Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವನೆಗಳು

ಈ ಮಳೆಯಲ್ಲಿ ನೆನೆದವರೆಷ್ಟೋ..
ಹನಿಗಳು ದಕ್ಕಿಸಿಕೊಂಡವರೆಷ್ಟೋ..
ಕಳೆದ ಮಳೆಗೆ
ನೆನೆದಿದ್ದ ಪ್ರೇಮಿ ನಾನು..⚘
ಈ ಮಳೆಗೂ ಮೈಯೊಡ್ಡಿದ್ದೆನೆ
ಈ ನಡುವೆ
ನನ್ನ ಕಣ್ಣೀರು ಸಂಗಮಿಸಿದ್ದು
ಯಾರಿಗೂ ತಿಳಿಯದಂತೆ...!!

- Veerabhadra Puranikamatha

22 Oct 2019, 11:09 pm

ತಂದೆ - ಮಗಳು

ಮಳೆಯದು ಬಂದಿತು
ಮನವದು ಮಿಂದಿತು
ಹೊಸದದು ಸೃಷ್ಟಿಯು ಶುರುವಾಯ್ತು
ನಿನ್ನಯ ಒಡಲೊಳು
ಗರ್ಭವು ಚಿಗುರಿತು
ನನ್ನಯ ಆಸೆಗೆ ವರವಾಯ್ತು

ನವಮಿಗೆ ಬಂದಳು
ಹರುಷವ ತಂದಳು
ಕುವರಿಯು ನನ್ನಯ ಮನೆಬೆಳಗಿ
ಎಲ್ಲರ ಮನದಲು
ದೀಪವ ಬೆಳಗುತ
ತಂದಳು ಲಕುಮಿಯು ಭಾಗ್ಯವನು

ಅಂಬೆಯ ಗಾಲನು
ಇಕ್ಕುತ ಓಡಲು
ಕಂಡೆನು ಶಾರದೆ ದೇವಿಯನೂ
ಮೊದಲನೆ ಮಾತನು
ಆಡಲು ನೀನದು
ಮೂಕನು ಆದೆನು ಹರುಷದಲಿ

ಮಗಳನು ಶಾಲೆಗೆ
ಬಿಡಲದು ಆಯಿತು
ಮನಕದು ಅಂಜಿಕೆ ತಿಳಿಯದೆಯೇ
ಮೊಗ್ಗದು ಅರಳಲು
ಮನಕಾ ತಂಕವು
ಹರುಷವು ಆಯಿತು ಜೊತೆಯಲಿಯೇ

ಮದುವೆಯು ನಿಶ್ಚಯ
ವಾಗಲು ಅನಿಸಿತು
ಕೆಲದಿನ ದತಿಥಿಯು ನೀನೆಂದೂ
ಮದುವೆಯ ದಿಬ್ಬಣ
ಹೊರಡಲು ಅನಿಸಿತು
ಹೃದಯದಿ ಹೂವನು ಕಿತ್ತಂತೇ

ವರುಷಗ ಗಳುರುಳಿತು
ಮಗಳಲಿ ಚಿಗುರಿತು
ಕುಡಿಯದು ತಂದೂ ನಗುವೆನಗೇ
ಲಕುಮಿಯು ಬಂದಳು
ನವಮಿಗೆ ತಂದಳು
ನೆನಪದು ನಿನ್ನಯ ಮತ್ತೆನಗೇ!!!

