Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ಬರುವಿಕೆಗೆ ಕಾದು ಕಾದು
ಸಾಕಾಗಿದೆ ಇನಿಯ
ನಾ ಎಷ್ಟು ಕಾಯಲಿ ನಿನ್ನ.
ಏನೂ ಅರಿಯದ ನನಗೆ
ನೀ ಮುಗ್ದ ಪ್ರೀತಿಯ ಕೊಟ್ಟೆ.
ಮಗುವಂತೆ ಜೋಪಾನ ಮಾಡಿದೆ.
ನನ್ನೆಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸಿದೆ
ನೀನೆ ನನ್ನ ಪ್ರಪಂಚ ಎಂಬಂತೆ
ನನ್ನ ಮನದಲ್ಲಿ ಬಂದಿಯಾದೆ
ನೀ ಇಂದು ನನ್ನಿಂದ ಮರೆಯಾಗಿರುವೆ.
ನನ್ನ ಕಣ್ಣೀರು ಜಾರಿ ಹೋಗುವ ಮುನ್ನ
ನೀ ಬಂದು ಸೇರು ನನ್ನ.
✍ಕನಸುಗಾರ
- varadaraju@gmail.com
11 Jan 2020, 08:01 pm
ಗುಳಿಗೆನ್ನೆಯ ನಗುವಿನ ಚೆಲುವೆ
ಎಲ್ಲರನೂ ನಗಿಸುತ್ತ ನೀ ನಗುತಿರುವೆ
ಆ ಚಂದ್ರಿರ ಮುಖದವಳು ನೀನು
ಕಾಡಿಗೆ ಕಂಗಳನ ನೋಟವನ್ನು ಬಿರುವೆ......
ನಿನ್ನ ಮುಖವು ಆ ಬೆಳದಿಂದಗಳ ಬಲೆಯಂತೆ
ತಿಂಗಳೊಮ್ಮೆ ಬರುವ ಹುಣ್ಣಿಮೆಯ ಚಂದ್ರಿರನಂತೆ
ನೀ ನಿದರೆ ಇಡೀ ಲೋಕವನ್ನೇ ಮರೆಸುವೆ
ಎದೆಂದೆಗೂ ಮರೆಯದಂತ ಚೆಲುವಿನ ಕಂಗಳು ನೀನು.....
ಆ ಆಗಸದಲ್ಲಿ ಕಮನಬಿಲ್ಲಿನವಳು
ಏಳು ಬಣ್ಣದವಳು ನೀನು
ನಿನ್ನ ನಗು ಆ ಆಕಾಶವೇ ಕರಾಗಿ ನಿಂತಿತು
ಈ ಭೂಮಿ ನೀ ಪಾದ ಸ್ವರ್ರ್ಸದಿಂದ ಪವನವಾಗಿತ್ತು...
ಹೇ ದೇವತೆಯ ಸುಂದರಿಯೇ
ನೀ ಎಲ್ಲಿವಿರುವೆ
ನಿನ್ನನ್ನು ನೋಡಲು ನನ್ನ ಕಣ್ಣು ಕಾಯುತ್ತಿದೆ
ಬೇಗ ಬಂದು ಸೇರಬರದೆ ಈ ನನ್ನ ಮನವನ್ನ......
- Ajay
11 Jan 2020, 06:17 am
ಮಲ್ಲಿಗೆ ಮುಖದ ರಾಜಕುಮಾರಿ...
ನಿನ್ನ ನಗೆಯು ಶೃಂಗಾರ ಸಿರಿ...
ಬೊಂಬೆ ಮಾತಿನ ಚೇಲುವೆ ನೀ,ಸಿಂಗಾರಿ...
ಕೇಳಿ ಮರೆತಿರುವೆ ನಾ ಮನೆಯ ದಾರಿ...
➡ ಬಸವರಾಜ್ ಕನ್ನೂರ...✍
- BasavarajKannur
10 Jan 2020, 08:51 pm
ಹಾಡು ಗೆಳೆಯ
ಹಾಡೊಂದ ನೀನು
ಕೇಳಬೇಕಿದೆ ನಾನು!!
ಈ ಒಂಟಿ ಹೃದಯದಿ
ಪ್ರೀತಿಯ ಉದಯ
ಬಯಸಿ ನಿಂತಿದೆ ನಿನ್ನನು!!
ಮನದ ಬನದಲಿ
ಹಾಡೋ ಚಿಲಿ ಪಿಲಿ
ಗಾನ ಸುದೆಯನು ಕೇಳು!!
ಇರುಳ ಬದುಕಿಗೆ
ಬೇಳಕ ನೀಡುವ
ಹಣತೆ ಉಡುಗೊರೆ ನೀಡು!!
ಸರಿವ ಕಾಲದ
ಸರದಿ ಸಾಲಲಿ
ನೀನು ನನ್ನಯ ಪಾಲಿಗೆ!!
