Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವನೆಗಳು

ಸವಿಯದ ಕವಿತೆಗಳು
ಮರೆಯದ ನೆನಪುಗಳು
ಕಳೆಯದ ಕ್ಷಣಗಳು
ಎಷ್ಟು ಹೇಳಿದರೂ ಸಾಲದು
ನನ್ನಲ್ಲಿನ ಭಾವನೆಗಳು......

- ಚುಕ್ಕಿ

23 Apr 2017, 10:14 am

ಹಳೆದು

ನೀ ಹಣತೆಯಾಗು
ನಾ‌ ಎಣ್ಣೆಯಾಗುವೆ ನಲ್ಲೆ
ಯಾರೆ ಬತ್ತಿ ಇಡಲಿ ನಗುನಗುತ
ಬೆಳಗೊನ ಜೀವನ

ನಾಗು

- Nagaraja A

23 Apr 2017, 10:06 am

ಎಲ್ಲೆಲ್ಲೂ ಕನ್ನಡ....

ಎದೆತಟ್ಟಿ ಹೇಳುವೆ ನನ್ನ ಭಾಷೆ ಕನ್ನಡ
ಅಭಿಮಾನದಿ ಕೂಗುವೆ ನನ್ನುಸಿರು ಕನ್ನಡ
ನಮ್ಮ ನಾಡು ಕನ್ನಡ...ಪ

ಸಿರಿತನಕೆ ಬಡತನಕೆ ಭೇದವಿಲ್ಲ ಕನ್ನಡ
ಜಾತಿಮತ ಮೀರಿದ ದೈವಭಾಷೆ ಕನ್ನಡ
ಎಲ್ಲರೊಳಗೆ ಒಂದಾಗಿ ಒಂದಾಗುವ ಕನ್ನಡ

ಹೆಜ್ಜೆಹೆಜ್ಜೆಯಲು ಗೆಜ್ಜೆಯನಾದದಲು
ಸಪ್ತಸ್ವರನಾದದೊಳು ಸಂಗೀತಲೋಕದೊಳು
ವನ ಮನ ಕಣ ಬಣದೊಳು ಜೀವಜಲ ಕನ್ನಡ

ಕಾವೇರಿ ತೀರದಲಿ ಕರುನಾಡ ಮಣ್ಣಲಿ
ಕಬ್ಬಿಗರ ನಾಡಲಿ ಕರುಣೆಯ ಬೀಡಲಿ
ಕಣ್ತುಂಬ ತುಂಬಿದೆ ಕನ್ನಡವೆ ಮಿಂಚಾಗಿ

ವೀರಶೂರರಾಳಿದ ವೀರಭೂಮಿ ಕನ್ನಡ
ಭಕ್ತಿ ಭಾವ ಪಸರಿಸಿದ ಪುಣ್ಯಭೂಮಿ ಕನ್ನಡ
ಸಾಹಿತ್ಯ ಲೋಕದ ಸಿಂಹಾಸನ ಕನ್ನಡ

ಎಲೆಗಿಡ ಮರಬಳ್ಳಿಯಲು ಕಂಗೊಳಿಸಿದೆ ಕನ್ನಡ
ಕಾನನದ ಅಂಚಿಗೂ ಮಳೆಬಿಲ್ಲು ಕನ್ನಡ
ಸೂರ್ಯ ಚಂದ್ರತಾರೆಯಲು ಮಿನುಗುತಿದೆ ಕನ್ನಡ

ಬೇಲೂರು ಹಳೆಬೀಡು ಪಟ್ಟದಕಲ್ಲು ಹಂಪೆಯಲು
ಸಹ್ಯಾದ್ರಿ ಬೆಟ್ಟದಲು ಸಸ್ಯಕುಲರಾಶಿಯಲು
ಜೋಗದ ಜಿನುಗಿನಲಿ ಝೇಂಕಾರವು ಕನ್ನಡ..

