ಅತ್ತಿಂದೆತ್ತ ಸಾಗುತಿಹರು
ಸಾಲು ಸಾಲಾಗಿ, ಸವಾರಿ
ಹೊರಟಂತಿದೆ ಶಿಕಾರಿಗೆ
ಮುನಿದಿಹನೇನೋ
ಮಿತ್ರನಿಲ್ಲದ ನೆಲೆಗೆ ದಾವಿಸಲು
ಬಾಯ್ಬಿರಿದು ನಿಂತ
ಇಳೆಯಲಿ
ಭಗ ಭಗನೆ ಸುಡುತಿಹ
ಧರೆಯಲಿ
ಕಾದು ಕಾದು ಅಂಧರಾದವರ
ಹೊಲಗಳಲಿ
ಪಶು ಎಲುಬುಗಳೇ ತುಂಬಿದ
ಮೈದಾನದಲಿ
ಒಣಕೊಂಬೆಗಳ ಹೊತ್ತು ನಿಂತ
ಶೃಂಗಗಳಲಿ
ಹಬ್ಬದ ಒಣ ತಳಿರು ತೋರಣ ಕಂಡ
ಮನೆ ಮನೆಯ ಮನದಂಗಳದಲಿ
ನಿಂದು.....
ಘಳಿರು ಘಳಿರುಮನೆ ಕಂಬನಿ
ಸುರಿಸಿ ನಡೆಯ ಬಾರದೇ........ ಡಿ.ಸಿ
ಆಟವಾಡಿರುವುದುಂಟು, ಜೊತೆಗೆ ಊಟಮಾಡಿರುವುದುಂಟು
ಊಟವನ್ನು ಹಂಚಿ,ಕಿತ್ತು ತಿಂದಿರುವುದುಂಟು.
ಒಂದೇ ಡಬ್ಬಿಯಲ್ಲಿ ತಿಂದಿರುವುದುಂಟು
ಒಂದು ಮಿಠಾಯಿಗಾಗಿ ಜಗಳವಾಡಿರುವುದುಂಟು.
ಬಿದ್ದಾಗ ನಕ್ಕಿರುವುದುಂಟು
ನಕ್ಕಿ ಮುಗಿದ ಮೇಲೆ ಎತ್ತಿರುವುದುಂಟು.
ನಾಲ್ಕು ನಾಲ್ಕು ಸೇರಿದರೆ ಆಗುವುದು ಎಂಟು
ಎಂದು ಪರೀಕ್ಷೆಯಲ್ಲಿ ಹೇಳಿಕೊಟ್ಟಿರುವುದುಂಟು.
ಹುಟ್ಟು ಹಬ್ಬದ ದಿನ ಮುಖಕ್ಕೆ ಕೇಕ್ ಬಳಿದಿರುವುದುಂಟು
ಅದೇ ತುಂಡನ್ನು ಬಾಯಿಗಿಟ್ಟಿರುವುದುಂಟು.
ಜುಟ್ಟು ಕಿತ್ತು , ಮೇಲೆ ಜಿಗಿದು ಜಗಳವಾಡಿರುವುದು ಸಹಜ
ಅದೇ ಜುಟ್ಟು ಮತ್ತೆ ಹಾಕಿ ಇಟ್ಟಿರುವೆನು ಒಂದು ಹೂ ರೋಜ.
ತರಗತಿಯ ಆ ಕೊನೆಯ ಬೆಂಚಿನಲ್ಲಿರುವ ಮಜಾ
ಸಿಗದು ಟಾಕೀಸಿನಲ್ಲಿ ಮೂರು ಗಂಟೆ ಕೂತರೂ ನಿಜಾ.
ನನಗಿರುವುದು ನಿನ್ನ ಮೇಲೆ ಒಂದು ಚೂರು ಹುಚ್ಚು
ಎಂದೆಂದಿಗೂ ಗೆಳತಿ ನೀನು ನನ್ನ ಅಚ್ಚುಮೆಚ್ಚು...
ನನ್ನ ಮುದ್ದಿನ ಅಜ್ಜಿ ಅಜ್ಜ
ನಾನೆ ನಿನ್ನಯ ಪ್ರಪಂಚ ಆ ದಿನಗಳಲಿ
ಹಾಲು ಬೆಣ್ಣೆ ತುಪ್ಪ ಮೃಷ್ಟಾನ್ನದ ಸವಿಯನುಣಿಸಿದಿರಿ
ದಂಡಿಸಿಧೆ ನನ್ನ ಬಯ್ಯಲು ಬಂದವರಿಗೆ
ನಿನ್ನ ಭದ್ರ ಕೋಟೆಯಲ್ಲಿ ಬೆಳೆದೆ ನಾನು
ನೀಡಿದೆ ನೀ ಮುತ್ತಿನ ಸುರಿಮಳೆ
ನೆನೆದು ಮೆಲುಕು ಹಾಕುತ್ತಾ ಆ ದಿನವ
ಸವಿದೆ ನಾ ಆ ಮಧುರವಾದ ಕ್ಷಣಗಳನು
ಹೀಳಿದೆ ವಿಧವಿಧದ ಕಥೆ
ಕಲಿಸಿದೆ ಜೀವನದ ಪಾಠಗಳನ್ನು ಈ ಕಥೆಯ ಸಾರದಲಿ
ನೀವೆನ್ನ ಜೀವನದ ನಾಯಕಿ ನಾಯಕ
ಓ ನನ್ನ ಮುದ್ದಿನ ಅಜ್ಜಿ ಅಜ್ಜ
ಜೊತೆಯಾಗಿ ಬರಲು ನೀನು
ನಿನಗಾಗಿ ಉಸಿರಾಡುವೆ ನಾನು....
