Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವನ ನವೆ

ಮೌನ ಹುಟ್ಟಿದ ರಾತ್ರಿಯಲ್ಲಿ
ಕಂದೀಲು ನೆತ್ತರ ಕಾರಿ
ಕೆಂಪಾಗುತ್ತದೆ
ನೆತ್ತಿ ಬೊಟ್ಟಿನಲ್ಲಿ ಮಾತಿನ ಬುತ್ತಿ
ತೆರೆಯದ ಖಾತೆ ಉಳಿಸಿಕೊಂಡಿದೆ

ಕೆನ್ನಾಲೆಗಳು ವಿರಹಗೀತೆ
ಹಾಡುವಾಗ ಮುಂಗುರುಳು
ಗಾಳಿಯನ್ನು ಮುತ್ತುತ್ತಿರುತ್ತದೆ
ಕಾಜುಗಳ ತರಹೇವಾರಿ ನಿನಾದಗಳಿಗೆ
ಕಾರ್ಗತ್ತಲೂ ಹದಿಹರೆಯವಾಗುವುದು ಗೊತ್ತಾಗದೇ

ಅವನ ಹೆಸರ ನವೆಯೊಂದು
ಪುಳಕ ಹುಟ್ಟಿಸಿ ಪರಾರಿಯಾಗುವಾಗ
ಒಣಗಿದ ತುಟಿಯಿಂದ ಮಾತುಗಳ
ಬಹಿಷ್ಕಾರವಾಗುತ್ತದೆ

ಹುಬ್ಬುಗಳು ಆಲಿಂಗನ ಬಯಸಿದ್ದು
ನೆಟ್ಟ ದೃಷ್ಟಿಯ ವಂಚಿಸಿ ನಡೆದ
ಆಚಾತುರ್ಯ ಕಾರ್ಯಕ್ರಮ
ಎಡೆಬಿಡದೆ ಕಾಡುವ ನೆನಪುಗಳ
ಅಲೆಗೆ ಕಾಡಿಗೆಯ ಉತ್ತರ
ಮರೀಚಿಕೆಗೆ ಬಯಕೆಗೊಂದು
ಹೊಸ ಆಯಾಮ

ಅವಿಜ್ಞಾನಿ

- ಅವಿಜ್ಞಾನಿ

17 Apr 2017, 07:03 pm

ಚುಟ್ಟ (Cigarette)

ನೂರೊಂದು ಚುಟ್ಟ
ಕಿಸೆದಾಗ ಇಟ್ಟ
ಒಂದೊಂದು ಸೇದಿ ಆನಂದಪಟ್ಟ
ಆಮೇಲೆ ಅವನಿಗೆ ಕಟ್ಟಿದರು ಚಟ್ಟ.

- PARASHURAM B

17 Apr 2017, 11:07 am

ಹೆಣ್ಣು

ನನ್ನ ತಾಯಿ ಕಣ್ಣೊರೆಸುತ್ತ
ಮೂಲೆ ಸೇರಿದಳು
ನಿನಗೆ ಹೆಣ್ಣಾಯಿತೆ ಎಂದು....

ನನ್ನಕ್ಕನ ಮೊಗದಲ್ಲಿ ಮಂದಹಾಸ
ಮರೆಯಾಗಿ,ಮೌನ ಆವರಿಸಿತು
ನಿನಗೆ ಮಗಳಾದಳೆ ಎಂದು....

ಹೇಗೊ ಇದ್ದ ನನ್ನ ಅಂತರಂಗ
ನನ್ನ ಅಣಕಿಸಿ ಹೇಳಿತು
ನೀ ಹಡೆದವಳು ಹೆಣ್ಣೆಂದು....

ಬಂಧು- ಬಳಗದವರಲ್ಲಿ
ಬಲವಂತದ ಹುಸಿ ನಗು
ನನ್ನ ಮಗಳ ಬರಮಾಡುವಲ್ಲಿ....

ಕೈ- ತುತ್ತ ಕೊಟ್ಟು ಆಡಿಸಿ ಬೆಳೆಸಲು
ಅವ್ವನ ಆಸರೆ ಬಯಸುವರು
ನೋವು- ನಲಿವಲಿ ಒಂದಾಗಿ
ಬಾಳು ಬೆಳಗಲು ಮಡದಿಯಾಸರೆ ಬಯಸುವರು
ಜನುಮ ಕೊಟ್ಟ ಮಗಳನು ಬೇಡವೆನುವರು?

ಮೌನ ಮುರಿದು ಬೆಳೆಸುವರು ಮಗಳನು
ಮಗನಿಗಂತ ಹೆಚ್ಚು ಎಚ್ಚರಿಕೆಯಲಿ
ಏನಾಗುವುದೋ, ಎಂಬ ಭಯದಲಿ
ಒಂದು ದಿನ ಸೇರುವಳು ಅನ್ಯರ ಅಂಗಳನು

ಎಲ್ಲೊ- ಹುಟ್ಟಿ,ಎಲ್ಲೊ- ಹರಿದು
ಎಲ್ಲೊ- ಸೇರುವ ನದಿಯಂತೆ
ಹುಟ್ಟಿದ- ಮೆಟ್ಟಿದ ಮನೆಗು
ಬೆಳಕಾಗಿ ಕರಗುವಳು ಮೇಣದಂತೆ


ಶಾರಧ

- ಶಕುಂತಲಾ

17 Apr 2017, 10:23 am

ಒಂದು ಕಿವಿ ಮಾತು....