- Irayya Mathad

23 Apr 2017, 09:52 am

ಸಾಗರದಂತಹ ಪ್ರೀತಿ

by-ಲಚಿ

ನಿನ್ನೆಡೆಗೆ ನನಗಿರುವುದು ವಾಂಛೆಯಲ್ಲ
ಸಾಗರದಂತಹ ಪ್ರೀತಿ.
ನಿನ್ನೆಡೆಗೆ ನನಗಿರುವುದು ಅನುಭೂತಿಯಲ್ಲ
ಆಕಾಶದಂತಹ ಆರಾಧನೆ.
ನಿನ್ನೆಡೆಗೆ ನನಗಿರುವುದು ಉನ್ಮಾದವಲ್ಲ
ಸುಮಧುರ ಭಾವನೆ.
ನಿನ್ನೆಡೆಗೆ ನನಗಿರುವುದು ಬಯಕೆಯಲ್ಲ
ನಲುಮೆಯ ಸಂಗಮ;ಸಮಾಗಮ.
ನಿನ್ನೆಡೆಗೆ ನನಗಿರುವುದು ಬಿರುಗಾಳಿಯಂತ ರಭಸವಲ್ಲ
ನೂರು ಜನ್ಮಕು ತುಡಿಯದ ತುಡಿತ.

- ಲಚಿ

23 Apr 2017, 02:59 am

ಬೆಣ್ಣೆ ಕೃಷ್ಣಾ.......

ಅಳಬೇಡ ಚಿನ್ನಿ ಕೃಷ್ಣ
ಅಳಬೇಡ ಮುದ್ದು ಕೃಷ್ಣ
ಬೆಣ್ಣೆಯಾಲ್ಲ ತಿಂದೆಯಲ್ಲಾ
ಇನ್ನು ಕೊಡುವೆ ನನ್ನ ಕೃಷ್ಣ.....

ಬೆಳ್ಳಿಪಾತ್ರೆಲಿ ಬಂಗಾರದ
ಚಮಚವಾಕಿ ಮೃದುವಾದ
ನವನೀತವಾ ಮುದ್ದೆ ಮಾಡಿ
ಬಾಯಲಿಡುವೆ

ಭ್ರಾಹ್ಮಾಂಡವ ಬಚ್ಚಿಟ್ಟ
ನಿನ್ನ ಈ ಚಿಕ್ಕ ಬಾಯಲ್ಲಿ
ಅತಿ ಮಧುರ ರುಚಿಯಾದ
ಬೆಣ್ಣೆಯಲ್ಲಾ ಬಾಚಿ ಹಿಡುವೆ
ನನ್ನ ಕೋಮಲ ಕೈಯಲ್ಲಿ....

ತಪ್ಪಿಯಾದರು ನನ್ನ ಕೈ
ಕಚ್ಚಬೇಡ ನಾನು ಅತ್ತರೆ
ಅದರ ಸಲುವಾಗಿ ನೀ ಮತ್ತೆ ಅಳಬೇಡ........

ನಿನ್ನ ನಾಜೂಕು ಮುಖದಲ್ಲಿ
ನಾ ನೋಡಲಾರೆ ಈ ಅಶ್ರುವಿನ
ಕಳೆಗಳು ಎ ಶ್ರೀಲೊಳ

- ಚುಕ್ಕಿ

23 Apr 2017, 12:35 am

ಎದೆಯಲ್ಲಿ ಜಾಗ ನೀಡೆನೆಗೆ

ನಿನ್ನ ಪ್ರೀತಿಯಲಿ ಹುಚ್ಚನಾಗಿರುವೆ
ಅಚ್ಚಕನ್ನಡದ ಹುಡುಗ ನಾ
ಹೆಚ್ಚು ಹೇಳಲಾರೆ ಪ್ರೀತಿ ಕುರಿತು
ಮನಬಿಚ್ಚಿ ಪ್ರೇಮಿಸುವೆ ನಿನ್ನ ನಾ!
ಹಚ್ಚಬೇಕೆಂದಿರುವೆ ಪ್ರೇಮದ ಜ್ಯೋತಿಯ
ಕಿಚ್ಚು ಇಟ್ಟಿರುವೆ ಮನದಲ್ಲಿ ನೀ
ಬೆಚ್ಚನೆಯ ಎದೆಯಲ್ಲಿ ಜಾಗ ನೀಡೆನೆಗೆ
ಹುಚ್ಚು ಆಟವ ಕೊನೆಯಾಗಿಸಲು ನಾ!

