Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪು....

ಕಪ್ಪು ಕಾಡಿಗೆಯು ಕೈಬಿಸಿ ಕರೆದಿತ್ತು ನಿನ್ನಯ ಮೊಗ ಕಾಣಲು ......
ನಿನ್ನದೆ ಅಮಲು ಹೇರಿದೆ ನನ್ನನೆ ಮರೆಸಿದೆ ....
ಇಂಪಾದ ಗಾನಕ್ಕೆ ಕರ್ಣವು ಸೊತಿತ್ತು ತನ್ನನ್ನೆ ತಾಮರೆತಿತ್ತು....
ನಿನ್ನಯ ಸ್ವರವ ಕೇಳುತ ಸ್ವರದಲೆ ಬೆರೆಯುತಾ
ಆ ಚಂದ್ರ ಮೋಡದಿ ಮರೆಯಾದ ನಿನ್ನ ಕಣ್ಣಲ್ಲಿ ಬಂದು ಸೆರೆಯಾದ ....
ಆ ಹುಣ್ಣಿಮೆ ಬೆಳಕು ಚೆಲ್ಲುವ ನಗೆಯು ನಿಂದೆನಾ
ಹೇಳಲು ಆಗದ ಬಹು ನಾಚಿಕೆ ನಾಚಿಕೆ ಮೂಡಿದೆ ನನ್ನಲಿ.....

- Pavithra R

09 Jan 2018, 07:11 pm

ತವರಿನ ನೆರಳು

ತವರಿನ ನೆರಳು ನನ್ನ ತಟ್ಟಿ ಎಬ್ಬಿಸಿತೆ
ಅಪ್ಪನ ಕೂಗಿನಂತೆ ಆತ್ಮೀಯತೆಯ ತುಂಬಿ,
ಭುಜಕೆ ಒರಗಿ ಕುಂತ ಕ್ಷಣದಿ ಮರೆತೆ ಒಡಲ ನೋವ
ಕಣ್ಣ ಅಂಚು ಪ್ರೀತಿಯ ಸವಿಯಲು ಆರಂಭಿಸಿದ ಜಾವ.

ನೆತ್ತಿ ಸವರಿ ಧೈರ್ಯ ತುಂಬಿದ ಕೈ
ಮಮತೆಯ ಋಣವು ಜನುಮದಲ್ಲಿ ತೀರಿಸಲು ಆಗುವುದೇ ಈ ನೊಂದ ಮನವು!
ಮರುಕಳಿಸಿ ಬರಬಾರದೆ ನಿನ್ನೊಡನೆ ನಾನಿದ್ದ ಕ್ಷಣವೂ!

ಸಿಹಿ ಇಲ್ಲದ ಸವಿಯೂಟ ಸವಿಯುತ್ತ
ನಿನ್ನ ಅಕ್ಕರೆಯ ನೋಟ
ನಾನೆಂತು ಹೇಳಲಾಗುವುದು
ಮೀರಿ ಈ ನೋವು ನಲಿವಿನ ಆಟ,
ಕಿರು ಬೆರಳ ತುದಿ ಹಿಡಿದು ನಡೆದೆನಲ್ಲಾ
ಪುಟ್ಟ ಮಗುವಾಗಿ ನಿನ್ನೊಡನೆ ಅಪ್ಪ
ಕೇಳಿಯು ಬಾರದ ನನ್ನ ಮನದ ಕೂಗು
ನಿನ್ನ ಹೃದಯದ ಬದಿಗೆ.

ತವರ ಹೆಸರು ಅಸಂಪೂರ್ಣ
ನಿನ್ನ ಮಮತೆ ಇಲ್ಲದೇನೆ,
ಕಂಡ ಕನಸ ಮನಸ ಮನನ ನಿರತ
ನಿನ್ನ ನೆನೆವ ಈ ಮನಕೆ
ನನಸಲ್ಲವೆಂದು ಹೇಗೆ ತಿಳಿಸಲಿ ನಾ.......

