Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

""ಪರಿಕಲ್ಪನೆ""

ಅಂಗಳದಲ್ಲಿ ಕುಳಿತಿದ್ದೆ
ಪ್ರಶಾಂತವಾದ ಬೆಳದಿಂಗಳು..
ಒಮ್ಮೆ ಅದನ್ನು ನೋಡಿ ನಸುನಕ್ಕೆ.
ಅಲ್ಲೇ ಹೊಳೆದಂತೆ ಬಾಸವಾಯಿತು
ನನ್ನಾಕೆಯ ಮಿನುಗುವ ಆ ಕಂಗಳು...

- krishna Billadi melbailu

07 Nov 2019, 03:51 am

""ವ್ಯತ್ಯಾಸ""

ಉಪ್ಪು,ಹುಳಿ,ಖಾರ
ಜೊತೆಗೆ ಒಂದಿಷ್ಟು ಸಾಂಬಾರ..
ಅಪ್ಪ, ಅಮ್ಮ, ಅಣ್ಣ, ತಂಗಿ
ಕೂಡಿ ಬಾಳಿದರೆ ಸಂಸಾರ.....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು..

- krishna Billadi melbailu

07 Nov 2019, 03:33 am

ಪ್ರತಿ ತಂದೆ ತಾಯಿಯ ಕನಸು

ಮೂರುದಿನದ ಪ್ರೀತಿಪ್ರೇಮನ
ಮಾಡಿ ಹಾಳುಮಾಡಿಕೊಳ್ಳ ಬೇಡಿ
ನಿಮ್ಮ ಜೀವನ,
ನೋಯಿಸಬೇಡಿ ತಂದೆ ತಾಯಿಯ ಮನಸನ್ನ,
ನೆರವೇರಿಸಿ ಅವರ ಕನಸನ್ನ,
ಸಾಧಿಸಿ ನಿಮ್ಮ ಗುರಿಯನ್ನ,
ಸುಖಕರವಾಗಿ ಸಾಗಿದರೆ ನಿಮ್ಮಮುಂದಿನ ಜೀವನ
ತಂದೆ ತಾಯಿಯ ಜನ್ಮ ಪಾವನ.
:- ವೀಣಾ ಲಿಂಗಣ್ಣ
( ರಾಯಚೂರು )

- Veena

03 Nov 2019, 12:28 pm

  ಸಂಕ್ರಮಣ ಸ್ವಾಗತ

ಸಂಭ್ರಮಾ, ಸಂಖೇತ  //ಪ//
ಸಂಕ್ರಮಣ ಸ್ವಾಗತ.....


ಸುಗ್ಗೀಯ ತೇರೊಳಗಾ.. 
ಆ.. ಭಾನುತೇಜಾ ಕುಂತಾನಾ. 
ಹರುಷದ ಹೋಳಿಗೆ ತಂದಾನ. 
ನಾವೆಲ್ಲಾ ಸೇರಿ ಹಂಚೋಣ. 


ಎಳ್ಳು, ಬೆಲ್ಲ  ಹಂಚುತ್ತಾ, 
ಸಂಜೆಗೆ ಕಬ್ಬು ಹೀರುತ್ತಾ
ಸಜ್ಜೆ ರೊಟ್ಟಿಯ ಸವಿಯುತ್ತಾ
ಗೆಳೆಯಾ ಗೆಳತೀರೆಲ್ಲಾ ಕೂಡಿ
ಪದ ಕಟ್ಟೀ, ಹಾಡ ಹಾಡಿ, 
ನಲಿದೇವು ನಾವು ಸಂಕ್ರಮಣಕ. 


ಹೊಲದೊಳಗ, ಭೂ ತಾಯಿ ನಕ್ಕಾಳ. 
ಊರ, ಕಷ್ಟ ಮರೆಸಾಳ. 
ಹಿರಿಯರು, ಬಾಯ್ತುಂಬ ನಕ್ಕಾರ. 

