ಚಿಕ್ಕಿ,ಚಿಕ್ಕಿ, ಚಿಕ್ಕಿ, ನನ್ನಯ ಪ್ರೀತಿಯ ಚಿಕ್ಕಿ,
ಎಲ್ಲರ ಬಾಯಲು ನೀರೂರಿಸುವ ರುಚಿ ರುಚಿಯಾದ ಚಿಕ್ಕಿ!
ಕಡಲೆ,ಕೊಬ್ಬರಿ,ಎಳ್ಳನು ಸೇರಿಸಿ ಬೆಲ್ಲದ ಪಾಕವ ಕಲೆಸಿ ಮಾಡಿದ
ರುಚಿ ರುಚಿಯಾದ ಚಿಕ್ಕಿ! 1!
ಕಬ್ಬಿಣ, ಪ್ರೋಟೀನ್, ಪೊಟ್ಯಾಶಿಯಂ, ಸೋಡಿಯಂ
ಎಲ್ಲವೂ ಉಳ್ಳ ರುಚಿಕರ ಚಿಕ್ಕಿ!
ಹಿರಿಯರ, ಕಿರಿಯರನೆಲ್ಲರ ಮೆಚ್ಚಿಸೊ
ರುಚಿ ರುಚಿಯಾದ ಚಿಕ್ಕಿ!2!
ಉಪದ್ರವಿಲ್ಲದೆ, ಕಹಿಯೂ ಅಲ್ಲದೆ
ಒಳಿತನೇ ಮಾಡುವ ಈ ಚಿಕ್ಕಿ!
ಖರ್ಚೂ ಕಡಿಮೆ, ವಿಧ ವಿಧ ರೂಪದ
ರುಚಿ ರುಚಿಯಾದ ಚಿಕ್ಕಿ!3!
ಬಂದ ನೋಡು ಮೊಬೈಲ್ ಎಂಬ ಮಹಾ ಮಾಂತ್ರಿಕ
ಹಿಡಿದ ನೋಡು ತನ್ನ ಮುಷ್ಟಿಯಲ್ಲಿ ಇಡಿಲೋಕ
ಕುಂತರೂ ನಿಂತರೂ ಇವನದೇ ಧ್ಯಾನ
ಮಲಗಿದರೂ ಎದ್ದರೂ ಇವನದೇ ಗಾನ
ಇವನೇ ಕೃಷ್ಣ, ಇವನೇ ರಾವಣ "ಪ"
ಇವನ ತಲೆಯಲ್ಲಿವೆ ಕಂಪನಿಗಳೆಂಬ ತಂತ್ರ
ಇವನ ಬಾಯಲ್ಲಿವೆ ಸಿಮ್ ಆಫರ್ ಗಳೆಂಬ ಮಂತ್ರ
ಇವನ ಮೈಯಲ್ಲಿವೆ ಆಪ್ ಗಳೆಂಬ ಅಸ್ತ್ರ
ಛಾರ್ಜರ್ ಎಂಬಾತ ಇವನ ಪ್ರಾಣಮಿತ್ರ
ಎಸೆಯುವನು ವ್ಯಾಲಿಡಿಟಿ ಎಂಬ ಬ್ರಹ್ಮಾಸ್ತ್ರ
ಇವನ ಮಾಟಕೆ ಹಳೆ ಜಾದೂಗಾರರೆಲ್ಲ ಅತಂತ್ರ "
ಇವನದು ಏಳುಸುತ್ತಿನ ಕೋಟೆ
ಚಕ್ರವ್ಯೂಹದಂತೆ ನಿನಗೆ ಇವನ ಬೇಟೆ
ಹೊರಬರಲಾಗದು ಕಟ್ಟುವವರೆಗೆ ನಿನ್ನ ಗಂಟುಮೂಟೆ " "
ನೀ ತಿಳ್ಕೋ ಇವನ ಪ್ಲಾನು
ಕಾಲ್ ಗಳು ಸರ್ಚ್ ಗಳು ನಿನ್ನ ಗನ್ನು
ಮೆಸೇಜ್ ಗಳು ವಿಡಿಯೋ ಗಳು ನಿನ್ನ ಕಣ್ಣು
ಸರಿಯಾಗಿ ಯ್ಯೂಸ್ ಮಾಡಿದರೆ ಆಗುವೆ ವಿನ್ನು
ಅಡ್ಡದಾರಿ ಹಿಡಿದರೆ ನೀ ಸೇರುವೆ ಮಣ್ಣು " "
ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರೈಸ್ತನೆಂಬ ದೇಹದೋಳಗ
ಜಾತಿಯ ಮಠ ಕಟ್ಟಿ ಉಳಿದವರ ಬಾಳಿಗೆ ಬೆಂಕಿ ಹಚ್ಚಿ
ಕೆಂಪಾನ ರಕ್ತ ಭಾನೆತರಕ ಚೆಲ್ಲಿ
ಕೇಕೆ ಹಾಕುತ್ತಾ ಮನುಜ ನಗತಾನ
ಮನದೊಳಗೇ ಶಾಂತಿಲ್ಲ ಮಸಣದಲಿ ಜಾಗವಿಲ್ಲ
ಹಾದಿಯ ಹೆಣವಾಗಿ ಜಾತಿಯ ಕಿಚ್ಚಯೆರಚಿ..
