Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳೆಂದರೆ..???

ಅವಳೆಂದರೆ...????
ಮಾತು ಮಾತಿಗೂ ನಗುವವಳು..
ಕೊನೆಯಿಲ್ಲದಂತೆ ಮಾತಾಡುವವಳು..
ಏನೇನೋ ಗುನುಗುವವಳು..
ಕಾರಣವಿಲ್ಲದೆ ಕೋಪಿಸಿ ಕೊಳ್ಳುವವಳು..
ಒಮ್ಮೆ ತುಸು ದೂರ ಹೋದವಳು..
ಮತ್ತೊಮ್ಮೆ ಮತ್ತಷ್ಟು ಹತ್ತಿರವಾದವಳು..
ಸುಮ್ಮನೇ ಕಾಯುಸುವವಳು..
ಎಡಬಿಡದೆ ಸತಾಯಿಸುವವಳು..
ಯಾರವಳು...??? ಕಣ್ಮುಂದೆ ಇಲ್ಲದವಳು..!!!!??
:: ಕೆ.ಜೆ.ಎಸ್ ಗೌಡ್ರು. ಹುಣಸೂರು

- shasi kumar

22 Mar 2018, 07:05 am

ಮಾಡ್ರನ್ ಸೊಳ್ಳೆ !

ಸಿಟಿ ಶೂಟ್ ಧರಿಸಿ ಬಂದ
ಮದುವೆ ಗಂಡು ಮರ್ಡನ್ ಸೊಳ್ಳೆಯ ಮದುವೆಯಾಗಲೆಂದು!!

ಇರಬೇಕಂತೆ ವಧುವಲ್ಲಿ ಡೆಂಗೂ ರಾಣಿಯ ಚತುರತೆ, ಮಲೇರಿಯಾ ಬ್ಯುಟಿಯ ಮಾತು ಕತೆ!!

ಗಂಡನಿಗೆ ಕುಂತಲ್ಲೇ ಸಿರಿವಂತರ ಬಗೆ ಬಗೆಯ ನೆತ್ತರಿನ ರುಚಿ ತೋರಿಸುವ ಪ್ರೀತಿ ಮಮತೆ,
ಕೊಂಚ ಸಣ್ಣವುದ್ದರು ಮಧುರ ಧ್ವನಿ ಮಸ್ಟ್ ಅಂಡ್ ಶುಡ್ ಅವನಿಗೆ ನಿದ್ದೆ ಬಾರದಿದ್ದರು ಚಿಂತೆ ಇಲ್ಲ ಯಾರಬ್ಬರು ನಿದ್ರಿಸಲು ಬಿಡುವಂತಿಲ್ಲ.

ಕೊಳಚೆ ನೀರಲ್ಲಿ ಹುಟ್ಟಿದರು ಅಡ್ಡಿ ಇಲ್ಲ ,ಕಾಮನ್ ಅಂದ ಚಂದ ಇರಲೇ ಬೇಕು ದುರ್ಗಂಧದ ಬೆಲೆ ಗೊತ್ತಿರಲೇ ಬೇಕು!!

ಅತ್ತೆ ಮಾವನ ಕಾಲು ಹಿಡಿಯದಿದ್ದರು ಸಂಜೆ ಸಮಯಕ್ಕೆ ಎದ್ದು ಕಾರ್ಯದಲ್ಲಿ ನಿರತಳಾಗ ಬೇಕು ಎಲ್ಲರಿಗಿಂತ ಹೆಚ್ಚು ರಕ್ತ ಕುಡಿದು ಬರಬೇಕು.

ಹುಟ್ಟುವ ಮಕ್ಕಳಿಗೆ ಜೀವನ ಶೈಲಿಯ ಕಲಿಸುವಷ್ಟು ಬ್ರೈಟ್ ಇರಬೇಕು, ಕೇಸರಚ್ಚಿ ಮೋರಿ ಬದಿಯಲ್ಲಿ ನರ್ತಿಸುವ ಕಲೆ ಬಂದಿರಬೇಕು!!

ಸುಗುಣವತಿ ಸೊಳ್ಳೆಗಾಗಿ ಹುಡುಕಾಟ ಮುಂದಿರುವರಿದೆ, ಬಲಿಷ್ಠ ಜೀವಿಗಳಲ್ಲಿ ಅಮಲು ಹೆಚ್ಚಿಸಿ ಹೊಸ ಬಗೆಯ ರುಧಿರದ ರುಚಿ ಕಂಡುಕೊಳ್ಳುವವಳು ಸಿಗುವ ತನಕ.