- ಚುಕ್ಕಿ

08 Jan 2018, 11:59 pm

ಬದಲಾವಣೆ ಬಯಸಿ

ಬದಲಾಗದು ಈ ಸಮಾಜದ ದೊರಣಿ
ಹೆಣ್ಣಿಗೆ ಎಂದಿಗೂ ಸಿಗದು ಸಮಾನತೆ
ಪ್ರತಿ ಕ್ಷಣವೂ ಪಂಜರದಲ್ಲಿ ಇಟ್ಟು ಸಾಯಿಸುವ ಬದಲಾಗಿ ಜನಸಿದ ಶಿಶುವನು ಸಾಯಿಸಿ
ಸಂತಸ ಪಡಬಹುದಲ್ಲವೇ ಈ ಜನರು!!

ಜಾನುವಾರುಗಳಿಗಿಂತ ಕಡೆ ಇವರು
ಅವರವರ ಇಷ್ಟದ ತಾಳಕ್ಕೆ ತಕ್ಕಂತೆ ಹೆಣ್ಣನ್ನು ಕುಣಿಸುವರು,ನೂರಾರು ಷರತ್ತುಗಳನ್ನು ಕಾಣಿಕರವಿಲ್ಲದೆ ವಿದಿಸುವರು!!

ಉಸಿರಾಡುವ ಬಗೆಯಲ್ಲೂ ಹೆಚ್ಚು ಕಡಿಮೆ ಹುಡುಕುವರು,ಗಂಡು ಹೆಂಡ ಕುಡಿದು ಬಂದರೂ ರುಂಡ ಮುಂಡ ಅಲುಗಾಡಿಸದೆ ಸುಮ್ಮನಿರುವ ಮಾತಿಲ್ಲದ ಮೂಕರಿವರು!!

ಹೆಣ್ಣು ಕುಂತ ಜಾಗದಿಂದ ಎದ್ದು ನಿಂತರು ಸಭ್ಯತೆ ಕಲಿತಿಲ್ಲ ಎಂದು ಅಸಭ್ಯ ಮಾತಾನಾಡುವರು,
ಪ್ರಪಂಚ ಇರುವುದು ಉಸಿರಾಡುವ ಪ್ರತಿಯೊಂದು ಜೀವಿಗೆಂದು ಮರೆತಿರುವರು, ಹೆಣ್ಣಿಗೆ ನಾಲ್ಕು ಗೋಡೆಯ ಮಧ್ಯೆ ಒಂದು ನೆರಳಿನ ಕಾವಲಿಟ್ಟು ಹೆಗಲ ಮೇಲೆ ಏರಿ ಕುಂತ ಧೂಳ ಹೊರೆಸಿ ನಡೆವರು!!

ಬದಲಾವಣೆ ಬಯಸಿ ನಾ ಬರೆದ ಈ ಒಂದು
ಕವನ ತಟ್ಟಿ ಎಬ್ಬಿಸ ಬಾರದೆ ಮಾನವೀಯತೆಯನು?
ಈ ಜನರಲ್ಲಿನ ಲಿಂಗ ತಾರತಮ್ಯ ಕಿಂಚಿತ್ತಾದರು ಸುಟ್ಟು ನನ್ನ ಕಣ್ಣೀರ ಬಿಸಿಗೆ
ಬೂದಿ ಆಗಬಾರದೆನು?

- ಚುಕ್ಕಿ

08 Jan 2018, 05:00 pm

ಕನಸಂತೆ ಬಂದವಳು....

ಕನಸಂತೆ ಬಂದವಳು,
ಕನಸಾಗಿ ಉಳಿದವಳು
ಕಣ್ಣೋಟದ ಮರೆಯಲಿ
ಮರೆಯಾಗಿ ಸರಿದಳು.

ಬರಡಾದ ಭೂಮಿಗೆ ಮಳೆಯಾಗಿ ಸುರಿದಳು
ಹುಡುಕಿದರೆ ಎಲ್ಲಿಹಳು
ಕಾನದ ಕಡಲನು ಸೇರಿಹಳು.

ಎಲ್ಲಿಹಳು ಅವಳು....
ನನ್ನ ಮನವ ಕದ್ದವಳು.....?

- Halesh S

08 Jan 2018, 02:46 pm

ಧ್ಯಾನ..