ಹುಟ್ಟುವಾಗ ನೀ ಅಳುತಲೆ ಹುಟ್ಟೆದೆ
ಸತ್ತಾಗ ಬೆರೆಯವರನ್ನ ಅಳಿಸಿದೆ
ಜಾತಿ ಮತವೆಂಬ ಬಿಜವ ನೀ ಬಿತ್ತಿ ಸತ್ತು ನಿ ಉಳಿದೇ
ಆ ದೇವರ ಬಳಿ ನೀ ಹೋದಾಗ ಜಾತಿ ಎಂದರೆನ ನೀ ಕೆಳ
ಪಾಪಿ ದೇವರ ಲೋಕದ ಮ್ಯಾಲ ನಾ ಹರಿಸೆನೊ ರಕ್ತ ಎಂದ ಹೇಳ ............
........✍ಈಶ್ವರಯ್ಯ ಬಿದನೂರಮಠ
ಅಳುತಲಿ ಹುಟ್ಟಿ ನಾಮ ಪಟ್ಟವ ಕಟ್ಟಿ
ಹೆಸರಿಟ್ಟರು ಬೇರೊಬ್ಬರು ಎನಗೆ
ಹೆಣ್ಣು ಎಂಬ ಭೇದದಿಂದ ಬಾಲ್ಯ ಕಸಿದೆರೆನ್ನ
ಆಟ ಬಿಟ್ಟೆ ಪಾಠ ಬಿಟ್ಟೆ ದುಡ್ಡಿಗಾಗಿ ದುಡಿಮೆಗೆ ಹೊರಟೆ
ನನಗಾಗಿ ಅಲ್ಲಾ ನಮ್ಮವರಿಗಾಗಿ
ಅಳುತಲಿ ಹೇಳಿದೆ ನನ್ನದೆನ್ನುವದು ನನಗೆ ಏನಿದೆ.
ಬಾಲ್ಯ ಕಳಿದ ಹೊಸದರಲ್ಲಿ ಮನೆಗೆ ಭಾರವಾದೆ
ಇಲ್ಲ ಸಲ್ಲದ ಅಪಾದನೆಗೆ ನಾನು ಗುರಿಯಾದೆ
ಕಡಲಿನಾ ಒಡಲ ತೊರೆದ ಬಂದಿಯಾದೆ ಗಂಡನಿಗೆ
ವರುಷ ತುಂಬುವದ್ರೊಳಗೆ ಸಂತಾನವಾದವು ನಮ್ಮಿಬ್ಬರಗೆ
ಮತ್ತೆ ಕೆಲವು ದಿನಗಳು ಕಳೆದರೆ ಗಂಡನ ಪ್ರೀತಿ ಇಲ್ಲವಾಯಿತು
ಮತ್ತೆ ಅದೇ ಹಳೇ ದಿನಗಳು ಮರುಕಳಿಸಿದವಲ್ಲ
ಈ ಜಗದೊಳಗೆ ನನ್ನದೆನ್ನುವದು ನನಗೆ ಏನು ಇದೇ.
ಮಗುವಿನ ಮುಖ ನೋಡಿದೆ
ಬದುಕಿನಲಿ ಹರುಷ ಮತ್ತೆ ತುಂಬಿದೆ ಏನ ಮನದೊಳಗೆ
ಕಷ್ಟವೂ ನಷ್ಟವೂ ಸಮಾಜದಲ್ಲಿ ಮಗನಿಗೆ ಸ್ಥಾನವ ದೊರಕಿಸುವಲ್ಲಿ ಸಮಯಕಳೆದೆ
ಮಗನಿಗೆ ಮದುವೆ ಮಾಡಿ ಉಣ್ಣ ಬಾರದ್ದನ್ನು ನಾ ಉಂಡೆ
ಸೂಸೆಯಿಂದ ಭೈಸಿಕೋಂಡೆ ಮಗನಿಗೆ ನಡೆದ ವರದಿ ಒಪ್ಪಿಸಿದೆ
ಮತ್ತೆ ಮತ್ತೆ ಅನಿಸುವದು ನನ್ನದೆನ್ನುವದು ನನಗೇನು ಇದೇ.
ಉದಯ ಪೂರ್ವದೊಳು ಎಚ್ಚರಿಸಿದಾ ಮಗನು
ಅಚ್ಚರಿಯೇ ಕಾದಿತ್ತು ನನಗೆ ಆ ದಿನದಂದು
ಮಗುವಿನಂತೆ ಕೈ ಹಿಡಿದು ಕರೆದುಕೊಂಡು ಹೊರಟನು
ಅಂತ್ಯಕಾಲಕ್ಕೆ ಚಿಂತೆ ಇಲ್ಲದೆ ಸಂತೆಯಲ್ಲಿ ನಿದ್ದೆ ಬಂದಂತಾಯಿತು
ಹಾಗೆಯೆ ಎಚ್ಚರಿಕೆಯ ಗಂಟೆಯು ಹೊಡೆಯಿತು ವೃದ್ಧರ ಆಶ್ರಮ ಬಳಗಕ್ಕೆ ನಾ ಸೇರಿಕೊಳ್ಳಲು
ಆಶ್ರಮದ ಆಸನ ಬಿಟ್ಟರೆ ನನ್ನದೆನ್ನುವದು ನನಗೇನು ಇದೇ ಈ ಜಗದೊಳಗೆ........
✍ಈಶ್ವರ್ ಬಿ