ನಲೇ಼
ಕಾಯುವೆನು ವರುಷವೇನು
ಜನ್ಮ ಜನ್ಮ ನಿನ್ನನೆ
ನಿನ್ನ ಮಧುರ ನೆನಪಲೇ಼
ಮರುವೆ ನಾನು ನನ್ನನೆ ........
**** ಇಂತಿ‌‌‌‌‌‌******

- chinnadana ni kosam

17 Apr 2017, 08:55 am

ಅವಳೆಂದರೆ ಕವಿತೆ

ಮನಸ್ಸಿನಲ್ಲಿ ಅವಳ ಚಿತ್ರ ಬಿಡಿಸಿ
ಚಿತ್ರ ವಿಚಿತ್ರ ಕಲ್ಪನೆ ಮೂಡಿ
ಅದು ಅಕ್ಷರಗಳಾಗಿ ಸುಂದರ ಸಾಲುಗಳಾದಾಗ
ಕವಿ ಅದಕ್ಕೆ ಇಟ್ಟ ಹೆಸರು ಕವಿತೆ

- ಕೃಷ್ಣ ಮುತ್ತು

17 Apr 2017, 08:44 am

ರಾಜ್ಯಭಾರ

ಸುಂದರ ರಾತ್ರಿಯಲಿ
ಕನಸುಗಳ ಮೆರವಣಿಗೆಯಲಿ
ನಿನ್ನದೇ ರಾಜ್ಯಭಾರ ಕಣೇ ಹುಡುಗಿ
ನನ್ನಿ ಮನದಲಿ....

- ಕೃಷ್ಣ ಮುತ್ತು

16 Apr 2017, 09:27 pm

ನಗರವೆಂಬ ಸಂತೆ

ನಗರದಿ ಓಡಾಡುವ ಯಂತ್ರಗಳು ನಾವು
ಒಂದು ಬಟನ್ ನಿನ್ನ ನಿರ್ದೇಶನದಂತೆ ನಡಿಯುವೆವು

ಬೆಳಗೇಳಲೊಂದು ಅಲಾರಾಮು
ತಿನ್ನಲು ತಂಗಳು ರೊಟ್ಟಿಯಂಥಾ ಬ್ರೆಡ್ಡು ಬನ್ನು

ಕಾಲಚಕ್ರಕೂ ಬಂದಿದೆ ಇಲ್ಲಿ ವೇಗ
ಮನಸಿನ ಭಾವನೆಗೆಲ್ಲಿದೆ ಜಾಗ

ಮುಖಕ್ಕೆ ಇರಲೇಬೇಕು ಮೇಕಪ್ಪು
ತುಟಿಗಿಷ್ಟು ಲಿಪ್ ಸ್ಟಿಕ್ಕು ಮನದ ನೊವಿಗಿಲ್ಲ ಇಲ್ಲಿ ಟಾನಿಕ್ಕು

ಹೊರಗೆ ಹೋದರೆ ಟ್ರಾಫಿಕ್ಕು ಎಲ್ಲೆಲ್ಲೂ ಕಸ ಪ್ಲಾಸ್ಟಿಕ್ಕು,
ನಗುವಿಗೂ ಹುಡುಕುವರು ಲಾಜಿಕ್ಕು ಕಂಬನಿಯೂ ಇಲ್ಲೊಂದು ಸರಕು

ಜಂಕ್ ಫುಡ್ ತಿಂದು ತಿಂದು ಹಿಡಿಯಿತೇ ಮನಸಿಗೂ ಜಂತು
ಎಲ್ಲಿ ಹುಡುಕಿದರೂ ಸಿಗದು ಒಂದಿಷ್ಟು ಮಾನವೀಯತೆಯ ರಂಗು

ಕಳೆದುಕೊಂಡಿಹೆವು ನಮ್ಮತನವನು ಎಲ್ಲೆಂದು ತಿಳಿಯದಾಗಿದೆ
ಹುಡುಕಬೇಕಿದೆ ಈ ಜನಜಂಗುಳಿಯಲಿ ನಾವ್ ಕಳೆದುಹೋಗದೆ

ಬೇಬಿಸಿಟಿಂಗಿನ ನಡುವೆ ಕಳೆದುಹೋಯಿತೇ ಅಜ್ಜ ಅಜ್ಜಿಯರ ಆ ಪ್ರೀತಿ
ಜೀನ್ಸ್ ಟಾಪಿನ ನಡುವೆ ಕರಗಿಹೋಯಿತೇ ಕಂಬನಿ ಒರೆಸುತ್ತಿದ್ದ ಅಮ್ಮನಾಸೆರಗು

