Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆತಿ

ನೀ ನನ್ನ ಜೀವದ ಗೆಳತಿ
ನಿನ್ನ ಮೇಲೆ ನನಗೆ ಅಪಾರ ಪ್ರೀತಿ
ನೀ ನನ್ನ ಹೃದಯ
ನನ್ನ ಜೊತೆ ನೀ ಸ್ನೇಹ ಮಾಡುವೆಯಾ?


ನಿನ್ನ ಆ ನಗು
ಜೇನಿನ ಜಿನುಗು
ನಿನ್ನ ಆ ಮಾತು
ಸಮುದ್ರದಲ್ಲಿ ಸಿಗುವ ಮುತ್ತು


ಸೋತುಹೋದೆ ನಿನ್ನಲ್ಲೇ
ನಾನು ಈಗ ಗೊತ್ತೇನೆ
ನಿನ್ನ ಕನ್ನ ನೂಟಾನೇ
ನಂಗೆ ಒಂದು ಸೆಳೆತಾನೆ
ನಿನ್ನ ಆ ನಡಿಗೆ
ನವಿಲು ನಡೆದ ಹಾಗೆ

ತ್ರಿಷಾ ಆರ್ ಶೇಖರ್

- Trupthi Trupthi

09 Aug 2019, 04:43 pm

ನನ್ನ ಪ್ರೀತಿ

ಮುಸ್ಸಂಜೆಯ ಸೂರ್ಯನ ಮರೆಮಾಡಿ ಎದುರಾ ದಿರಿ ನೀವು ನನ್ನ ಬಳಿಗೆ ಭಯ ತುಂಬಿ ಬಾರದವು ಹೃದಯದೊಳಗಿನ ಮಾತುಗಳು ಹೊರಗೆ ಪ್ರತಿದಿನ ನಿಮ್ಮ ಕಣ್ಣೋಟಕ್ಕೆ ಕರಗಿ ನೀರಾಯಿತು ಮನದ ಬಯಕೆ ಮೊದಲ ನಿಮ್ಮ ಚುಂಬನದಿಂದ ಸೋತು ಶರಣಾಯಿತು ಪ್ರೀತಿ ತುಂಬಿದ ನನ್ನ ಮನ ಎಂದು ಕಾಣದ ಮೊದಲ ನಿಮ್ಮ ಅಪ್ಪುಗೆ ಕರೆದೊಯ್ದಿತು ನನ್ನ ಸ್ವರ್ಗ ಸುಖದೆಡೆಗೆ ಕನಸುಗಳು ಚಿಗುರೊಡೆಯುವ ಮುಗ್ಧ ಮನಸಿನೊಳಗೆ ಸಂತಸದಿ ಹಾರೈಸಿ ದಿರಿ ಜೊತೆಯಾಗಿ ನನಗೆ ನಿಮ್ಮೊಳಗೆ ಮಗುವಾಗಿ ಕಳೆಯುತ್ತಿರುವ ಕ್ಷಣಗಳು ಚಂದ ನನ್ನೊಳಗೆ ನೀವಿರಲು ಅದುವೇ ಮಹದಾನಂದ ಸುಂದರ ಪ್ರೀತಿ ಇದು ಮನತುಂಬಿ ತೆನೆಗೆ ನನ್ನ ಮದುವೆಯ ಸಂಬಂಧ ಕೂಡಿತು ಅವರ ಜೊತೆಗೆ ಸದ್ಗುಣದ ವರ ಮನಸಲ್ಲಿ ನೆಲೆಸಿರಲು ನಾನು ನಮ್ಮಿಬ್ಬರ ಬದುಕು ಪ್ರೀತಿ ತುಂಬಿದ ಹಾಲುಜೇನು

- nagamani Kanaka

05 Aug 2019, 12:12 pm

ಗೆಳೆತನ

ಬಾಲ್ಯದ ಆರಂಭದ ಈ ಸಂಬಂಧ
ಬೆರೆಯುವ ಗುಣದ ಅನುಬಂಧ
ಅದುವೇ ನಮ್ಮ ಗೆಳೆತನದ
ಸ್ನೇಹ ಸಂಬಂಧ

ಕತ್ತಲೆಯ ಬದುಕಿಗೆ
ಬೆಳಕ ತರುವ ಈ ಸ್ನೇಹ
ಬಿಡಿಸಲಾಗದ ಒಂದು ಬಂಧನ

ಮತಾಂಧತೆಯ ಭೇಧ ಇಲ್ಲಾ ಈ ಭಾವಕ್ಕೆ
ಮನಿಸಿನ ನೋವಿನ
ಒಲವ ತುಂಬುವುದು ಗೆಳೆತನ..
ಭಾವನೆಗೆ ಕನಸುಗಳಿಗೆ
ಜೀವ ತುಂಬುವುದು ಗೆಳೆತನ..
ಏಕಾಂತದ ಒಂಟಿತನಕ್ಕೆ
ಹೊಸತೆ ಈ ಗೆಳೆತನ…

