Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಡೆದಿರಲು ಮುಳ್ಳಿನ ಹಾದಿಯಲಿ......

ನಡೆದಿರಲು ಮುಳ್ಳಿನ ಹಾದಿಯಲಿ
ಹೂವಂತೆ ಬಂದೆ ನೀನು
ಜೊತೆಯಾಗಿ ಕೈ ಹಿಡಿದು ನಡೆದಿರಲು
ಹೂವೆ ಮುಳ್ಳಾಯಿತೇನು

ನನ್ನ ಮಡಿಲ ಚೆಲುವಿನ ಕೂಸು
ನನ್ನೊಲವ ಪ್ರೀತಿಗೆ ಅರಸು
ಹಿಂದಿರುಗಿ ನೋಡದೆ ಹೊರಟಿರುವೆ ಕಾಣದೆ‌ ಸೊಗಸು
ನೆನಪಾಗದಾಯಿತೆ ಕಂಡ ಎಲ್ಲ ಕನಸು

ತಿರುಗಿ‌ ನೋಡು‌ ಸಾಕಿನ್ನು ಮುನಿಸು
ನಿನ್ನೆಲ್ಲ ಬಾಳ ಕ್ಷಣವ ನನ್ನೊಟ್ಟಿಗೆ ಸವೆಸು
ನಿನ್ನ ವಿನಹ‌ ಬೇರೇನು ‌ಕಾಣೆ ನನ್ನ ಸಹಿಸು
ನೀ ಕಂಡ ನನ್ನ ತಪ್ಪಿಗೆ ನನ್ನ ಮನ್ನಿಸು

ನನ್ನೆದೆಯ ಗೋಡೆಯಲಿ‌ ನಿನ್ನದೆ‌ ಹೆಸರು
ನಿನಗಾಗಿಯೇ ಕಾಯುತಿದೆ ನನ್ನುಸಿರು
ಕಣ್ದೆರೆದು ನೋಡು ನೀನಾಗಿಲ್ಲ ನನ್ನ ಶತ್ರು
ಮನಸರಿತು‌ ಒಂದೊಮ್ಮೆ ಅಪ್ಪಿ ಮಾಡು ಬದುಕು ಹಸಿರು

ಮರೆಯದೆ ಸೇರು ನನ್ನ‌
ಉಸಿರು ಹಾರಿ ಹೋಗುವ ಮುನ್ನ

- ಶ್ರೀಕಾವ್ಯ

26 Apr 2017, 09:21 pm

ನೀನು ...........

ನಿನ್ನ ಕಣ್ಣಲ್ಲಿ ನನಗಾಗಿ ಕಂಬನಿ
ಜಾರಿದೆ ಎಂದು ಹೇಳಿದೆ ನೀನು.........

ಆ ಕಂಬನಿಯ ರೂಪದಲ್ಲಿಯಾದರು
ನಿನ್ನ ನೋಡಲು ಬಂದಿರುವೆನೆಂದು
ತಿಳಿಯಲಿಲ್ಲವೇ ನೀನು..........

ನಿನ್ನಲ್ಲಿನ ನಗು ನಾನಾಗಿರಳು ನನಗಿಷ್ಟವಾದರು
ಕ್ಷೇಮಿಸು ನನ್ನ ನಾನಿರಲಾರೆ ನಿನ್ನ ನಗುವಾಗಿ ಏಕೆಂದರೆ ಆ ನಗು ನನ್ನ ತೊರೆದು
ಅಳುವಾಗಿ ಎಷ್ಟೋ ವರ್ಷಗಳು ಕಳೆಯಿತು........

ಅದರಿಂದಲೇ ನಿನ್ನಲ್ಲಿ ಕಂಬನಿಯಾಗಿ
ನಾ ಕಂಡೆ ನಿನ್ನ ನೋಡಲು ಗೆಳೆಯಾ........

