Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಲಿಲ್ಲ ನಾನು ನಿಮ್ಮ ಹಾಗೆ

ಬದುಕಲಿಲ್ಲ ನಾನು ನಿಮ್ಮ ಹಾಗೆ.
ಮೈಯ ಮಾರಿಕೊಂಡರೂನು
ಮನಸ ಮಾರಿಕೊಂಡವಳಲ್ಲ,
ನಿಮ್ಮ ದೃಷ್ಟಿಯಲ್ಲಿ ಕೆಟ್ಟವಳು
ಅನಿಸಿಕೊಂಡರೂನು
ಕನಸುಗಳಿಗೆ ಕೊಳೆ ಅಂಟಿಲ್ಲ!!

ಮೊಗಕೆ ಬಣ್ಣ ಬಳಿದರೂನು
ಬಣ್ಣ ಬದಲಿಸಿ ಬದುಕಲಿಲ್ಲ,
ಕೈ ಚಾಚಿ ದುಡ್ಡು ಪಡೆದರೂನು
ಇನ್ನೊಬ್ಬರ ಬೆವರ ಹನಿಯ ದೋಚಲಿಲ್ಲ!!

ಬದುಕಲಿಲ್ಲ ನಾನು ನಿಮ್ಮ ಹಾಗೆ.
ಹೊಟ್ಟೆಗಾಗಿ ಬಟ್ಟೆ ಕಳಚಿದರೂನು
ಮತ್ತೊಬ್ಬರ ಕಣ್ಣ ಹನಿ ಕುಡಿದು ನನ್ನ
ದಾಹ ನೀಗಿಸಿಕೊಂಡವಳಲ್ಲ!!

ಸೂಳೆ ಎಂದ ಮಾತು ಕೇಳಿ
ನೋಂದರೂನು ಅಸೂಹೆಯಿಂದ
ನಿಮ್ಮ ಮನೆಗಳ ಒಡೆಯಲಿಲ್ಲ,
ಸೇರಗಾಸಿ ನನ್ನ ಮಕ್ಕಳ ಹೊಟ್ಟೆ
ತುಂಬಿಸುವುದು ನನಗೆ ಒಮ್ಮೆಯೂ
ತಪ್ಪು ಎನಿಸಲಿಲ್ಲ!!

ಅಳುವ ಕಣ್ಣಿಗೂ ಆಸೆಯುಂಟು
ನಗುವ ತುಟಿಗೂ ನೋವುಂಟು,
ಉಳಿಸಿಬಿಡಿ ನನ್ನನ್ನು ಇತಿಹಾಸದಲ್ಲಿ
ಹೆಸರಿಲ್ಲದೆ ಉಸಿರಾಡುವ ಪುಸ್ತಕದ
ಕಥೆಯಂತೆ, ಹೇಳಿದರೂ ನಿಮಗೆ
ತಿಳಿಯದ ನನ್ನ ಮನಸಿನ ವ್ಯಥೆಯಂತೆ!!

- ಚುಕ್ಕಿ

18 Apr 2019, 10:53 pm

ಬಿಂಬ

ಕಣಗಿಲದ ಕುಸುಮದಲಿ
ನಿನ್ನ ಮೊಗವ ಕಂಡೆ
ಮುದ್ದಾದ ತುಟಿಯಂಚಲಿ
ತುಂಟ ನಗೆಯ ಕಂಡೆ
ಹಾಲುಗೆನ್ನೆಯ ದಿಮ್ಮೆಗಳಲ್ಲಿ
ಚಂದಿರನ ಹೊಳಪನು ಕಂಡೆ
ಮುದ್ದಾದ ಮೂಗಿನ ಮೇಲೆ
ದುಂಬಿಯು ಕೂರುವುದು ಕಂಡೆ
ಆದರೆ ನಿನ್ನ ಕಣ್ಣಂಚಲಿ
ನನ್ನ ಬಿಂಬವೇ ಕಾಣಲಿಲ್ಲ.....
##ಮೌನಿ##

- RajaneeshNandikolmath

18 Apr 2019, 10:26 pm

ಪಾಳು ಬಿದ್ದಿಹ ಮನದ ಮನೆ...

ಪಾಳು ಬಿದ್ದ ಈ ಮನಸ್ಸಿನ
ಮನೆಗೇಕೆ ದೀಪದ ಅಲಂಕಾರ...

ನೋವಿನ ನೂರಾರು ಕಿಂಡಿಗಳಿರುವ ಈ ಮನೆಗೆ
ಎಲ್ಲಿಗೆಂದು ಕಟ್ಟುವೆ ತಳಿರುತೋರಣ....

