Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಡುಗಾಟದ ವಯಸ್ಸಿನಲ್ಲಿ
ಚಂಚಲ ಮನಸ್ಸಿನಂದ ....
ಮಾಡದಿರು ಮನವೇ ಪ್ರೀತಿಯ..
ತಿಳಿದಿಕೂ ಜೀವನದ ಭೀತಿಯ...
ನಿತ್ಯದ ಬದುಕಿನಲ್ಲಿ ನಾನೂಬ್ಬ ಸ್ನೇಹಜೀವಿ
ಬಣ್ಣಗಳ ಮಾತಿನಿಂದ ತಿಳಿಸಲು ನಾನಲ್ಲ ಕವಿ ಪ್ರೀತಿಯ ಮಂತ್ರವನ್ನು ಜಪಿಸಲು ತೂಟ್ಟಿಲ್ಲ ಕಾವಿ
ಕನಸ್ಸು ಕಲ್ಪನೆಗಳಷ್ಟೆ ನಿಜ ಜೀವನದ ಸವಿ....
ಶಾಬುದ್ದೀನ ಎಸ್ ಆರ್.....
- shabudin
20 Apr 2017, 06:52 pm
ಕಥೆ ಹೇಳುವೆ ಕೇಳಿ ಒಂದು
ನಿದ್ದೆ ಬರದ ಕಣ್ಣುಗಳಿಗೆ
ಕನಸ ತೋರಿಸುವೆನೊಂದು
ನೊಂದ ಮನಸಿಗೆ ಚಂದದೊಂದು
ಹಾಡ ಹೇಳಿ ಹೊಸ ಆಸೆ ಹುಟ್ಟಿಸುವೆನೊಂದು
ಬಲು ಸುಳ್ಳುಗಾರ ನಾನು
ಬಲು ಮಾತುಗಾರ ನಾನು
ಕನಸು ಮಾರಲು ಬಂದವನು
ಹೃದಯ ಕದಿಯಲು ಬಂದವನು
ಹಾಡುಗರ ನಾನು
ನಿಮಗೊಂದು ಕಥೆ ಹೇಳಲು ಬಂದವನು
ನಿದ್ದೆ ಕಾಣದ ನಿಮ್ಮ ಕಣ್ಣುಗಳಿಗೆ
ಜೋಗುಳ ಹಾಡುವವನು
ಆಸೆ ಬತ್ತಿದ ಮನಸ್ಸಿಗೆ
ಕನಸು ಕಾಣುವುದ ಹೇಳಿಕೊಡುವವನು
ರಕ್ತ ಬತ್ತಿದ ಹೃದಯದಲ್ಲಿ
ಪ್ರೀತಿಯ ಚಿಲುಮೆ ಉಕ್ಕಿಸಲು ಬಂದವನು
- HarshaHL
20 Apr 2017, 05:00 pm
ನೀನೆ ನನ್ನ ತಾಯಿ
ಎಂದು ಭಾವಿಸಿದೆ
ನಿನ್ನ ಪಾದ ಸೇವೆಯ
ಮಾಡಲು ಬಯಸಿದೆ!!
ನಿನ್ನ ಸ್ಮರಣೆಯಲ್ಲೆ
ನಾನು ತನ್ಮಯಳಾದೆ
ಸ್ಥಿರವಾಗಿ ನೀ ಬಂದು
ನೆಲೆಸೆಂದು ಬೇಡಿದೆ!!
ನಿನ್ನ ಮಹಿಮೆಗೆ
ಮರುಳಾದೆ
ನಿನ್ನ ಅಗಲಿಕೆ
ಸಹಿಸದಾದೆ!!
ಎದುರಾದ ಶಕುನಗಳೆಲ್ಲ
ನೀನೆ ಎಂದು ಅರಿತೆ
ಮನದ ತುಡಿತಗಳಿಗೆಲ್ಲ
ನೀನೆ ಉತ್ತರವನಿತ್ತೆ!!
ನಾನೆ ಎಂಬ ಭಾವನೆ
ನನ್ನಿಂದ ಕಿತ್ತೆಸೆದೆ
ಮಹಾತ್ಮರ ಸಾಧನೆ
ಕಣ್ಮುಂದೆ ನೀ ತಂದೆ!!
ನಿನ್ನ ಮಹಿಮೆಯಿಂದ ಹುಟ್ಟಿತು
ನನ್ನಲ್ಲಿ ಜ್ಞಾನ ದಾಹ
ನೀನೆ ತೋರಿದೆ
ಜ್ಞಾನಾರ್ಜನೆಯ ಮಾರ್ಗ!!
