Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಂಬೆಳಕ ಆರತಿ

ಹೊಂಬೆಳಕ ಆರತಿ
ನೇಸರನು ಸಾರಥಿ!!
ಮೂಡಣದಿ ಮುಗಿಲೇರಿ
ಮುಂಜಾನೆಯನು ಸಾರಿ!!

ಹೊಂಗಿರಣದ ನಡುವೆ
ರಂಗೇರಿದೆ ಚೆಲುವು!!
ಬಾನಂಗಳದ ಬಿಂಬ
ಈ ನನ್ನ ಕಣ್ಣ ತುಂಬ!!

ಹರಿಯುತಿಹ ಜರಧಾರೆ
ಪುಳಕದಲಿ ಬಳುಕಿಹುದು!!
ಮನದುಂಬಿ ಚಿಲಿಪಿಲಿಯ
ಹಕ್ಕಿಗಳು‌ ನಲಿದಿಹವು!!

ಎಲೆ ಮೇಲಿನ ಮಂಜಿನ ಹನಿಗಳು
ತಂಗಾಳಿಗೆ ತೂಗಿವೆ ತೆನೆಗಳು!!
ಇರುಳು ತುಂಬಿಹ ಧರೆಗೆ
ಬೆಳಕು ಹರಿದಿಹ ಗಳಿಗೆ!!

- ಪಿ.ಜಿ.ಜ್ಯೋತಿ

24 Feb 2018, 08:29 am

ಬಂದನಾ ಭಾಸ್ಕರ

ಕಣ್ಣುಜ್ಜುತ, ಮೈಮುರಿಯುತ
ಸಣ್ಣಗೆ ನಿದ್ದೆಗಣ್ಣಾಕಳಿಸುತ
ಮನದಿ ಮೀನಾಮೇಷದಿ
ಬರಲೋ ಬೇಡವೋ
ಎಂದುದಾಸೀನ ತೋರುತ
ಕಣ್ಣಿನ ಪಿಚ್ಚೊರೆಸುತ.......

ಕೊನೆಗೂ ಫಳಕ್ಕನೇ ನಕ್ಕನಾ ನೇಸರ
ಮೂಡಣವೆಲ್ಲಾ ಕೆಂದೋಕುಳಿ ಹಂದರ
ತೆಂಕಣ, ಬಡಗಣಗಳಲೆಲ್ಲಾ ಝೇಂಕಾರ
ನಮಿಪೆ ನಿನಗಿದೋ ಭಾಸ್ಕರ....

- Akku

24 Feb 2018, 07:14 am

ಮನಸು ಮುಸುಕಿದೆ

ಮುಸುಕು ಕವಿದಿದೆ ಮನಕ್ಕೆ
ಬುದ್ದಿಗೆ ಮಂಕು ಬಡಿದಿರುವುದು
ಮನೆಯವರ ಜಗಳ ಮನಸ್ತಾಪಗಳ ನಡುವೆ
ಮಾಡಿದೆನು ಹಲವು ತಪ್ಪುಗಳನು ಈ ಮುಸುಕಿನಲಿ
ನೋಯಿಸಿದೆನು ಹಲವು ಮನಗಳ
ಮುಸುಕು ಸರಿಯುವ ಹೊತ್ತಿಗೆ
ಮಿಂಚಿ ಹೊಗಿರಲು ಸಮಯ
ಮರುಗಿದೆನು ನೆಡೆದುದ ನೆನೆದು
ಮನವ ತಿಳಿಗೊಳಿಸಿ ನೆಡೆದರೆ ಸದಾ
ಬಾಳು ನಂದನವನ

- ರಘು

23 Feb 2018, 08:34 pm

ಹುಡುಕಿ ಕೊಡಿ

ಹೌದು, ನಾ ಕಳೆದು ಹೋಗಿರುವೆ.....
ಗೊತ್ತಿರದ ಸಂದಿಗಳಲಿ ಅಲೆಯುತಿರುವೆ
ಸುತ್ತೀ ಸುತ್ತೀ ಸುಸ್ತಾಗಿರುವೆ
ಮತ್ಯಾವ ಕಡೆ ಹೋಗುವುದೋ.....,
ಯಾವ ಕಡೆ ಹೋದರೆ ಸಿಗುವುದೋ
ಕಾಣದೇ ನೊಂದು ನಲುಗಿರುವೆ.....!

