Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಸ ವರ್ಷ

ಹೊಸ ವರುಷ.... ಹೊಸ ಹರುಷ....
ನೂರಾರು ಕನಸು.... ಬಯಸುತಿದೆ ಮನಸು.....
ಆಗುತ್ತಿಲ್ಲ ಯಾವುದೊಂದು ನನಸು......

ಓ ದೇವರೇ ಯಾಕೆ ನಿನಗೆ ನಮ್ಮ ಮೇಲೆ ಮುನಿಸು.....
ಕರ ಮುಗಿದು ಬೇಡುವೆನು ನಮ್ಮನ್ನು ಹರಸು.....
ಆದಷ್ಟು ಬೇಗ ನಮ್ಮಿಬ್ಬರನ್ನು ಸೇರಿಸು......

ಹೊಸವರ್ಷದ ಶುಭಾಶಯಗಳು ...... ಒಳ್ಳೆದಾಗಲಿ.....

- MkiranJadhav

01 Jan 2020, 06:01 am

ನನ್ನೆದೆಯ ಕುಸುಮ....

ಗೋದಿ ಬಣ್ಣದ ಮೈಯವಳು,
ಸಂಪಿಗೆಯ ಮೂಗಿನವಳು,
ಮಿನುಗುವ ತಾರೆಗಳ ಥರ ನಗುವವಳು....

ಮುಂಜಾನೆಯೇ ಕೆಲಸ ಶುರು ಮಾಡುವಳು,
ಮಕ್ಕಳ ಪೋಷಣೆ ಮಾಡುವಳು,
ಪತಿಯ ಹಿತ ಬಯುಸುವಳು....

ಮನೆಯ ಸ್ವಚ್ಛತೆ ಕಾಪಾಡುವಳು,
ಕುಟುಂಬದ ಆರೋಗ್ಯ ಯೋಚಿಸುವಳು,
ದೇವರಲ್ಲಿ ಎಲ್ಲರ ಕುಶಲತೆಯ ಕೋರುವಳು....

ನನ್ನ ಪ್ರೀತಿಯ ಕುಸುಮಳಿವಳು,
ಕಷ್ಟವನ್ನೆಲ್ಲ ನುಂಗುವಳು,
ತನ್ನ ಬಗ್ಗೆ ಯೋಚಿಸದೆ ಎಲ್ಲರ ಗಮನ ಹರಿಸುವವಳು....

ಮುಸ್ಸಂಜೆಯ ಮನೆಯ ಲಕ್ಷ್ಮಿ ಇವಳು,
ಮಡಿಯಲ್ಲಿ ದೀಪ ಹಚ್ಚುವಳು,
ಮನೆಯಲ್ಲ ಬೆಳಗುವವಳು...
ರುಚಿಯಾದ ಅಡುಗೆ ಮಾಡುವಳು,
ಪ್ರೀತಿಯಿಂದ ಬಡಸುವವಳು,
ನಮ್ಮೆಲ್ಲರ ಕ್ಷೇಮ ನೋಡುವವಳು
ಮಿನುಗುವ ತಾರೆಯ ಹಾಗೆ ನಗುವವಳು...
ನನ್ನವಳು ಇವಳು ನನ್ನವಳು
ನನ್ನೆದೆಯ ಕುಸುಮಳಿವಳು.....

- yogi

30 Dec 2019, 08:08 pm

ಅವಳು

ನಿನ್ನ ನಗುವಲ್ಲಿ ಏನೋ ವಿಶೇಷವಿದೆ
ನಿನ್ನ ಮಾತಲ್ಲಿ ಏನೋ ಕಾಳಜಿ ಇದೆ
ನಿನ್ನ ನೋಟದಲ್ಲಿ ಏನೋ ಮಿಂಚಿದೆ
ನಿನ್ನ ಪ್ರೀತಿಯಲ್ಲಿ ಏನೋ ಗಟ್ಟಿತನವಿದೆ
ನಿನ್ನ ಒಲವಲ್ಲಿ ಏನೋ ಬಿಟ್ಟಿರಲಾಗದ ಬಂಧವಿದೆ
ಅದಕ್ಕಾಗಿ ನಿನ್ನೊಲವ ನಗುವಿನ ಪ್ರೀತಿಯ ನೋಟಕ್ಕೆ ನಾ ತಲೆಬಾಗಿದೆ

- MkiranJadhav

30 Dec 2019, 10:34 am

ಅವಳಿಗಾಗಿ......