ಎಷ್ಟು ಚಂದ ಕಾಣಸ್ತಾದ, ಊರ ಕೇರಿ ನೋಡ
ಸಂಕ್ರಮಣ ಅಂದ್ರ ಹೀಂಗಾ ನೋಡ ಅಂದಾರ. 
ಸಂಕ್ರಮಣ ಅಂದ್ರಾ, ಸುಗ್ಗೀ.. 
ಸುಗ್ಗೀ, ಅಂದ್ರ ಸಂಕ್ರಮಣ. 


ಪವನ ಕುಮಾರ ಕೆ ವಿ ಬಳ್ಳಾರಿ 

- PavanKumarKV

02 Nov 2019, 07:57 pm

ಪಯಣ

ಬಹುವಾಗಿದೆ ಬಹುವಾಗಿದೆ ಚಿಂತೆ
ಮನದೊಳಗೆ ನಿಲ್ಲದಾ ಬೀತಿಯಾ ಶಂಕೆ.

ಕಾಡುತ್ತಿದೆ ಕಾಡುತ್ತಿದೆ ನಿರ್ಮೋಹ ಭಾವ
ವೈರಾಗ್ಯದೆಡೆಗೆ ಜೀವ..

ಪೋಷಿಸಿದೆ ಪೋಷಿಸಿದೆ
ಈ ತನುವ ಜೀವ..
ಬೇಯುತಿದೆ ಬೇಯುತಿದೆ
ಆಂತರ್ಯದಿ ಕುಲುಮೆಯಾ ಭಾವ.

ಎಂದಾದರೊಂದು ದಿನ
ತೀರಲಿದೆ ಆಯ
ಶೂನ್ಯದೆಡೆಗೆ ಬಳುಕುವುದೀ ಕಾಯ..
ಕೃಶ ಕಾಯದ ಆತ್ಮವಿದು ಚೈತನ್ಯ...
ಸಲುಹಿದಾ ಪಂಚಭೂತಗಳಿಗಿರಲಿ ನಮನ..
ಪಂಚಭೂತಗಳಿಗಿರಲಿ ನಮನ.

ಪವನ ಕುಮಾರ ಕೆ. ವಿ
ಬಳ್ಳಾರಿ
9900515957

- PavanKumarKV

02 Nov 2019, 05:40 pm

ವರ್ತಮಾನ ತಲ್ಲಣವು

ಕವಿತೆ.

ವರ್ತಮಾನ ತಲ್ಲಣವು.

ಮತ್ತೆ ಮತ್ತೆ ಎದ್ದು ಬರುವ ಇತಿಹಾಸದ ಯುದ್ಧಗಳು,
ಮೋಕ್ಷವಿರದ ಪ್ರೇತಗಳು.

ಹುಗಿದಿದ್ದ ಕತ್ತಿಗಳು, ಕೊಲುವಾಟ ವರಸೆಗಳು
ವರ್ತಮಾನ ತಲ್ಲಣವು,
ವರ್ತಮಾನ ತಲ್ಲಣವು.

ಭೂಗರ್ಭದಿ ಸೇರಿದ್ದ ಒಣ ಮಣ್ಣಿನ ಕಣದಲಿ
ಅವನಿರಿದ ಇವ ತಿವಿದ, ಒಣ ರಕ್ತದ ಕಥೆಗಳು.

ಮತ್ತೆ ಮತ್ತೆ ಮೇಲೆ ಚಿಮ್ಮಿ ಕೆರಳಿಸುವಾ ಪರಿಯಿದು.
ವರ್ತಮಾನ ತಲ್ಲಣವು ವರ್ತಮಾನ ತಲ್ಲಣವು.

ಕಟ್ಟೋಣ ನಾಡೊಂದ
ನಾಳೆಗೆ ಇರಲೆಂದು,
ಮುಂದಿನ ಪೀಳಿಗೆಗೆ

ನೆಮ್ಮದಿಯ ಗೂಡೊಂದ
ವರ್ತಮಾನ ಚಿಂತನೆಯು
ಹೊಸ ಬದುಕಿನ ಕಲ್ಪನೆಯು
ಬೂದಿಯಾ ಅಡಿಯಿಂದ
ದ್ವೇಷಾಗ್ನಿ ಕೆಂಡಗಳು.
ಮತ್ತೆ ಮತ್ತೆ ಬುಗ್ಗೆಂದು ಸುಡುತಿಹುದು.