ಆದರೂ ಹುಡುಕುವುದ ಬಿಟ್ಟಿಲ್ಲ
ಭರವಸೆಯ ಭಾವವಳಿದಿಲ್ಲ
ಅಲೆದಲೆದು, ಸುಳಿಸುಳಿದು
ತಡಕಾಡಿ, ಮಿಡುಕಾಡಿ ಹುಡುಕಿ
ಪಡೆಯುವೆ, ಪಡೆದೇ ತೀರುವೆ.....
ಒಂದಿನ ನನ್ನ ನಾ ಪಡೆಯುವೆ.....

- Akku

23 Feb 2018, 07:11 pm

ಹುಚ್ಚು ಹುಡುಗ

ಎದೆ ಒಣಗಿ, ನೆಲ ಬಿರಿತು
ಸುಧೆ ಕರಗಿ, ಜಲ ಬತ್ತಿ
ಧೂಳಡರಿದಾ ಧರಣಿಯಲಿ, ಪ್ರೀತಿ ಬೀಜವ ಬಿತ್ತಿ
ಅನುರಾಗದ ಫಸಲ ಬೆಳೆವ ಅವನ ಕಂಡು
ಮನದ ಮೂಲೆಯಲಿ ನಗೆಯ ಅಲೆಯೊಂದು ಅಣಕವಾಡುತಿದೆ......

- Akku

23 Feb 2018, 07:10 pm

ಇರುಳು ಕಳೆಯುವ ಮುನ್ನ

ಇರುಳು ಕಳೆಯುವ ಮುನ್ನ
ಆರಿತು ಪ್ರೀತಿಯ ಹಣತೆ!!
ತೀರ ತಲುಪುವ ಮುನ್ನ
ಮುಳುಗಿತು ಬದುಕಿನ ನೌಕೆ!!

ಕಣ್ಣೀರ ಬದುಕಿನ ತುಂಬ
ಮಣ್ಣಿರದ ಮಸಣದ ಬಿಂಬ!!
ಬದುಕು ಭಯದಲಿ ಮಿಂದು
ಭರವಸೆಯ ಅಳಿಸಿ ತಾ ನೊಂದು!!

ಬೇಸರದಿ ದಿನವೆಲ್ಲ ಕಳೆದು
ಕಾದಿರುವೆ ಯಾರನ್ನು ನೆನೆದು!!
ನಗು ಅಳಿಸಿ ಗಳಿಸಿದ್ದು ಏನು
ನೀ ನಿನ್ನ ಮರೆತಿರುವೆಯೇನು!!

- ಪಿ.ಜಿ.ಜ್ಯೋತಿ

22 Feb 2018, 10:54 pm

ಏಕಾಂತದ ಸಂಭ್ರಮ

ಏಕಾಂತಕೂ ಸಂಭ್ರಮ
ನಿನ್ನ ನೆನಪಿನ ಸಂಗಮ!!
ಈ ಪ್ರೇಮದ ಸರಿಗಮ
ನೀ ಕೇಳು ಬಾ ಅನುಪಮ!!

ನಿನ್ನದೇ ಕಲರವ
ಈ ನನ್ನಯ ಹೃದಯದಿ!!
ನಿನ್ನ ಕನಸಿನ ಕಚಗುಳಿ
ದಿನ ನಿದಿರೆಯ ಸಮಯದಿ!!

ನಗುವಿನ ಸಡಗರ
ನನ್ನ ಮುತ್ತಲು ಸುಂದರ!!
ಮಿಲನದ ಕಾತುರ
ನೀ ಒಲಿದ ಆನಂತರ!!

