Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇಳೆಯ ಕೋಟಲೆ
ಕಷ್ಟ ಸಂಕಲೆ
ಯಿಂ ಸೋತು ಸೊರಗಿದ
ಮನಕೆ ಸ್ತೈರ್ಯವ
ನೀವ ಜೀವವೆ
ನಿಜ ಗೆಳೆಯನಲ್ಲವೆ??
- ಜೈಮಿನಿ
25 Dec 2019, 10:16 pm
ನನ್ನ ಈ ಮನವೆಂಬ ಮಂಟಪದಲ್ಲಿ ನೀ ನೆಲೆಯಾಗಿರುವೆ...
ಯಾರು ಬಂದರೂ ಅಳಿಸಲಾಗದ ಶಿಲೆಯಾಗಿರವೇ.....
ನನ್ನ ಜೀವನೋತ್ಸಾಹದ ಸೆಲೆಯಾಗಿರುವೇ....
ಅದಕ್ಕೆಂದೇ ನಿನ್ನಲಿ ನಾ ಸೆರೆಯಾಗಿರುವೇ.....
ಹೇಳು ಗೆಳತಿ ನೀ ಬಂದು ಯಾವಾಗ ನನ್ನ ಸೇರುವೆ....?
- MkiranJadhav
25 Dec 2019, 08:11 pm
ಹೆಣ್ಣಿನ ಮುಖದಲ್ಲಿ ನಗುವನ್ನು
ನೋಡಲು ಎಷ್ಟು ಚಂದ
ಆ ಮುಖ ನಾಚಿಗೊಂಡರೆ
ಅದೇ ಅವಳ ಸಿಂಗಾರ...
ಅವಳ ಕೈ ಬಲೆ ನಾದ
ಕಾಲ್ಗೆಜ್ಜೆಯ ಸದ್ದಿನಲ್ಲಿ
ಎಲ್ಲೆಲ್ಲೂ ಕೇಳುವುದು
ಅವಳ ಸುಂದರವಾದ ನಗು....
ಹೇ ಗೆಳತಿಯೇ
ನಿನ್ನ ನಗು ನನ್ನ ಮನ ಕೆಡಿಸಿದೆ
ನೀ ಆ ತುಂಟಿ ಅಂಚಿನ ನಗು
ನನ್ನ ಹೃದಯ ಮಾಯವಾಗಿದೆ....
ನೀ ಬೇಗ ಬಂದು
ಸೇರಿಕೋ ನನ್ನ ಮನಸ್ಸು
ನಿನಗಾಗಿ ಕಾಯುವೆ ನೀ ಬರುವ ದಾರಿಯನ್ನೇ
ಹೂವಿನ ಪಲ್ಲಕ್ಕಿಯಂತೆ ಮಾಡಿದ್ದೀನಿ.....
- Ajay
24 Dec 2019, 06:12 am
ಮಾವು ಚಿಗುರಿ, ಕೋಗಿಲೆ ಕೂಗಿ ವಸಂತವ ಸ್ವಾಗತಿಸಿರೆ।
ನಿನ್ನ ಕಣ್ಣಿಂಚಿನ ಕಾಡಿಗೆಯ ಕೊನೆ ನನ್ನ ಕೈಬೀಸಿ ಕರೆಯುತಿರೆ,॥
ನಿನ್ನ ಮುಖಕಮಲದ ದಂತಕಾಂತಿ ಮಿನುಗುತಿರೆ॥
ನನ್ನ ಬರುವಿಕೆಗೆ ನಿನ್ನ ನಯನಗಳು ತಪಸ್ವಿಯಾಗಿರೆ।
ಅದೇಗೆ ಒಲ್ಲೆಯೆಂಬೆನೆ ನಲ್ಲೆ, ನಿನ್ನ ಹೃದಯಾಂತರಾಳವ ಸಮರ್ಪಕವರಿಯದೇ।।॥॥
- Chiru
23 Dec 2019, 10:37 pm
ಹೆಣ್ಣಿನ ಮುಖದಲ್ಲಿ...
ಮೌನವೇ ಬಂಗಾರ.
ನಾಚಿಕೆ...
ಅದಕೆ ಸಿಂಗಾರ.
ಕೈ ಬಳೆಯ ನಾದ ದಲ್ಲಿ...
ಕಾಲ್ಗೆಜ್ಜೆಯ ಸದ್ದಿನಲ್ಲಿ.
ಎಲ್ಲೋ ಕೇಳಿಸುವುದು...
ನನ್ನವಳ ನಗು...
