Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ನೆನಪಿನ ದೋಣಿಯಲಿ
ನಾ ಕಾಯುತ್ತಿರುವೆ ನಿನಗಾಗಿ
ಪ್ರೀತಿ ತುಂಬಿದ ಹೃದಯದಲಿ
ನೀ ಬಂದು ಸೇರು ನನ್ನನು, ಹಿತವಾಗಿ
- ಪ್ರಿಯಾಂಕ
21 Nov 2017, 09:49 pm
ಕಾಗದದ ದೋಣಿಯಲಿ ನನ್ನೆಸರನು ಬರೆದು
ನನ್ನೊಲವಿನ ತುಂಬು ಪ್ರೀತಿಯನು ಬೆರೆಸಿ
ನಿನ್ನ ಹೃದಯವ ಕನ್ನ ಕೊರೆದು
ತೇಲಿಸಿಬಿಡುವೆನು ನನ್ನೆಲ್ಲಾ ಭಾವನೆಗಳನು ಸೇರಿಸಿ!
ಪ್ರಿಯಾಂಕ✍
- ಪ್ರಿಯಾಂಕ
21 Nov 2017, 09:47 pm
ಗ್ರೀಷ್ಮ ಕಾಲದ ಒಣ ಮರದಲ್ಲಿ
ಒಂಟಿ ಹಕ್ಕಿಯು ಅಳುತಲಿದೆ,
ಒಣಗಿದ ಕಂಗಳ ಒಳಗಿನ ಬಿಸಿ ಹನಿ
ಬಿಸಿಲಿನ ಬೇಗೆಗೆ ಆರುತಿದೆ.
ಹಾರುವ ದೂರ ಹರವಿದೆ ಪೂರ
ಕಾಣುವ ಕಣ್ಣು ಕುರುಡಾಯ್ತೆ ?
ರೆಕ್ಕೆಯು ಮುರಿದಿದೆ, ಪಕ್ಕೆಯು ಒಡೆದಿದೆ
ಜೀವನ ಪಯಣ ಬರಡಾಯ್ತೆ ?
ಯಾರೋ ಗೀಚಿದ ಒಲವಿನ ಕವನದ
ಹಾಳೆಯು ನೆನೆದಿದೆ ಸುರಿ ಮಳೆಗೆ,
ಅಕ್ಷರ ಕರಗಿ ಮಂಜಾಗಿರುವುದು
ಮುರುಟಿದ ಮರುಗಿದ ಮನದೊಳಗೆ.
- ಶ್ರೀಗೋ.
21 Nov 2017, 09:37 pm
ಏನೆಂದು ಬರೆಯಲಿ ನಿನ್ನ ಬಗ್ಗೆ
ಹೇಗೆಂದು ಗುಣಗಾನ ಮಾಡಲಿ
ನಿನ್ನ ಬಗ್ಗೆ.....
ಏನು ತಿಳಿಯದೆ ಆದ ಗೆಳೆತನ
ಎಂದು ಮುರಿಯದಿರಲಿ ಇ ನಮ್ಮ ಬಂಧನ.......
ಮುದ್ದು ಮನಸಿನ ಪೆದ್ದು ಹುಡುಗ
ಇವನು....
ಮಾತಿನಲ್ಲಿ ಬರಿ ಆಗಲಕಾಯಿ
ಮನಸು ಮಾತ್ರ ಮಗುವಿನಂತೆ
ಎಲ್ಲರ ಮನವ ಅರಿಯೋ
ಮೌನದ ಹುಡುಗ......
ಜಗಳದಲ್ಲಿ ಇರುವನು
ಮೌನದಲ್ಲಿ ಮರೆಯಾಗುವನು.....
ಅಕ್ಕ ತಂಗಿಯರ ನಡುವೆ
ಬೆಳೆಯುತಿರು ಮುದ್ದು ಮನಸಿನ
ಪೆದ್ದು ಹುಡುಗ ಇವನು.......