- ಜೈಮಿನಿ

21 Oct 2019, 09:40 pm

ಸ್ತ್ರೀ ಸ್ವಾಭಿಮಾನ

ಒಡಲಾಳದ ಬೇಗುದಿ
ಕಂಡೆ ಮಡುಗಟ್ಟಿರುವುದ
ಮಾನಿನಿಯ ವದನದಲಿ

ಕಲ್ಪಗಳ ದೌರ್ಜನ್ಯವನು
ಮನ್ನಿಸುತ ಮನದಲ್ಲಿ
ಮನ್ವಂತರಗಳ ಮರ್ದನವ
ಸಹಿಸುತ್ತ ತನುವಲ್ಲಿ

ಪ್ರತಿ ಯುಗದಿ ಕೂಗಿಹಳು
ಕೊನೆಯೆಲ್ಲಿ ಇದಕೆಂದು
ಪ್ರತಿ ದಿನವು ಹೋರಾಡಿ
ತನ್ನಭಿಮಾನ ಹೆಚ್ಚೆಂದು

ಈ ಸ್ವಾರ್ಥಿ ಸಮಾಜಕೆ
ಅರಿವಾಗುವುದು ಎಂತು
ಅಕ್ಕ ತಂಗಿಯರಿರಲಿ ಪರಸ್ತ್ರೀ ಇರಲಿ
ಸ್ತ್ರೀಯಭಿಮಾನವದೆ ಒಂದೆಂದು?

- ಜೈಮಿನಿ

21 Oct 2019, 05:38 pm

ಗುಡಿಸಲ ಬದುಕು

ಕೋಟಿ ದೀಪಗಳ ಮಧ್ಯೆ
ಮುಂಬತ್ತಿ ಮನಸೋಲಿಸಿತು
ಮೌನವಾಗಿ ಕರಗುತ ಬಡತನದಲ್ಲೂ
ಸಿರಿವಂತಿಕೆ ಮೆರೆಯುತ.

ಮೊರೆ ಇಟ್ಟಿತು ಮೂಕ
ಜೀವಿಗಳ ಮನ ತಂಗಾಳಿಯ
ರಭಸ ನಿಧಾನ.

ಹಬೆಯಾಡುವ ಗಂಜಿ ಪಕ್ಕದಲ್ಲೇ
ಪುಟ್ನಂಜಿ ಕುಯ್ಯುತಿಹಳು ಈರುಳ್ಳಿ
ಕತ್ತಲಲ್ಲಿ ಅಂಜಿ.

ಮೃಷ್ಟಾನ್ನದ ರುಚಿಯು ಗಂಜಿ ಪಡೆದೀತೆ
ಗಂಜಿಯ ಸವಿ ಮೃಷ್ಟಾನ್ನಕ್ಕೆ ಬಂದೀತೆ ತಿಳಿಯದಾಗಿದೆ ಇಂದು ಹಸಿವೆ ಮುಂಜಾನೆಯಿಂದ ತಡೆದು.

- ಚುಕ್ಕಿ

20 Oct 2019, 07:31 am

ನಿನ್ನುಸಿರ ಸದ್ದನ್ನು

ನಿನ್ನುಸಿರ ಸದ್ದನ್ನು ನಿಶಬ್ದದಲ್ಲಿ
ಕಟ್ಟಿಹಾಕುತಿರುವೆ ನಿಂದಿಸಬೇಡ
ನನ್ನುಸಿರು ಹೂವಾಗಿಹುದು ನಿನ್ನ
ಪ್ರೀತಿ ಘಮದಲ್ಲಿ.

ನಿನ್ನೆದುರು ಬಾರದೆ ನಾ ಕದ್ದ
ನಿನ್ನ ಏಕಾಂತಕೆ ಹೆಸರೊಂದ
ಇಟ್ಟಿರುವೆ ವಿರಹವೆಂದು ಹಾಗೆ
ಸುಮ್ಮನೆ,
ಕೋಪಿಸಿಕ್ಕೊಳ್ಳಬೇಡ ಅದಕೂ
ಉತ್ತರವಿದೆ ಒಲವ ದಾರಿಯಲಿ
ನಡೆದ ಪಾದಕೆ ನಿನ್ನ ನೆನಪಿನ
ಗುರುತು ಇನ್ನು ಅಂಟಿದೆ.

ನನ್ನೆಡೆಗೆ ನೀ ನೋಡಿ ನಕ್ಕಾಗ ನಾಚಿ
ನಾನೋಡಿ ಬಂದಿರುವೆ, ಕಾಲ್ಗೆಜ್ಜೆಗಿನಿತು
ಆಸೆ ಹೆಚ್ಚಂತೆ ನನ್ನಿಂದ ದೂರಾಗಿ ನೀ
ಬರುವ ಹಾದಿಗೆ ಕಾದು ಕುಳಿತಿದೆ.