ಸ್ನೇಹದ ಭಾವನೆಗಳಿಗೆ ಬೆಸೆಯಬೇಕು dara
ಬೆಸದರು ದಾರಕ್ಕೆ ಬಾವನೆಗಳ ಹಾರ...
ಬಾವನೆಗಳ ಜೊತೆಗೆ ಪ್ರೀತಿಯ ಪಯಣ,
ಬರೆಯದೆ ಮುಗಿಯಲಿ ಈ ಸ್ನೇಹದ ಕವನ.....
ಚಿರಕಾಲ ಉಳಿಯಲಿ
ಬಂಧನದ ಭಾವನೆ ಗೆಳೆತನ

- An

04 Aug 2019, 02:05 pm

ನಗು

ನಗುವೆಂಬ ಅಗಸದಲ್ಲಿ ತೇಲಿ ಹೋದಾಗ
ನೀ ಬರುವ ಕ್ಷಣದಲ್ಲಿ ನಾ ಎಣಿಸಿ ನಕ್ಕಾಗ

ಕಾಡುತಿಹುದು ಆ ನಿನ್ನ ನಲ್ಮೆಯ ನವಿರಾದ ನಗು
ಹುಸಿಯಿಲ್ಲದ ಮನಸ್ಸಿನಿಂದ ಮೂಡುವ ಆ ಮುಗುಳುನಗು

ಮುಖವೇ ಮನಕ್ಕೆ ಹಿಡಿದಿರುವ
ಕನ್ನಡಿಯ ಹಾಗೆ
ಮುಗ್ದ ಮನಸ್ಸಿನ ಮೌನ ಭಾಷೆಗೆ
ಮುನ್ನುಡಿಯ ಹಾಗೆ

ನಗುವೇ ಸೊಬಗಿಗಿರುವ ಸಂತಸದ ನುಡಿ,
ನಗುತಿರು, ನಗಿಸುತಲಿರು, ಕನ್ನಡದ ನಾಣ್ಣುಡಿ,
ನಿನ್ನ ಮನಸ್ಸಿನ ನಗುವಿನ ಪ್ರೀತಿಯ ಹಿಡಿ

ಕಾಯುತಿರುವೆ ನಿನ್ನ ನಾ.....
ಮೌನದ ನಗುವುಗಾಗಿ
ಬರುವಿಕೆಯ ಮುಗುಳುನಗೆಯ
ಸಂತೋಷದ ಹುರುಪಿಗಾಗಿ ........

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️✍️

- An

04 Aug 2019, 01:40 pm

ಸಂಕುಚಿತ..

ಹೊರಟಿರುವೆ ಗುರಿಯಿರದೆ
ಅನಿಸುತಿದೆ
ಮರೆತಿರುವೆ ದಾರಿಯನು
ಅನಿಸುತಿದೆ..

ಮಳೆಯಲೂ ಕೊಡೆಯು ಸಹ
ಬೆವರುತಿದೆ
ಹಗಲಿನಲೂ ಕನಸು ಸಹ
ಕೈತಪ್ಪಿದೆ..

ಈ..ಭಯದಲ್ಲೇನೋ ನನಗೆ
ಸಂಕುಚಿತ ಮನದೊಳಗೆ
ಬೇಡುತಿದೆ ಮಿದುಳೆದೆಗೆ
ಮನಸ್ಶಾಂತಿ ಕೊನೆಗೆ...