ನೀನಗೆ ನೀನೆ ಸರಿ ಸಾಟಿ
ಮೇಲೆರಿ ಕೂರಬೇಡ ಎಲ್ಲವನ್ನು ದಾಟಿ......
ಹಸಿ ಮನಸಿನ ಹುಸಿ ಹುಡುಗ....ಮುದ್ದು ಪೆದ್ದು.......
- ನೆನಪಿನ ನಾವಿಕ
21 Nov 2017, 08:22 pm
ಬೆಳದಿಂಗಳ ಅಂಗಳದಲ್ಲಿ
ನನ್ನವನ ಮಡಿಲಲ್ಲಿ ನಾ ಹಾಯಾಗಿ
ಮಲಗಿರಲು ಆ ಚಂದ್ರ ನಾಚುವಂತಿರಬೇಕು.....
ಮುಸಂಜೆಯ ವೇಳೆಯಲಿ
ನನ್ನವನ ಎದೆಗೆ ನಾ ಒರಗಿ ಜಗವ ಮರೆತಿರಲು
ಹೊಂಗಿರಣಗಳು ನಾಚಿ ಮುಳುಗುವಂತಿರಬೇಕು.........
ಮಧ್ಯಾಹ್ನ ನನ್ನವನ ಕೈ ಹಿಡಿದು ನಾ
ನಡೆಯುವಾಗ ಸುರ್ಯನ ಕಿರಣಗಳು
ಕಣ್ಣು ಹೋಡೆಯುವಂತಿರಬೇಕು.......
ಮುಂಜಾನೆಯ ಮಸುಕಲ್ಲಿ ನನ್ನವನ ಮುಖ
ನೋಡಿ ನಾ ನಾಚುವ ಮುನ್ನ ಸುರ್ಯನು ನಾಚಿ
ಮರೆಯಾಗಿರಬೇಕು...
ನಮ್ಮ ಹುಚ್ಚು ಪ್ರೀತಿಯ ನೋಡಿ ಸೃಷ್ಟಿಯೆ
ನಾಚುವಂತಿರಬೇಕು.........
- ರಾಗಸಿರಿ....
21 Nov 2017, 07:51 pm
ಕೇಳೆನ್ನ ಚೆಲುವೆ ನೀನು
ನನ್ನ ಮನದ ಮಾತನು
ಹಿಡಿದಿರುವೆ ನನ್ನೊಳಗೆ
ನಿನ್ನ ಪ್ರೀತಿ ಮಾಧುರ್ಯವನು
ರಸಸಂಜೆ ಕಾದಿಹುದು
ಆಸೆಗಳು ಕರೆದಿಹುದು
ತೋಳಲಿ ಬಳಸಿ ನನ್ನ
ಬಿಗಿದಪ್ಪು ನೀನು ಇನ್ನಾ
ಕಾಲಿಗೆ ಗೆಜ್ಜೆಯ ತೊಡಿಸಿ
ಮುಡಿಗೆ ಮಲ್ಲಿಗೆ ಮುಡಿಸಿ
ನಿನ್ನ ಪುಟ್ಟ ಮನದೊಳಗೆ
ಸೇರುವ ಬಯಕೆಯು ನನಗೆ
ಇನ್ನೇನನೂ ಕೇಳಲಾರೆ
ನಿನ್ನಿಂದ ಹೋಗಲಾರೆ
ಕೊನೆವರೆಗೂ ಜೊತೆಗಿರುವ
ನೀಡೆನಗೆ ಈ ವರವ
ಹೇ ನನ್ನ ದೇವತೆ
- ನೆನಪಿನ ನಾವಿಕ
21 Nov 2017, 05:09 pm
ನಿನ್ನ ಹಿತಸ್ಪರ್ಶಕೆ ಮನಸೋತ
ಸುಳಿಗಾಳಿಯೇ ಬಿಡದೆ ನಿನ್ನ ಸುತ್ತುತಿರಲು
ನಿನ್ನ ಪ್ರೇಮಸ್ಪರ್ಶದೊಳಗೆ ಕಳೆದುಹೋದವನು ನಾನು
ನಿನ್ನ ಹಿಂಬಾಲಿಸಿದೆ ಗತಿಯೇನು ನನಗಿನ್ನು
- ನೆನಪಿನ ನಾವಿಕ
21 Nov 2017, 05:02 pm
ಕೂಡಿಟ್ಟ ಕನಸು ಕರಗೋಯ್ತು ,
ಕರಗಿದ ಹೃದಯ ಸಾವಾಯ್ತು ,
ಆ ಸಾವಲ್ಲೂ ಸವಿಯಾದ
ಆ ನಿನ್ನ ನೆನಪುಗಳ ಸರಮಾಲೆಯೊಂದ ನಾ ಹೊಸೆಯಲೆ...?