ಶಂಕರರಿಗೆ ದೀಕ್ಷೆಯನಿತ್ತೆ
ಶ್ರುಂಗೇರಿಯಲಿ ನಲೆನಿಂತೆ
ನಿನ್ನ ಮಹಿಮೆಯ ಹರಡಿದರು
ಅಂದೆ ಮಹಾನ್ ಶಂಕರರು!!
- ಶಕುಂತಲಾ
20 Apr 2017, 03:37 pm
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಮಾಮೂಲಿ ಕೋತಿಯ
ತಾರುಣ್ಯ ಗೀತೇಯಲೀ
ಉತ್ತರ ಕಮ್ಮಿ,
ಪ್ರೆಶ್ನೆ ಯೇ ಜಾಸ್ತಿ,
ದಾರೀಲಿ ಕೈ ಕಟ್ಟಿ ನಿಂತಿರಲೇ,
ಹ್ರೂದಯಾನ ಸಂಪೂರ್ಣ
ಬಿಚ್ಚಿ ಇಡಲೇ,
ಮುಂಗುರುಳ ಸ್ಪ್ರಿಂಗಲಿ
ಜೋತಡಾಲೇ,
ಕಣ್ಣ ರೆಪ್ಪೆಯ ಮೇಲೆ ಮಲಗೀರಲೇ,
ಆಸೆಗಳ ಎಣಿಸಿ ಕೈ ಬೆರಳು ಸವೇದಿದೇ,
ಎಲ್ಲ ಹೇಳಿದರು ಇನ್ನೇನು ಉಳಿದಿದೆ,
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಎಲ್ಲಿಯೂ ಹೋಗದ ನಿಂತ ಬಸ್ ಓಂದರಲ್ಲಿ ಸಿಟೋಒಂದು ಹಿಡಿದವನು ನಾನು,
ಇಳಿ ಸಂಜೇಯಲಿ ನನ್ನ ನಂಬರ್ಗೇನೇ
ನಾನೇ ಮಾಡುವೆನು ಪೋನು,
ಈ ನಡುವೆ ಎಲ್ಲಿಯೋ ನೋಡುವೇನು,
ಹೀಗೆ ಎಲ್ಲಿಗೂ ಹೋಗುವೆನು, ನಾನು ಏನನ್ನೋ ಕಾಯೂವೇನೂ,
ನೀ ಸೀಕ್ಕರುನು ಸೀಗದೀದ್ದರುನು,
ಎದೆ ತುಂಬಿ ಹಾಡುವೆನು ನಾನು,
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಶಾಬುದ್ದೀನ ಎಸ್ ಆರ್.....
- shabudin
20 Apr 2017, 09:34 am
ಘೋರ ಬಿಸಿಲಿಗೆ ಬಳಲಿತೆ ಮನ..
ಮಳೆಹನಿ ಸುರಿಸಿದರೂ ಗಗನ..
ತಣಿಯಲಿಲ್ಲವೇಕೆ ಬಸವಳಿದ ಮನ....
ಸುತ್ತಿ ಬಂದರೂ ಬನ..
ನೋಡಿ ಬಂದರೂ ವನ..
ಕೇಳಿದರೂ ಕುಹೂ ಕುಹೂ ಗಾನ..
ಹಕ್ಕಿಗಳ ಚಿಲಿಪಿಲಿ ನಾದ..
ಬೇಸರದಿಂದೇಕೊ ಮನ....
ಮಾಡಿದರೂ ಸಿಹಿ ಪಾನ..
ಬಂದರೂ ಎಲ್ಲರ ಸಾಂತ್ವಾನ..
ನೋಡಿಬಂದರೂ ಸಿನಿಮಾನ..
ಉಲ್ಲಾಸವಿಲ್ಲದಂತಾಗಿದೇಕೂ ಮನ....
ಯೋಚಿಸಿದರೂ ತಿಳಿಯದಾಗಿ ಕಾರಣ..
ಮಾಡುತಾ ದೇವರಿಗೆ ನಮನ..
ಕಣ್ ಮುಚ್ಚಿ ಕುಳಿತೆ
ಮಾಡಲು ಧ್ಯಾನ....
ತಾನಾಗೆ ಕೈ....ಹಿಡಿಯಿತು ಪೆನ್ನನ್ನ..
ಹರಿದಂತಾಗಿ ಮನಕೆ ಚೇತನ..
ಉಲ್ಲಾಸ ಸಿಕ್ಕಂತಾಗಿ ಮನ..
ಜೋಡಿಸಿ ಜೋಡಿಸಿ ಪದಗಳನ
ಶುರುಮಾಡಿತು ಬರೆಯಲು ಕವನ....
ಈ ತುಡಿತ ಎಲ್ಲರಿಗೂ ಸಮಾನ..