- Chethan N
23 Dec 2019, 02:08 pm
ಅಮ್ಮ ಎಂಬ ಕೂಗನ್ನು ಮರೆತಿದ್ದೆ ದಶಕದಿಂದ
ಕಾರಣ, ಅಪ್ಪ ಎಂಬ ವಸ್ತುವಿನ ಪ್ರೀತಿಯಿಂದ
ಮರೆತದ್ದು ಅಮ್ಮ ಎಂಬ ಪದವನ್ನಷ್ಟೇ
ಅವಳ ಹಳೆಯ ನೆನಪುಗಳನ್ನಲ್ಲ
ಮರಳಿ ಮರುಕಳಿಸಿದೆ ನೆನಪುಗಳು
ಆಕೆಯ ಜೊತೆ ಕೈ ಹಿಡಿದು ಜಾತ್ರೆಯಲ್ಲಿ ಸುತ್ತಿದ್ದು,
ಆಕೆ ಹೊಡೆದದ್ದು, ಬೈದದ್ದು, ಅತ್ತಿದ್ದು, ಮುತ್ತಿಟ್ಟಿದ್ದು,
ಹಸಿವಾಗುವ ವೇಳೆಗೆ ತುತ್ತಿಟ್ಟಿದ್ದು, ತಿನ್ನದಿದ್ದಾಗ ತಟ್ಟಿದ್ದು,
ಗಾಯಕ್ಕೆ ಮುಲಾಮು ಹಚ್ಚಿದ್ದು, ತಟ್ಟುತ್ತಾ ಮಲಗಿಸಿದ್ದು,
ಸಾಸಿವೆ ಡಬ್ಬದಲ್ಲಿ ಕಾಸನ್ನು ಅಪ್ಪನಿಗೆ ತಿಳಿಯದೆ ಬಚ್ಚಿಟ್ಟಿದ್ದು,
ಕೇಳಿದ ಆಟಸಾಮನು ಕೊಡಿಸಿದ್ದು, ಕೇಳದೆ ತಿಂಡಿ ತಿನಿಸಿದ್ದು,
ಕಡೆಗೆ ಅವಳು ಸತ್ತಿದ್ದು, ಸುಟ್ಟಿದ್ದು..ಹೇಗೆ ಮರೆಯುವುದು??
ಕಾಣದೂರಿಗೆ ಹೇಳದೇ ಪಯಣಿಸಿದಳು
ಏನೂ ಅರಿಯದ ಮಗುವನ್ನು ಬಿಟ್ಟು ಹೋದಳು
ಯಾರ ಜೊತೆ ಜಾತ್ರೆಯಲ್ಲಿ ಸುತ್ತುವುದು?
ಯಾರ ಕೆನ್ನೆಗೆ ಮುತ್ತನಿಡುವುದು?
ಹಸಿದಾಗ, ಬಿದ್ದಾಗ, ಅತ್ತಾಗ, ದಿಕ್ಕೆಟ್ಟಾಗ,
ನೋವಿರಲಿ, ನಲಿವಿರಲಿ ಯಾರಿಗೆ ಹೇಳುವುದು?
ಅವಳ ಕೈ ಹಿಡಿದಾಗ ಆಗುವ ಮಮತೆಯ ಸಂಚಲನ
ಬೇಕಿದೆ. ಮತ್ತೆಂದೂ ಸಿಗದ ಆ ಏಕೈಕ ಸಂಚಲನ
- ಬಿ.ಎಂ.ವಿ
- venkatesh murthy
23 Dec 2019, 05:31 am
ಬಾಲ್ಯದ ಈ ಸಂಬಂಧ
ಬೆರೆಯುವ ಗುಣದ ಅನುಬಂಧ
ಅದುವೇ ಈ ನನ್ನ ನಿನ್ನ
ನಡುವಿನ ಗೆಳೆತನ..
ಕತ್ತಲೆಯನ್ನು ಕವಿತ ಬದುಕಿಗೆ
ಬೆಳಕನ್ನು ಚೆಲುವ ಈ ಸ್ನೇಹ
ಬಿಸಲಾಗದ ಒಂದು ಸ್ನೇಹ ಬಲೆಯೇ
ಈ ಸುಂದರವಾದ ಬಂಧನ.....
ಜಾತಿ-ಭೀತಿ ಭೇದವಿಲ್ಲ
ಈ ಭಾವದ ಬಂಧಕೆ
ಮನಸ್ಸು ನೋವಿಗೆ ಒಲವು
ತುಂಬುವುದು ಈ ಗೆಳೆತನ...
ಸ್ನೇಹದ ಭಾವನೆಗಳಿಗೆ
ಬೆಸೆಯಬೇಕು ಮುತ್ತಿನ ಹಾರ
ಏಕಾಂತದ ಒಂಟಿತನಕೆ
ಹೊಸತೇ ಈ ಗೆಳೆತನ......
- Ajay
22 Dec 2019, 10:14 pm
"ಅಹಂಕಾರದ ಕೇಡು"
ತರವೆ ನಿನಗೆ ಅಹಂಕಾರ ಗರ್ವ
ಯೌವನದ ಸೊಬಗು ಮಾನಸ ಪರ್ವ
ಮುಂಗುರುಳು ಚೆಲುವ ಕಣ್ಣು ಚಿತ್ತಾಕರ್ಷಕ
ಬೆಳ್ಮುಗಿಲ ಚೆಲುವ ಮೈಮಾಟ ಮೋಹಕ.