- Spb...@#
21 Nov 2017, 01:31 am
ಗೆಳತಿ ನಿನ್ನ ಮುಂದೆ ಮಂಡಿಯೂರಿ ಕೋರಿದೆ
ನನ್ನ ಸ್ವಾಭಿಮಾನವ ಒದ್ದು ಬಂದೆ
ದುಖಃದಲ್ಲೂ ನಗೆಯ ಬೀರಿದೆ
ಏಕೆ ಗೆಳತಿ ಕೆಂಪು ಬಾವುಟ ತೋರಿದೆ
ಒಮ್ಮೆ ಹುಸಿನಗೆ ಒಮ್ಮೆ ಹಸಿನಗೆ ಚೆಲ್ಲಿ
ಕನಸು ಬಿತ್ತಿ ಆಸೆ ತೋರಿದೆ
ನಂಬಿ ನಾನು ಕನಸು ಹೊತ್ತು ಬಂದೆ
ನಿನ್ನ ನಗುವ ನಂಬಿ ಬಂದ ನನ್ನೆ ಎಳಸು ಎಂದು ದೂರಿದೆ
- ನಟರಾಜ ಕೆ
20 Nov 2017, 05:35 pm
ನಾನಾಗಬಾರದಿತ್ತೇ ಮರ
ಈ ಕ್ರೂರಿ ಮಾನವನಿಗಿಂತ
ಅಸೂಯೆ ಗಡಿದಾಟಿದ ವಿಕ್ರತನಿಗಿಂತ
ಕೊಲೆ,ಅನಾಚಾರ ತುಂಬಿದ ಈ ಸಮಾಜಕ್ಕಿಂತ
ಆಲ,ಮಾವು,ಬಾಳೆಯ ನಡುವಲಿ
ಕಹಿಬೇವಾದರೂ ಚೆನ್ನಾಗಿರುತ್ತಿದ್ದೆ ನಾ
ಬಳಲಿ ಬಂದವರಿಗೆ ತಂಪಿನ ಗಾಳಿ
ದಣಿದು ಬಂದವರಿಗೆ ನೆರಳು ನೀಡುತಾ
ಪರೋಪಕಾರಿಯಾಗುತಿದ್ದೆ ನಾ
ಪರಸಾಂತ್ವನವರಿಯದ ಈ ಮಾನವನಿಗಿಂತ
ಯಾರಿಗೂ ಉಪಟಳ ನೀಡದೆ
ಪರರಿಗಾಗಿ ಜೀವನ ಸಾಗಿಸುತಾ
ತ್ರಪ್ತನಾಗಿ ಜಿವಿಸುತಲಿದ್ದೆ ತೋಟದಲಿ
ಕಡಿಯಲು ಬಂದವರನ್ನು ಕೈಚಾಚಿ ಸ್ವಾಗತಿಸಿ
ಮಡಿದ ನಂತರವೂ ಪರೋಪಕಾರಿಯಗುತಿದ್ದೆ
ನಾನಾಗಬಾರದಿತ್ತೇ ಮರ
ಈ ಕ್ರೂರಿ ಮಾನವನಿಗಿಂತ
- ನಾಗರಾಜ್
20 Nov 2017, 01:39 pm