> AKV

- AMARESH K

01 Aug 2019, 11:31 pm

ನನ್ನ ಭಾಷೆ

ಕುಂದಾಪುರ ಕನ್ನಡ

ಆ ಕುಂದಾಪುರ ತಾಯಿ ನೆಲದಲ್ಲಿ ಹುಟ್ಟಿ

ನಾ ಕಲಿತಾ ಮೊದಲ ಭಾಷೆ
ಕುಂದಾಪುರ ಕನ್ನಡ

ನಾ ಹುಟ್ಟಿದ ಕುಂದಾಪುರ
ಮಣ್ಣಿನ ಸುವಾಸನೆಯಲ್ಲಿ
ಬೆರೆತು ಹೋಯಿತು ಈ
ಕುಂದಾಪುರ ಭಾಷೆ

ಬಾಲ್ಯದ ದಿನದದಲ್ಲಿ
ಪ್ರೀತಿ ಪಾತ್ರರ ಜೊತೆ
ಸ್ನೇಹಿತರ ಒಡಗೂಡಿ ಕಲಿತ
ಈ ಕುಂದಾಪುರ ಭಾಷೆ
ಎಂದಿಗೂ ಮರೆಯಾಗದ
ಈ ನನ್ನ ಭಾಷೆ

ಈ ದಿನ ನಾ ಹೆಮ್ಮೆ ಪಡುವ ಕ್ಷಣ
ವಿಶ್ವ ಮಾನ್ಯತೆ ಕಂಡುಕೊಡ ಈ ಭಾಷೆ
ಎಂದೆಂದಿಗೂ ಈ ಭಾಷೆ ವಿಶ್ವ ಮಾನ್ಯವಾಗಲಿ

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️✍️

- An

01 Aug 2019, 12:04 pm

ಹೂವು ಯಾರ ಮುಡಿಗೆ

ಹೂವು ಯಾರ ಮುಡಿಗೆ

ಹೂವು ಬಾಯಿ ಬಿಟ್ಟು ಕೂಗುತೈತೆ...
ದುಂಬಿಯೂ... ಬರಲೆಂದು ಬಳಿಗೆ.. !!

ಚಿಟ್ಟೆ ಓಡುತೈತೆ ರೆಕ್ಕೆ ಬಡಿದು ಮನಸ್ಸು ಹೇಳಿದಂತೆ
ಹೂವು ನಗೆಯ ಚೆಲ್ಲಿ ನಗುವ ನಕ್ಷತ್ರಗಳಂತೆ
ಒಬ್ಬೊಬ್ಬರ ನಗುವಲ್ಲಿ ಒಂತರಾ ಕನಸು..
ಅವು ನನಗಾಗಿ ಕಾಯುತಿದೆ ಯಾರಿಗೆ ಗೊತ್ತು !!

ಬಣ್ಣ ಬಯಲಾದ ಬೊಂಬೆಗಳು ಎಲ್ಲಾ..
ನಾಟಕದ ಪರದೆಯಂತೆ ಅವಳಂದ ಚೆಂದು
ನನಗಾಗಿ ಕಾದಿದ್ದ ಆ ಹೂವು ನೋಟ
ಸವಿಯ ಮಾತಲ್ಲಿ ಸವಿಯಾದ ಕೂಟ !!

ಹುಡುಕುತ್ತಿತ್ತು ಹೃದಯ ಬೆಚ್ಚಿಬಿದ್ದು
ಎದೆಯ ಒಳಗೆ ಅವಳ ನೆನಪೆ ಬಂದು
ನಿನಗಾಗಿ ಅರಳಿದ ಅವಳ ಮನಸ್ಸು
ಯಾರು ಕಿತ್ತಾರು ಮುಂಜಾನೆ ಅವಳ ಕತ್ತು !!

ನಿನ್ನೆ ಕಂಡ ಅವಳು ಮಾಯ ಮೋಹ
ಅವಳ ನಂಬಿ ದಿನವು ಕಾದ ದಾಹ
ಮುಂಜಾನೆ ಇಬ್ಬನಿಯಲ್ಲಿ ಕರಗಿದಂತೆ ಹನಿಯು
ಚಿಟ್ಟೆಯು ದುಃಖಸಿತು ನನಗಾಗಿ ಅವಳಿಲ್ಲವೆಂದು !!

ಬಾ ಎಂದು ಕೂಗೆ ಎಲ್ಲಿ ಹೋದಳು ಅವಳು
ಸುತ್ತೆಲ್ಲ ಹುಡುಕಿದೆ ಚೆಂಗುಲಾಬಿ ಎಂದು
ಯಾವ ಹೂವು ಯಾರಿಗೆ ಸೇರುವುದು ತಿಳಿಯದು
ಬಿಟ್ಟುಬಿಡು ಮನಸ್ಸಿಂದ ಆಸೆ ಚಿಟ್ಟೆ ಹಾರಿತ್ತು ಗಗನೆತ್ತರ ಕಡೆಗೆ !!

