನಲೆ ಸೇರಿ
ಬದುಕಲಾಗುವುದೆ ಈ ನೋವನು ಮೀರಿ

- ಶ್ರೀಕಾವ್ಯ

02 May 2017, 11:30 am

...........

ನಿನ್ನ ನಗುವಲ್ಲಿ ಹರಿಯುವ ಜಲಪಾತವನೆ ಕಂಡೆ ಕಣೆ,
ಸಾಗರದಿ ಹವಳವ ಆರಿಸಿದೆ ನಿನ್ನ ದಂತಕಂತ ಕಣೆ,
ಎಲೆ ಗರಿಕೆಯ ಎಸಳುಗಳು ನಿನ್ನ ಮುಂಗುರುಳಿಗೆ ಕಣೆ,
ನನ್ನೆದೆಯಾಳದಲ್ಲಿ ಮಿಡಿದ ಹೃದಯದ ಬಡಿತ ನಿನದೇ ಕಣೆ,
ನಿನ್ನೊಲವ ಅಲೆಯಲ್ಲಿ ನಾ ಕೊಚ್ಚಿ ಹೋದೆ ಕಣೆ,
ಪ್ರಾಣ ಹೋದರು ನನ್ನುಸಿರು ನಿನಗೆ ಕಣೆ,
ಚಂದ್ರನ ನಾಚಿಸಿದ ಜಾಣೆ.... ನೀನಿಲ್ಲದೆ ನಾನಿಲ್ಲಕಣೆ,
ಅನಾಮಿಕ........✍

- ಅನಾಮಿಕ..........

02 May 2017, 08:34 am

ನೀನ್ಯಾಕೆ?????

ಚಂದಿರನ ಬೆಳಕಲ್ಲಿ, ಹನಿಯುವ ಇಬ್ಬನಿಯಲ್ಲಿ ಬಿಗಿದಪ್ಪಿದವಳು ಯಾರೇ?
ಮುಸ್ಸಂಜೆ ಮುಬ್ಬಲ್ಲಿ, ಬಿಸಿಯುಸಿರ ಬೇಗೆಯಲ್ಲಿ ಮುತ್ತಿಟ್ಟೋಳು ಯಾರೇ?
ನೀನ್ಯಾರೆ?????? ಅನಾಮಿಕ.......✍

- ಅನಾಮಿಕ..........

02 May 2017, 08:25 am

ಬಂಧಿಯಾದೆ......

ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆ ಸೆರೆ ಹಿಡಿದೆ?
ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?
ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?
ನನ್ನ ಪ್ರಶ್ನೆಗಳ ಸರಪಳಿ ಬಿಡಿಸುವ ಮೊದಲು,
ನಿನ್ನ ಮುತ್ತಿನಂತ ಮಾತಿಗೆ ಮೂಕನಾಗಿರುವ ನನ್ನನ್ನೊಮ್ಮೆ ಮಾತನಾಡಿಸೆ,
ಇಂತಿ ನಿನ್ನ ಪ್ರೀತಿಯ...
ಅನಾಮಿಕ.......

- ಅನಾಮಿಕ..........

02 May 2017, 08:20 am

ಇಂತಿ ನಿನ್ನ ಪ್ರೀತಿಯ

ಸುಂದರ ಕಾನನದೊಳು,ಕವಿದಿದೆ ಕಾರಿರುಳು,
ನಿದಿರೆಯ ಅಮಲು,ನನ್ನವಳ ತುಂಬಿರಲು,
ಕಿಟಕಿಯೊಳು ತೂರಿ ಆ ಬಂದ ಬೆಳದಿಂಗಳು,
ಎನ್ನ ಮನದನ್ನೆಯ ಮೊಗವ ಚುಂಬಿಸಲು,
ಮುಸುಕೆಳೆದು ಮಲಗಿದ ನನ್ನರಸಿಯ,
ಮುಖ ಕಾಣದೆ ಮುನಿಸಿಕೊಂಡ ಚಂದ್ರಮನು,
ತಾರೆಗಳ ತೊಟ್ಟಿಲಲಿ ಮೋಡದ ಹೊದಿಕೆ ಹೊದ್ದು,
ಮುಂಜಾವಿಗೆ ಕಾದಿರುವನು...
ಇಂತಿ ನಿನ್ನ ಪ್ರೀತಿಯ...
ಅನಾಮಿಕ.............

- ಅನಾಮಿಕ..........

02 May 2017, 08:14 am

ಉಸಿರು

ಉಸಿರು ನೀನಲ್ಲಿರುವಾಗ ಕೃತಕ ...
ಉಸಿರಾಟದಲಿ ಬಳಲಿ ಬೆಂಡಾಗಿ
ನಾನಿಲ್ಲಿ ಜೀವಂತ ಶವವಾಗಿ ದಣಿದು
ಜೀವವ ಹಟದಿ ದೂಡುತಿರೆ ಗೆಳತಿ ....
ಅನಾಮಿಕ.......✍

- ಅನಾಮಿಕ..........