- ಚುಕ್ಕಿ

21 Mar 2018, 09:04 am

ಗಾಯನದ ಕಲಿಕೆ

ಗಾತ್ರ ಕಿರು ಬೆರಳ ಹತ್ತಿರ
ಗಾಯನ ಮಹಾ ಗಾಯಕರಿಗಿಂತಲು ಎತ್ತರ.

ಕರ್ಕಶ ಧ್ವನಿಯಲ್ಲಿ ನಿರ್ಗರ್ವಿ ಸೊಳ್ಳೆ ಲಾಲಿ ಹಾಡನ್ನು ಹಾಡುತ್ತಿದೆ, ಬೇಡವೆಂದರೂ ಬಿಡನೆಂದು ಕಿವಿಯ ಬಳಿ ವಿಧೇಯತೆ ಇಂದ.

ದಪ್ಪವೆಂದು ಒಪ್ಪೋತ್ತು ಊಟ ಮಾಡಿ ಕೊರಗುತ್ತಿರುವ ಮಹಾಕಾಯದವರಿಗೆ ಭಾಷೆಯೋತ್ತು ಮುತ್ತಿಡುತ್ತಿವೆ ಒಂದೇ ಸಾರಿ ಸಣ್ಣ ಮಾಡುತ್ತೇವೆಂದು.

ಕಸರತ್ತು ಮಷಿನ್ ಮಾರುವ ಕಂಪನಿಗಳಿಗೆ ಸವಾಲಾಗಿ ನಿಂತಿವೆ ,ಬೆಂಬಿಡದೆ ಭುಜವೇರಿ ನೆತ್ತರು ರುಚಿ ಹೆಚ್ಚಿದ್ದವರಿಗೆ 50% ಕಡಿತವೆಂದು ನೋವು ಕಡಿದು ಹಾರಿ ಹೋಗುವುದರಲ್ಲಿ.

ಲೈಟ್ ಆನ್ ಇದ್ದಲ್ಲಿ ಏನು ತಿಳಿಯದ ಬೆಕ್ಕಿನಂತೆ ಇಣುಕಿಣುಕಿ ನೋಡುತ್ತವೆ ಗೋಡೆಗಂಟಿ ಗಪ್ ಚುಪ್ ಎಂದು, ಒಮ್ಮೆ ಕತ್ತಲು ಎತ್ತಲೂ ಹೋಗದೆಂದು ನಿಚ್ಚಯಿಸಿ ಕೊಂಡಲ್ಲಿ ಸಿಂಹ ಘರ್ಜಿನೆ ಶುರುವಾಗುತ್ತೆ ಇನ್ನು ತಾಳ್ಮೆಯಿಲ್ಲವೆಂದು ಮನೆಯಲ್ಲಿ.

ಗಲ್ಲಿ ಗಲ್ಲಿಯೂ ಸುತ್ತಿ ಹುಡುಕಿವೆ ಕೆಂಬಣ್ಣದ ಬಿಳಿ ಹುಡುಗಿಯ ರಕ್ತವನ್ನು, ಸೇಬು ಸವಿ ಜೇನು ಮಾರ್ಕೆಟ್ಟಿನ ಸತ್ತ ಮೀನು ತಿಂದು ಹೊನಪು ವಯ್ಯಾರದಲ್ಲಿ ಮಿಂದಿಹಳು ಮಂದಹಾಸದಿ ವಸುಂಧರ!!

ಕೊಂದು ಬಿಡುವಳೋ ಏನೋ ಮೆಚ್ಚಿ ಕೆನ್ನೆಯ ಮೇಲೆ ಕುಂತ ಸೊಳ್ಳೆಯ ತುಂಬಾ ಸಂಸಾರ!!

- ಚುಕ್ಕಿ

21 Mar 2018, 09:03 am

ಖೈದಿ

ನಾನೊಬ್ಬ ಖೈದಿ
ಅನಿಸಿಕೊಂಡರೂ
ಸರಿಯೆ !

ನಿನ್ನ ತೋಳ ತೆಕ್ಕೆಯಲ್ಲಿ
ಬಂಧಿಯಾಗಬೇಕೆಂದಿರುವೆ.

ಮಂಜು ಸಾಮ್ರಾಟ್.

- Manjunath

20 Mar 2018, 08:06 pm

ಎಲುಬು

ಅಧಿಕಾರ
ಸಿಗೋವರೆಗೂ
ಹೊಗಳ್ತಾರೆ,
" ರೈತನೇ ಬೆನ್ನೆಲುಬು "

ಅಧಿಕಾರ ಸಿಕ್ಕಿದ್ರೆ
ಮುರಿತಾರೆ
" ರೈತನ ಪಕ್ಕೆಲುಬು "

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

20 Mar 2018, 01:27 pm

ನನ್ನ ಕವನ

ನೂರಾರ ಕವನವ
ನಾ ಬರೆದ ಮೇಲೆ
ನೀ ನನ್ನ ಕವನದ
ಕುಸುಮಾಲೆ ಬಾಲೆ!!