ಮತ್ತದೇ_ಯುದ್ಧದ_
ಇತಿಹಾಸ_ನಾಳೆಗೂ
ಯುಗ_ಯುಗಕೂ_ಯುದ್ದಗಳೇ
ನಮ್ಮನಾಳ್ವ_ದೊರೆಗಳು.

ವರ್ತಮಾನ_ತಲ್ಲಣವು.

ಎಂಜಿಹೆಗಡೆ

- m.g hegde

02 Nov 2019, 10:41 am

ಕನ್ನಡದ ಕನಸು

ನೋಡಿ ಕನ್ನಡ ತಾಯಿಯ ಸೊಗಸು
ಎಷ್ಟು ವಿಶಾಲವಾಗಿದೆ ಕನ್ನಡ ತಾಯಿಯ ಮನಸು
ಇಲ್ಲಿ ಜನಿಸಬೇಕಾದರೆ ಮಾಡಬೇಕು ಹಿಂದಿನ ಜನ್ಮದಲ್ಲಿ ತಪಸ್ಸು,
ಯಾವಾಗಲೂ ಇಲ್ಲಿಯೇ ಜನಿಸಬೇಕೆನ್ನುವುದೇ ನನ್ನ ಕನಸು. :- ವೀಣಾ ಲಿಂಗಣ್ಣ
( ರಾಯಚೂರು )

- Veena

01 Nov 2019, 09:28 am

ಹೂವಿಗಾಗಿ ದುಂಬಿ

ಮುಂಜಾನೆಯ ಚಳಿಯಲ್ಲಿ ಮಂಜು ಕರಗಿ
ಮಂಜಿನ ಹನಿಗಳಾಗಿ ಜಾರಿ
ಗರಿಕೆಯಾಸರೆಯ ತಬ್ಬಿಕೊಂಡು
ಒಂದೊಂದು ಮುತ್ತುಗಳಂತೆ
ಬಂಗಾರದ ತಿಳಿ ಬೆಳಕಲ್ಲಿ ಹೊಳೆಯುತ್ತಲಿವೆ

ಅಗಸಕ್ಕೇರಿದ ಸೂರ್ಯನು
ಚೆಲ್ಲಿದಾ ಕಾಂತಿಯ ಒಲವಿಗೆ ಮೊಗ್ಗೊಂದು
ಸಂತಸದ ಚೆಲುವಲ್ಲಿ ಹೂವಾಗಿ ಅರಳಿ ತಂಗಾಳಿಯ ಜೊತೆಯಲ್ಲಿ ಬೆರೆತು ತೇಲಾಡುತ್ತಾ ನಲಿಯುತಿತ್ತು

ದಾಹದ ಅಸಿವು ಹೆಚ್ಚಾದ ದುಂಬಿಯೊಂದು
ಮಕರಂದಕ್ಕಾಗಿ ಅಲೆಮಾರಿಯಂತೆ
ಬ್ರಮರತೆಯಾಡುತ್ತಾ ಅಲ್ಲಿ ಇಲ್ಲಿ
ಹಾರಾಡುತ್ತಾ ತಿರುಗಾಡುತ್ತಿತು

ಅರಳಿ ನಲಿಯುತ್ತಿದ್ದ ಹೂವಲ್ಲಿ
ಮಕರಂದದ ಪರಿಮಳವು ಎಲ್ಲಡೆ ಹರಡುತ್ತಾ
ಸೌಂದರ್ಯದ ರಾಣಿಯಂತೆ ವೈಯಾರದಿಂದ
ಚೆಲುವಲ್ಲಿ ಆಕರ್ಷಿಸಲು ಆರಂಬಿಸಿತು