ದಿನಕಳೆದಂತೆ ಹೆಚ್ಚಾಗುತ್ತಿದೆ ನಿನ್ನ ಮೇಲೆ ಒಲವು......

ಇರುತ್ತಿಲ್ಲ ನನ್ನ ಮನ ನಿನ್ನಗಲಿ ಒಂದು ದಿನವು....

ಬೇಕಿನ್ನೂ ನಿನ್ನೊಲವ
ಈ ಪ್ರೀತಿ ಪ್ರತಿ ದಿನವೂ.....

ಕಾಯುವೆನು ಪ್ರತಿಕ್ಷಣವು
ನಿನ್ನ ಆಗಮನವೇ ನನ್ನ ಬಾಳಿನ ಅತಿಮಧುರ ಕ್ಷಣವು.......

- MkiranJadhav

30 Dec 2019, 10:29 am

ಕನಸು-ಮನಸು

ಬೆಳಗಿನ ಜಾವದಿ
ಸೂರ್ಯನ ಕಿರಣವು
ಅವಳ ಮೈಮುದುಕಿದಾಗ
ಅವಳ ನಗು, ಅವಳ ಆಟ,
ಅವಳ ನೋಟ!
ನನ್ನೊಳಗಿನ ಪ್ರೀತಿಯ ಹುಚ್ಚನ್ನು
ಕೆದಡುತ್ತಿರುವವಳು ಇವಳೇ
ಎಂದು ಮನ ಹೇಳಿತು.
ನನ್ನೊಳಗಿನ ಭಾವನೆಗಳನ್ನು
ಅವಳಲ್ಲಿ ಹಂಚಿಕೊಳ್ಳುವ
ಆತುರ ಹೆಚ್ಚಾದಂತೆ,
ಅವಳನ್ನು ನೋಡಬೇಕೆನ್ನುವ
ಕಾತುರವೂ ಹೆಚ್ಚಾಗತೊಡಗಿತು.
ಕೆಲವು ಕಾಲ ಕಣ್ಮುಚ್ಚಿ
ಕಣ್ತುಂಬಿಕೊಂಡು, ಕಣ್ತೆರೆದು
ನೋಡಿದಾಗ, ಕಣ್ಮಿಂಚಿನಂತೆ
ಮಾಯವಾದವಳು ಅಂದು...
ಕಾಣುತ್ತಿಲ್ಲ ಕೇಳಿಕೊಂಡರೂ ಇಂದು...

ದೇವರಾಜ್...

- Devraj Kadur

29 Dec 2019, 12:21 pm

ನನಗೆ ನಾನೇ ಎಲ್ಲ.., ನನಗೆ ಯಾರಿಲ್ಲ.....

ಮುಸ್ಸಂಜೆಯ ಮಬ್ಬಿನಲ್ಲಿ ತಂಪಾದ ಗಾಳಿ
ಬಿಸತ್ತಿರಲು ನನಗೆ ನಾನೇ ಎಂಬಂತೆ ಅರಿವಾಗುತ್ತಿದೆ ಈಗ,
ನನಗೆ ನಾನೇ ಎಲ್ಲ ನನಗೆ ಯಾರಿಲ್ಲ......

ಅಳುವ ಕಣ್ಣುಗಳಿಗೆ ಕಂಬನಿ ಒರೆಸುವರಿಲ್ಲ,
ನೊಂದ ಮನಕೆ ತಿಳಿ ಹೇಳುವರಿಲ್ಲ,
ನಗುವ ಮನ ಇನ್ನುಳಿದಿಲ್ಲ......