ಬಿಗುಮಾನ ಬೇಕೇ
ನೀ ಬರಲು ಇಲ್ಲಿ
ಚಂದಿರನ ಸುವ್ವಾಲಿ
ಈ ನನ್ನ ಎದೆಯಲ್ಲಿ!!

ನೂತನದ ಒಲವು
ಚೇತನವ ತಂದು
ಬರೆದಿರುವ ಸಾಲು
ನವಿರಾಗಿ ನಿಂದು!!

ನನ್ನೊಳಗೆ ನಿನ್ನ
ಕನಸೊಂದು ಮೂಡಿ
ಹೊಸ ರಾಗವೊಂದು
ಹಾಡಾಯ್ತು ನೋಡು!!

- ಪಿ.ಜಿ.ಜ್ಯೋತಿ

18 Mar 2018, 11:22 am

ಭಾರತ

ಓ ನನ್ನ ಭವ್ಯ ಭಾರತ ಎತ್ತ ನಿನ್ನ ಪಯಣ,
ಬೀಯರ್ ಬ್ರಾಂಡಿಗಳಿಗೆ ವೋಟು ಮಾರುವ ನಿನ್ನೀ ಜನ,
ಹಾಳು ಮಾಡಿಹರು ಸಹಸ್ರ ವರ್ಷಗಳ ನಿನ್ನ ಭವ್ಯ ಇತಿಹಾಸವನ್ನ,
ನಿನ್ನ ವಿನಾಷಕ್ಕೆ ದಿನೇ ದಿನೇ ಶ್ರಮಿಸುತ್ತಿದೆ ಭಾರತದ ರಾಜಕಾರಣ;

ಆ ದಿನ ಬ್ರಿಟಿಷ್, ಮೊಹಮ್ಮದರು ಕೊಳ್ಳೆ ಹೊಡೆದರು ನಿನ್ನ ಅಪಾರವಾದ ಸಂಪತ್ತನ್ನ,
ಇಂದಿನ ರಾಜಕಾರಣಿಗಳು ಭಗೆಯುತ್ತಿರುವರು ದೇಶವಾಸಿಗಳ ಒಡಲನ್ನ,
ಜಾತಿ ಜಾತಿಗಳ ನಡುವೆ ಧಂಗೆ ಎಬ್ಬಿಸಿ ವೋಟ್
ಬ್ಯಾಂಕ್ ಮಾಡಿ ಗೆಲ್ಲುವ ಜನಪ್ರತಿನಿಧಿಗಳೇ ಮರೆಯುತ್ತಿರುವರು ತಾವು ಗೆದ್ದ ಕಾರಣವನ್ನ;

ಎಲೆಕ್ಷನ್ ಬಂದಾಗ ಮಾತ್ರ ರೈತನೇ ದೇಶದ ಬೆನ್ನೆಲುಬೆಂದು ,ಆ ಬೆನ್ನೆಲುಬನ್ನು ಸವರಿ ಮತ ಪಡೆಯುವ ರಾಜಕಾರಣಿಗಳೇ
ಎಂದಾದರೂ ಅವನ ಕಷ್ಟಕ್ಕೆ ಪರಿಹಾರ ನೀಡಿದ್ದೀರಾ,
ಹೊರತು ಅವನ ಮೇಲೆ ಸಾಲದ ಹೊರೆ ಹೊರಿಸಿ ಸಾವಿನ ಮನೆಗೆ ನೂಕಿದ್ದೀರಿ.

ಹೀಗೆ ಮುಂದುವರೆದರೆ ಅನ್ನಕ್ಕೆ ಬರ ಬಂದು ಮನುಷ್ಯ ಮನುಷ್ಯನನ್ನು ತಿಂದು ಬದುಕಬೇಕಾದೀತು,
ಎಚ್ಚರ, ದೇಶದ ಯುವಕರೇ ಬದಲಾವಣೆಗೆ ಮುಂದಾಗಿ
ಭಾರತವನ್ನು ರಕ್ಷಿಸೋಣ...

- Vijaykiran NC

18 Mar 2018, 10:38 am

ಏಕಾಂತದ ಬದುಕು

ಈ ಏಕಾಂತದ ಬದುಕ ತುಂಬ
ಸಂಗಾತಿ ನಿನ್ನ ಪ್ರತಿಬಿಂಬ!!
ದಿನ ನನ್ನಯ ಜೊತೆಯಲಿರುವ
ನಿನ್ನ ನೆನಪದು ತುಂಬ ಚೆಂದ!!