- ಚುಕ್ಕಿ

26 Apr 2017, 09:07 pm

ಬರೆಯಲು

ಕಾವ್ಯನಾಮ ಏತಕೆ ಬೇಕು
ಬಿಳಿ ಹಾಳೆ ಸಿಕ್ಕರೆ ಸಾಕು
ಕವನ ಗಿಚುತ್ತಲ್ಲಿರಬೇಕು
ಬರೆಯಲು ವ್ಯಾಕರಣವೇಕೆ ಬೇಕು
ಕನಸೊಂದಿದ್ದರೆ ಸಾಕು...

- HarshaHL

26 Apr 2017, 08:47 pm

ಈ ಹೊತ್ತು

ಹಾಡು ಹಾಡುವ ಹೊತ್ತು
ಕಾಡು ಉಳಿಸಲು ನೀಡಬೇಕಿದೆ ಒತ್ತು
ನೆಲ ನಾಟಿ ಮಾಡಬೇಕಿದೆ ಕಳೆಗಳನ್ನು ಕಿತ್ತು
ಅನ್ನ ಬೇಡವೇ ಎಲ್ಲರೂ ಕೈ ಜೋಡಿಸಿ
ಅಕ್ಕಿಯ ಬೆಳೆಯೋಣ ಭತ್ತವ ಬಿತ್ತು

- HarshaHL

26 Apr 2017, 07:30 pm

ನಿನ್ನ ಹೇಗೆ ಮರೆಯಲಿ...?

        ನಿನ್ನ ನಾ ಮರೆಯಬಹುದು
        ಆದರೆ, ನಿನ್ನ ನೆನಪು ನಾ ಹೇಗೆ ಮರೆಯಲಿ ?
        ನಿನ್ನ ಕಣ್ಣುಗಳ ನಾ ಮರೆಯಬಹುದು
        ಆದರೆ, ನಿನ್ನ ಕನಸ ನಾ ಹೇಗೆ ಮರೆಯಲಿ?
        ನಿನ್ನ ಮಾತು ನಾ ಮರೆಯಬಹುದು
       ಆದರೆ, ನಿನ್ನ ಧ್ವನಿ ನಾ ಹೇಗೆ ಮರೆಯಲಿ?
ಮರೆತರು ಮರೆಯಲಾಗದ ನೆನಪು ನೀನು...
       ಅರಿತರು ಅರಿಯಲಾಗದ ಒಲವು ನೀನು...
ನಿನ್ನ ಹೇಗೆ ಮರೆಯಲಿ ಹೇಳು ನಾನು...
      ಮತ್ತೆ ನೆನಪಾಗಿ ಕಾಡದಿರು ನೀನು...
      ನನ್ನ ಹೃದಯದ ಪ್ರತಿ ಉಸಿರು ನಿನ್ನ ಹೆಸರು...
      ನಾನೆಂದೂ ಮರೆಯದಂತ ಉಸಿರು ನೀನು...

- ಅರೆಯೂರು ಚಿ. ಸುರೇಶ್

26 Apr 2017, 06:32 pm

ನಿವೇದನೆ

ನೀ ನನ್ನಿಂದ ದೂರ ಹೋದರೆ ಹೋಗು, ಆದರೆ;
ನಿನ್ನ ಸವಿ ನೆನಪುಗಳನ್ನು ಹೋತ್ತೋಯ್ಯಬೇಡ
ಈ ಕಣ್ಣಿಂದ ಮರೆಯಾಗು ಬೇಕಿದ್ದರೆ, ಆದರೆ;
ಈ ನನ್ನ ಮನಸಿನಿಂದ ದೊರಾಗಬೇಡ.
ನೀ ಹೋದ ದಾರಿಯನ್ನೋಮ್ಮೆ ತಿರುಗಿ ನೋಡು;
ನೀ ಬಿಟ್ಟು ಹೋದ ಜಾಗದಲ್ಲೆ;
ನಿನ್ನ ನೆನಪಿನ ಮೂಟೆ ಹೊತ್ತು ಕೂತಿರುವೇ...
ಮರಳಿ ಬಾ ಎಂದು ನಿನಗೆ ನಾ ಹೇಳೇನು...
ಆದರೇ;
ನೀ ಹೋಗುವ ದಾರಿ ಯಾವುದು, ಹೇಳೆಂದು ಬೇಡುವೇನು
ಯಾಕೆಂದರೆ;
ನಾನು ನಿನ್ನ ಜೋತೆಯಲ್ಲಿ ಬರುವೇನು...
ಕೈ ಹಿಡಿದು ಜೊತೆ ನಡೆಯಲು ಅಲ್ಲದಿದ್ದರು...
ಆ ದಾರಿಯಲಿನ ಕಲ್ಲು ಮುಳ್ಳು ತೆಗೆದು ನಗೆ ಹೂ ಹಾಸಲಾದರು...
ನಾ ನಿನ್ನ ಜೊತೆ ಬಂದೆ ಬರುವೇನು ಗೆಳತಿ...