ವಿಧಿ ಬಚ್ಚಿಟ್ಟರಬಹುದೆನಿಸಿತು
ಎಲ್ಲರಲೂ ಒಂದೊಂದು ಕಲೆಯನ್ನ..
ಉಲ್ಲಾಸವಾಗಿರಿಸಲು ತಮ್ಮಮನವನ್ನ....
ಅದಕೆ ಯೋಚಿಸಿ ಪೋಷಿಸಿ..
ಉಣಿಸಿ ಬೆಳಸಿ..
ನಿಮ್ಮ ನಿಮ್ಮಲ್ಲಿರುವ ಕಲೆಯನ್ನ..
ಆಗ ತಾನಾಗಿಯೇ ಸಂತಸದಿಂದ
ನಗುತ ನಲಿಯುತಲಿರುವುದು
ಎಲ್ಲರ ಮನ....
- KR Sreekamala
20 Apr 2017, 06:55 am
ಅವಳ ಮದುವೆಗೆ ಒಪ್ಪಿಕೊಂಡ ಮರುದಿನವೆ ಅವಳಿಗೊಂದು
ನೆನಪಿನ ಕಾಣಿಕೆ ಕೊಡಬೇಕೆಂದು
ಮುಂಜಾನೆಯೆ ವೆಂಕಟಪ್ಪನ ಬಟ್ಟೆಯ
ಅಂಗಡಿಗೋಗಿ ಮೊದಲ ರಾತ್ರಿಗೆ
ಒಂದು ಸೀರೆಯನ್ನು ಕೊಂಡಿಟ್ಟೆ
ಮದುವೆಯು ಮುಗಿದ ಮೂರು
ವರುಷವಾದರೂ ನಾ ತಂದ ಸೀರೆಯನ್ನು
ಮೊದಲ ರಾತ್ರಿಗೆ ಅವಳು ತೊಡಲಿಲ್ಲ ನಾ ತಂದ ಸೀರೆಯನ್ನ
ಮಲ್ಲಿಗೆ ಹೂವ ಮುಡಿಯಲಿಲ್ಲ
ಮಂಚವನ್ನು ಹೇರಲಿಲ್ಲ ಪ್ರೀತಿಯ ಮಾತುಗಳನ್ನು ಆಡಲಿಲ್ಲ
ಅಂದು ಬಾಡಿದ ಮಲ್ಲಿಗೆ ಹೂವಿನ ಸುಗಂಧ ಸೂಸುತ್ತಿದೆ ಮೊದಲ ರಾತ್ರಿಯ ಕನಸ್ಸುಗಳನ್ನು ನನ್ನ ಮನದಾಳದಲ್ಲಿ ಅವಳ ಕೊರಳ ಕರಿಮಣಿಯಲ್ಲಿ ಕುಣಿಕೆಗಳಾಗಿ
ಬಿಗಿದ್ದಪ್ಪಿದ ಮನದಾಸೆಯ ಕನಸ್ಸುಗಳು ನಾ ತಂದ ಸೀರೆಯ ಕುಪ್ಪಸಗಳು ಮುಚ್ಚಿದ ಪೆಟ್ಟಿಗೆಯೊಳಗೆ ಕಣ್ಮುಚ್ಚಿ ಕುಳಿತಿದೆ
ಅವಳಿಗಾಗಿ ಕಾದು ಕುಳಿತ ಹಸೆಮಣಿ ಅವಳಿಗಾಗಿಯೇ ಕಾಯುತ್ತಲೇ ಇದೆ ನಾತಂದ ಹಸಿರು ಸೀರಿ
- gtr
19 Apr 2017, 10:38 pm
ನಾ ಬರುವ ದಾರಿಗೆ ಮುಳ್ಳೊಂದನ್ನು ಹಾಕಿಬಿಡು ಏಕೆಂದರೆ ನಿನ್ನಲ್ಲಿಗೆ ನಾನೆಂದಿಗೂ ಬರಲಾರೇನೂ...
ಕಾರಣ ನಾ ಮೋಸಗಾರ ಕಣೆ....
ನನಗಾಗಿ ಕಾಯೋ ಆ ನಿನ್ನ ಕಣ್ಣ ರೆಪ್ಪೆಗೆ ವಿಶ್ರಾಂತಿಯನು ಕೋಟ್ಟುಬಿಡು ಏಕೆಂದರೆ ನಾನೆಂದಿಗೂ ನಿನ್ನ ಕಾಣಲಾರೇನೂ...
ಕಾರಣ ನಾ ಮೋಸಗಾರ ಕಣೆ.