ನನ್ನ ಪ್ರತಿ ನೋಟ ನೀನು
ಅದಕ್ಕೆ ಕ್ಷಣ ಕ್ಷಣಕ್ಕೂ ಮರುಳಾದೆನು ನಾನು..
ಒಲವಲೇ ಬೆರಳ ಹಿಡಿದೆ ನೀನು
ಜೊತೆಯಾಗಿ ಏಳು ಹೆಜ್ಜೆಯಿಡುವೆನು ನಾನು...
ಮನದ ಭಾವನೆಯ ಗೂಡು ನೀನು
ಅದರಲಿ ಅವಿತುಕೊಂಡಿರುವ ಪ್ರಳಾಯಂತಕ ನಾನು..
ನನಗಂತಲೇ ಬಂದೆ ನೀನು..
ನಿನ್ನ ಬಾಳಿಗೆ ಅಂತಿಮ ನಾನು..
ಕಡಲ ಸ್ವಾತಿ ಮುತ್ತು ಭೀಕರ
ಅಲೆಗಳ ದಾಳಿಗೂ ಅಚ್ಚಳಿಯದೆ
ತಡೆದು ನಿಂತಿತ್ತು ತದನಂತರದ ಅಲೆ
ಮೆಲ್ಲಗೆ ಅಪ್ಪಳಿಸುವುದು ಎಂದು.
ಸಾಗರ ತೀರದ ಜಗತ್ತಿನ ಬಣ್ಣಗಳಿಗೆ
ಆಸೆ ಹೊತ್ತಿತ್ತು ನೂರು ವರ್ಣ ತನ್ನದಾದರೆ ಕಾಮನಬಿಲ್ಲಂತೆ ಕಾಣುವೆನೆಂದು ಲವಲವಿಕೆಯಿಂದ.
ಒಂಟಿಯಾದ ಮೇಘವೊಂದು ಜಂಟಿಸಿಗದೆ
ಮರುಗಿತು ಅದರ ಅಶ್ರುವಿನ ಹನಿಯೊಂದು ಜಲಚರ ಮೃದ್ವಂಗಿಯ ಒಡಲಿಗೆ ಜಾರಿ ಬಿತ್ತು ಆ ಕ್ಷಣದಿ ಸ್ವಾತಿ ಮುತ್ತು ಜೀವ ಪಡೆಯಿತು.
ಮುತ್ತು ಮಾರಾಟಗಾರ ಮಾಮೂಲಿ ಸರದಾರ
ಬಂದನೊಮ್ಮೆ ನೀಲಿ ಸಾಗರಕೆ ಬಲೆ ಹಾಕಿ ಹಿಡಿದನು ಮೀನು ಬುಟ್ಟಿಗಟ್ಟಲೇ ಬಿದ್ದೇನಲ್ಲಾ ಕಡೆಕು ಈ ಮೀನುಗಾರನಿಗೆ.
ನೋವಾದಿತು ನನ್ನ ಜೀವಕೆ ಕಿತ್ತು ತಗೆದನು
ಚಿಪ್ಪಿನ ಹೊದಿಕೆ ಕೊನೆಗಾಣಿತು ನನ್ನ ಪಯಣ ಸಮುದ್ರದ ಜೊತೆಗೆ,
ಚುಚ್ಚಿ ಮಾಡಿದನು ಚಿನ್ನದ ದಾರದಿ ಮುತ್ತಿನ ಹಾರ,
ಭೇಟಿಯಾದೆ ಹೊಚ್ಚ ಹೊಸ ಗೆಳೆಯರೊಂದಿಗೆ ನನ್ನಂತೆ ನೊಂದ ಕನಸ ಜೀವಗಳ ಜೊತೆಗೆ.
ಅದ್ವಿತೀಯ ಸುಂದರಿಯ ಕೊರಳ ಸೇರಿದೆವು ನಾವು ಕಂಠಕ್ಕೆ ಮುತ್ತಿಡುವಂತೆ ಮುತ್ತಿನ ಹಾರವಾಗಿ,
ಇಷ್ಟೇನಾ ಜೀವನ ಮುರುದಿನದ ಮನನ!
ಕಡೆಗೂ ಅವಳ ಪ್ರೀತಿಯ ಗದ್ದಲದಲ್ಲಿ ಕೈತಪ್ಪಿ ಕಳಚಿ ಹೋಯ್ತು ನಮ್ಮ ಬಂಧನ ಹೊಡೆದು ಚೂರಾದೆ ನಾನು ಮೈ ಮರೆತು ಈ ಕ್ಷಣ ಮರಳಾರೆ ಆ ಕಡಲಿಗೆ ಎಂದೆಂದಿಗೂ ನಾ..!!!