ಕಸದರಾಶಿ ಮಾಡಿಕೊಂಡಿರುವ ಈ ಮನಸ್ಸಿನ
ಅಂಗಳಕ್ಕೆ ಹಾಕ ಬಯಸುವೆಯೇಕೆ ರಂಗೋಲಿ

ನೀ ಸುಟ್ಟು ಹಾಕಿದ ಮನಸ್ಸಿನ ಚಾವಣಿ ಹರಿದು
ಆಗಸ ಕಾಣುತ್ತಿರುವಾಗ ಮನೆಮುಂದೆ
ಚಪ್ಪರ ಹಾಕುವ ಸೊಬಗೆ ನಿನಗೆ

ಸ್ಮಶಾನದಲ್ಲಿ ಶವಕ್ಕೊದಿಸಿದ ಕಲ್ಲು ನಾನು
ಅದ ಕಿತ್ತು ಕಾಲುಹಾಸು ಮಾಡಿಕೊಂಡು
ಮತ್ತೆ ಮತ್ತೆ ತುಳಿಯುವೆಯೇಕೆ

ಬಿಟ್ಟು ಬಿಡು ನನ್ನ.........
ನಿ...ನ್ನ ನೆನಪುಗಳ ಸೆರೆಮನೆಯಿಂದ
ಯಾವ ತಪ್ಪು ಮಾಡದ ಪ್ರೇಮ ಕೈದಿ ನಾನು....

..✍️ಮಂಜು

- ಮಂಜು

18 Apr 2019, 01:19 pm

ನೋಡು ನೋಡೆನ್ನ ಅಂದವ



ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ಕಣ್ಣ ತುದಿಯಲ್ಲಿ ನಿನ್ನ ಕಣ್ಣಿಂದ
ಕದ್ದ ನಮ್ಮಿಬ್ಬರ ಛಾಯೆ ನೋಡು,
ತುಟಿಯ ತುದಿಯಲ್ಲಿ ಮೂಗುತಿ
ನಾಚಿ ನಿಲ್ಲಿಸಿದ ಮಾತು ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ಕೆನ್ನೆ ಮೇಲೆ ಮಲಗಿರುವ ಕೆಂಪು ನೋಡು,
ಜಾಣ್ಮೆಯಿಂದ ಕೆನ್ನೆ ಕದ್ದು ಬೀಗುತಿರುವ
ಅದರ ನಗೆಯ ಇಂಪು ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

ನಿನ್ನ ಬಯಸಿ ಸದ್ದಿಲ್ಲದೆ ಮನವು
ಕಿರುಚುವ ಕೋಪ ನೋಡು,
ನೀ ಸನಿಹ ಬಂದಾಗ ನಾ
ಮೌನವಾಗುವ ರೀತಿ ನೋಡು.

ನೋಡು ನೋಡೆನ್ನ ಅಂದವ
ಇನ್ನು ಹೆಚ್ಚುತ್ತಿದೆ ನೀ ನೋಡುತಿರಲು
ಎದೆಯೊಳಗಿನ ಡವಡವ.

- ಚುಕ್ಕಿ

17 Apr 2019, 05:20 pm

ಮೌನವಾಗದಿರು ಮುಗುದೆ

ಮೌನವಾಗದಿರು ಮುಗುದೆ
ಮರೆತು ಮಾತುಗಳ ಬೇಗುದಿ
ಮನದ ಆಳಕ್ಕೆ ಇಲ್ಲ ಏಣಿ
ಮುಂದಾಗುವುದಕ್ಕೆ ಹೇಳುವರಿಲ್ಲ ಕಣಿ
ಮನದ ಚಿಂತೆಗಳನು ಇಟ್ಟು
ಸಲಹದಿರು ಮನದೊಳಗೆ,
ಚಿಂತೆಗಳ ಕಸವ ಗುಡಿಸಿ
ಮಾತುಗಳಾಗಿ ಚೆಲ್ಲು ಹೊರಗೆ.
***
ನಡು ಇರುಳಲಿ
ವಿರಹದುರಿಯಲಿ ಬೆಂದು ನಾ ನೊಂದೆ
ಒಂಟಿ ಚಂದ್ರನಿರುವನೇನೋ
ಎಂದುಕೊಂಡು ಹೊರಗೆ ನಾ ಬಂದೆ..
ಅವನೋ ಪ್ರೇಮಗಳ್ಳ,
ಸಿಕ್ಕಳೇನೋ ಅವನಿಗೂ ಚೆಲುವಿ
ಕಾಣೆಯಾಗಿರುವ ಬಾನಿನಿಂದ.
***
ಬೇಸಿಗೆಯ ಈ ನಟ್ಟಿರುಳಲಿ
ನಿದ್ರೆ ಅಳಿದು ಬಸವಳಿದಿರಲು
ಬಿಸಿ ಗಾಳಿ ಸುಡುತಿಹುದು
ಹೊರಮೈಯ್ಯ..
ಒಳಗೂ ತಂಪಿಲ್ಲ,
ಕುದಿವ ನಿನ್ನ ನೆನಪ ಪಾಕ
ಸುಡುತಿಹುದು ಮತ್ತೆ ಮತ್ತೆ ತಿವಿದು
ಒಳ ಹೃದಯ!

