Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಿಹಿ ಸಮರ❤

ಪ್ರತಿ ಕ್ಷಣಕು ಬದಲಾಗುವ ಈ ಅಸ್ಥಿರ ಮೋಡ ಕವಿದ ಬಾನಿನಲಿ
ಮೋಡಗಳ ನಡುವೆ ಬಿಡುಗಡೆಗಾಗಿ ಕಾದಿವೆ ಆ ಚಂದ್ರ ತಾರೆಗಳು.
ಈ ಇರುಳಿನ ಬಿಡುಗಡೆಯ ಸಿಹಿ ಸಮರದಲಿ
ಆ ಚುಕ್ಕಿ ಚಂದ್ರರ ನಡುವಲಿ ಹುಡುಕಿರುವೆ ನಿನ್ನನೇ, ನೆನೆಯುತಲಿ ನಿನ್ನನ್ನೇ... !

- Vijaykiran NC

19 Jun 2018, 07:28 pm

ಮೌನ ಹಿತವಾಗಿದೆ..

ನಿನ್ನ ಮೌನ ಹಿತವಾಗುತ್ತಿದೆ ಹುಡುಗಿ
ಹಾಗಂತ ನಾನೇನು
ಎಂದೂ ಧ್ಯಾನಕೆ ಕುಳಿತವನಲ್ಲ...
ಗಿರಿಶಿಖರ ಏರಿ ನೆಮ್ಮದಿಗಾಗಿ
ಹುಡುಕಾಡಿದವನಲ್ಲ...
ತಪಸ್ಸಿಗೆ ಕುಳಿತು
ಮೌನವನು ಒಲಿಸಿಕೊಂಡವನಲ್ಲ...
ಆದರೂ ಆ ನಿನ್ನ ಮೌನ
ಅದ್ಯಾಕೋ ನನಗಿಷ್ಟ ಕಣೆ ಹುಡುಗಿ...

- ಪ್ರಿಯಾಂಕ

19 Jun 2018, 12:28 pm

ಗಾಳಿ ಗೋಪುರ

ಮೂರು ದಿನದ ಬದುಕಿನೊಳ್ಗ
ಎಷ್ಟು ಕನಸು ಕಟ್ತದ್ನೋಡು ಈ ಜೀವ
ಗಾಳಿ ಬೀಸಿ ಗೋಪುರ ಮಣ್ಣ ಸೇರಿದ್ರ
ಸಹಿಸೋರ್ಯಾರೇಳು ಆ ನೋವ

- ಶ್ರೀಕಾವ್ಯ

18 Jun 2018, 06:06 pm

ಬೆಳ್ದಿಂಗಳು

ಬದ್ಕಲ್ಲಿ ಅಮಾವಾಸ್ಯೆ ಕತ್ಲನ್ನೇ ಕಂಡಿದ್ದೀ ಜೀವ
ಎಂದೂ ಎದ್ರಿದ್ದಿಲ್ಲೇನೊ ಕಣೆ
ಆದ್ರ ಹುಣ್ಮೆ ಬೆಳ್ದಿಂಗ್ಳಂಗಿರೋ ನಿನ್ಕಣ್ಣ
ಕಂಡ್ರೆ ಎದೆ ಝಲ್ ಅಂದಂಗಾಗ್ತದೆ ಯಾಕೇಳೆ ಜಾಣೆ

- ಶ್ರೀಕಾವ್ಯ

18 Jun 2018, 06:06 pm

ಪ್ರೀತಿ

ಹಸಿವು ಕಾಣದು ನಿದಿರೆ ಬಾರದು
ನಾನು ನಿನ್ನ ಕೈಸೆರೆ
ನಾನು ನಿನ್ನೊಳು ನೀನು ನನ್ನೊಳು
ಎಂಥ ಮಧುರ ಭಾವನೆ
ಹೇಗೆ ಹೇಳಲಿ ನನ್ನ ಮನದ ಭಾವನೆ
ಕೊಂದಾದರು ಬಿಡು
ನೀ ಹೀಗೆ ಕಾಡಬೇಡ ಎನ್ನ
ಬೀಸುವ ತಂಗಾಳಿಯಂತೆ
ನಿನ್ನ ನೆನಪದು ಮನೋಹರ
ನೀ ನನ್ನ ಹೃದಯದಲ್ಲಿ ಅಜರಾಮರ
ನನ್ನ ಜೀವವು ನಿನ್ನಲೆ
ಒಂದಾಗಿ ಹೋಗಿದೆ ಪ್ರಿಯತಮ