ಅಷ್ಟೊಂದು ನೆನಿಬೇಡ ಮಾರಾಯ ಒತ್ತರಿಸಿ ಬರುತಾವ ಬಿಕ್ಕಳಿಕೆ,
ಹೊಟ್ಟೆಯಾಳಗಿನ ನಿನ್ನ ಮಗ ನನ್ನ ಒದ್ದು ಎಬ್ಬಿಸುತಾನ,
ಅಪ್ಪನ ತೋರಿಸೆ ಅವ್ವಾ ಅಂತ ರಗಳೆಯ ಮಾಡತಾನ,
ಮಣ್ಣೊಳಗೆ ಮಲಗಿರುವ ನಿನ್ನ ಹೆಂಗ ತೋರಲೋ ಅವಗೆ ಅಪ್ಪನ.
ದೀರಾಧಿ ಧೀರ ನಿನ್ನ ಮನಸಾರೆ ಕೈ ಹಿಡಿದೆ,
ದೇಶ ಕಾಯೋ ಕಾವಲುಗಾರ ನೀ ನನ್ನ ಕಟ್ಟಿಕೊಂಡೆ,
ಯುದ್ಧ ಬಂದು ನುಂಗಿತಲ್ಲೊ ನನ್ನ ಕಂದನ ಅಪ್ಪನ,
ಇನ್ನೆಂಗ ಕರೆತರ್ಲಿ ನಿನ್ನ ಮಣ್ಣೊಳಗೆ ಮಕ್ಕೊಂಡಿರುವಿ ನೀ,
ಹೊಟ್ಯಾಗಿನ ನಿನ ಕೂಸು ನನ್ನ ಪ್ರಾಣ ತಿನ್ನತಾದ.
ನೆಲಕ ಬಿದ್ದು, ಕಣ್ ಬಿಡಾಕ ಮೊದಲೇ ಅಪ್ಪನ ಕಳಕೊಂಡ ದುರ್ದೈವಿ ಕೂಸು,
ಗಂಡೈತೋ ಹೆಣ್ಣಯ್ತೋ ಹೆತ್ತಾಗ ಬಂದ್ ನೋಡ ಒಂದ್ ತಾಸು.
ನಿನ್ನುಸಿರ ಬಿಸಿ ಕೈ ಬೆರಳ ಸ್ಪರ್ಶ ಇನ್ನು ಬಿಡಲಾರೆ ಅಂತಾನ ನನ್ನ ನನ್ನೊಳವಿನ ಚನ್ನ,
ಅತ್ತೆವ್ವ ಹೊಗಳಿಕೆ ಕೇಳ್ತಿವ್ನಿ ನಿನ್ ಬಗ್ಗೆ ದಿನಾಲೂ,
ನಿನ್ನ ಮಗನು ನಿನ್ನಂತೆ ದೇಶಕ್ಕಾಗಿ ಮಡಿದರೆ ನಾನು ಅತ್ತೆವ್ನಂತೆ ಹೆಮ್ಮೆಯಿಂದ ಹೇಳ್ತೀನಿ ನನ್ನ ಮಗನೆಂದು ಇವನ್ನ.
ನೆನೆಯದಿರು ಮಾರಾಯ ಬಿಕ್ಕಳಿಕೆ ಬರ್ತವಾ
ಹಡೆದ ತಕ್ಷಣ ತಕ್ಕೊಂಡು ಬರ್ತೀನಿ ನಿನ್ನ ಮಗನ್ನ ನೀನಿರುವ ಜಾಗಕ್ಕ.
ಸಪ್ತಸ್ವರಗಳ ಸಾಮ್ರಾಜ್ಯದ
ಸಾಗರದ ಅಲೆಗಳಂತೆ ಅಬ್ಬರಿಸುತ
ಸಂಗೀತ ಸಾಮ್ರಾಟರ ಮುಂಭಾಗದ
ಸಭಾಂಗಣವ ನವರಸಗಳಲಿ ಮುಳುಗಿಸುತ
ತಾಯಿ ಶಾರದಾಂಬೆಯ ರಕ್ಷಕರಾಗಿ
ಮಹಾನ್ ದಿಗ್ಗಜರಿಗೆ ಸರಿಸಮನಾಗಿ
ಮಹಾನ್ ಚೇತನಗಳಾಗಿ ಬೆಳಗುತಿಹರು,
ಬೆಳೆಯುತಿಹರು,ಸರಿಗಮಪದಿಂದ
ಕರುನಾಡಿಗೆ ಸುಮದುರ ಗಾನದ
ಗಂಧವ ,ಎಲ್ಲೆಲ್ಲು ಚೆಲ್ಲುತಿಹರು
ತಾಯಿ ಶಾರದೆಗೆ ಸ್ವರಗಳ
ಅಭಿಷೇಕ ಗೈಯ್ಯುತಿಹರು