- Shreekanth

22 Apr 2017, 11:33 pm

ಅರ್ಧಾಂಗಿ

ಗೆಳತಿ ನಿನ್ನ ಮನವ ಸಂತೈಸು
ಆಗುತ್ತಿವೆ ಮತ್ತೆಮತ್ತೆ ತಪ್ಪುಗಳು
ಒಪ್ಪಿಕೊ ಎಂದು ಹೇಳಲಾರೆ ಅವನು
ಅರಿತಿರುವೆ ಎಂದು ತಿಳಿದಿದ್ದೆ
ಈಗೇಕೋ ಸಂಶಯ
ಅರ್ಥ ಅಪಾರ್ಥವಾಯಿತೇ?
ಇಲ್ಲ ಅನರ್ಥವಾಯಿತೇ?
ಅಥವಾ ಬರಿಯ ಸ್ವಾರ್ಥವಾಯಿತೇ?
ನಾನಿಷ್ಟೇ ಹೇಳಬಲ್ಲೆ
ನೀ ನನ್ನ ಅರ್ಧಾಂಗಿ
ಮಾಡದಿರು ನನ್ನೆಂದೂ ಏಕಾಂಗಿ

- Shreekanth

22 Apr 2017, 11:32 pm

ಬದಲಾವಣೆ

ಅಂದು
ರಜೆಗೆ ಬಂದ ಮೊಮ್ಮಕ್ಕಳು
ಅಜ್ಜಿ ಕಥೆ
ಕೇಳುತ್ತಿದ್ದರು!
ಇಂದು
ಅಜ್ಜಿಗೇ
ಹೇಳುವರು
ವಾಟ್ಸಪ್, ಫೇಸ್ಬುಕ್ ಕಥೆ!

- Shreekanth

22 Apr 2017, 09:15 pm

ಮನೆ ಮಾಡಿರುವೆ ಮನತುಂಬ

ಕನವರಿಸಲು ನಿನ್ನೆಸರ।
ಆವರಿಸಿದೆ ನಿನ್ನಯ ಪ್ರತಿಬಿಂಬ॥

ಕಣ್ಣಿಗೆ ಕಾಣದೆಯೇ।
ಮನೆ ಮಾಡಿರುವೆ ಮನತುಂಬ॥

ಕೈಗಳಿವು ಕಂಪಿಸಿದೆ
ಬರೆಯಲು ಕವಿತೆಗಳ
ನಮ್ಮ ನೆನ್ನೆಗಳ ನೆನೆದು।

ಮರಳಿ ಪಡೆಯುವ
ಹುಚ್ಚು ಕನಸು ಮುಡಿ
ಕಣ್ತುಂಬಿದೆ ಮನ ನೊಂದು॥

ಮೌನಕ್ಕೆ ಶರಣಾಗಿ
ಕಾಯುತ್ತಿರುವೆ ನಾನು
ಕಾಣುತ ಕನಸು ನೂರೊಂದು॥

-ಸವಿಗನಸು

- ಬಾನು ಅಡಿಗಾರ್

22 Apr 2017, 08:41 pm

ಕಾದು ನೋಡಿದೆ

ಮನಸರಿತ ಸ್ನೇಹವಿಂದು
ಮೌನವಾಗಿದೆ.............
ನಿನ್ನ ಮಾತು ಕೇಳಲೆಂದು
ನನ್ನ ಹೃದಯ ಕಾದು ನೋಡಿದೆ.

ನನ್ನ ಮೇಲಿನ ಅಕ್ಕರೆಯಲ್ಲಾ
ಎಲ್ಲಿ ಮಾಯವಾಗಿದೆ.........
ಕರೆದು ಕರೆದು ಸುಸ್ತಾಗಿದೆ .

ಒಮ್ಮೆ ಓಗೊಡು ನೀನು
ನನ್ನ ಮನ ಮಂದಹಾಸದಲ್ಲಿ
ನಗುವಾಗಿ ಹೊಮ್ಮಲು ಓ ಗೆಳಯಾ......

- ಚುಕ್ಕಿ

22 Apr 2017, 03:23 pm