- Hani

18 Jun 2018, 12:24 pm

ಮನಸು ಭಾರ

ಅಳುವೆಂಬ ಹೊರೆಯ ಹೊತ್ತು
ನಗುತ್ತಲೇ ಇರುವೆ
ಕಳೆದುಕೊಂಡೆಲ್ಲವ ನಗುತ್ತಿರುವಾಗ
ನಮ್ಮೊಳ ಬೇರೆತು
ಅತ್ತವರಿಗಿಂತ ನಕ್ಕವರೆ ಜಾಸ್ತಿ

ಹುಚ್ಚು ಕೋಡಿ ಮನಸೆನ್ನದು
ಮತ್ತೆ ಮತ್ತೆ ಹಚ್ಚಿಕೊಳ್ಳಬಯಸುವದು
ಎಷ್ಟೇ ಚುಚ್ಚಿ ಮರೆಯಾದರು
ಅವರ ನೆನಪೊಂದ ಎದೆಗೂಡಲಿ ಬೆಚ್ಚಗಿರಿಸಿ

ಮೈಲಿಗೆ ಮೈಯಿಗೋ ಮನಸಿಗೋ
ತಲೆ ಮೇಲೆ ಸ್ನಾನ ಉದರದೊಳು ಹೇಸಿಗೆ
ತಿಳಿಯದಾಗಿದೆ ನನಗೆ
ಹರಿದ ಮನಸುಗಳ ಹೊಲಿಯದೆ
ಹರಿದೋಗುವ ಮೈ ಮೇಲಿನ ಬಟ್ಟೆಗೇಕೆ ಹೊಲಿಗೆ

ಕೋಡಗನ ಕೋಳಿ ನುಂಗುವ ಕಾಲದಿ
ಗೋಡೆಯ ಹಲ್ಲಿಗೆ ಹಾಲುಣಿಸುವದೆಂತಹ ನಾಟಕ
ಕಡಲಿಗೆ ಹಿಡಿ ಸಕ್ಕರೆ ಸುರಿದು
ನೀರನು ಸಿಹಿಯ ಮಾಡಬಯಸುವದೆಂತಹ ದ್ಯೂತಕ

ಗುಡದಿ...

- Panchakshari Chikkamath

18 Jun 2018, 08:22 am

:::::

ಮನಸ್ಸೆಂಬ ಮಂಟಪದಲ್ಲಿ ಕುಳಿತಿರುವೆ ನಾ,
ಏನು ಎಂಬುದ ತಿಳಿಯದ ಮನಸ್ಸು ನನ್ನದು...

ಕಣ್ಣ ಹನಿಯೇ ನೀನೇಕೆ ನನ್ನಿಂದ ದುರಾಗುತ್ತಿರುವೆ,
ನಿನಗೂ ನಾನು ಬೇಡವಾದನೆ...

ಕೂಗಿ ಕೂಗಿ ಕರೆಯುತ್ತಿದೆ ನನ್ನ ಬೆಂಬಿಡದ ಹುಚ್ಚು ಕನಸುಗಳು.....

ಯಾರೋ , ಯಾರೋ ಈ ಹುಚ್ಚು ,ಪೆದ್ದು ಕನಸ ಭುವಿಗೆ ತಂದೋರು.....

ಓ ಬ್ರಹ್ಮ ಈ ಸೃಷ್ಟಿ ನಿನ್ನದೇನಾ ?.....
ಯಾಕೋ ಈ ಚದುರಂಗದ ಆಟ ಏಕೋ ನಿನಗೆ

- Acchu love

16 Jun 2018, 02:56 pm

ಸುಖ ಸ್ವಪ್ನ ನಿದಿರೆ

ನನ್ನ ಬಂಗಾರಿ ಇಹಳು ಸುಖ ಸ್ವಪ್ನ ನಿದಿರೆಯಲಿ
ನಾನೆದ್ದೆ ಬಹು ಬೇಗ ಅವಳದೇ ನೆನಪಿನಲಿ
ಅಂದದಿ ಹೊಳೆಯುವಳು ಹಾಲ್ಗೆನ್ನೆ ಮುಖದಲ್ಲಿ
ಕಾಡುತಿದೆ ಮನ ಮುತ್ತಿಟ್ಟು ಮುತ್ತಿಟ್ಟು ಮೇಲೇಳಿಸುವ ಬಯಕೆಯಲಿ

ಆದರೇನು ಮಾಡಲಿ..??