ಬಿಡಿಸಲು ಆಗದ
ಬಂಧ ಬೆಸೆದಿದೆ
ಬರುವ ಎಲ್ಲ ನಾಳೆಗೆ!!
- ಪಿ.ಜಿ.ಜ್ಯೋತಿ
10 Jan 2020, 06:48 pm
ಇಲ್ಲಿ ಯಾರದ್ದೊ ನೆಚ್ಚಿಕೆಗಾಗಿ
ನಮ್ಮ ಜೀವನ ವ್ಯರ್ಥವಾಗಬೇಕಿಲ್ಲ
ಪ್ರದರ್ಶನದ ಬದುಕಿಗಿಂಥ
ನಿದರ್ಶನದ ಬದುಕು
ನಮಗೆಲ್ಲಾ ಹಾದಿ ತೋರಲಿ.
- mallikarjuna hm
10 Jan 2020, 12:06 am
೧.
ಮುಂಜಾನೆಯಲಿ ಇಂದು ಮಂಜಿನ ಇಂಚರ...
ಮರೆಮಾಚಲು ಬರುತ್ತಿದ್ದ ಬಾನಿನಲಿ ಭಾಸ್ಕರ...
ತಡೆಯಲು ಬಂದನು ಕಳ್ಳ ಚಂದಿರ...
ತೊಡೆಸಿಯೆ ಬಿಟ್ಟನು ಬಂಗಾರದ ಉಂಗುರ...
➡ ಬಸವರಾಜ್ ಕನ್ನೂರ...
- BasavarajKannur
10 Jan 2020, 12:04 am
ರಾಧೇಯೋರ್ವಳಿರುವಳು ಇಲ್ಲಿ
ಕಾಯುತಲಿ ಮಾಧವನ ದಾರಿ
ಅವನ ನಾಮ ಸ್ಮರಣೆಯಲ್ಲಿ ಮರೆತಿಹಳು
ಉಸಿರ ಬಿಸಿಯ ಗಾಳಿ.
ಮೇಘಶ್ಯಾಮನೆಲ್ಲಿರುವನೋ ತನ್ನನುಡಿಕಿ
ಎಂದಿಗೆ ಬರುವನೋ ತಿಳಿಯದೇನೆ ರಾಧೆ
ಅವನ ಗಾದೆ ಪ್ರೇಮದಿಂದ ಹಾಡುತಿಹಳು
ಹೊಸ್ತಿಲಿಗೆ ಹೇಳುತಿಹಳು.
ಇಟ್ಟ ಸಿಂಧೂರ ಮುಡಿದ ಮಂದಾರ
ಮಾಸದಿರಲಿ ಬಾಡದಿರಲಿ ನನ ಕೃಷ್ಣನ
ಕಾಣುವವರೆಗೂ ಅವನ ನೆರಳು ನನ್ನ
ಸೋಕುವವರೆಗೂ.
ತುಟಿಯ ಕೆಂಪು ಕಪ್ಪು ಕಾಡಿಗೆ ಕರಗದಿರಲಿ
ದೀಪ ಆರದಿರಲಿ ಕನಸು ಕಮರದಿರಲಿ ತಾವರೆ ಬಿರಿಯದಿರಲಿ ಕಮಲ ನಯನಾ ನಿನ್ನ ನೋಟಕೆ
ಸಿಲುಕಿ ನನ್ನ ಮನ ಮರೆಯದಿರಲಿ ನಿನ್ನನುಡಿಕಿ
ನನ್ನ ತೊರೆಯದಿರಲಿ.
- ಚುಕ್ಕಿ
08 Jan 2020, 03:36 pm
ಹೈಕು
---------
೧೨೧.
ಸಂದೀಘ್ದ ಮನಸ್ಸಿನಲ್ಲಿ
ಸವಾಲೆತ್ತುವ ಪ್ರಶ್ನೆ
ವೈರಾಗ್ಯ.
೧೨೨.
ಬ್ರಹತ್ ಶಿಲಾಶಾನದ
ಬಂಡೆಯೂ ಉತ್ತರ ನೀಡುವುದು
'ಬರುವಾಗ ಬೆತ್ತಲೆ
ಹೋಗುವಾಗಲು ಬೆತ್ತಲೆ
ಬಂದು ಹೋಗುವ ನಡುವೆ
ತುಂಬಿಸಿಕೊಳ್ಳದಿರಿ ಕತ್ತಲೆ.'
೧೨೩.
ಯಾವುದೇ ಬಂಧನಕ್ಕೆ
ಒಳಪಡದ ದೇವರು ಬಾಹುಬಲಿ.
೧೨೪.
ಗೊಮ್ಮಟನ
ಕಮ್ಮಟದಲ್ಲಿ
ಮಾಯೆಗೆ ಪ್ರವೇಶವಿಲ್ಲ.
೧೨೫.
ನನಗೆ ನಾನೆ ಗುರು
ನನಗೆ ನಾನೆ ದೇವರು
ಸಾರುವುದು ಗೊಮ್ಮಟನ ಕಲ್ಲು.