ತನುವ ಮರೆತು
ಚಿತ್ತ ಶುದ್ಧಿಯಿಂದ
ನಾನು ಧ್ಯಾನ ಮಾಡಿದೆ..!
ಆದರೂ ನಿನ್ನಯ
ನೆನಪು ಎನ್ನ ಮನವ
ಎಡೆಬಿಡದೆ ಕಾಡಿದೆ..!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

08 Jan 2018, 10:09 am

ಮೂಕ ರೋದನೆ

ಜನ್ಮವೆತನಾ ಕೀಳಾಗಿ ಮುರುಕ
ಗುಡಿಸಲಲ್ಲಿ
ಬೆಳೆದರೆನ್ನ ಬೋಳಾಗಿ ಎಂಜಲ
ಗಂಜಿಯಲ್ಲಿ
ಬರೆದರೆನ್ನ ಪೊಳ್ಳಾಗಿ ಕೆಟ್ಟ
ಪದಗಳಲ್ಲಿ
ದುರುಗುಟ್ಟುವರೇನಾ ನಂಜಿನ
ಕಣ್ಣುಗಲ್ಲಿ
ಉಲಿಯುವರೆನ್ನ ಕಂಡು
ಬುಗ ಬುಗ ನೆ
ಬಡಿಯಲು ಬರುತ್ತಿಹರು ನಡೆವ
ದಾರೀಲಿ
ಕಂಡರೆನ್ನ ಕೆಂಡ ಕಾರುವ ಅಗ್ನಿ
ಕುಂಡದಂತೆ
ನಡೆಸುವರೆನ್ನ ಕೊಂಡದ
ಓಣಿಯಲ್ಲಿ ಕುಪಿದು
ಸೊಲ್ಲೆತ್ತಲು ಮಟುಕುವರು
ದೊಣ್ಣೆ ದಡಿಗಲಿ
ಇರಲೊಲ್ಲೆನವ ಇಲ್ಲಿ ಎನ್
ನ ಬರಮಾಡಿಕೊ ಹಡೆದವ್ವ ನೀ
ನಿರುವಲ್ಲಿಗೆ
ಇದು ನಾಕವಲ್ಲ ನಯವಂಚಕರೇ ತುಂಬಿರುವ ನರಕ

- RaviThondgere

07 Jan 2018, 07:00 pm

ಬಯಕೆಯು ಈಗ

ಈ ಹೃದಯದಲ್ಲಿ
ನಿನ್ನ ದನಿಯು
ಅರಿತು ಮಿಡಿವಾಗ...‌.
ಆ ತಂಪು ಗಾಳಿ
ತಂತು ಇಲ್ಲಿ
ಹೊಸತು ಅನುರಾಗ..!!

ಉಸಿರು ನಿನ್ನಯ
ಹೆಸರ ನೆನೆದು
ಖುಷಿಯ ಪಡುವಾಗ....
ಈ ಮನದ ತುಂಬ
ನಿನ್ನ ಬಿಂಬ
ಅದುವೆ ಶುಭಯೋಗ..!!

ನೀ ಅರಿಯದಂತೆ
ನಾ ನಿನ್ನ ಜೊತೆಗೆ
ಸಾಗಿ ಬರುವಾಗ....
ನನ್ನ ನೆರಳಿಗೂನೂ
ಬೆರಳ ಬೆಸೆವ
ಬಯಕೆಯು ಈಗ..!!

- ಪಿ.ಜಿ.ಜ್ಯೋತಿ

07 Jan 2018, 04:35 pm

ಈ ಮೌನ ಸಾಕಾಯಿತೇ...

ಒಂಟಿ ಮೈನ
ಯಾಕೆ ಈ ಮೌನ
ಮಾತು ಬರದಾಯಿತೇ!!
ಇನಿಯ ದೂರಾಗಿ
ಸನಿಹ ಏಕಾಂತ
ಬದುಕು ಬರಡಾಯಿತೇ!!

ಹೆಸರು ಇಲ್ಲದ ಪ್ರೀತಿ
ಹಸಿರು ಮರದ ತುಂಬ
ಚಿಗುರಿ ಮರೆಯಾಯಿತೇ!!
ಕಣ್ಣ ಬೆಳಕಿನ ಪ್ರೀತಿ
ಸಣ್ಣ ನೆಪವನು ಹೂಡಿ
ಮಿಂಚಿ ಕಳೆದೋಯಿತೇ!!