ಹಗಲಲ್ಲಿಯೇ ಸೂರ್ಯನ ಬೆಳಕಿಲ್ಲಂದಂತಾಗಿದೆ
ಕತ್ತಲಲ್ಲಿ ಚಂದ್ರನ ಬೆಳದಿಂಗಳಿಲ್ಲ...
ನೊಂದ ಮನಕೆ ಸಮಾಧಾನ ಹೇಳುವರಿಲ್ಲ...
ನಿದ್ರೆ ಜಾರಲು ಕಣ್ಣುಗಳಿಗೆ ಆಸೆಗಳಿಲ್ಲ
ಮತ್ತೆ ಏಳಲು ನಿದ್ರೆ ಇಂದ ಮನಸೇ ಇಲ್ಲ....
ನನಗೆ ನಾನೇ ಎಲ್ಲ ನನಗೆ ಯಾರಿಲ್ಲ....

- yogi

27 Dec 2019, 06:16 pm

ಸವಿಯಾದ ಸಂಜೆ.......

ಮುಸ್ಸಂಜೆಯಲಿ ತಂಪಾದ ಗಾಳಿಯಲಿ
ಸದ್ದು ಗದ್ದಲವಿಲ್ಲದ ಹಾದಿಯಲ್ಲಿ
ನಡೆದಾಡಾಬೇಕೀಗ
ಒಬ್ಬಂಟಿಯಾಗಿ ಆಹಾ ....

ಸೋಗಸಾದ ಸವಿಗಾನವ
ಕೇಳುವ ಮನಸೊಳಗೆ
ಮನಸಿಟ್ಟು ನಡಿಗೆಯೋಳಗಿನ
ನೋಟವಾ ಕಾಣುವ ಕನಸಾಗಿದೆ ಇಗ.....

ತುಸು ಮಸುಕಾದಂತೆ ಬಾನಂಗಳಂದ
ಅಂಗಳದೋಳಗೆ ಹಾರಾಡುವ ಹಕ್ಕಿಗಳ
ಕಂಡು ಮುಗುಳು ನಗೆಯೋಂದು
ಕಂಡದತಾಆಗಿದೆ ಇಗ.....

ಸವಿಸಂಜೆಯೋಳಗೆ ಸವಿ ಸವಿ
ನೆನೆಪುಗಳ ಮಳೆಯೆ ಸುರಿದು
ನೆನೆದಂತಾಗಿದೆ ಇಗ......

ಸವಿಯಾದ ಸಂಜೆ
ಸವಿಗನಸೋಂದ ಕಂಡೆ.......

- ರಾಗಸಿರಿ....

27 Dec 2019, 05:11 pm

ಬಾರದು ಮನಸ್ಸು, ಕಾಣದ ಊರು...

ಸಿಟ್ಟು ಎಂಬ ಕಿಚ್ಚಿಗೆ ನಲುಗಿ ನೊಂದಿದೆ
ಎದೆಯೊಳಗಿನ ಚಿಗುರಿದ ಚಿಗುರು
ಹೃದಯದ ಅರಮನೆಯ ನಲಿದಾಡುವ
ಮನಸ್ಸು ಬಂದಿಯಾದಂತಿದೆ ಮೌನದೊಳಗೆ...

ನೂರಾರು ದಿನಗಳಿಂದ ಕಟ್ಟಿದ ಕನಸಿಗೆ
ಬಿದ್ದಿದೆ ಯಾರದೋ ಕಣ್ಣು, ತಟ್ಟಿದೆ ಶಾಪ
ಮಾಡದ ಸಾಲಕ್ಕೆ ಕಟ್ಟಬೇಕೇಕೆ ಬಡ್ಡಿ
ನಾನೇ ಇಲ್ಲದ ಮೇಲೆ ಉತ್ತರವೇಕೆ ಪ್ರಶ್ನೆಗೆ...

ಕೋಪ -ತಾಪ ಇಲ್ಲ ಈ ಮೌನವಾದ ಮನಸ್ಸಿಗೆ
ಕಾಲಿಡುತ್ತಿರುವೆ ಕಾಣದ ಊರಿಗೆ ಬದುಕಿನ ಅಲೆಯಂಚಿಗೆ ನಿಲ್ಲದಹಾಗೆ...

ನಿರಾಸೆಯ ಕಗ್ಗತ್ತಲ್ಲಲ್ಲಿ ಕಾಣದ ಆಶಾಕಿರಣದ
ಬೆಳಕಿಗೆ ಕಾಯುತಿಹ ಮನಕೆ ಗುರಿ ತಲಪುವ ಛಲವೊಂದೆ ಆಧಾರವಿಗ........