೧೨೬.
ಗೆದ್ದು ಸೋತವನು ಭರತ
ಸೋತು ಗೆದ್ದವನು ಬಾಹುಬಲಿ.
೧೨೭.
ಏಕ ಶಿಲಾ ಶಾಸನದಲ್ಲಿ
ಮೂಡಿಬಂದುದೆಲ್ಲ
ಖಾಲಿಯಾದ ಈ ಜೀವನ.
೧೨೮.
'ಎದ್ದು ನಿಂತರೆ
ಜಗವೇ ಬಾಗುವುದು'
ಸಾರುವನಿದನು ಗೊಮ್ಮಟನು.
೧೨೯.
ಮೋಕ್ಷದ ದಾರಿಗೆ
ಚಂದ್ರಗುಪ್ತ ಬಸದಿಯೇ ಸಾಕ್ಷಿ.
೧೩೦.
ಬೆಟ್ಟ ದತ್ತಿದಾಗಲೂ
ಸಿಕ್ಕುವುದು
ಬೆತ್ತಲೆಯ ಮೂರ್ತಿ.
--- ಸುರೇಶ ಜಕಾತಿ.ಜಮಖಂಡಿ
8746086658.
- ಸುರೇಶ ಜಕಾತಿ.ಜಮಖಂಡಿ
06 Jan 2020, 10:10 am
ಚೆಲುವ ಕಂಗಳು
ಗುಳಿಗೆನ್ನೆಯ ಸುಂದರ ನಗುವಿನ ಚಲುವೆ
ಎಲ್ಲರನು ನಗಿಸುತ ನೀ ನಗುತಲಿರುವೆ
ಚೆಲುವ ಕಂಗಳು ನೀನ್ನ ಮೊಗಕೆ ಶೋಬೆ
ಕಾಡಿಗೆ ತೀಡದ ಕಂಗಳಲಿ ಕೂಡಿ ನೋಟ ಬಿರುವೆ
ನಿನ್ನ ಚೆಲುವ ಕಂಗಳು ಬೆಳದಿಂಗಳಂತೆ..
ತಿಂಗಳಿಗೊಮ್ಮೆ ಬರುವ ಹುಣ್ಣಿಮೆ ಚಂದಿರನಂತೆ
ನಿದಿರೆಯ ಮರೆಸುವ ಮದಿರೆಯ ಮೆರೆಸುವ
ಅದರದದದರದಲಿ ಮರೆಯದ ಚೆಲುವ ಕಂಗಳು
ಚೆಲುವ ಕಂಗಳ ಹಿಂದೆ ನೂರಾರು ನೋವು
ತೋರ್ಪಡಿಸದೆ ಹಾಕುವೆ ನೀ ನಗುವಿನಾ ಸೋಗು
ಬಚ್ಚಿಟ್ಟು ಮುಚ್ಚಟ್ಟು ಭಾರವಾಗಿದೆ ಹೃದಯವು
ಕಂಗಳಲ್ಲಿ ಕಂಬನಿಯ ಸುರಿಸಿ ಹೊರ ಹಾಕಿದೆ
ಯಮನೂರ ಹಂಚಿನಾಳ ✍️
ಭಾವನೆಗಳ ಹಾದಿಯಲ್ಲಿ
ಈ ಜೀವನ
- yamanur
05 Jan 2020, 06:41 pm
ದಿನದ ಬದುಕು
ತಂಗಾಳಿಗೆ ಹೊಯ್ದಾಡಿ
ನಗುವ ಹೂಗಳ ಮುಂದೆ
ನಾ ಮನಸಾರೆ ಮೆಚ್ಚಿ
ಮೈಮರೆತು ನಿಂದೆ
ಸದಾ ಗಿಡದಲ್ಲಿರುವಂತೆ
ಹೂಗಳಿಗೆ ಹೇಳಿ ಬಂದಿದ್ದೆ
ಮಾತು ಬಾರದ ಹೂವಿಗೆ
ಸಮ್ಮತಿಯೇ ಎಂದು ಕೇಳಿದ್ದೆ
ಆ ದೃಶ್ಯ ಒಂದೇ ದಿನಕೆ
ಸಮರದಲಿ ಜೀವತೆತ್ತಂತೆ
ಹೂವಿಲ್ಲದೆ ಬೋಳಾದ
ತೋಟ ಕಂಡು ಬೆಚ್ಚಿನಿಂತೆ
ಎಲ್ಲರ ತಲೆ ತೆಗೆದರೂ
ಮರೆಯಲ್ಲಿ ಅವಿತಿದ್ದ
ಹೂವೊಂದ ನೋಡಿ
ಮಾಲಿ ಬಂದು ಕಿತ್ತಿದ್ದ
ಹತಾಶನಾದ ನಾನು
ಮನದಿ ನೊಂದಿದ್ದೆ
ಯಮನೂರ ಹಂಚಿನಾಳ ✍️
- yamanur
05 Jan 2020, 06:39 pm