Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮೃತ ಬಿಂದು

ಈ ದಿವಾಳಿ ದಿನದಲ್ಲಿ ಮುಂಜಾನೆ ನಸುಕಿನಲಿ
ಕಪ್ಪಾದ ರಸ್ತೆಯಲಿ ಓಡುತಿರೆ ರಭಸದಲಿ

ಕಂಡಿದ್ದೆ ಬಸವನಾ ಹುಳವೊಂದು ದಾಟುವುದ
ರಸ್ತೆಯನು ಮಂದ್ರದಲಿ ಹಾಯಾಗಿ ಸುಖದಲ್ಲಿ

ಆಗಾಗ ಕೋಡಲ್ಲಿ ಪ್ರಕೃತಿಯ ಸವಿಯುತ್ತ
ಕೆಲ ಕ್ಷಣದಿ ತಿಷ್ಠದಲಿ ಎಳೆಯನ್ನೇ ಮೆಲ್ಲುತ್ತ

ನನಗಾಗ ಅನಿಸಿತ್ತು ಬದುಕಲ್ಲಿ ನನ್ನೋಟ
ಕಣ್ಣನ್ನು ಕಟ್ಟಿದಾ ಹಯವದುವೆ ನೋಡಿಲ್ಲಿ

ಎಲ್ಲಿಗದು ಏತಕದು ಗೊತ್ತಿಲ್ಲ ಗುರಿಯಿಲ್ಲ
ಮಾಲೀಕ ಚಾಬೂಕು ಬೀಸಿರಲು ಓಡಿರುವೆ

ಐಶ್ವರ್ಯ ಐಭೋಗ ಪಡೆಯಲದು ತಿಣುಕಿ
ಮಾತ್ಸರ್ಯ ಮದವೇರಿ ಎಲ್ಲರನು ಕೆಣಕಿ

ಕಳಕೊಂಡೆ ಜೀವನದ ಸಂತಸದ ಕ್ಷಣಗಳ
ಚಿಕ ಚಿಕ್ಕ ಮುದಗೊಡುವ ಅಮೃತದ ಬಿಂದುಗಳ !!

- ಜೈಮಿನಿ

31 Oct 2019, 05:51 am

ಅಮ್ಮನ ಮಡಿಲಲ್ಲಿ.

ಅಮ್ಮ ನೀನು ತೋರಿದ ಅನಂತ ಪ್ರೀತಿಗೆ, ನನ್ನ ನಾ ಮರೆತೆನು,
ನಿನ್ನ ಪವಿತ್ರ ಮಡಿಲಲ್ಲಿ ಸ್ವಗ೯ದ ಭಾವದಲ್ಲಿ ನಿಮ೯ಲನಾದೆನು.

ಅಮ್ಮ ನಿನ್ನ ಕಂಡಾಗ ಏನೊ ಉಲ್ಲಾಸ ನನ್ನಲ್ಲಿ,
ನನ್ನ ನೀ ಮುದ್ದಿಸುವಾಗ ಬೇರೆ ಪರಿವೆ ಇಲ್ಲ ನನ್ನಲ್ಲಿ.

ಅಮ್ಮ ನೀನೆ ಈ ಲೋಕದಲ್ಲಿ ಹೊಳೆಯುವ ಅನಂತ ತಾರೆ,
ಈ ತಾರೆಯ ನೋಡಲು ಈ ನಿನ್ನ ಕಂದನ ಅನಂತ ಕರೆ.

ಅಮ್ಮ ನಿನ್ನ ಮಡಿಲಿನ ಪ್ರಿತಿಯ ಕೊಡುಗೆ ಅಪಾರ,
ಏಳು ಜನುಮ ಸಾಲದು ತೀರಿಸಲು ಈ ನಿನ್ನ ಕೊಡುಗೆಯ ಭಾರ.

- Pradeep Malabadi

30 Oct 2019, 09:21 am

ಅವಳ ಹೆಜ್ಜೆ

ಅವಳ ಹೆಜ್ಜೆಯ ಸದ್ದು ಕೇಳಿ
ನಾಟ್ಯವಾಡುತ್ತಿದೆ ಈ ಪುಟ್ಟ ಹೃದಯ
ಇಳಿ ಸಂಜೆಯ ಆಗಸದಿ ಕೆಮ್ಮುಗಿಲ ನೋಡುತಿರೆ
ಚಡ-ಪಡಿಸುತ ಈ ಮುಗ್ದ ಮನಸು ನಿನ್ನನು ನೆನೆಯುತಿದೆ
ಬೆಳದಿಂಗಳ ಹಾದಿಯಲಿ ನೀ ಚಂದದಿ ಬರುತಿರಲು
ಆ ಕ್ಷಣವ ನೆನೆದು ಸಂತಸವು ಬೋರ್ಗರೆಯುತಿದೆ ಎಡೆಯಲಿ
ರಾಮ್....