- ಶ್ರೀಗೋ.

17 Apr 2019, 12:04 am

ಬದುಕು-ಸಂಘರ್ಷ


ಕೊಡವಿಕೊಂಡು ನಡೆವೆವು
ಕಿವಿಕೇಳಿದ ಮಾತುಗಳನ್ನು
ಮನಸಿನವರೆಗೂ ತಲುಪಬಾರದೆಂದು,
ತಾಳ್ಮೆಯಿಂದ ಕೋಪವ ಕೊಂದು
ನಂಬಿ ನಾಳೆಗೆ ಮತ್ತೆ ಆ ಮಾತುಗಳು
ಕೇಳಬಾರದೆಂದು.

ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ತಿಳಿದು,
ಪ್ರತಿನಿತ್ಯ ತೃಪ್ತಿಗೊಳ್ಳುವೆವು ಬದುಕಲು
ಸಂಘರ್ಷ ಅನಿವಾರ್ಯವೆಂದು.

ಇಂದು ಗೆದ್ದು ನಿಂತರೆ ನಾಳೆ ಬದುಕೆಂದು
ಅರಿವಿದ್ದರೂನು ಮನಸುಗಳ ಸಂಘರ್ಷಕೆ
ಸಿಲುಕಿ, ಕದಡಿ ಕೂರುವೆವು ಇರುವ
ನೆಮ್ಮದಿಯ ಕೆದಕಿ ತಾರೀಕು ಬದಲಾಗುವ
ಮುನ್ನ ಹೊಸದೊಂದು ಕಷ್ಟ ಹುಡುಕಿ.

- ಚುಕ್ಕಿ

15 Apr 2019, 07:31 am

ಮತದಾನ ಮಾಡೋಣ ಬನ್ನಿರೋ

ಮತದಾನ ಮಾಡೋಣ ಬನ್ನಿರೋ
ಪ್ರಜಾಪ್ರಭುತ್ವದ ದೊಡ್ಡಹಬ್ಬ ಆಚರಿಸೋಣ ಬನ್ನಿರೋ...
ಅಭಿವೃದ್ಧಿಯ ಮತ ಹಾಕೋಣ ಬನ್ನಿರೋ
ಪ್ರಗತಿಯ ರಥ ಕಟ್ಟೋಣ ಬನ್ನಿರೋ...

ಬೆರಳಿಗೆ ಶಾಹಿ ಗುರುತು ಬೆಳಗೋಣ
ನಾಡಿಗೆ ಸದಾ ಒಳಿತು ಮಾಡೋಣ..
ನಮಗಾಗಿ ಹೊಸ ಹೆಜ್ಜೆ ಹಾಕೋಣ
ದೇಶಕ್ಕಾಗಿ ದಿಟ್ಟ ನಿರ್ಧಾರ ಮಾಡೋಣ...

ಸೂಕ್ತ ವ್ಯಕ್ತಿಯ ಆರಿಸೋಣ
ದೇಶದ ಶಕ್ತಿಯ ಮಾಡೋಣ...
ಶಿಷ್ಟ ನಾಯಕನ ಬೆಂಬಲಿಸೋಣ
ಬಲಿಷ್ಟ ರಾಷ್ಟ್ರವ ಬೆಳೆಸೋಣ...

ಜಾತಿಧರ್ಮದ ತಡೆಬೇಲಿ ಸುಟ್ಟುಹಾಕೋಣ
ದೇಶಪ್ರೇಮದ ಸರಪಳಿ ನಿರ್ಮಿಸೋಣ...
ಹಣಕೆ ಮತ ಮಾರದಿರೋಣ
ಜನರ ಹಿತ ಕಾಪಾಡೋಣ...

ಭ್ರಷ್ಟಚಾರ ಬೇರುಸಮೇತ ಕಿತ್ತುಹಾಕೋಣ
ಗಣತಂತ್ರ ವಿಧಾನವ ಗಟ್ಟಿಗೊಳಿಸೋಣ...
ಅವಸ್ಥೆ ದೂರ ಮಾಡೋಣ
ವ್ಯವಸ್ಥೆ ಸರಿ ಮಾಡೋಣ...