ಈ ತುಡಿತ ಕಾಡುತಿದೆ ಅವಳಿದ್ದರು ಕೇವಲ ಕಲ್ಪನೆಯಲಿ
ಮನ ಕಾಡುವುದು ಮತ್ತೆಷ್ಟೋ..?
ಈಗ ಪ್ರತ್ಯಕ್ಷವಾದರೆ ಅವಳು ನನ್ನೆದುರಲಿ...

ಬರಹ: ಮಂಜುನಾಥ್
ಚಾಮರಾಜನಗರ

- Manju..

16 Jun 2018, 12:37 am

ಆ ದಿನಗಳು..

ಸಿಹಿ ಮನಗಳ ಸವಿ ಬಯಕೆಯ ಆ ದಿನಗಳು ಬರುವುದು ನೋಡಾ..
ಸವಿ ಭಾವನೆಯ ಸಿಹಿಯೊಲುಮೆಯು ಕೂಡುವುದು ಕೇಳಾ..
ಬೆಳದಿಂಗಳ ಬೆಳಕಲ್ಲಿ ಬರುವಳು ಬಂಗಾರಿ ನೋಡಾ..
ಹಾಲೊಡನೆ ಹರೆಯದಿ ಬರುವಳೂ ಕೇಳಾ..
ಹಸಿ ಮುಖದಿ ಮುಗುಳ್ನಗೆಯ ನೀಡುವಳು ನೋಡಾ..
ಚಿತ್ತಾರದ ಚೇಲುವಲ್ಲಿ ನಲಿಯುವಳು ಕೇಳಾ..
ಅಷ್ಟಾಂಗ ಸೌಂದರ್ಯದಿ ಮೆರೆಯುವಳು ನೋಡಾ..
ಮಾಡದಿರು ಆತುರ ಅವಳೆದುರು ಕೇಳಾ..
ಒಲವಿನಾ ಮನಗಳಿಗೆ ಐಕ್ಯತೆಯು ಕೇಳಾ..
ಇದು ಆತ್ಮಗಳ ಬೆಸುಗೆಯ ವಿಜ್ರಂಭಣೆಯು ಕೇಳಾ...

- Manju..

16 Jun 2018, 12:24 am

ವಚನ

ಓ..
ನನ್ನ ತಂಗಿಗೆ ವರವಾಗಿ ಬಂದಿರುವ "ವಚನ"..
ನಿನ್ನಮ್ಮ ನಿನ್ನಲಿ ಕಾಣ ಬಯಸುವಳು ಸೃಜನ ಶೀಲ ಮನ..
ಎಂದೆಂದಿಗೂ ನೀ ಹರಿಸು ಅವಳ ಒಳಿತಿಗೆ ಗಮನ.
ಅದ ಕೋರಿಯೆ ನಿನ್ನಮ್ಮ ದೇವರಿಗೆ ಪ್ರತಿ ದಿನವು ಮಾಡುವಳು ನಮನ..

ಅಜ್ಜಿಯ ಮನಸಿಗೆ ಖುಷಿಯನು ನೀಡು,
ಅಜ್ಜನ ಮನದಲಿ ಸಂತಸ ಕಾಣು,
ಅಮ್ಮನ ಆಸೆಗೆ ಪ್ರತಿಫಲ ನೀಡು,
ಇವರೆಲ್ಲರ ಒಳಿತಿಗೆ ಕಾರಣ ಆಗು....

ಓಹ್... "ವಚನ"...
ಇದಿಷ್ಟೂ ನಿನ್ನ ಬರವಿಗೆ ಕಾದಿದ್ದ
ಸಿಹಿಮನಗಳ ಸವಿ ಸಿಂಚನ..

- ಮಂಜುನಾಥ್
- ಚಾಮರಾಜನಗರ

- Manju..

15 Jun 2018, 11:06 pm