- ರಾಮ್

27 Oct 2019, 12:21 pm

ದೀಪಾವಳಿ ದೀಪಾವಳಿ

ಬಂದಿತು ನಮ್ಮಯ ದೀಪದ ಹಬ್ಬ
ಮನೆ-ಮನವನು ಬೆಳಗುವ ಜ್ಯೋತಿಯ ಹಬ್ಬ
ಎಲ್ಲರ ಕರೆಯುತ ದೀಪವನ್ನು ಉರಿಸುತ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

ಮನದ ಕತ್ತಲೆಯನ್ನು ಕಳೆಯುವ ಹಬ್ಬ
ಕತ್ತಲೆಯಿಂದಾವರಿಸಿದ ಮನೆಯನು ಬೆಳಕಾಗಿಸುವ ಹಬ್ಬ
ಪಟಾಕಿ ಸಿಡಿಸಿ ಸಂಭ್ರಮಿಸುವ ಹಬ್ಬ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

ಬಣ್ಣ-ಬಣ್ಣದ ದೀಪದ ಬಟ್ಟಲು
ಬಟ್ಟಲಿನಲ್ಲಿ ಪ್ರದೀಪವ ಬೆಳಗುತ
ಎಲ್ಲರಿಗೂ ಹಬ್ಬದ ಶುಭಾಶಯ ಕೋರುತ
ಬಂದಿತು ಎಲ್ಲರ ನೆಚ್ಚಿನ ಹಬ್ಬ ದೀಪಾವಳಿ

- Pradeep Malabadi

27 Oct 2019, 12:12 pm

ಜನ್ಮದಾತೆ

ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ಎನ್ನ ಬದುಕಿನ ಪುಸ್ತಕ ತೆರೆದೆ ನೀನು
ಆ ಪುಸ್ತಕದಿ ಪ್ರತಿ ಪುಟದಲ್ಲಿರುವೆ ನೀನು
ನೀ ಹಸಿದು ಎನ್ನ ಹಸಿವು ನೀಗಿಸಿದೆ
ನೀ ದುಡಿದು ಎನ್ನ ಗುರಿ ಮುಟ್ಟಿಸಿದೆ
ನನ್ನ ಬದುಕಿನ ಮೊದಲ ಗುರುವಾದೆ
ಈ ಬದುಕಿನ ನಂದಾ ದೀಪವಾದೆ
ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ನನ್ನ ನಗುವಿನಲಿ ನಿನ್ನ ನೋವ ಮರೆತೆ
ನಿನ್ನ ನಗುವಿನಲಿ ನಾ ಜಗವನೇ ಮರೆತೆ
ಸಾವಿನ ಮನೆಯ ಬಾಗಿಲು ಬಡಿದೆ ನನ್ನಿಂದ ನೀ
ತಿರುಗಿ ಬಂದೆ ನನ್ನ ಅಳು ಕೆಳಲೇಂದು ನೀ
ನನ್ನ ಅಂತರಾಳದಲ್ಲಿ ಶಾಶ್ವತವಾಗುವೆ ನಾ ಕಾಲವಾದರೂ
ನಿನ್ನ ಋಣ ತಿರಿಸಲಾಗದು ಏಳೇಳು ಜನ್ಮ ಕಳೆದರೂ
ಆರೈಸುವೆ ನಿನ್ನ ಪುಟ್ಟ ಮಗುವಂತೆ
ಕೊನೆ ಕ್ಷಣದವರಿಗೂ ಕಾಯುವೆ ಕಣ್ಣರೆಪ್ಪೆಯಂತೆ
ಓ ನನ್ನ ಜನ್ಮದಾತೆ
ನೀ ನನ್ನ ಸ್ಫೂರ್ತಿದಾತೆ
ರಾಮ್