- suresh

14 Apr 2019, 12:37 pm

###ಚಂದದ ಚಂದಿರ ###

ಚಂದದ ಚಂದಿರ
ನಗುವ ಹೊತ್ತು
ಸುತ್ತ ಮಿನುಗುತಾ
ನವಿರುವ ಮುತ್ತು
ಚಂದದ ಚಂದಿರ
ಚಲಿಸುತಿರಲಿ
ಅಂದದ ಅಂಬರ
ತೂಗುತಿರಲಿ
ಚಂದದ ಚಂದಿರ
ಬಾನಿಗೆ ಬಾಸುರ
ಅಲ್ಲಿಯೇ ಅಡಗಿಹ
ನನ್ನಯ ಕಸವರ
ಚಂದದ ಚಂದಿರ
ನೋಡಲು ಸುಂದರ
ಮಾಸಿಕವಾಗಿಯೇ
ಪೂರ್ಣ ಚಂದಿರ
ಚಂದದ ಚಂದಿರ
ಕತ್ತಲ ಬೆಳಕು
ಮಿನುಗುವ ಪ್ರಕಾರ
ಬಾಳಿಗೂ ಬೆಳಕು

- Sathish

11 Apr 2019, 07:31 pm

ನಮಗೆ ತಿಳಿಯದ ಬದುಕು

ಮರಣವನ್ನು ಯಾರು ನೋಡಿಲ್ಲ ಬಹುಶ...ಅದು ಅಂದವಾಗಿ ಇರಬಹುದು !

ಏಕೆಂದರೆ ಅದನ್ನು ಒಂದು ಸಲ ಭೇಟಿಯಾದವರು.ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ !

ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ -

ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಹೋಗುತ್ತಾನೆ !
ಸತ್ತವನು ನೀರಿನಲ್ಲಿ ತೇಲುತ್ತಾನೆ !

ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ ?
ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು !

ಸುಂದರವಾದ ಶರೀರವನ್ನು ನೋಡಿ ಆನಂದಿಸುತ್ತೇವೆ ಆದರೆ...ನೀವಾದರು ನಾನಾದರು ಆಗುವುದು ಬೂದಿನೆ...

ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ !
ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ

ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ !

ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ...
ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ...
ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು...
ಮಸಣದ ವರೆಗೆ ಹೋಗುತ್ತಾನೆ...

ಇರುವವರೆಗು ಎಲ್ಲರನ್ನು ಪ್ರೀತಿಸೊಣ...
ಒಳ್ಳೆಯ ಮಾತನ್ನೆ ಆಡೊಣ..
ಒಬ್ಬರಿಗೊಬ್ಬರು ಸಹಾಯ ಮಾಡೊಣ....

ಚೇತನ್ ಜಿಕೆ

ಬಿಂದಾಸ್

- Chethan Gowda

11 Apr 2019, 10:16 am

ಅಮ್ಮ ಎಂದರೆ...

ಭ್ರೂಣ ಹೊತ್ತಳು, ಜೀವಕೆ ಜನ್ಮವಿತ್ತಳು
ಬದುಕು ಕಟ್ಟುವ ಕಲೆಯ ತಿಳಿಸಿ ಕೊಟ್ಟಳು..!
ತುತ್ತು ಕೊಟ್ಟಳು, ಸವಿಯ ಮುತ್ತು ಕೊಟ್ಟಳು
ನಮ್ಮಯ ಗಾಯಕ್ಕೆ ತಾ ಅತ್ತುಬಿಟ್ಟಳು..!
ಪ್ರೀತಿ ಕೊಟ್ಟಳು, ನೀತಿ ಹೇಳಿ ಕೊಟ್ಟಳು
ನಮ್ಮ ಮನದ ಭೀತಿಯನ್ನೇ ದೂರವಿಟ್ಟಳು..!
ಧೈರ್ಯ ಕೊಟ್ಟಳು, ಸಕಲ ಸ್ಥೈರ್ಯ ಇಟ್ಟಳು
ಮನದಿ ಕ್ರೌರ್ಯವನ್ನು ತಾನು ಸುಟ್ಟು ಬಿಟ್ಟಳು..!
ಮಮತೆ ಇತ್ತಳು, ಶ್ರಮತೆ ಕಲಿಸಿ ಕೊಟ್ಟಳು
ಕರುಣೆಯೆಂಬ ಕವಿತೆಯನೇ ಬರೆದು ಕೊಟ್ಟಳು..!
ಹೇಸರನಿಟ್ಟಳು, ಬಸಿರಲಿ ಉಸಿರನಿಟ್ಟಳು
ನಮ್ಮ ಏಳಿಗೆಗಾಗಿ ತನ್ನ ಕನಸ ಕಟ್ಟಿಟ್ಟಳು..!
ಅನುಕ್ಷಣವೂ ನಮಗಾಗಿ ಅಮ್ಮ ಅತ್ತಳು ಸತ್ತಳು...!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

10 Apr 2019, 08:40 pm