Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒರಟು ವಜ್ರಕ್ಕೆ...

ಒರಟು ವಜ್ರಕ್ಕೆ
ಹೊಳಪು ಕೊಟ್ಟೆ
ಸುವಾಸನೆ ಕೊಡಲಿಲ್ಲ.!
ಮೃದು ಮಲ್ಲಿಗೆಯಲಿ
ಗಂಧ ಇಟ್ಟೆ
ಆದರೆ ಆಯಸ್ಸು
ಕರುಣಿಸಲಿಲ್ಲ,
ಅಪೂರ್ಣತೆ ಜಗದ
ನಿಯಮ ಇರಬೇಕೆನೋ...!!

- Kanakamurthi

21 Apr 2017, 11:00 pm

ಚಿಗುರೆಲೆ

ಚಿಗುರೆಲೆ ಮ‌ರುಗ‌ದಿರ‌ಲೇ
ತೇಲುತ‌ ತೇಲುತ‌ ಸಾಗಿ ಬ‌ರುವ‌
ಅಲೆಗ‌ಳು ಭುವಿಗೆ ಚುಂಬಿಸಿ
ಮ‌ರ‌ಳಿ ಸಾಗುವುದು ಮ‌ನ‌ದ‌ ಮ‌ಡಿಲಿಗೆ.
ನ‌ವ‌ ವ‌ಸಂತ‌ದ‌ ನ‌ವ‌ ಕೋಗಿಲೆ.
ಹೊಸ‌ತು ಚಿಗುರು ಹೊಸ‌ತು ಕ‌ನ‌ಸು
ಹೊಸ‌ತು ರಾಗ‌ ಹೊಸ‌ತು ಕಾವ್ಯ‌
ಹೊಸ‌ತು ಸೃಷ್ಟಿ ಹೊಸ‌ತು ಮುಕ್ತಿ
ಭೂತ‌ದ‌ ಕ್ರಿಯೆಗೆ ವ‌ರ್ತ‌ಮಾನ‌ದ‌ ಪ್ರ‌ತಿಕ್ರಿಯೆ
ನ‌ವ‌ ಮ‌ನ್ವಂತ‌ರ‌ದ‌ ನ‌ವ‌ ಮ‌ನುಜ‌

- ಶಶಿಧರ ಹೆಚ್ ಎನ್

21 Apr 2017, 07:57 pm

ಚಂದ....

ಚಂದ

ಹುಡುಕುವ ಪ್ರೀತಿಗಿಂತ, ಜೊತೆಗಿರುವ ಸ್ನೇಹ ಚಂದ...
ಕಾಣುವ ಕನಸಿಗಿಂತ, ಕಾಣದಿರುವ ಕಲ್ಪನೆ ಚಂದ..
ಬರೆಯುವ ಬರಹಕ್ಕಿಂತ, ಅಳಿಸಲಾಗದ ನೆನಪು ಚಂದ...
ಸುಡುವ ಬಿಸಿಲಿಗಿಂತ , ಬಿಸುವ ಗಾಳಿ ಚಂದ..
ಬರುವ ಸಿರಿತನಗಿಂತ , ಇರುವ ಬಡತನ ಚಂದ...
ಇತರರ ಹೊಗಳಿಕೆಗಿಂತ, ಅಮ್ಮನ ಬೈಗುಳ ಚಂದ...
ಮರೆಯದಿರು ನನ್ನ , ನಾನೊಬ್ಬ ಕನ್ನಡದ ಕಂದ...


ಶಾಬುದ್ದೀನ ಎಸ್ ಆರ್.....

- shabudin

21 Apr 2017, 06:57 pm

ಸೂರ್ಯ

ಆಕಾಶ ಬಿಸಿಲಿನ ತಾಪಕೆ
ಬೆವರ ಸುರಿಸಿ ತಣ್ಣಗಾಗಿದೆ .

ಮಳೆ ಮೋಡದ ಜೊತೆ
ಮುಗುಳ್ನಗೆಯಿಂದ ಮಾತಾಡಿ
ಮಳೆ ಸುರಿಸಲು ಸಿದ್ಧವಾಗಿದೆ.

ಇವರಿಬ್ಬರ ಸಂಭಾಷಣೆ ಕೇಳಿ
ತಂಗಾಳಿಯು ನಸು ನಕ್ಕಿದೆ.

ನಮ್ಮೆಲ್ಲರ ಮನದಲ್ಲಿ ತಂಪಾಗಿ
ತಾನೋದಗಿದೆ.........

ದಿನವೆಲ್ಲಾ ಜನರನೋಡಿ
ಸುಸ್ತಾದ ಸೂರ್ಯ ಭುವಿಗೆ
ವಂದಿಸಿ ಶಶಿಯ ಕರೆದಿಹನು.

ಅವನ ತಂಪಲ್ಲಿ ಮಲಗಳು
ನೆಮ್ಮದಿಯಾಗಿ....