ನಿನ್ನ ನಗುವ ಆ ಮೊಗದ ಚೆಲುವು
ನೆನೆದಾಗ ಸುಂದರ ಒಲವು!!
ನೀ ಸೇರಲು ನನ್ನ ಮನವ
ಖುಷಿಯಲ್ಲಿ ತೇಲದೆ ತನುವು!!

ದಿನ ಕಾಯುವ ಕೆಲಸವೂಂದೇ
ಹರುಷವ ತರುವುದು ನನಗೆ!!
ಬಳಿ ಬರಲು ಕಾಡದೇ ನೀನು
ದಯೆತೋರಿ ಬರಬೇಕು ಇನ್ನು!!

- ಪಿ.ಜಿ.ಜ್ಯೋತಿ

18 Mar 2018, 09:54 am

ಹರುಷದ ಯುಗಾದಿ...

ಯುಗಗಳೇ ಸಾಗಲಿ ಯುಗಯುಗಗಳೇ ಸಾಗಲಿ
ಮತ್ತೆ ಮತ್ತೆ ಬರಲಿ ಈ ಯುಗಾದಿ..

ಪ್ರೀತಿ-ಪ್ರೇಮ, ಸ್ನೇಹ ಸಂಬಂಧ
ಇರಲಿ ಶಾಶ್ವತ ನಮ್ಮೀ ಅನುಬಂಧ
ಬೇವು ಬೆಲ್ಲವ ಹಂಚಿ ತಿಂದು
ನೋವ ಮರೆಯುವ ನಗುವಿನಿಂದ!

ಪ್ರತಿ ನಿಮಿಷವು ಹೊಸವರುಷವು
ಸೇರಿ ಎಲ್ಲಾ ಕುಣಿಯೋಣ
ಕೋಪ-ದ್ವೇಷ, ನೋವು-ಜಗಳ
ಮರೆತು ಮನ್ನಿಸಿ ಬಾಳೋಣ!

ಬಾಳ ನೌಕೆಯು ಸಾಗಲಿ ಹರುಷದಿ
ಆ ದೇವರು ನಡೆಸಿದ ಹಾದಿಯಲಿ
ಇರುವವರೆಗೂ ಜೊತೆಯಾಗಿ ಬಾಳಿ
ಮತ್ತೆ ಹುಟ್ಟುವ ಈ ಇಳೆಯಲಿ!

(ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

- ಪ್ರಿಯಾಂಕ

18 Mar 2018, 09:48 am

ಕಸದ ರಾಶಿಯ ನಡುವೆ

ಕಸದ ರಾಶಿಯಯ ನಡುವೆ
ಅಳುವ ಶಿಶುವನು ಕಂಡೆ!!
ಹೆತ್ತವರು ಯಾರೆಂದು
ತಿಳಿಯದೇ ನಾ ನೊಂದೆ!!

ಉರಿಬಿಸಿಲ ಮಧ್ಯಾಹ್ನ
ಸುಡುವ ಸೂರ್ಯನ ಶಾಖ!!
ಏನೂ ಅರಿಯದ ಶಿಶುವು
ಬಳಲಿ ಬಸವಳಿದಿಹುದು!!

ಸುತ್ತಲೂ ಹತ್ತಾರು
ಬೀದಿ ನಾಯಿಯ ಕಾಟ!!
ರಕ್ಷಿಸಲು ಮುಂದಾಗಿ
ಬಾರದಿರುವವರ ಓಟ!!

ಏನೂ ಅರಿಯದ ಕಂದ
ಅಳುತಿರಲು ನಾ ನೊಂದೆ!!
ಕಂಬನಿಯ ಮಿಡಿಯುತಲಿ
ಅದರೆಡೆಗೆ ನಾ ಬಂದೆ!!

ಅಂಗೈಯ ಚಾಚಿದೊಡೆ
ಬೆರಳ ಹಿಡಿಯಿತು ಶಿಶುವು!!
ಅಳುವ ನಿಲ್ಲಿಸಿ ತಾನೇ
ಭರವಸೆಯ ನಗು ಚೆಲ್ಲಿ!!

ಅದನೊಮ್ಮೆ ನಾ ಎತ್ತಿ
ಎದೆಗಪ್ಪಿ ಮುದ್ದಿಸಿದೆ!!
ಜೊತೆಯಾಯಿತು ಆ ಕಂದ
ನನ್ನ ಬದುಕಿನ ನಗುವಾಗಿ!!

- ಪಿ.ಜಿ.ಜ್ಯೋತಿ

17 Mar 2018, 07:00 pm