ಯಾರ ಕನಸಿನ ಒಲವು
ಯಾರ ಪಾಲಿಗೆ ವರವೋ
ಕರಗಿ ಕೊನೆಯಾಯಿತೇ!!
ನೆರಳ ನೆನಪಿನ ಬದುಕು
ಕೊರಳ ತುಂಬಿದೆ ನೋವು
ಮಾತು ಬರದಾಯಿತೇ!!

ಈ ಮೌನ ಸಾಕಾಯಿತೇ...‌.

- ಪಿ.ಜಿ.ಜ್ಯೋತಿ

07 Jan 2018, 04:34 pm

ಆ ನಾಳೆ.

ವರುಷ ವರುಷಗಳೇ ಕಳೆದುಹೋಯಿತು ,

ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ

ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ

ಬರೀ ನಿರೀಕ್ಷೆಯಲ್ಲಿ..

ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ

ಇಂದಿನ ದಿನಗಳಲ್ಲೂ ಖುಷಿಯಿಲ್ಲ

ಬರುವ ನಾಳೆಯಲ್ಲಾದರೂ

ಖುಷಿಯಿರಬಹುದೆಂಬ ಆಸೆ..

ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು

ನಿತ್ಯ ನಗುವಿನ ಮುಖವಾಡ ಹೊತ್ತು

ಬರೀ ನಟನೆಯನ್ನೇ ಜೀವಾಳವಾಗಿಸಿದ

ಬದುಕು ಸಾಕಾಯ್ತು..

ನನಗೂ ಬೇಕಿದೆ, ಎಲ್ಲರಂತೆ ಸ್ವಚ್ಛಂದ ನಗು

ಖುಷಿಯಲ್ಲೂ ಬರುವ ಸುಂದರ ಅಳು

ಚಿಂತೆಯಿಲ್ಲದೆ ಬರುವ ಆರಾಮ ನಿದ್ದೆ

ನನಗೂ ಬೇಕಿದೆ..

ಕಂಡ ಕನಸಲ್ಲಿ ಕೆಲವಾದರೂ ನನಸಾಗಬೇಕು

ದುಃಖವಿದ್ದರೂ, ಖುಷಿಗೆ ಕೊರತೆಯಿರಬಾರದು

ನಾನು ಎಲ್ಲರಂತೆ ನಗಬೇಕು,

ಬದುಕನ್ನು ಪ್ರೀತಿಯಿಂದ ಪ್ರೀತಿಸಬೇಕು

ಆದರೆ, ವರುಷಗಳಿಂದ ಕಾದರೂ

ಇನ್ನೂ ಬರುತ್ತಿಲ್ಲ ಆ ದಿನ..

ರಾಮ ಶಬರಿಗೆ ಕಾದಂತೆ ಕಾದಿದ್ದೇ ಬಂತು

ಎಂದು ಬರುವುದೋ ಆ ನಾಳೆ..


ರಚನೆ :- ಮಂಜುನಾಥ.ಸಿ 

            ಕಾಡುಗುಡಿ..

ಕಾಡುಗುಡಿ ಜನಪದ ಸಾಂಸ್ಕ್ರುತಿಕ ವೇದಿಕೆ ..

- Manjunath C

07 Jan 2018, 11:16 am

ಗೆಳೆತನ....

ನೆನಪಿನ ಹೊಳೆಯಲಿ..
ನಿನ್ನ ನೆನಪು ಮಸುಕು..
ಆದರೂ ಮನ ನಸುನಕ್ಕು..
ಹೇಳುತಿದೆ ಗೆಳತಿ..
ಬಾಳಿನ ಬವಣೆಯಲಿ..
ಕಳೆದುಹೋಗಿ..
ಸ್ನೇಹವೆಂಬ ಕಡಲಿನಲಿ..
ಮತ್ತೆ ಸಿಕ್ಕ ಸುಂದರ ಮುತ್ತು..
ನೀ ನನ್ನ ಬಾಳಿಗೆ ಯಾವತ್ತು....

- KR Sreekamala

07 Jan 2018, 09:18 am