ಒಲವ ಮಾಲೆ ಕಟ್ಟಿ ನಾ ಮುಡಿಯುವ
ಮುನ್ನ ತಿಳಿ ಸಂಜೆಗೆಂಪಾಗ ನನ್ನ ಆವರಿಸು, ಅಪೂರ್ಣವಾದ ಹೆಸರಿಗೆ ಪರಿಪೂರ್ಣವಾದ
ನಿನ್ನೆಸರನೊಮ್ಮೆ ಸೇರಿಸು
ಮಡದಿಯಾಗುವೆ ನಿನ್ನ ಕನಸು ಕದ್ದ
ಚೆಲುವೆಯರ ಸವತಿಯಾಗುವೆ.

- ಚುಕ್ಕಿ

20 Oct 2019, 07:30 am

ಕಾವ್ಯ

ಅವಳ ಮಿಡಿತ
ನನ್ನ ಹೃದಯ ಬಡಿತ
ಅವಳ ತುಡಿತ
ನನ್ನ ಮನಸಿನ ತಕಧಿಮಿತ

- ಸಿದ್ದಾರಾಮ ಧುತ್ತರಗೆ

19 Oct 2019, 05:06 pm

ಆರಾಮಾಗಿದೆ ಈ ಕ್ಷಣ

ನಡೆದುಕೊಂಡು ಬಂದ ದಾರಿ,
ತಣ್ಣನೆಯ ಗಾಳಿ ಬೀರಿ,
ಆರಾಮಾಗಿದೆ ಈ ಕ್ಷಣ,
ಕಂಡ ಕನಸುಗಳೇನ್ನಲ್ಲ ಮಾರಿ...

-ಅಫ್ಝಲ್ ಖಾನ್

- Afzi Video's

18 Oct 2019, 12:02 am

ಅಸಾಧ್ಯ

ಎಲ್ಲಾರೂ ಕವಿಗಳೆ
ಅವರವರ ಬದುಕೆಂಬ ಪುಸ್ತಕದಲಿ..
ಒಂದೆರಡು ನಗೆ ಬರಹಗಳು
ಬರೆದಷ್ಟು ಮುಗಿಯದ ನೋವಿನ ಕಥೆಗಳು..
ಆ ಅನಂತ ಪುಟದ ಕಾದಂಬರಿಯ
ಆರಂಭ ಸೀಸದ ಕಡ್ಡಿಯಿಂದಾಗಿದ್ದರೆ
ಎಲ್ಲಾ ಕಹಿ ಅನುಭವಗಳನ್ನು ಅಳಿಸಿ
ಸಂತಸವೆಂಬ ಜಾತ್ರೆಯ ಸೊಗಸನ್ನು ವರ್ಣಿಸುತ್ತಿದ್ದೆ...
ಏನು ಮಾಡಲಿ ಲೇಖನಿಯಿಂದಾದ
ತಪ್ಪನ್ನು ಅಳಿಸಲು ಸಾಧ್ಯವೇ...????
#S³