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

31 Jul 2019, 09:36 am

ಅಮ್ಮ

ಅಮ್ಮನ ಮಮತೆಯ ಅರಿಯದವರಿಲ್ಲಾ
ಅವಳ ಪ್ರೀತಿ ಮಮಕಾರಕ್ಕೆ ಸರಿಸಾಟಿಯಾರಿಲ್ಲಾ
ಮೊದಲ ಕೈ ತುತ್ತು ಕೊಟ್ಟವಳೂ ಅವಳೇ
ನೊವಾದಗಲೆಲ್ಲಾ ನೆನಪಾಗುವಳು ಅವಳೇ
ಮೊದಲಾಕ್ಷರ ಕಲಿಸಿದವಳು ಅವಳು
ಜೀವನ ಪಾಠವ ಭೊಧಿಸಿದವಳು
ತಪ್ಪು ಹೆಜ್ಜೆ ಇಟ್ಟಾಗ ಸರಿ ತಿದ್ದಿದವಳು
ಪ್ರೀತಿಗೆ ಮೊದಲ ಹೆಸರೇ ಅಮ್ಮ
ಕೊಪಿಸಿಕೊಂಡರೇ ಅವಳೇ ಗುಮ್ಮ
ಮಗು ನಕ್ಕಾಗ ತಾನು ನಗುವಳು
ಮಗು ಅತ್ತಾಗ ತಾನು ಅಳುವಳು
ಕರುಳ ಬಳ್ಳಿಯ ಈ ಬಂಧ ಎಂದು ಕೊನೆಕಾಣುವುದಿಲ್ಲ....
ಅಮ್ಮ I love you

Ask'c

- Abhishek C billava

30 Jul 2019, 04:20 pm

ನನ್ನವರ ಹುಡುಕಾಟದಲ್ಲಿ

ಅವಳ ಕಂಡ ಮೇಲೆ ನಾ ಮರೆತೆ ನನ್ನವರನ್ನೆ...
ಕಂಗಳು ಕುರುಡಾಗಿ ಸಂಬಂಧಗಳು ದೂರಾಗಿ...
ಎದೆಯಲಿ ಪ್ರೀತಿಯೆಂಬ ಅಮಲು ಜೋರಾಗಿ ..
ಈ ಕ್ಷಣ ಅವಳಿಲ್ಲ ಜತೆಯಲಿ....
ಕಳೆದು ಹೋದ ಸಂಬಂಧಗಳ ಹುಡುಕಾಟದಲ್ಲಿ ಹುಚ್ಚನಾಗಿರುವೆ...
ಮರೆತು ನಾ ನನ್ನನೆ......

- Abhishek C billava

30 Jul 2019, 04:19 pm

ಅಕ್ಕ

ಅಕ್ಕ ಎನ್ನುವದೇ ಒಂದು ಆನಂದ
ಅವಳನ್ನು ಕರೆಯುವ
ಭಾವವೇ ಸದಾ ಆನಂದ.......

ಜೊತೆಯಾಗಿ ಬೆಳೆದವು
ಊಟ ಪಾಠದ ಜೊತೆಯಲ್ಲಿ
ನೋವು ನಲಿವುಗಳ ಆಟದಲ್ಲಿ
ಕಷ್ಟ ಸುಖದ ಹಾದಿಯಲ್ಲಿ.......

ಅಮ್ಮ ನಾ ಅಕ್ಕರೆಯ ಮಗಳು
ಅವಳನೋವಿನಲ್ಲೂ ಜೊತೆಯಾದವಳು
ಜಗತ್ತಿನ ರೂಪದಲ್ಲಿ ಎರಡನೇ ತಾಯಿಯಾದವಳು

ಒಡಲಾಳದ ಪ್ರೀತಿ ಕೊಟ್ಟ ಒಡಹುಟ್ಟಿದವಳು
ಪ್ರತಿಯೊಂದು ಭಾವನೆಯಲ್ಲೂ ಸ್ನೇಹಮಹಿ ಇವಳು
ಎಲ್ಲರ ಸಹನೆಯ ಸಹಕಾರದವಳು
ಚಿರಕಾಲ ಜೊತೆ ಜೊತೆ ಯಾಗಿ ಬಾಳುವಳು

ಇವಳೇ ನನ್ನಕ್ಕ ...............

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ,✍️✍️✍️✍️✍️

- An

30 Jul 2019, 02:38 pm