- ರಾಮ್

27 Oct 2019, 12:09 pm

ದೀಪಾವಳಿ

ನೀ ಹಚ್ಚು ಹಣತೆಯ
ಬಾಳಿನ ಸುಖ ದುಃಖ ದಡೆಗೆ
ಬಾಳೆಲ್ಲ ಬೆಳಕಾಗಲಿ ನೀ ಹಚ್ಚಿದ
ಆ ದೀಪದಿಂದ
ಮನದ ಭಾವನೆಯ ಮೂಲೆಯಲ್ಲಿ ಇರುವ
ಆ ಮನಸ್ಸಿಗೆ ಹಚ್ಚು ಆ ದೀಪ ನೀ
ಕನಸಿನ ಬದುಕಿನ ರಂಗೋಲಿಯ
ನಡುವಲ್ಲಿ ಒಂದಾಗಲಿ ಆ ದೀಪ
ನೀ ಹಚ್ಚುವ ಆ ದೀಪ ಮನದ
ಪುಟದಲ್ಲಿ ಒಂದಾಗಲಿ
ಬಾಳಿನ ಜೊತೆಯಲ್ಲಿ ಜೀವನದ
ಎಲ್ಲೆಯಲ್ಲಿಯೂ ಒಂದಾಗಲಿ


ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️✍️

- An

26 Oct 2019, 05:56 pm

ತಂದೆ ಮಗಳು - ವಾರ್ಧಕ ಷಟ್ಪದಿ

ಮಳೆಬಂದು ಮನದುಂಬಿ ನನ್ನಾಸೆಗೆ ವರವಾಗಿ
ನಿನ್ನೋಡಲ ಕುಡಿಯೊಡೆದು ತುಂಬಿರಲು ನವಮಾಸ
ನವಮಿಯಲಿ ಬಂದಿಹಳು ಲಕುಮಿಯೂ ಬೆಳಗುತ್ತ ಜಗವೆಲ್ಲ ಮನೆದೀಪ

ಅಂಬೆಯಾ ಗಾಲಿಕ್ಕಿ ಓಡಲದು ಕಂಡೆನೂ
ಅವಳಲ್ಲಿ ಶೃಂಗೇರಿ ಶಾರದಾ ದೇವಿಯನು
ಆ ಮೊದಲ ಮಾತನೂ ನಾಕೇಳೆ ಹರುಷದಲಿ ಮೂಕನದು ಆದೆನೂ

ಲಕುಮಿಯಾ ಶಾಲೆಗೇ ಬಿಡಲದುವೆ ಆಯಿತೂ
ಮನಕದುವೆ ಅಂಜಿಕೇ ತಿಲಿಯದೆಲೆ ಏನನೂ
ಮೊಗ್ಗದುವೆ ಅರಳಲೂ ಮನಕೆಆ ತಂಕವೊ ಜೊತೆಯಲಿಯೆ ಹರುಷವೂ

ಮದುವೆಯೂ ನಿಷ್ಚಯವು ಆಗಲೂ ಅನಿಸಿತೂ
ಇನ್ನೇನು ನೀನೆಂದು ಕೆಲದಿನದ ಅತಿಥಿಯೂ
ಮದುವೆಯಾ ದಿಬ್ಬಣವು ಹೊರಡಲೂ ಹೃದಯದೀ ಹೂವನ್ನು ಕಿತ್ತಂತೇ

ವರುಷಗಳು ಉರುಳಿತೂ ಮಗಳಲ್ಲಿ ಚಿಗುರಿತೂ
ಕುಡಿಯದುವೆ ನನಮೊಗ ದಿ ಹರುಷವನು ತಂದಿತೂ
ಲಕುಮಿಯೂ ಬಂದಿಹಳು ನವಮಿಗೇ ತಂದಿಹಳು ಮರುಕಳಿಸಿ ನೆನಪೆನಗೆ

- ಜೈಮಿನಿ

26 Oct 2019, 07:32 am

ಮೌನದ ಗೊಂಬೆ

ಒಬ್ಬರದ್ದು ಬಾಣಗಳಂತ್ತಹ ಮಾತು
ಇನೋಬ್ಬರದ್ದು ಸಹನೆಯ ಮಾತು
ಕೇಲಶರದ್ದು ಮಮತೆಯ ಮಾತು
ಇವರದ್ದು ಕರುಣೆಯ ಮಾತು......

ನಾವು ನಾಮ್ಮವರು ಎಂಬುವುದರ
ಮಲಕ ಎಲ್ಲರು ಒಂದೇ ಎಂದು
ಆದಿಕಾರ ನಡೆಸಿದವರ ಪಾಲಿಗೆ ಕೆಂಡಾವ
ಉಣಬಡಿಸಿದ ಇವರದ್ದು ಏಕತೆಯ ಮಾತು

ಹರಿಯುವ ನದಿಯಂತೆ ನಿಷ್ಕಲ್ಮಶ
ವಾಗಿ ಹರಿಜನ ಎಂಬುವರನ್ನು ದೇವರು
ಎಂದು ಪೂಜೆಗೊಳಪಡಿಸಿ ಸಮಾನತೆ
ನೀಡಿದವರದ್ದು ವಾತ್ಸಲ್ಯದ ಮಾತು.....