- ಚುಕ್ಕಿ

21 Apr 2017, 05:23 pm

ಮರೆಯಾಗೋದೇ......

ನಿನ್ನ ಹೆಸರಲ್ಲಿ ನಾನು
ನನ್ನ ಉಸಿರಲ್ಲಿ ನೀನು ಬೆರತ
ಕ್ಷಣವೇ ನಾ ನಿನಾಗೋದೇ.......

ನನ್ನ ಕಣ್ಣಲ್ಲಿ ನೀನು,
ಕಂಡ ಕನಸಲ್ಲೂ ನೀನು
ಮನಸ್ಸಿಗಿಂದು ನೀ ಹೆಸರಾಗೋದೇ......

ನನ್ನ ಪ್ರೀತಿಲಿ ನೀನು
ನಿನ್ನ ನೆರಳಲ್ಲಿ ನಾನು
ನಿಂತಕ್ಷಣವೆ ನಾ ಮರೆಯಾಗೋದೇ.......

- ಚುಕ್ಕಿ

21 Apr 2017, 04:17 pm

ಆಪರಂಜಿ

ಎಷ್ಟು ಚಂದ ನಿನ್ನ ರೂಪ
ಅಷ್ಟೇ ಸೊಗಸು ನಿನ್ನ ನಗುವು
ನಿನ್ನ ಹೋಲಿಕೆಗೆ ಸಾವಿರ
ಪದವು ಸಾಲುತಿಲ್ಲಾ.

ನೀನೆಲ್ಲೆ ಇದ್ದರೂ ನಿನ್ನ
ಅಸ್ಥಿತ್ವ ನನ್ನ ಮನದಲ್ಲೇ
ನಿರಂತರಾ..........

ನಿನ್ನ ಮಾತಿನ ಕಲರವ
ಅದರಲ್ಲೇ ಕಳೆದುಕೊಂದಿರುವೆ
ನನ್ನ ಗಮನವೆಲ್ಲಾ....

- ಚುಕ್ಕಿ

21 Apr 2017, 03:43 pm

ಕಡಿದ ದಾರಿ

ಅದೆಲ್ಲಿಂದಲೋ ಬೀಸಿವ
ಕುಳಿರ್ಗಾಳಿಗೆ ಸೋಂಕಿದ ನಿನ್ನ
ನೆನಪ ನವೆ ಈಗಲೂ
ಪದೇ ಪದೇ ಎಚ್ಚರವಾಗಿಸುತ್ತದೆ
ಮುಸುಡಿಯುದ್ದಕ್ಕೂ ನಿನ್ನ
ಹೆಸರ ಕರೆದ ತರುವಾಯ
ತೀರದ ದಾಹ ಈ ಹಲ್ಕಾ ತುಟಿಗಳಿಗೆ

ಒಣಗಿದ ಎದೆಯಾಳದಲ್ಲೊಂದು
ಒರತೆ ಜಿನುಗುತ್ತದೆ ಹನಿಯಂತೆ
ನಾನಿರುವ ಸಂದೇಹಕ್ಕೆ ಪಕ್ಕಕ್ಕೆ
ಸರಿಯುತ್ತೇನೆ ವಾಲುವ ನೆಪದಲ್ಲಿ
ಮತ್ತೊಮ್ಮೆ ನನ್ನ ಇರುವಿಕೆ
ಖಾತ್ರಿಪಡಿಸಿಕೊಳ್ಳತ್ತೇನೆ

ಈವಾಗಿನಿಂದ ನೋಡು,
ಬೀದಿ ದೀಪದ ಕಡಿಮೆ ಬಿಳಿಗೆ
ಗೋಚರಿಸಿದ ಮಿಡತೆಯಂತೆ
ಸಂತೆ ಗುಳಿಕೆನ್ನೆಯ ಮುಂಗುರುಳು
ದೂರದೃಷ್ಟಿಯ ಕದಗಳನ್ನು
ತೆರೆದುಕೊಡುತ್ತದೆ ಸೋತಷ್ಟು ಸೋಲಲು

ಉಸಿರ ಏರಿಳಿತದ ಪ್ರಮಾದಗಳಿಗೆ
ಭಾಗಿಧಾರಿ ನೀ ಆಗಬೇಕು ಮುಂದೆ
ಕಡಲಾಚೆ ಅದಿರುನಾಡಿನ ಚೆಲುವೆ
ಕಣ್ಣಿನ ಒಡಂಬಡಿಕೆಗಳ ಆಯಸ್ಸು
ಮುಗಿಯುತ್ತದೆ ಕಾಯುತ್ತಿದ್ದರೆ
ಒಮ್ಮೆ ಉಸಿರು ನಿಲ್ಲುವಂತೆ
ಬಿಗಿದಪ್ಪಿ ರುಜುಮಾಡಿ ಬಿಡು ಒಲವ..!

ಅವಿಜ್ಞಾನಿ

- ಅವಿಜ್ಞಾನಿ

21 Apr 2017, 01:38 pm

ಕಾಣದ ಬದುಕು..