ಹಾರುತ್ತ ದೂರಾ ಹೋದಂತೆ
ಮಕರಂದದ ಸುಗಂದದ ಪರಿಮಳದ
ಜಾಡನ್ನು ಹಿಡಿದು ಅರಳಿದ ಚೆಲುವನ್ನು ಸೇರಲು ಹಾರುತ್ತಾ ಹಾರುತ್ತಾ
ಹೂದೊಟವ ಸೇರಿತು

ಅರಳಿದ ಸಾವಿರಾರು ಹೂವುಗಳ ಕಂಡಾ
ದುಂಬಿಯು ಮಕರಂದ ಪರಿಮಳವ
ಹರಡಿದಾ ಹೂವನ್ನು ಹುಡುಕುತ್ತಾ
ಕ್ಷಣಾನು ಕಾಯದೆ ಮತ್ತೆ ಹಾರಿತು

ದುಂಬಿಯ ಕಂಡಾ ಹೂವು
ವೈಯಾರದಿಂದಾ ನಾಚಿಕೆಯು ಹೆಚ್ಚಾಗಿ
ಸೌಂದರ್ಯದಲ್ಲಿ ಮೆಲ್ಲನೆ ಸೆಳೆದು
ಮೌನದಿಂದಾ ತನ್ನ ಬಳಿಗೆ ಕರೆದಿತು

ಒಲವಿನ ಕರೆಗೆ ಕರಗಿದಾ ದುಂಬಿಯು
ಮಕರಂದವನ್ನು ಪ್ರೀತಿಯಿಂದ ಕದಿಯಲು
ಹೂವಿನ ಚೆಲುವಲ್ಲಿ‌ ಕುಂತು
ಜೇನಾ ಸವಿಯಲು ಒಪ್ಪಿಗೆಯ ಕೇಳಿ
ಆಲಂಗಿಸಲು ಸನಿಹದಲ್ಲಿ ಕೈ ಚಾಚಿತು


ಎರಡು ಮನಸ್ಸುಗಳಲ್ಲಿ ಅನುರಾಗವು ಮೂಡಿ
ಒಲವಿನ ಸಿರಿಯ ಹಂಚಿಕೊಳ್ಳುತಲಿ
ಜೀವ ಜೀವಗಳು ಅರಿತು ಬೆರೆತು
ಸುಖದಲಿ ಒಂದಾಗಿ ಕಾಣದ ಲೋಕದಲ್ಲಿ ತೇಲಾಡಿದವು

- basavarajsirnayakpreethu

01 Nov 2019, 09:17 am

ನನ್ನವಳೆ ನನ್ನ ಜೀವ....

ಕಾವ್ಯ ಕವನ ಬರಿಯೋ ನನ್ನ
ಮನಸಿಗೆ
ಹುಚ್ಚು ಹಿಡಿಸೋ ಹೆಣ್ಣವಳು...
ಕೋರೆವ ಚಳಿಯಲ್ಲು ಬೇವತು
ಹೋಗುವಂತೆ
ಮಾಡೊ ಮಲ್ಲುಸಿರಿಂದ ಕೊಲ್ಲುವ
ಮುದ್ದು ಗೊಂಬೆ
# ನನ್ನವಳು.....♥️♥️♥️

✍️ ನನ್ನವಳೆ ನನ್ನ ಜೀವ...
ಮಣಿ....♥️

- mani_s_bhovi

31 Oct 2019, 11:49 am

ಹೆತ್ತವರು ಯಾರು.......?

ಭೂಮಿ ತಾಯಿಯ ಮಡಲಿಗೆ
ತಂದ ನನ್ನ ಮಹಾತಾಯಿ ಯಾರು
ಅಂತಹ ಗೊತ್ತಿಲ್ಲ.....
ತಾಯಿ  ಯಾರು ಅಂತಹ  ಗೊತ್ತಿಲ್ಲ
ಅಂದ ಮೇಲೆ ತಂದೆಯನ್ನು
ಹೇಗೆ ಹುಡಕಲಿ ನಾನು...