ಕೈಬೀಸಿ ಕರೆಯುತಿದೆ ಪುಟ್ಟ ಊರಿನಾ ಪುಟ್ಟ ಗುಡಿಸಲು
ಸಾಟಿಯೇ ಅದಕೆ ನಗರದಾ ಗಗನಚುಂಬಿ ಮಹಲು

ಸುತ್ತಲೂ ಗಡಿಬಿಡಿಯ ಸಂತೆ ನಡುವೆ ನಿಂತಿಹೆ ನೀ ಏಕಾಂಗಿಯಂತೆ
ಇಷ್ಟೊಂದು ಸವಲತ್ತಿನ ನಡುವೆಯೂ ಆಗಿಹೆ ನೀ ಅನಾಥನಂತೆ

ಔದ್ಯೋಗೀಕರಣಕೆ ಇದುವೇ ದೇವಾಲಯ ವಂತೆ
ನಗರೀಕರಣದ ಶಿಶುವೇ ನೀ ಅನಾಥಪ್ರಜ್ಞೆಯಂತೆ

ಹಂಸಿನಿ

- ವಿಸ್ಮಯ

16 Apr 2017, 09:22 pm

ಓ ನಲ್ಲೆ ..

ನೋಟದಲ್ಲಿ ಒಲವನ್ನು ಬೀರುವ ಜಾಣೆ
ಬೇಟೆಯಾಡುವೆ ಏಕೆ ಈ ಹೃದಯವನೇ಼
ಮೀಟಿ ಸ್ವರ ಹೋರಡಿಸು ಪ್ರೇಮ
ವೀಣೆಯನ್ನು
ದಾಟಿ ನಾಬರುವೆ ನೂರಾರು ಚಿಂತೆಯನ್ನು .......

- chinnadana ni kosam

16 Apr 2017, 07:58 pm

ಕನಸಿನ ಒಡತಿ

ಕನಸಿನ
ಒಡತಿಯ
ಅಪ್ಪಣೆಯಿಲ್ಲದೆ
ರಾಶಿ ರಾಶಿ
ಬಂದು ಬೀಳುವ
ಕನಸುಗಳೇ
ನನ್ನೊಳಗಿನ
"ಕವಿತೆ"

#ಕೃಷ್ಣಮುತ್ತು

- ಕೃಷ್ಣ ಮುತ್ತು

16 Apr 2017, 07:50 pm

ಒಣಮಣ್ಣ ಜಂಗಮ

ಜುಮುಕಿ ಸುಂದರಿ ಹೊತ್ತು
ಮೀರಿಸುವಾಗ ನನ್ನ ಕುತೂಹಲವು
ಒಂದು ಹೆಜ್ಜೆ ಮುಂದಿಡುತ್ತದೆ
ಬೆಳಕ ಹೆರುವ ಕ್ಯಾಂಡಲ್ಲಿನ ಕತ್ತಲು
ನನ್ನೊಳಗೆ ದೇಶಾಂತರವಾಗುವ
ಸೂಚನೆ ಸಿಗುವುದು ಆವಾಗಲೇ

ಹುಬ್ಬುಗಳಲಿ ಕಥೆ ಹೇಳುವ
ಮೌನರಾಣಿ ಕಾಜಿನ ಬಳೆಗೆ
ಕವನ ಹುಟ್ಟಿಸುತ್ತಾಳೆ
ನಿನ್ನೆಯ ತಾಕಲಾಟ ಕೇಳಿದ
ಕಿವಿಗಳಿಗೆ ಮುಂಗುರುಳು ಸುತ್ತುವುದು ಅದಕ್ಕಾಗಿಯೇ

ನನ್ನೊಲವು ಕಾಯಿಯಾದಾಗ
ಅವಳಿಗೆ ಹಣ್ಣಿನ ವ್ಯಾಮೋಹ
ತಾರಕಕ್ಕೇರುತ್ತದೆ ಎಂಬುದು
ಇನ್ನು ಕೂಡ ನಿಗೂಢ ರಹಸ್ಯ
ಅವಳೆದೆಯ ಬೇರಿಗೆ ಜೋತು
ಬಿದ್ದ ನೀರಿಲ್ಲದ ಒಣಮಣ್ಣು ನಾನು

ಯೋಚನಾ ಲಹರಿಗೆ ತಡೆ
ಹಾಕುವ ನನ್ನ ಕನಿಷ್ಟ ಪ್ರಯತ್ನವನ್ನು
ಅಲ್ಲಗಳೆಯುವ ಅವಳ ಆಂತರ್ಯ
ಭ್ರಮೆಯ ಹುಟ್ಟಿದ ಹಬ್ಬಕ್ಕೆ
ಶುಭಾಶಯ ಕೋರುತ್ತದೆ
ಮುಗಿಲೂರಿನವಳು ಮಂಜಿನಂತೆ
ಕರಗುವ ಕಲೆ ಮಾತ್ರ ಪ್ರಯೋಗಿಸುವುದು ಈ ಜಂಗಮನ ಮೇಲೆ

*ಅವಿಜ್ಞಾನಿ

- ಅವಿಜ್ಞಾನಿ

16 Apr 2017, 06:51 pm