Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು...

ಕಾಣುವ ಕನಸಿಗೂ
ಮನಸು ಬಯಸೋ ಆಸೆಗೂ
ಎತ್ತಣ ಸಂಭಂದ
ಅರಿತು ಬಾಳುವುದೆ ಆನಂದ....

- chinmayi.....chinni

07 Apr 2017, 10:58 pm

ಜಲಪಾತ

ಜಲಪಾತ ಮೇಲಿಂದ ಜಾರುತ್ತಿರುವುದು
ನೋಡಿ ಕೆಲವರು ಅದು ಮತ್ತೆ
ಹಿಂತಿರುಗಲಾರದು ಅಂದುಕೊಳ್ಳುತ್ತಾರೆ....

ಆದರೆ ಮರು ನಿಮಿಷವೇ ಅದು
ಜಲಜಲನೆ ನಗುವು ಚೆಲ್ಲುತ್ತಾ ಮತ್ತೆ
ಹರಿದು ಬರುತ್ತೆ........

ಹಾಗೆಯೇ ಕೆಲವರು ನಮ್ಮನ್ನು ಕೀಳಾಗಿ
ನೋಡುತ್ತಾರೆ ನಾಳೆ ನಾವು ಆಕಾಶದೇತ್ತರಕ್ಕೆ
ಬೆಳೆದಾಗ ತಲೆ ತಗ್ಗಿಸಿ ನಿಳ್ಳುತ್ತಾರೆ.....

- ಚುಕ್ಕಿ

07 Apr 2017, 09:46 pm

ನಗೆ ತುಂಬಲು

ಈಗ ಬರೆದರೆ ಸಾವಿರ ಕವನಗಳು
ಸಾಲುವುದಿಲ್ಲ ನನ್ನಲ್ಲಿ ನಗೆ ತುಂಬಲು......

ಕೋಟಿ ಕಣ್ಣೀರಿನ ಹಾನಿಯು ಸಾಲಲ್ಲ
ಈ ನಿಮಿಷ ನನ್ನ ವ್ಯಥೆ ತೋರಲು.......

ಯಾಕಿಂತ ಬೇಸರ ನನ್ನಲ್ಲಿ ಈ ದಿನಾ
ಕಾರಣ ಹೇಳಲು ಉಳಿಸಿಲ್ಲ ನನ್ನಲ್ಲಿನ
ನೋವು ನನ್ನ..........

- ಚುಕ್ಕಿ

07 Apr 2017, 08:54 pm

ಸದಾ ನಿನ್ನ ಧ್ಯಾನ

ಸದಾ ನಿನ್ನ ಧ್ಯಾನ ನನ್ನಲ್ಲಿ
ಇನ್ನೂ ಮರೆಯಾಗಿಲ್ಲ ಮೌನ .

ನಿನ್ನ ಹೆಸರೇ ನನ್ನ
ಉಸಿರಾಗಿ ಹೋಯಿತೇನೋ
ನಿನ್ನ ಕಂಡ ಕ್ಷಣ .

ನೀ ನನ್ನ ಮನಸೋ ಕಣ್ಣೀರು
ಕಂಡ ಕನಸೋ ತಿಳಿದಿಲ್ಲ ಈ ಕ್ಷಣ.

ನೆನೆದು ನೆನೆದು ನಿನ್ನ ನಗುವಿನ ಚೆಲುವು
ನಾನೇ ಮರೆತೇ ನನ್ನ ಅಸ್ತಿತ್ವದ ನೆಲವು.

- ಚುಕ್ಕಿ

07 Apr 2017, 08:08 pm

ಹೆಣ್ಣಿಗೆ ಮನಸೋತವ

ಹೆಣ್ಣೆಂಬ ಚಂಚಲೆಗೆ
ಮನಸೋಲದ ಗಂಡು ಯಾರು
ಅವ ಸಂಸಾರಿಯೋ
ಅವ ಸನ್ಯಾಸಿಯೋ
ಪುಳಕಗೊಂಡಿರುವ ಒಂದು ದಿನ
ಅವಳ ಅಂದ ಕಂಡು!!

ಕಣ್ಣಲ್ಲೇ ಕೊಲ್ಲುವವಳ
ಕಂಡು ತಾ ಮೋಹಗೊಂಡು
ಮೆಚ್ಚಿ ಬಯಸಿ
ಅವಳ ಪ್ರೇಮವನ್ನು
ನೆನೆದು ಸಂಭ್ರಮಿಸಿರುವ ಕಂಡು
ಹಗಲು ಕನಸ!!

ಚೆಲುವೆಯ ಮನವೊಲಿಸಲು
ಅವಳ ದಾರಿಯ ಕಾದು ನಿಂತು
ಮನದ ಪ್ರೇಮವ
ಬಹಿರಂಗ ಪಡಿಸಲು ಹೆದರಿ
ತಾ ಸೋತು ಚೆಂದದ‌ ನಗೆ ಬೀರಿ
ಅವಳ ಬೀಳ್ಕೊಟ್ಟಿರುವ!!