ಬೃಹತ್ ಬಂಡೆಯಲ್ಲಿ ಸಂವಿಧಾನ ಎಂಬ
ಬೃಹತ್ತಾದ ಮುರ್ತಿಯನ್ನು ಸ್ಥಾಪಿಸಿ
ಎಕತ ಮನೋಭಾವವನ್ನು ಬೆಳೆಸಿದ ಈ
ಗೊಂಬೆಯು ಇನ್ನಿತರರ ದ್ವೇಷಕ್ಕೆ ಕನ್ನಡಿ
ಯಾಯಿತು ಗಜಾನನ

ಇಗ ಹೇಳು ಗಜಾನನ ಆ ಗೊಂಬೆಯದ್ದು
ಏಂಥಹಃ ಮೌನ ಆ ಮೌನ ಆಳಿಸಲು
ಆವರೀಗವರೆಸಾಟಿ ಆದ್ದಕ್ಕೆ ಆವರನ್ನ
ಸಹನೇಯ ಶಿಲ್ಪಿ ಎಂಬ ನಾಮವುಂಟು.....
ರಾಥೋಡ್......

- Vinod Naik Vinod Naik

23 Oct 2019, 08:07 am

ನವಿಲು ಗರಿ ಕಳಚಿ ಬಿದ್ದಿದೆ ಬಾ ಗೆಳತಿ

ನವಿಲು ಗರಿ ಕಳಚಿ ಬಿದ್ದಿದೆ
ಗಾಳಿಗೆ ಗರಿಯು ಅ ಕಡೆ
ಈ ಕಡೆ ಹಾರುತ್ತಿದೆ.
ಬಾ ಗೆಳತಿ ನವಿಲು ಗರಿ
ಬಿದ್ದಿದೆ...
ಕನಸೂ ಅರಳುತ್ತಿದೆ.
ಮನಸ್ಸು ನಲಿಯುತ್ತಿದೆ.
ಬಾ ಗೆಳತಿ ನವಿಲು ಗರಿ
ಕರೆಯುತ್ತಿದೆ.
ನವಿಲು ಗರಿಯ ಬಣ್ಣ
ಬದುಕು ಕಟ್ಟು ಆಸೆ
ಮೂಡಿಸುತ್ತದೆ. ಬಂದು
ಬಿಡು ಸೊಗಸಾದ ಕನಸು
ಕಾಣೋಣ...
ನವಿಲು ಗರಿ ಕಳಚಿ ಬಿದ್ದಿದೆ
ಬಾ ಗೆಳತಿ...ಬಾ..

- Veerabhadra Puranikamatha

22 Oct 2019, 11:16 pm

ಕನಸಲ್ಲಿ ಬಂದವಳು ಯಾರವಳು..

ಕನಸಲ್ಲಿ ಬರುವ ಬೆಡಗಿನ ವಯ್ಯರಿಗೆ ಮುತ್ತು ಕೊಟ್ಟೆ ಕೇಳದೆ ಕನಸಲ್ಲಿ!!....
ಕನಸಲ್ಲಿ ಬರುವ ಬೆಡಗಿನ ವಯ್ಯರಿ ನನ್ನ ನಿದ್ದೆಯ ಕದ್ದೋಯ್ದಲು ಕಾಣದೂರಿಗೆ ಪ್ರೀತಿಯ ಬಲೆಯಲ್ಲಿ!!....
ಹಗಲಲ್ಲಿ ಅವಳೆ ಜೊತೆ ಇದ್ದರು ಮಾತನಾಡದೆ ಮೂಕಾದೆ ಎದುರಲ್ಲಿ ಯಾಕೋ ಕಾಣೆ!!...
ದಿನವೇಲ್ಲಾ ಅವಳೆ ನನ್ನ ಜೊತೆ ಇದ್ದರು ನನ್ನನ್ನೆ ಮರೆತು ಅವಳಾಗಿರುವೆ ನಾ ಕಾಣೆ!!...
ಅಲ್ಲ ಮುಖ ಪರಿಚಯವಿಲ್ಲದ ತರುಣೀಗೆ ಇಷ್ಟೊಂದು ಹುಡುಕಾಟನ, ಹೇಗಿರುವಳೋ, ಆ ನನ್ನ ಕನಸಲ್ಲಿ ಬರುವ ಶ್ರೀ ಗಂಧದ ಗೊಂಬೆ!!... ಯಾರವಳು???

- Veerabhadra Puranikamatha

22 Oct 2019, 11:10 pm