- yogi

27 Dec 2019, 01:43 pm

ಕನಸಿನ ಮರೆಯಲಿ

ಕಾಣದ ಕನಸಿನ ಮರೆಯಲಿ,
ತುಂಬಿತು ಪ್ರೀತಿಯ ಭಾವ,
ಯಾವುದೂ ಪರಿವೆಯಿಲ್ಲದೆ ಅಲ್ಲಲ್ಲಿ,
ಮಾಡಿದೆ ಪ್ರೀತಿಯ ಗೆಳೆತನ.

ಹೃದಯದ ಅಂಚಿನ ಓಲೆಯಲಿ,
ಮೂಡಿತ್ತು ಪ್ರೀತಿಯ ಚಿತ್ತಾರವ,
ಜಗತ್ತಿನ ಪರಿವೆಯಿಲ್ಲದೆ ಚಿತ್ತಾರದಲ್ಲಿ,
ನಡೆದಿದೆ ಪ್ರೀತಿಯಂಗಳ ಹುಡುಕುವ ಕೆಲಸವ.

ಕಣ್ಗಳ ಅಂಚಿನಿಂದ ಪ್ರೀತಿಯಂಗಳ ಹುಡುಕುವಲ್ಲಿ,
ನಡೆದಿತ್ತು ನನ್ನಯ ಪ್ರೀತಿಯ ಚಿತ್ತಾರ ಬಿಡಿಸುವ ಕೆಲಸವ,
ಲೋಕದ ಪರಿವೆಯಿಲ್ಲದೆ ಪ್ರೀತಿಯಂಗಳದಲ್ಲಿ,
ಕಾಣುತ್ತಿತ್ತು ಮೂಡಿಬಂದ ಪ್ರೀತಿಯ ಚಿತ್ರಣವ.

ಪ್ರೀತಿಯಂಗಳವನ್ನಿಟ್ಟು,ಮನಸ್ಸಿನಂಗಳದಲ್ಲಿ,
ಹುಡುಕುತಿತ್ತು ಈ ಮನ ಯಾವುದೋ ಜೀವವ,
ತನ್ನದೆ ಪರಿವೆಯಿಲ್ಲದೆ ಆ ಜೀವವ ಇರಿಸಿತ್ತು ತನ್ನ ಹೃದಯಾಂತರಾಳದಲ್ಲಿ,
ಸಾಗುತ್ತಿದೆ ಮೂಡಿಬಂದ ಈ ಪ್ರೀತಿಯ ಚಿತ್ತಾರ ಬಿಡಿಸುವ ಕೆಲಸವ.

- Pradeep Malabadi

27 Dec 2019, 12:54 pm

ಅದೇನೋ.... ಅದೇಕೋ....,,

ಅದೇಕೋ ಬೇರೆ ಭಾವಗಳಿಲ್ಲ ಕಣ್ಣಲ್ಲಿ ನಿನ್ನ ಹೊರತು ಈ ನಿನ್ನ ಪ್ರೀತಿಗೆ...

ಯಾಕೋ ಮುನಿಸು ಹುಸಿಕೋಪ ನಿನ್ನ ಮೇಲೆ
ಆದರೆ ಯಾವುದೇ ಉತ್ತರವಿಲ್ಲ ನಿನ್ನ ಪ್ರಶ್ನೆಗೆ...

ಇದೇನೋ ಅತಿಯಾದ ಪ್ರೀತಿ ನೀ ಕೇಳಬೇಡ ಎಷ್ಟೆಂದು ಮರುಳಾದ ನನಗೆ....

ಆದರೂ ಏನೋ ಮನಸಲ್ಲಿ ತಲ್ಲಣ
ದಿನವೆಲ್ಲ ನೀನಿಲ್ಲದೆ ನನ್ನಿಂದ ಕ್ಷಣಗಣಿಕೆ..

ಅದೇನೋ ನೀನೆಂದರೆ ಅಷ್ಟೊಂದು ಪ್ರೀತಿ
ನಿನ್ನ ಕಾಯುತ್ತಿರುವ ಈ ನನ್ನ ಕಣ್ಣುಗಳಿಗೆ....

- yogi

26 Dec 2019, 07:43 pm