ಕೊನೆಯ ವಿದಾಯ ಅದಾಗಿರಲಿಲ್ಲ
ಮುಂದಿನ ದಾರಿಗೆ ಬೀಗ ಹಾಕಿತ್ತು..
ಅವಳಿಗದು ಅನಿವಾರ್ಯ
ಸಂಸಾರದ ಜವಾಬ್ದಾರಿ ಹೆಗಲ ಮೇಲಿತ್ತು..
ಬಾಡಿ ಹೋಗಿರುವ ಮುಖ,
ಜೋತು ಬಿದ್ದಿರುವ ಹಲ್ಲುಗಳು,
ನಿದ್ದೆ ಮರೆತ ಕಣ್ಣುಗಳು..
ಹಸಿವಿನಿಂದ ನರಳುತ್ತಿರುವ ಕಂದಮ್ಮಗಳು..
ಯಮನಂತೆ ಸದಾ ಕಾಡುತ್ತಿರುವ ಖಾಯಿಲೆ,
ಮಾತು ನೀಡಿ ಕೈಬಿಟ್ಟು ಹೋದ ಗಂಡ..

ಆತ ಅವಳಿಗೆ ಸರ್ವಸ್ವವೂ ಆಗಿದ್ದ
ಅವಳು ನಡೆವ ದಾರಿಯಲಿ ಮಲ್ಲಿಗೆ
ಚಪ್ಪರ ಹಾಕಿಸಿದ್ದ..
ಬಣ್ಣದ ಮಾತುಗಳನ್ನಾಡಿ ಪ್ರೀತಿಯ
ಮಾಯೆಯೊಳಗೆ ಬೀಳಿಸಿದ್ದ..
ವಯಸ್ಸಿನ ಆಕರ್ಷಣೆಗೆ ಆಕೆ ಮರುಳಾದಳು
ತಂದೆ ತಾಯಿಯ ತೊರೆದು ಪ್ರೀತಿಗೆ
ಮುನ್ನುಡಿ ಬರೆದಳು..

ವರ್ಷಗಳು ಉರುಳಿತ್ತು,
ಕಂದಮ್ಮಗಳು ರಚ್ಚೆ ಹಿಡಿದು ಗೋಗರೆಯುತ್ತಿತ್ತು..
ಬಡತನ ಕಿತ್ತು ತಿನ್ನುವ ಹಾಗಿತ್ತು.
ಆಕೆಯ ಜೀವನ ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬರಡಾಗಿತ್ತು.
ಜೊತೆಯಾಗಿ ಬಾಳಬೇಕಾದವನು ಕುಡಿತದ ದಾಸನಾಗಿ ವಿಧಿವಶನಾದ..

ಪ್ರೀತಿ ಎಲ್ಲವನ್ನೂ ಮರೆಸಿತ್ತು
ಸ್ವತಃ ಬದುಕನ್ನೂ ಕೂಡ..
ಬರಿಯ ಕಣ್ಣಿಗೆ ಜಗತ್ತು ಸುಂದರವೇ ನಿಜ,
ಆದರೆ ನಡೆವ ದಾರಿಯ ರೂಪಿಸುವವರು
ನಾವೇ ತಾನೇ..!!

- ನಮಿತ ಗಟ್ಟಿ

21 Apr 2017, 11:23 am

ಬೆಳದಿಂಗಳು ಬೇಕಿತ್ತು...

ಬೆಳದಿಂಗಳು ಬೇಕಿತ್ತು
ಅವಳಿಗೂ ನನಗೂ....
ಇಂದೇನೋ ವಿಶೇಷ
ಹುಣ್ಣಿಮೆಯಂತೆ ಊರಲ್ಲಿ
ಬೆಳಕ ಹಾಲು ಚೆಲ್ಲಿದಂತಿದೆ
ಮನೆಯ ಅಂಗಳದಲಿ
ಆದರೂ ಕಾರ್ಗತ್ತಲ ಗವ್ವೆನುವ
ನೀರವ ಮೌನದಿರುಳು
ಅವಳಿರದ ಮನದ ತುಂಬೆಲ್ಲಾ..!!

- Kanakamurthi

21 Apr 2017, 10:23 am

ಎಲ್ಲರು ಪ್ರೇಮಿಗಳೇ

ಪ್ರಪಂಚದಲ್ಲಿ ಎಲ್ಲರು ಪ್ರೇಮಿಗಳೇ
ಕೆಲವರು ಗುಪ್ತ ಪ್ರೇಮಿಗಳು
ಕೆಲವರು ಮುಗ್ಧ ಪ್ರೇಮಿಗಳು
ಕೆಲವರು ಭಗ್ನ ಪ್ರೇಮಿಗಳು
ಕೆಲವರು ಲಗ್ನ ಪ್ರೇಮಿಗಳು
ಉಳಿದವರು..................
ನನ್ನ ಪ್ರೇಮಿಗಳು

- stylish⭐⭐AA

21 Apr 2017, 09:22 am