- Sachin Acharya Sachin Acharya

17 Oct 2019, 11:50 am

ಗೂಗಲ್ಲು

ಗಲ್ಲಿ ಗಲ್ಲಿಯಲ್ಲಿ ಗೂಗಲ್ಲಿನಾ ಗುಂಗು
ಕಿವಿಯೆಲ್ಲ ಮನವೆಲ್ಲ ಗೂ ಎಂದು ಗಲ್ಲೆಂದು

ಕೇಳಲೂ ಎಲ್ಲರ, ಇದೆಯೇ ಗೂಗೆಗೂ ಹಲ್ಲೆಂದು
ಓಡುವರು ಎಲ್ಲರೂ ಗೂಗಲ್ಲು ಎಲ್ಲೆಂದು

ಗರತಿ ಗಂಗವ್ವಳಾ ಪೂಜಾಗೂ ಗೂಗಲ್ಲು
ಗವಿಸಿದ್ದ ವಚನವಾ ಓದಲೂ ಗೂಗಲ್ಲು

ಗದ್ದುಗೆಯ ಸ್ವಾಮಿಗಳ ಕೈಯಲ್ಲು ಗೂಗಲ್ಲು
ಗಲ್ಲಿಗೇರುತಿಹ ಖೈದಿಯಾ ಕೈಯಲ್ಲಿ ಗೂಗಲ್ಲು

ಗಾಂಪನೂ ನೋಡುತಿಹ ದಿನವಿಡಿಯು ಗೂಗಲ್ಲು
ಗಾವಿಲನ ಕೆಲಸವೂ ಸಾಗದು ಇಲ್ಲದಿರೆ ಗೂಗಲ್ಲು

ಕೆಳಿರೀ ಪೋರನನು ಬ್ರಹ್ಮ ಜ್ಞಾನವದು ಏನೆಂದು
ಮೌನದಲಿ ತೋರುವನು ಜಾಲವದು ಗೂಗಲ್ಲು

ಗುರುಗಳಿಗೆ ಪಠಿಸಲೂ ಬೇಕದುವೆ ಗೂಗಲ್ಲು
ಶಿಷ್ಯರಿಗೆ ಗುಣಿಸಲೂ ಬೇಕಲವೇ ಗೂಗಲ್ಲು

ಸುದ್ದಿ ಸಮಾಚಾರ ತಿಳಿಯುವುದಕು ಗೂಗಲ್ಲು
ವ್ಯಾಪಾರ ವ್ಯವಹಾರ ಎಲ್ಲದಕು ಗೂಗಲ್ಲು

ಸಂದೇಹ ನನಗೊಂದು -
ಬರುವುದೇ ಮುಂದೊಂದು ದಿನವೊಂದು
ಇಲ್ಲದಿರೆ ಗೂಗಲ್ಲು ಆಗುವುದೆ ಜೀವನವೆ ಗಲ್ಲು??

- ಜೈಮಿನಿ

12 Oct 2019, 01:08 am

ದಶಾವತಾರ

ಪೂರ್ವ ಕರ್ಮ ಕಳೆಯಲೆಂದು
ಕಂದನಾಗಿ ಇಳೆಗೆ ಬಂದೆ

ಜ್ಞಾನವನ್ನು ಕೂಡಲೆಂದು
ವಿದ್ಯಾರ್ಥಿಯಾಗಿ ಶಾಲೆಗೋದೆ

ಎರಡು ಕಾಸು ಗಳಿಸಲೆಂದು
ಆಧಿಕಾರಿಯಾಗಿ ಮೆರೆದೆ

ಹೂವ ಮನದಿ ಪ್ರೀತಿಮಾಡಿ
ಕನ್ಯೆ ವರಿಸಿ ಗೃಹಸ್ಥನಾದೆ

ಮನೆಯ ಕಟ್ಟಿ ಕಾರು ಓಡ್ಸಿ
ಎಲ್ಲ ಗೆದ್ದೆ ಎಂದುಕೊಂಡೆ

ಮಕ್ಳಿಗೆಲ್ಲ ಮದುವೆ ಮಾಡಿ
ತಂದೆಯಿಂದ ಮಾವನಾದೆ

ಕೆಲಸದಿಂದ ನಿವೃತ್ತಿಯಾಗೆ
ಪೌತ್ರ ರೊಡನೆ ಆಡುತಿರುವೆ

ತನುವು ಮನವು ಮಾಗಿ ಹೋಗಿ
ದೈವ ಭಕ್ತಿ ಹೆಚ್ಚು ಆಗಿ
ತೀರ್ಥ ಯಾತ್ರೆ ಮಾಡ ಹೊರಟೆ

ಬೆನ್ನು ಬಾಗಿ ಕಣ್ಣು ಹೋಗಿ
ಕೈಯು ಕಾಲು ಆಡದಾಗಿ
ಮನದಿ ದೈವ ನೆನೆಯುತಿರುವೆ

ಪ್ರಾಣ ದೇಹ ಬಿಡುತಲಿರಲು
ಇಳೆಯ ಮಾಯೆ ಬಿಡದು ಆಗಿ
ಮತ್ತೆ ಗರ್ಭವರಸಿ ಹೊರಟೆ!!

- ಜೈಮಿನಿ

10 Oct 2019, 11:04 am