-ಅರೆಯೂರು ಚಿ.ಸುರೇಶ್
ಪತ್ರಕರ್ತರು
ತುಮಕೂರು

- ಅರೆಯೂರು ಚಿ. ಸುರೇಶ್

26 Apr 2017, 06:13 pm

( ವಿರಹ)

ಬಿಂದು,ಬಿಂದುವಾಗಿ
ಉದುರಿ ಬೀಳುವ
ಆ ಪುಟ್ಟ ಕಣ್ಣೀರಿಗೆ.....!!

ನೊಂದ ಹೃದಯದ
ನೋವೆನು ಗೊತ್ತು
ಮರೆತುಹೋದ ಅವಳಿಗೆ ....
krishna billadi melbailu..

- krishna Billadi melbailu

26 Apr 2017, 05:04 pm

ಸಾಧನೆ

ಅಳುವಿರೇಕೆ
ಶತಮಾನದಿಂದ ಅಡುಗೆ ಮನೆಯಲ್ಲಿ
ಬಂದಿಯಾಗಿದ್ದು ಸಾಕಾಗಿಲ್ಲವೇ
ಹೊರ ಬನ್ನಿ
ಬೆನ್ನ ಹಿಂದಿನ ರೆಕ್ಕೆಗೆ
ಜೀವ ಕೊಡಬೇಡವೆ?
ಗರಿ ಬಿಚ್ಚಿ ಮುಗಿಲು ಮುಟ್ಟುವ ಕನಸಿಲ್ಲವೇ?
ಅಳುವಿರೇಕೆ ಇನ್ನು?
ಅಷ್ಟಕ್ಕೂ ನಿಮ್ಮ ನೋವು ಕೇಳುವುದಕ್ಕಾದರು
ಸಮಯ ಯಾರಿಗುಂಟು
ಕನಸಿನಲ್ಲೇ ಜೀವನ ಮುಗಿಸುವ ಬಯಕೆಯೇ?
ನನಸು ಮಾಡಬೇಡವೆ?
ಎದ್ದೇಳಿ
ಸಾಧಿಸಲು ಬೇಕಾದಷ್ಟಿದೆ...

- HarshaHL

26 Apr 2017, 04:41 pm

ಚುಟುಕ

ಜಗದ ಚಿಂತೆಯೂ ಅಳಿವುದು ಚಿತೆಯ ಭಸ್ಮದ ಒಡನೇ,


ದುಷ್ಟವೋ ಪಾಪವೋ ಕರ್ಮ ಅಳಿವುದು ಕಳೆಬರದ ಒಡನೇ, 


ಜೀವನದ ಮರ್ಮ ಅಡಗಿಹುದು ಗಡಿಯಾರದ ಮುಳ್ಳುಗಳನಡುವೆ 

- Prabhath

26 Apr 2017, 01:28 pm

ಸಾವು

ಸಾವಿನ ಭಯವಿತ್ತು ಒಮ್ಮೆ ನನಗೆ
ಕನಸು ಕಾಣಲು ಸುರುಮಾಡಿದೇ
ಸಾವಿಗೆ ಸಾವಿನ ರುಚಿ ಕಾಣಿಸುವ ಕನಸದು
ಅದ ಕೇಳಿ
ಸಾವಿಗೆ ಸಾವಿನ ಭಯವಾಯಿತೊಮ್ಮೆ

- HarshaHL

26 Apr 2017, 01:05 pm