- ಪಿ.ಜಿ.ಜ್ಯೋತಿ

07 Apr 2017, 03:25 pm

ಲಕ್ಸ್ಮಿ ಬಾರಮ್ಮ

ತಂಗಾಳಿಯಲ್ಲಿ ನನ್ನವಲ ನೆನೆದಾಗ
ಮೈಮನವೆಲ್ಲ ಕಂಪಿಸಿತು ಆಗ
ಹಕ್ಕಿಗಳ ಮದ್ಯ ಹಕ್ಕಿಯಾದಳು
ಮೌನಹೃದಯದ ಮೂಕ ಬಾಷೆಗೆ ಮಾತಾದಳು
ಕೊನೆಗು ಒದಲಾರದ ಗ್ರಂಥವಾದಳು
ಎಷ್ಟೆ ಕಾಡಿಬೆಡಿದರು ಕಳ್ಳಿ ಕನಸಲ್ಲೆ ಉಳಿದಳು

- pavankumar

07 Apr 2017, 02:18 pm

ಅಂತರಂಗ

ಯಾವಾಗ ಜಿಗಿದೆ ನೀ ಹೊರಗೆ
ನನ್ನ ಅರಿವಿಗೆ ಬಾರದ ಹಾಗೆ?

ಕನಸುಗಳ ಗಂಟು ಬಿಚ್ಚಿ
ಹರಡಿರುವೆ ಕಣ್ಮುಂದೆ ಹೀಗೆ

ಈಡೇರದ ಆಸೆಗಳ ಮತ್ತೆ
ನೆನಪಿಸಿ ಮರೆತ ಮನಸಿಗೆ

ತಳ ಸೇರಿದ ಉತ್ಸಾಹ ಉಕ್ಕಿ
ನೆಗೆದು ಕುಣಿಯುವ ಹಾಗೆ

...........ಯಾವಾಗ ಜಿಗಿದೆ ನೀ?
ಕವಿ ರಾಜ

- kavita Rajesh

07 Apr 2017, 01:44 pm

ಕಾಲು ಗೆಜ್ಜೆಯ ಮೌನ

ನಡೆದರೂ ಕುಣಿದರೂ
ಏಕಿಂದು ಈ ಮೌನ!!
ರಭಸದಿ ನಾ ನೆಗೆದು
ಜಿಗಿದರೂ ಈ ಮೌನ!!

ಸಾವಿರ ಹೆಜ್ಜೆಗೂ
ಸ್ಪಂದಿಸದೆ ಈ ಮೌನ!!
ಸಂತಸದ ಅಲಂಕಾರ
ಮರೆತಿರುವ ಈ ಮೌನ!!

ಹೆಜ್ಜೆಯ ಸಂಗಾತಿಯೇ
ಏಕಿಂದು ಈ ಮೌನ!!
ಏಕಾಂತದ ಪಯಣದಲ್ಲಿ
ಬೇಸರವು ಈ ಮೌನ!!

ಹೆಣ್ಣಿನ ಲಜ್ಜೆಯ ನುಡಿಯ
ಮರೆಸಿಹುದು ಈ ಮೌನ!!
ಕಾಲು ಗೆಜ್ಜೆಯೇ ನುಡಿಯೇ
ಏಕಿಂದು ಈ ಮೌನ!!

- ಪಿ.ಜಿ.ಜ್ಯೋತಿ

07 Apr 2017, 09:32 am

ರಾಜಕುಮಾರ

‌‌‌‌‌ತಾನೇ ಕಟ್ಟಿಕೊಂಡ ರಾಜ್ಯದ ಒಡೆಯ ಅವನು,
ಅವನ ಉಸಿರ ಆಳದ ನೋವ ಅರಿಯ ಬಯಸಿದವರೆಷ್ಟು,
ಅರಿತು ದೂರಾದವರೆಷ್ಟು.
ಇಡೀ ಜಗತ್ತೇ ಅವನ ತೆಗಳಿದರು,
ಅವನೊಳಗಿನ ಛಲ ,
ನಾ ನಿನ್ನ ದೂರೆನೆಂದಿತು....
"ಸೋಲು,ಗೆಲುವು ಜಗದ ನಿಯಮ"

- ಅಯ್ಯೇಂದ್ರ ಆರ್ ಪತ್ತಾರ್

07 Apr 2017, 08:25 am

ಏನು ಮಾಡಲೀ...

ನನಗೆ ಗೊತ್ತು
ನೀ ಬೇರೆಯವರ ಸ್ವತ್ತು
ಜಾಗೃತ ಮನಸು ಹೇಳುವುದು
ನಿನ್ನ ಮರೆತುಬಿಡು ಎಂದು
ನಾನು ಆಕೆಲಸ ಈಕೆಲಸ ಮಾಡುತಾ
ಪ್ರಯತ್ನಿಸುತ್ತಿರುವೆ ಮರೆಯಬೇಕೆಂದು
ನಾ ನಿದ್ರಿಸುವಾಗ ಸುಪ್ತಮನಸಿನಲಿ
ಅಡಗಿರುವ ನಿನ್ನ ನೆನಪು ಕಾಡುವುದು
ಎಚ್ಚರಾದ ಕಣ್ಣುಗಳು ನಿನ್ನ ಹುಡುಕುವವು
ನನ್ನುಸಿರಿರುವವರೆಗೂ ನನ್ನೊಡನೆ ಬರುವ
ನೆನಪುಗಳ ಕೊಟ್ಟಿರುವೆ...
ನೀನೆ ಹೇಳು ನಾ ಏನು ಮಾಡಲೀ...

- ಚೇತನ್ ಬಿ ಸಿ

06 Apr 2017, 11:08 pm