ನನ್ನ ಹೆಸರು ನಿನ್ನ ತುಟಿಯ ಮೇಲೆ ಇನ್ನೂ ಮೇಲೆ ಬರದೆ ಇರಲಿ ಏಕೆಂದರೆ ನೀ ಕೂಗಿ ಕರೆದಾಗ ಓ ಏನುತಾ ನಾ ನಿನ್ನಲ್ಲಿಗೆ ಓಡಿ ಬರಲಾರೆನೂ...
ಕಾರಣ ನಾ ಮೋಸಗಾರ ಕಣೆ
-
19 Apr 2017, 07:55 pm
ಕಾಲಿ ಪುಟದೊಳಗೆ
ಬರೆದ ಕವನಗಳ
ಹೇಳೊ ಮನಸಿಲ್ಲ..!
ಒಂಟಿ ಮನದವನು
ಬಲೆಗೆ ಸಿಲುಕಿರುವೆ
ಯಾರು ಬಿಡಿಸಲ್ಲ..!
ನನ್ನಾ ಆಸೆಗಳ
ಕೆಡಿಸಿ ಕೊಂಡಿರುವೆ
ಮೊಸ ಮಾಡಿಲ್ಲ..!
ಮುಂದೆ ಯೋಚಿಸದೆ
ತವಕ ನಾಗಿರುವೆ
ಮುಗ್ದ ನಾನಲ್ಲ..!
ದಾರಿ ಸಿಗಬಹುದು
ಮೌನ ವಾಗಿರುವೆ
ಹಾಳೆ ಹರಿದಿಲ್ಲ...!
- ಭರತ್
19 Apr 2017, 06:58 pm
ಮೇಲಿರುವ ಕುಂಬಾರ
ಅದೇಷ್ಟು ಸಮಯ ತೆಗೆದು ಕೊಂಡು
ನಿರ್ಮಿಸಿದ ಮಂದಾರವೆ ನೀನು
ನಿನ್ನ ನೋಡಲು ಕಲ್ಲು ಕಣ್ಣು ಬೇಕೆಂದು ಪರಿತಪಿಸುತಿದೆ
ಸೂರ್ಯನ ಕಾಂತೀಯನ್ನು ಕಂಗಳಲಿ ತುಂಬಿಕೊಂಡು
ಚಂದ್ರನ ಬೆಳಕನು ಮುಖದಲೆ ಹಿಡಿದಿಟ್ಟು ಕೊಂಡು
ನನ್ನೆದುರು ಬಂದಾಗ ಲೋಕವನ್ನೆ ಮರೆತು
ನಿಂತೆನಲ್ಲೆ ಗೆಳತಿ
ನಿನ್ನ ಬಣ್ಣಿಸಲು ವರ್ಣಗಳೆ ಸಾಲುತಿಲ್ಲವಲ್ಲೆ
ಅಮವಾಸೆಯ ಕತ್ತಲನ್ನು
ಕಣ್ಣ್ ಹುಬ್ಬಿಗೆ ತಿಡಿಕೊಂಡು
ನಿಸರ್ಗದ ಹಸಿರನೆಲ್ಲ ನಿಯುಟ್ಟ
ಸೀರೆಗೆ ಬಳಿದು ಕೊಂಡು ಬರುವ
ನಿನ್ನ ಕಂಡು ನನ್ನೆ ನಾ ಮರೆತೆನಲ್ಲೆ
ನನ್ನ ಜೀವನವನೆಲ್ಲ ನಿನ್ನ ಸೊಬಗ
ಹೊಗಳಲು ಮುಡಿಪಾಗಿಡುವೆ ಗೆಳತಿ
ಇದೊಂದೆ ಇರುವುದು ನನ್ನ ಬಳಿ
ಆ ಕುಂಬಾರನ ಮಡಿಕೆಗೆ ಕಾಣಿಕೆ ನೀಡಲು
ಮೌನಿ
- ಮೌನಿ
19 Apr 2017, 06:48 pm
ಯಾವುದೀ ಹೊಸ ಸಂಚು
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು
ಗಿರಿಕಮರಿಯಾಳದಲಿ ತೆವಳಿತ್ತ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು || ಯಾವುದೀ ||
ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪ ಉರಿದು
ಬಾಳು ಕೊನೆಯೇರುತಿದೆ ಬೆಳಕಿನೋತ್ಸವದಲ್ಲಿ
ಮೈಯ ಕಣ ಕಣದಲ್ಲೂ ಹಿಗ್ಗು ಉರಿದು || ಯಾವುದೀ ||
ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ತಿಳಿದ ರುಚಿಯ
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದಿದ್ದು ಎಂಬ ವ್ಯಥೆಯ || ಯಾವುದೀ ||
- nandini umesh
19 Apr 2017, 01:56 pm