ಅದೆಷ್ಟು ದಿನ ನೀ ಹೀಗೆ
ನನ್ನಿಂದ ದೂರ ಉಳಿಯುವೆ...
ಒಂದಲ್ಲಾ ಒಂದು ದಿನ
ಈ ವಿರಹ ಸಾಕೆನಿಸಿ ನೀ
ನನ್ನೆಡೆಗೆ ಮರಳುವೆ....
ಅದೆಷ್ಟೇ ದಿನವಾದರೂ
ನಾ ನಿನ್ನ ದಾರಿ ಕಾಯುವೆ...
ನೀ ಹಿಂದಿರುಗಿ ಬಂದು
ನನ್ನ ಸೇರುವ ವರೆಗೂ...
ನಾ ಮಣ್ಣಲ್ಲಿ ಮಣ್ಣಾಗಿ
ಕೊನೆ ಆಗುವ ವರೆಗೂ...
ನಿನ್ನನ್ನೇ ಕಾಯುವೆ...
ಯಾವುದೇ ಯೋಜನೆ ಇಲ್ಲದೇ ಮನಹೊಕ್ಕುವ ಇವರು ನನ್ನ ಖದೀಮ ಆಪ್ತರು..
ಇದ್ದಷ್ಟೇ ಊಟದ ಡಬ್ಬಿಯ ಕಿತ್ತು ಹಂಚಿ ತಿಂದು ಖುಷಿಯಲಿ ಬೆಸೆವ ಇವರು ಸಂತೃಪ್ತರು..
ತರಗತಿಯಲ್ಲಿ ಹಾಜರಿ ಹೇಳಿ ನನ್ನ ಪ್ರತಿನಿಧಿಸಿದ ಇವರು ನನ್ನ ಆಯುಕ್ತರು..
ಎಲ್ಲಾ ತೊಂದರೆಗಳ ಹೊಡೆದೋಡಿಸಲು ತಂತ್ರ ಹೆಣೆವ ಇವರು ಕಲಾತ್ಮಕರು..
ಏನೂ ಬಯಸದೆ ಕಷ್ಟ ಸುಖಗಳಲಿ ಭಾಗಿಯಾಗುವ ಇವರು ನನ್ನ ಆಪ್ತ ಸ್ನೇಹತರು..
ಮಗುವಿನಂತ ಮುಗ್ದೆ ಕಣೆ ನೀನು
ನಿನ್ನ ಪ್ರೀತಿಯಲ್ಲಿ ಮಗುವಾಗಿರುವೆನು ನಾನು.
ನನ್ನ ಹೃದಯ ಕದ್ದ ಚೋರಿ ನೀನು
ಆ ನಿನ್ನ ನಿಷ್ಕಲ್ಮಶ ಪ್ರೀತಿಗೆ ದಾಸನಾಗಿರುವೆ ನಾನು
ನನ್ನಿಂದ ಎಂದೂ ದೂರಾಗಬೇಡವೇ ನೀನು
ನಿನ್ನ ಮುದ್ದಾದ ಪ್ರೀತಿಗೆ ಬಂದಿಯಾಗಿರುವೆ ನಾನು.
ಅರಿತು ಸುಮ್ಮನಿರು
ನೂವಿನ ಮೇಲೆ ನೂವನ್ನೀಡದಿರು
ಮರೆತು ದೂರವಿರು
ನನಗೆ ನನ್ನದೇ ಕರ್ತವ್ಯಗಳಿವೆ..
ನಾನು ಬರೆಯೋ ಬರಹ
ನನ್ನ ಸಮಾಧಾನಕ್ಕಷ್ಟೇ ಹೊರತು
ಮತ್ತೊಬ್ಬರನ್ನು ನೂಯಿಸಲು ಅಲ್ಲ
ಅದು ನನ್ನ ಗುರಿಯೂ ಅಲ್ಲ.. ಕೆಲವು ದಿನಗಳಿಂದ
ನನ್ನ ಮನಸ್ಸೇಕೊ ಭಾರವೆಲ್ಲ
ಅದಕ್ಕೆ ಕಾರಣ ನೀನಲ್ಲ
ನನ್ನ ನಸೀಬವೆ ಸರಿಯಿಲ್ಲ..
ಆದಷ್ಟು ಸ್ವಲ್ಪ ಸುಮ್ಮನಿರು
ಅರ್ಥವಾಗಿದೆ ಅಂದುಕೊಳ್ಳುವೆ
ಮತ್ತದೇ ವಿಷಯವನ್ನಿಟ್ಟು
ಕೆದುಕದಿರು ನನ್ನ ಭಾವನೆಗಳನ್ನ..
ನೀನೇನೆಂದು ಸ್ವಲ್ಪ ತಿಳಿದಿರುವೆ
ಮನಸ್ಸನ್ನು ಅರ್ಥೈಸಿಕೊಂಡು
ಗಾಯದ ಮೇಲೆ ಬರೆಯೆಳೆಯದೇ
ಸುಮ್ಮನಾಗುವೆ ಎಂದು ಅಂದುಕೊಳ್ಳುವೆ....