02 May 2017, 07:23 am

ನೆನಪಿನಲ್ಲಿ. ........

ಊರಾಚೆಯ ಬಂಡೆಕಲ್ಲಿನ ಬಿಸಿಯಿನ್ನು ಆರಿಲ್ಲ
ನಿನ್ನ ನೆನಪಾಗಿ ನಾ ಮೊದಲೇ
ಬಂದಿರಬೇಕು...
ಸಂಜೆ ನಸು ನಾಚಿ ನಗುತ್ತಿದೆ
ಬಾರದ ನಿನ್ನ ಕಾಯುವ
ನನ್ನ ಸಂಯಮ ಕಂಡು...
ಕತ್ತಲೆಯು ಸನಿಯಕೆ ಬರಲು
ಅವಸರಿಸುತ್ತಿಲ್ಲ
ಅದಕ್ಕೂ ಒಂಟಿತನದ ಬದುಕು
ಬೇಸರವೆನಿಸಿರಬೇಕು..!! ಅನಾಮಿಕ......✍

- ಅನಾಮಿಕ..........

02 May 2017, 07:18 am

ಆದರ್ಶದರಮನೆ

ಮನೆಯ ನೋಡಿದಿರಾ ಇಂತಹ ಮನೆಯ ನೋಡಿದಿರಾ
ಪ್ರೀತಿ ಪ್ರೇಮದ ಇಟ್ಟಿಗೆಯಿಂದ
ಮಮತೆಯ ಮಣ್ಣಿಂದ
ನಿಷ್ಠೆಯ ನೀರನ್ನು ಹಾಕಿ
ನಿರ್ಮಿಸಿದ ಮನೆಯ ನೋಡಿದಿರಾ

ರಾಮಸೀತೆಯರಂತ ಸತಿಪತಿಯಿರುವ
ನನ್ನವ್ವಳಂತ ತಾಯಿಯಿರುವ
ಕರ್ಣನಂತ ಸೋದರನಿರುವ
ಮನೆಯ ನೋಡಿದಿರಾ

ರೈತನ ಕಾಲ್ಮುಗಿದು
ಯೋಧನ ಕೈ ಹಿಡಿದು
ಜಾತಿ ಭೇದವನರಿಯದ
ಮನುಜರಿರುವ ಮನೆಯ ನೋಡಿದಿರಾ

ಸಹಬಾಳ್ವೆಯನರಿತು
ಸಂಭಂಧಗಳಿಗೆ ಬೆಲೆಕೊಟ್ಟು
ಚೆಂದದಿ ಬಾಳ್ವೆಮಾಡುವ
ಮನು ಕುಲದ ಮಾಣಿಕ್ಯರಿರುವ
ಮನೆಯ ನೋಡಿದಿರಾ

ಮೌನಿ(9739651101)

- ಮೌನಿ

01 May 2017, 10:25 pm

ಸ್ನೇಹ

ಸ್ನೇಹವೆಂಬುದು ಶುಭ್ರವಾದ
ನೀಲಿ ಅಗಸದಂತೆ
ಹರಿಯುವ ತಿಳಿ ನೀರಿನ ಕಲರವದಂತೆ
ಇಲ್ಲಿ ಕೊಂಕು ಬಿಂಕಗಳಿಲ್ಲ .

ಜಾತಿ ಮತಗಳಿಲ್ಲ
ನಾನು ತಾನು ಎಂಬುದಿಲ್ಲ.
ನವ ಚೇತನ ನಿತ್ಯ ನೂತನ
ಅನುದಿನ ವಸಂತಮಯ ಈ ಗೆಳೆತನ.
ಈ ಸ್ನೇಹಕ್ಕೆ ಎಲ್ಲೇ ಇಲ್ಲ

ಎರಡು ಜೀವಗಳ ಆತ್ಮ ಸಂಬಂಧವಿದು
ಎಲ್ಲೋ ಇರುವ ಒಂದು ಜೀವ
ಇನ್ನೆಲ್ಲೋ ಇರುವ ಇನ್ನೊ೦ದು ಜೀವದ
ನಡುವೆ ಬೆಸೆಯುವ ಆತ್ಮ ಸಂಯಮವಿದು
ಸುವರ್ಣ ಸೇತುವೆಯಿದು.

ನೋವು ನಲಿವಿಗೂ ಸ್ಪಂದಿಸುತ
ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳ್ಗೆಯೇ ನನ್ನ ಏಳ್ಗೆ ಎಂಬುದೇ ನಿಜವಾದ ಸ್ನೇಹ
ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.frnds

- Anukumar

01 May 2017, 06:06 pm