- ಪಿ.ಜಿ.ಜ್ಯೋತಿ

22 Feb 2018, 10:35 pm

ಓ ಮನಸೇ

ಮನಸೇ ನೀನು
ಕೇಳದೆ ಕರೆದೆಯೇಕೆ
ಕಾಣದೆ ಬಣ್ಣಿಸಿದೆಯೇಕೆ
ಮಾತಿಲ್ಲದೆ ಕರೆದೆಹೇಗೆ..!! ?

ನಿನ್ನನಗಲಿ ನಾನು ಉಳಿಯದಿರಲು
ಪ್ರೀತಿಯ ಬಂಧನವೇಕೆ
ಕುರುಡು ಭಾವವಲ್ಲ
ಮೌನದಲೀ ಬಂದೀ ನೀನಲ್ಲಾ..!

ಎಲ್ಲಿಯದೋ ನಂಟು
ಆದರೂ ಇಲ್ಲಿಹುದೇನೋ..
ಇರುವುದಿಲ್ಲಿ
ಸಮಯದಾ ಸಂಚು ..!

- ನಾಗರಾಜ್

22 Feb 2018, 06:41 pm

ನನಸಾದ ಕನಸು

ನನ್ನ ಕನಸುಗಳೆಲ್ಲ ನನಸಾಯಿತು
ರೆಕ್ಕೆ ಮುರಿದ ಹಕ್ಕಿಯು ಹಾರಾಡಿತು
ಬಾನಂಗಳಲ್ಲಿ ನಲಿಯುತ ತೇಲಿತು
ಒಡನಾಡಿಗಳೊಂದಿಗೆ ಮಾತಾಡಿತು

ನಾ ಕಟ್ಟಿದ ಕನಸಿಗೆಲ್ಲ
ಬಣ್ಣ ಹಚ್ಚುವ ಸಮಯ
ಉರುಳದಿರಲಿ ಕಲ್ಪನೆಯ
ಕಟ್ಟಡ ಬಣ್ಣ ಹಚ್ಚುವ ಮುನ್ನ

ಹೊತ್ತ ಹರಕೆಗಳೆಷ್ಟೋ
ಮಾಡಿದ ವಾಗ್ದಾನಗಳೆಷ್ಟೋ
ಎಲ್ಲವ ಸಲ್ಲಿಸಿ ಬಿಡುವೆನು
ನಾ ಹರಕೆಯ ಕುರಿಯಾಗುವ ಮುನ್ನ




ಶಾರಧ

- ಶಕುಂತಲಾ

22 Feb 2018, 01:52 pm

ಹೊಸತು

ಯಾರು ಕದ್ದುಕೊಂಡು ಹೋದರು
ನನ್ನ ಸುಂದರ ಸಾಲುಗಳನ್ನು
ಸರಳ ಸುಮಧುರ ಸತ್ಯವಾದ
ನುಡಿಗಳ ಶಬ್ದ ಮಾಲೆಯನ್ನು

ನನ್ನ ಮನದಾಳದ ಭಾವನೆಗಳ
ಪ್ರತಿಫಲಿಸುವ ಕನ್ನಡಿಯ
ಇದ್ದ ಹಾಗೆ ಹೇಳುವ ಕಥೆಯ
ನಿರೂಪಿಸುವ ಎದೆಗಾರಿಕೆಯ

ಕಳೆದುಕೊಂಡ ಸಾಲುಗಳ ನೆನಪು
ಮಸಕಾಗಿರುವ ಬಿಂಬಗಳು
ಬಾರದಂತೆ ಗರಿಗೆದರಿವೆ ಹೊಸ
ಕನಸುಗಳು ಬೀರುತ ಹೊಸ ಕಂಪು

ಕವಿರಾಜ

- kavita Rajesh

22 Feb 2018, 12:33 pm