ಚೆಲುವನರಸಿ ಮಧುವನೀರಿ ಹಾರಿಹವು ಎಚ್ಚರ
ಕ್ಷಣಿಕ ತೃಪ್ತಿ ಮೋಹಕ ಮನದಾಚೆ ನೋವು ನಿರಂತರ
ಸುತ್ತಿ ಸುತ್ತಿ ಚಿತ್ತಭ್ರಮಿಸಿ ಮನವ ತಣಿಸೆ ಕಾತರ
ಒಲವ ಪಡೆವ ಆಸೆಕಂಗಳ ಮನದ ಚಿತ್ತಾರ.
ಓ ಮಾನಿನಿಯೇ ಅಹಂಕಾರ ಪಡದಿರು
ಇದ್ದಾಗ ಇಲ್ಲ ಸಲ್ಲದ ಗೌರವ ಸನ್ಮಾನ
ಕಳೆದಾಗ ಮಾತು ನೀರವ ಮೌನ ಸ್ಮಶಾನ
ಸತ್ತಾಗ ...!!!???
ಸ್ನಾನವ ಮಾಡಿಸಿ ಶ್ವೇತಾಂಬರ ಹೊದಿಸಿ
ಕೈತುಂಬ ಬಳೆಯ ತೊಡಿಸಿ
ಹಣೆಗೆ ಕುಂಕುಮ ಚಂದನವ ಲೇಪಿಸಿ
ಮುಡಿ ತುಂಬ ಹೂವ ಮುಡಿಸಿ
ಹೂತಾಗ...!!!!????
ಅದುವೆ ನೋಡು ನಮಗೆ ಶಾಶ್ವತ ತಾಣ
ಗೆದ್ದಲುಗಳಿಗೆ ಸಂಭ್ರಮ ರಸದೌತಣ
ಸೌಂದರ್ಯದಿಂದ ಬಂದಾ ಕೇಡು
ಮಣ್ಣಲ್ಲಿ ಮಣ್ಣಾಯಿತು ನೋಡು.
By- GP
- gp
21 Dec 2019, 10:12 pm
ಶಿಖರವನ್ನೇರಬೇಕೆಂದಾಗ ಕೆಲವರೆಲ್ಲ
ಗಹ ಗಹಿಸಿ ನಕ್ಕರು, ಹಂಗಿಸಿದರು,
ಅವಳು ಮಾತ್ರ ನಾ ಹತ್ತಲು ಬೇಕಾದ
ಸಿದ್ದತೆ ಮಾಡುತ್ತಿದ್ದಳು..
ಶಿಖರವನ್ನೇರುತ್ತಿರುವಾಗ ಕೆಲವರೆಲ್ಲ
ಕಲ್ಲು ಬಿಸಾಡಿದರು, ಹುಚ್ಚನೆಂದರು
ಅವಳು ಮಾತ್ರ ದೇವರಲ್ಲಿ
ನನಗಾಗಿ ಪ್ರಾರ್ಥಿಸುತ್ತಿದ್ದಳು..
ಇನ್ನೇನು ಶಿಖರವನ್ನೇರಬೇಕು ಎಲ್ಲರೂ
ನನ್ನನ್ನು ಅವರ ಆತ್ಮೀಯನಂತೆ ಕಾಣುತ್ತಿದ್ದರು
ಅವಳು ಮಾತ್ರ ಉಟ ನೀರು ಬಿಟ್ಟು
ಆಸೆಗಣ್ಣಲ್ಲಿ ನನಗಾಗಿ ಕಾಯುತ್ತಿದ್ದಳು..
ಶಿಖರದ ತುತ್ತ ತುದಿಯನ್ನೇರಿದೆ
ಊಹಿಸಲಸಾಧ್ಯವಾದ ಜನರನ್ನೆಲ್ಲ ಕಂಡೆನು
ಆಕೆ ಮಾತ್ರ "ಇಳಿಯುವಾಗ ಜಾಗೃತೆ ಮಗನೆ"
ಎಂದು ಕಿವಿ ಮಾತು ಹೇಳುತ್ತಿದ್ದಳು..
- ಅಕ್ಷತ
21 Dec 2019, 07:30 pm
ಗೊತ್ತಿತ್ತು ನನಗೆ ನೀನೊಂದು ಗುಪ್ತಗಾಮಿನಿಯೆಂದು
ನಿನಗೂ ಗೊತ್ತಿತ್ತು ನಾನು ಛಲ ಬಿಡದ ತ್ರಿವಿಕ್ರಮನೆಂದು
ಅಶ್ವಮೇಧದ ಕುದುರೆಯ ಲಗಾಮು ಹಿಡಿಸುವ ನಿನ್ನ ನಯನಗಳ ಅಭಿಮಾನಿನಾನೆಂದು
ನೀ ಸೋಲದಿರು ಈ ಆಟದಲ್ಲಿ , ನಿನ್ನ ಪಡೆವರೆಗು ಪವಣಿಸದ ಪರಮಾತ್ಮನಿಲ್ಲಿ.
ನೀ ಸೋತರು ನಾ ಗೆದ್ದರೂ ಅಮರ ಪೇಮಿಗಳು ನಾವಿಲ್ಲಿ.
- Chiru
19 Dec 2019, 10:59 pm