ಯಾರಿಗೆ ಬೇಡವಾದ ಮಗುವಾದೆ.
ನನ್ನ ಜನ್ಮ ನೀಡಿದ
ಹೆತ್ತವಳು ಬೀಸಾಕಿ ಹೋದಳು.
ಕಸದ ಗುಂಡಿಯಲ್ಲಿ.....

ಹಸುಗೂಸು ಕಾಣಲಿಲ್ಲ ಯಾರ
ಕಣ್ಣಿಗೆ...  ಕಸದ ತಿಪ್ಪೇ  ಸೂರು
ಆಯಿತು ಆ ದಿನ
ಭಿಕ್ಷುಕ ಕಂಡು  ಸಾಕಿಸಲುಹಿದ ನನ್ನನ್ನು.

ನೀರೇ ತಾಯಿಯ ಹಾಲು ಆಯಿತು ..
ಭಿಕ್ಷೆ ಬೇಡಿ ತಂದ ಅಳಿಸಿದ ಅನ್ನ ಗಂಜಿ ಆಯಿತು.
ಬಾಳೆಯ ಎಲೆ ತಾಯಿಯ ಮಡಿಲು ಆಯಿತು.
ತಾನು ತಿಂದು ನನ್ನ ತಿನಿಸಿ ಬೆಳೆಸಿದ..

ತನ್ನ ಮಗನಾದ
ಜನ್ಮದ ಸತ್ಯ ಹೇಳಿದಾಗ  ನಾನೇನು
ಮಾಡಲಿ.... ನನ್ನ ಜನ್ಮಕ್ಕೆ ಕಾರಣರಾದ
ಕಾರಣೀಭೂತರನ್ನು ಹುಡಕಲೇ...ಮರೆತು
ಬಿಟ್ಟೇನು ನನ್ನ ಜನ್ಮದ ನಿಜಾಂಶವನ್ನು..

ಸಾಕಿದ ತಂದೆ ನನ್ನ ರಟ್ಟೆ ಬಲಿಯುವ
ಮುಂಚೆ ಇಹಲೋಕ ತ್ಯಜಿಸಿದ....
ನನ್ನ ಜೀವನ ಜಟಿಲವಾಯಿತು. ಮುಂದೆ...
ಸಾಕಿದ ತಂದೆಯ ಕೆಲಸ ನನ್ನ ಕಾಯಕವಾಯಿತು....

ಚಿಂದಿ ಆಯುವ ಬದುಕು  ಶುರುವಾಯಿತು.
ಗುಡಿ ಗುಂಡಾರದ ಪ್ರಸಾದ,  ಸತ್ತವರ
ಪಿಂಡದ ನ್ಯೇವದ್ಯ ಮುಷ್ಠಾನ ಆಯಿತು
ಹೆತ್ತವರು ಮುಂದೆ ಬಂದು  ಭಿಕ್ಷೆ ಹಾಕಿ
ದಾನಿಗಳು ಆದರೇನು ಗೂತ್ತಿಲ್ಲ.
ಹೆತ್ತವರ ಮೂಲ ಗೊತ್ತಿಲ್ಲದ
ತಬ್ಬಲಿಯು ನಾನದೇ.....

ನನ್ನ ಮುಂದಿನ ಜೀವನಕ್ಕೆ ದಿಕ್ಕು ಬೇಕೆಂದು
ಹೆತ್ತವರು ಮೂಲ
ಹುಡುಕುತ್ತಾ ಹೂರಟಿರುವೇ  ಹೆತ್ತವಳು ಯಾರು
ಯಾವ ಊರು ಎಂದು ಗೊತ್ತಿಲ್ಲ....
ಯಾರದರು ನನ್ನ ಮಗ ಎಂದು ಕರಿದು.
ಮುದ್ದಿಸುವರು ಎಂದು..?

ಎಮ್ ಎಮ್ ಕಾಶಿನಕುಂಟಿ.
೯೭೪೩೪೪೯೦೬೩

- Akash Patil

31 Oct 2019, 07:28 am